ಅಕ್ಷಯ ತೃತೀಯಾ (ಮೇ ೩)

ಈ ತಿಥಿಯಂದು ಬ್ರಹ್ಮ ಮತ್ತು ಶ್ರೀವಿಷ್ಣುವಿನ ಮಿಶ್ರ ಲಹರಿಗಳು ಉಚ್ಚ ದೇವತೆಗಳ ಲೋಕದಿಂದ ಪೃಥ್ವಿಯ ಮೇಲೆ ಬರುತ್ತವೆ. ಈ ಕಾಲಮಹಾತ್ಮೆಯಿಂದಾಗಿ ಈ ತಿಥಿಯಂದು ಪವಿತ್ರ ಸ್ನಾನ, ದಾನಗಳಂತಹ ಧರ್ಮಕಾರ್ಯಗಳನ್ನು ಮಾಡಿದರೆ ಅವುಗಳಿಂದ ಹೆಚ್ಚು ಆಧ್ಯಾತ್ಮಿಕ ಲಾಭವಾಗುತ್ತದೆ.

ಸ್ತ್ರೀಯರು ಆಭರಣಗಳನ್ನು ಧರಿಸುವುದರ ಮಹತ್ವ ಮತ್ತು ಲಾಭಗಳು

ಈ ತೇಜಸ್ಸಿನ ಬಲದಿಂದ ಅವಳ ಶೀಲದ ರಕ್ಷಣೆಯಾಗುತ್ತದೆ. ಸೌಭಾಗ್ಯವತಿ ಸ್ತ್ರೀಯರನ್ನು ಮಂಗಳಸೂತ್ರ, ಬಳೆ ಮತ್ತು ಕುಂಕುಮ ಮುಂತಾದ ಸೌಭಾಗ್ಯದ ಅಲಂಕಾರಗಳು ರಕ್ಷಿಸುತ್ತವೆ. ಈ ರೀತಿಯಲ್ಲಿ ಕಲಿಯುಗದಲ್ಲಿ ಅಸುರೀ ಶಕ್ತಿಗಳ ಭೋಗದೃಷ್ಟಿಯಿಂದ ರಕ್ಷಿಸಲು ಪ್ರಯತ್ನಿಸಲಾಗಿದೆ.

ಸೌಭಾಗ್ಯಾಲಂಕಾರಗಳ ಆಧ್ಯಾತ್ಮಿಕ ಮಹತ್ವ

ಕುಂಕುಮದಲ್ಲಿ ತಾರಕ ಮತ್ತು ಮಾರಕ ಶಕ್ತಿತತ್ತ್ವವನ್ನು ಆಕರ್ಷಿಸುವ ಕ್ಷಮತೆಯಿದೆ. ಸ್ತ್ರೀಯರ ಆತ್ಮಶಕ್ತಿ ಜಾಗೃತವಾದರೆ ಆ ಶಕ್ತಿಯಲ್ಲಿಯೂ ಕಾರ್ಯಾನುರೂಪ ತಾರಕ ಅಥವಾ ಮಾರಕ ದೇವಿತತ್ತ್ವ ಆಕರ್ಷಿಸುವ ಪ್ರಚಂಡ ಕ್ಷಮತೆ ನಿರ್ಮಾಣವಾಗುತ್ತದೆ

ಸ್ತ್ರೀಯರು ಆಭರಣಗಳನ್ನು ಧರಿಸುವುದೆಂದರೆ, ತಮ್ಮಲ್ಲಿರುವ ದೇವತ್ವವನ್ನು ಜಾಗೃತಗೊಳಿಸುವುದು ಎಂಬುದನ್ನರಿತುಕೊಳ್ಳಿ !

ಶಾಸ್ತ್ರೀಯ ಪದ್ಧತಿಯಿಂದ ಆಭರಣಗಳನ್ನು ಧರಿಸುವುದೆಂದರೆ, ಆ ಶಕ್ತಿರೂಪದ ಪೂಜೆಯನ್ನು ಮಾಡುವುದಾಗಿದೆ. ಆಭರಣಗಳಿಂದ ತನ್ನಲ್ಲಿನ ಶಕ್ತಿಯನ್ನು ಪ್ರಕಟಗೊಳಿಸಿ ತನ್ನೊಂದಿಗೆ ಇತರರಿಗೂ ಅದರ ಲಾಭವನ್ನು ಮಾಡಿಕೊಡುವುದು ಅವಳ ಕಾರ್ಯವಾಗಿದೆ.

ಕಾಲ್ಗೆಜ್ಜೆ, ಕಾಲುಂಗುರ ಮತ್ತು ಮಾಸೋಳಿ (ಮೀನಿನ ಆಕಾರದ ಕಾಲುಂಗುರ) ಇವುಗಳನ್ನು ಬೆಳ್ಳಿಯಿಂದಲೇ ಏಕೆ ತಯಾರಿಸುತ್ತಾರೆ?

ರಜೋಗುಣೀ ಮತ್ತು ಚೈತನ್ಯಯುಕ್ತ ಇಚ್ಛಾಲಹರಿಗಳನ್ನು ಗ್ರಹಿಸುವ ಕ್ಷಮತೆಯು ಬೆಳ್ಳಿಯಲ್ಲಿ ಹೆಚ್ಚಿರುವುದರಿಂದ ಆಯಾಯ ಕಾರ್ಯಕ್ಕೆ ಪೂರಕವಾಗಿರುವ ಲೋಹದ ಆಭರಣಗಳನ್ನು ಆಯಾ ಅವಯವಗಳಿಗಾಗಿ ಉಪಯೋಗಿಸಲಾಗುತ್ತದೆ.

