ಸ್ತ್ರೀಯರು ಆಭರಣಗಳನ್ನು ಧರಿಸುವುದೆಂದರೆ, ತಮ್ಮಲ್ಲಿರುವ ದೇವತ್ವವನ್ನು ಜಾಗೃತಗೊಳಿಸುವುದು ಎಂಬುದನ್ನರಿತುಕೊಳ್ಳಿ !

೧. ಆಭರಣಗಳಿಂದ ಸ್ತ್ರೀಯರ ದೇಹದಲ್ಲಿ ತೇಜತತ್ತ್ವದ ರೂಪದಲ್ಲಿರುವ ಆದಿಶಕ್ತಿಯ ಪ್ರಕಟೀಕರಣವಾಗುತ್ತದೆ.

೨.ಶಾಸ್ತ್ರೀಯವಾಗಿ ಆಭರಣಗಳನ್ನು ಧರಿಸುವುದೆಂದರೆ, ಶಕ್ತಿಸ್ವರೂಪದಲ್ಲಿರುವ ದೇವತೆಯ ಪೂಜೆಯನ್ನು ಮಾಡುವುದು: ಸ್ತ್ರೀಯು ದೇವತೆಯ ಅಪ್ರಕಟಶಕ್ತಿಯ ಪ್ರತೀಕವಾಗಿದ್ದಾಳೆ. ಶಾಸ್ತ್ರೀಯ ಪದ್ಧತಿಯಿಂದ ಆಭರಣಗಳನ್ನು ಧರಿಸುವುದೆಂದರೆ, ಆ ಶಕ್ತಿರೂಪದ ಪೂಜೆಯನ್ನು ಮಾಡುವುದಾಗಿದೆ. ಆಭರಣಗಳಿಂದ ತನ್ನಲ್ಲಿನ ಶಕ್ತಿಯನ್ನು ಪ್ರಕಟಗೊಳಿಸಿ ತನ್ನೊಂದಿಗೆ ಇತರರಿಗೂ ಅದರ ಲಾಭವನ್ನು ಮಾಡಿಕೊಡುವುದು ಅವಳ ಕಾರ್ಯವಾಗಿದೆ.

೩.ಆಭರಣಗಳನ್ನು ಧರಿಸಿದ ಸ್ತ್ರೀಯು ಶಕ್ತಿಜಾಗೃತಿಯ ಪೂಜನೀಯ ಪೀಠವಾಗಿದ್ದಾಳೆ : ಆಭರಣಗಳನ್ನು ಧರಿಸಿದ ಸ್ತ್ರೀಯನ್ನು ನೋಡಿದಾಗ ಪೂಜ್ಯಭಾವ ನಿರ್ಮಾಣವಾಗಲು ಸಹಾಯವಾಗುತ್ತದೆ. ಇದರಿಂದ ಅವಳಲ್ಲಿನ ಮತ್ತು ಇತರರಲ್ಲಿನ ಶಕ್ತಿಯು ಜಾಗೃತವಾಗುತ್ತದೆ. ಇದೊಂದು ಶಕ್ತಿಜಾಗೃತಿಯ ಪೂಜನೀಯ ಸಣ್ಣ ಪೀಠವಾಗಿದೆ ಮತ್ತು ಸತತವಾಗಿ ದೇವತೆಯ ಸ್ಮರಣೆಯನ್ನು ಮಾಡಿಕೊಡುವ ಪ್ರತಿಮೆಯಾಗಿದೆ. ಸ್ಥೂಲದಲ್ಲಿನ ಪೂರ್ಣತ್ವದ ಕಡೆಗಿನ ಈ ಮಾರ್ಗಕ್ರಮಣವು ಸಗುಣೋಪಾಸನೆಯಿಂದ ನಿರ್ಗುಣದ ಕಡೆಗೆ ಒಯ್ಯುವ ಮತ್ತು ನಿರ್ಗುಣದ ಅನುಭೂತಿಯನ್ನು ನೀಡುವಂತಹದ್ದಾಗಿದೆ.

– ಒಂದು ಅಜ್ಞಾತಶಕ್ತಿ (ಸೌ.ರಂಜನಾ ಗಡೇಕರರವರ ಮಾಧ್ಯಮದಿಂದ, ೨೨.೨.೨೦೦೭, ರಾತ್ರಿ ೭.೧೫ ಮತ್ತು ೮.೧೫)

ಕರ್ಣಕುಂಡಲದ ಮಹತ್ವ : ‘ಬ್ರಹ್ಮತತ್ತ್ವದೊಂದಿಗೆ ಜೀವದ ಸಂಬಂಧವನ್ನು ಜೋಡಿಸಲು ಶಾಸ್ತ್ರಾನುಸಾರ ಮಾಡುವ ಕೃತಿಯೆಂದರೆ ಕರ್ಣಕುಂಡಲಗಳನ್ನು ಉಪಯೋಗಿಸುವುದು. ಯಾವಾಗ ಜೀವವು ಜನ್ಮಕ್ಕೆ ಬರುತ್ತದೆಯೋ, ಆಗ ಅದು ಸಂಪೂರ್ಣ ಮಾಯೆಯಲ್ಲಿ ಸಿಲುಕಿಕೊಂಡಿರುತ್ತದೆ; ಜೀವವನ್ನು ಅದರಿಂದ ಮುಕ್ತಗೊಳಿಸಿ ಅದು ಯಾವಾಗಲೂ ಬ್ರಹ್ಮಚಿಂತನೆಯಲ್ಲಿರಬೇಕೆಂಬ ಉದ್ದೇಶದಿಂದ ಕರ್ಣಭೇದವನ್ನು (ಕಿವಿಗೆ ರಂಧ್ರಗಳನ್ನು) ಮಾಡಿ ಜೀವಕ್ಕೆ ಕರ್ಣಕುಂಡಲಗಳನ್ನು ಹಾಕಲಾಗುತ್ತದೆ. – ಶ್ರೀಕೃಷ್ಣ (ಸೌ.ಪ್ರಾರ್ಥನಾ ಬುವಾರವರ ಮಾಧ್ಯಮದಿಂದ, ೩.೯.೨೦೦೫, ರಾತ್ರಿ ೧೧.೪೦)