‘ಸಾಮಾನ್ಯವಾಗಿ ಸ್ತ್ರೀಯರ ಸೊಂಟದಲ್ಲಿ ಮತ್ತು ಕಾಲುಗಳಲ್ಲಿ ಧರಿಸುವ ಆಭರಣಗಳನ್ನು ಬೆಳ್ಳಿಯಿಂದ ತಯಾರಿಸುತ್ತಾರೆ. ರಜೋಗುಣೀ ಮತ್ತು ಚೈತನ್ಯಯುಕ್ತ ಇಚ್ಛಾಲಹರಿಗಳನ್ನು ಗ್ರಹಿಸುವ ಕ್ಷಮತೆಯು ಬೆಳ್ಳಿಯಲ್ಲಿ ಹೆಚ್ಚಿರುವುದರಿಂದ ಆಯಾಯ ಕಾರ್ಯಕ್ಕೆ ಪೂರಕವಾಗಿರುವ ಲೋಹದ ಆಭರಣಗಳನ್ನು ಆಯಾ ಅವಯವಗಳಿಗಾಗಿ ಉಪಯೋಗಿಸಲಾಗುತ್ತದೆ. ವೇಗದಿಂದ ಆಘಾತ ಮಾಡುವುದು ರಜೋಗುಣದ ವೈಶಿಷ್ಟ್ಯವಾಗಿರುವುದರಿಂದ ಬೆಳ್ಳಿಯ ಲೋಹದ ಆಭರಣಗಳನ್ನು ಪಾತಾಳದಿಂದ ಪ್ರಕ್ಷೇಪಿತವಾಗುವ ಪೃಥ್ವಿ ಮತ್ತು ಆಪತತ್ತ್ವಯುಕ್ತ ತೊಂದರೆದಾಯಕ ಆಘಾತದಾಯಕ ಲಹರಿಗಳಿಂದ ರಕ್ಷಣೆ ಪಡೆಯಲು ವಿಶೇಷವಾಗಿ ಉಪಯೋಗಿಸಲಾಗುತ್ತದೆ.’
– ಓರ್ವ ವಿದ್ವಾಂಸರು (ಶ್ರೀಚಿತ್‌ಶಕ್ತಿ ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ)
‘ಆಭರಣ’ ಎಂದರೆ ಈಶ್ವರನ ತೇಜರೂಪೀ ಸಗುಣತೆಯನ್ನು ಧರಿಸುವುದು, ಆದುದರಿಂದ ‘ಆಭರಣಗಳನ್ನು ಹಾಕಿಕೊಳ್ಳುವುದು ಎಂದು ಹೇಳದೇ, ‘ಆಭರಣಗಳನ್ನು ಧರಿಸುವುದು ಎಂದು ಹೇಳುತ್ತಾರೆ. ತೇಜದ ಸಗುಣ ಕಲಾತ್ಮಕ ದರ್ಶನವೆಂದರೆ ಆಭರಣ.
– ಓರ್ವ ವಿದ್ವಾಂಸ (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೭.೧೨.೨೦೦೭, ಬೆಳಗ್ಗೆ ೧೦.೪೪) |