ಶ್ರೀರಾಮ

ಈ ಹೆಸರು ರಾಮನ ಜನನಕ್ಕಿಂತಲೂ ಮುಂಚೆಯೇ ಪ್ರಚಲಿತವಾಗಿತ್ತು. ರಮ್ – ರಮತೆ ಅಂದರೆ (ಆನಂದದಲ್ಲಿ) ಮಗ್ನವಾಗಿರುವುದು, ಇದರಿಂದ ‘ರಾಮ’ ಎಂಬ ಶಬ್ದ ತಯಾರಾಗಿದೆ. ರಾಮ ಎಂದರೆ ಸ್ವತಃ ಆನಂದದಲ್ಲಿ ಮಗ್ನನಾಗಿರುವುದು ಮತ್ತು ಇತರರನ್ನೂ ಆನಂದದಲ್ಲಿ ಮಗ್ನನಾಗಿಸುವವನು.

ವಿಶಿಷ್ಟ ದೇವತೆಗಳಿಗೆ ವಿಶಿಷ್ಟ ವಾಹನಗಳಿರುವುದರ ಹಿಂದಿನ ಅಧ್ಯಾತ್ಮಶಾಸ್ತ್ರ !

ದೇವತೆಗಳ ಸಗುಣ ರೂಪವನ್ನು ಕರೆದುಕೊಂಡು ಹೋಗುವುದರಿಂದ ದೇವತೆಗಳ ವಾಹನಗಳಿಗೂ ದೇವತ್ವ ಪ್ರಾಪ್ತವಾಗಿದೆ. ಆದುದರಿಂದ ಹಿಂದೂ ಧರ್ಮದಲ್ಲಿ ಮಣ್ಣೆತ್ತಿನ ಅಮವಾಸ್ಯೆಗೆ ಶಿವನ ವಾಹನವಾಗಿರುವ ಎತ್ತುಗಳ, ಕೆಲವು ಧಾರ್ಮಿಕ ವಿಧಿಗಳಲ್ಲಿ ವಿಷ್ಣುವಾಹನ ಗರುಡನ ಪೂಜೆಯನ್ನು ಮಾಡಲಾಗುತ್ತದೆ.’

ಚೈತ್ರ ಪ್ರತಿಪದೆಯ ಈ ‘ಯುಗಾದಿಯ ತಿಥಿ’ಗೆ ನವವರ್ಷಾರಂಭ ಎಂಬ ರಾಜಮಾನ್ಯತೆಯು ಸಿಗುವುದಕ್ಕಾಗಿ ‘ಹಿಂದೂ ರಾಷ್ಟ್ರ’ದ ಸ್ಥಾಪನೆಯನ್ನು ಮಾಡಿರಿ !

ಈ ದಿನದಂದು ಬ್ರಹ್ಮದೇವನು ಸೃಷ್ಟಿಯನ್ನು ನಿರ್ಮಿಸಿದನು. ಸೃಷ್ಟಿಯ ಪ್ರಾರಂಭದಿನ, ಅಂದರೆ ಕಾಲಗಣನೆಯ ಪ್ರಥಮದಿನವು ಚೈತ್ರಪ್ರತಿಪದೆ ಆಗಿದ್ದರೂ ಇಂದು ಭಾರತದಲ್ಲಿ ಎಲ್ಲೆಡೆಯೂ ಜನವರಿ ೧ ರಂದು ಹೊಸವರ್ಷಾರಂಭವೆಂದು ಆಚರಿಸಲ್ಪಡುತ್ತದೆ. ಇದು ಸ್ವತಂತ್ರ ಭಾರತದ ಸಂಸ್ಕೃತಿಯ ಪರಾಭವವಾಗಿದೆ.

ಚೈತ್ರ ಶುಕ್ಲ ಪಕ್ಷ ಪಾಡ್ಯದಂದು ವರ್ಷಾರಂಭ ಮಾಡುವುದರ ಹಿಂದಿನ ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳು

ಈ ದಿನವೇ ಬ್ರಹ್ಮದೇವನು ಸೃಷ್ಟಿಯನ್ನು ನಿರ್ಮಿಸಿದನು, ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು. ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ.

ಯುಗಾದಿ ಅಂದರೆ ಸಂಕಲ್ಪಶಕ್ತಿಯ ಮುಹೂರ್ತ

ಈ ದಿನದಂದು ಪೃಥ್ವಿಯ ಮೇಲೆ ಬ್ರಹ್ಮನ ಮತ್ತು ವಿಷ್ಣುವಿನ ತತ್ತ್ವಗಳು ಅಗಾಧ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಇದೇ ದಿನದಂದು ವನವಾಸವನ್ನು ಮುಗಿಸಿ ಮರಳಿದ ಪ್ರಭು ಶ್ರೀರಾಮನನ್ನು ಮುಂಬಾಗಿಲಿನಲ್ಲಿ ಬ್ರಹ್ಮಧ್ವಜ ನಿಲ್ಲಿಸಿ ಪ್ರಜೆಗಳು ಸ್ವಾಗತಿಸಿದರು.