ದೇವಿಮಾತೆಯ ನಿತ್ಯ ಉಪಾಸನೆ ಹೇಗೆ ಮಾಡಬೇಕು ?

ಕುಂಕುಮಾರ್ಚನೆಯನ್ನು ಮಾಡುವಾಗ ಪ್ರಥಮವಾಗಿ ದೇವಿಯ ಆವಾಹನೆಯನ್ನು ಮಾಡಿ ಪೂಜಿಸುತ್ತಾರೆ. ನಂತರ ದೇವಿಯ ಹೆಸರನ್ನು ಉಚ್ಚರಿಸುತ್ತಾ ದೇವಿಯ ಮೂರ್ತಿಯ ಮೇಲೆ ಕುಂಕುಮವನ್ನು ಅರ್ಪಿಸುತ್ತಾರೆ. ದೇವಿಯ ಚರಣಗಳಿಂದ ಆರಂಭಿಸಿ ಶಿರದವರೆಗೆ ಏರಿಸಿ, ಅವರನ್ನು ಕುಂಕುಮದಿಂದ ಆಚ್ಛಾದಿಸುತ್ತಾರೆ. ಕುಂಕುಮಾರ್ಚನೆಯು ಪೂರ್ಣವಾದ ನಂತರ ದೇವಿಗೆ ಆರತಿಯನ್ನು ಬೆಳಗುತ್ತಾರೆ.

ಕೆಲವು ದೇವಿಯರ ಉಪಾಸನೆಯ ವೈಶಿಷ್ಟ್ಯಗಳು 

ವಿವಾಹದಂತಹ ಯಾವುದಾದರೊಂದು ವಿಧಿಯ ನಂತರ ಈ ಕುಲದೇವತೆ ಇರುವವರ ಮನೆಯಲ್ಲಿ ದೇವಿಯ ಗೊಂದಲವನ್ನು (ಒಂದು ಕುಲಾಚಾರ) ಹಾಕುತ್ತಾರೆ. ಕೆಲವರ ಮನೆಯಲ್ಲಿ ವಿವಾಹದಂತಹ ಕಾರ್ಯಗಳು ವ್ಯವಸ್ಥಿತವಾಗಿ ನಡೆದಿದ್ದರಿಂದ ಸತ್ಯನಾರಾಯಣನ ಪೂಜೆಯನ್ನು ಮಾಡುತ್ತಾರೆ ಅಥವಾ ಕೋಕಣಸ್ಥ ಬ್ರಾಹ್ಮಣರಲ್ಲಿ ದೇವಿಗೆ ಹಾಲು-ಮೊಸರನ್ನು ಅರ್ಪಿಸುತ್ತಾರೆ, ಇದು ಸಹ ಹಾಗೇ ಆಗಿದೆ.

ನವರಾತ್ರಿಯ ವ್ರತದಲ್ಲಿ ಪಾಲಿಸುವಂತಹ ಆಚಾರಗಳು

ನವರಾತ್ರಿಯ ಒಂಬತ್ತು ದಿನಗಳಲ್ಲಿ ಹೆಚ್ಚಿನ ಜನರು ಉಪವಾಸವನ್ನು ಮಾಡುತ್ತಾರೆ. ಒಂಬತ್ತು ದಿನಗಳು ಉಪವಾಸ ಮಾಡಲು ಸಾಧ್ಯವಿಲ್ಲದಿದ್ದರೆ, ಪ್ರಥಮ ದಿನ ಹಾಗೂ ಅಷ್ಟಮಿಯಂದು ಉಪವಾಸವನ್ನು ಅವಶ್ಯವಾಗಿ ಮಾಡುತ್ತಾರೆ. ದೇವಿ ಉಪಾಸನೆಯ ಇತರ ಭಾಗಗಳೊಂದಿಗೆ ನವರಾತ್ರಿಯ ಕಾಲಾವಧಿಯಲ್ಲಿ ‘ಶ್ರೀ ದುರ್ಗಾದೇವ್ಯೈ ನಮಃ’ ಎಂದು ಜಪಿಸಬೇಕು.

ಕುಮಾರಿ ಪೂಜೆ

ನವರಾತ್ರಿಯಲ್ಲಿ ಒಂಭತ್ತು ದಿನ ಪ್ರತಿಯೊಂದು ದಿನ ಒಬ್ಬಳಿಗೆ ಅಥವಾ ಮೊದಲ ದಿನ ಒಬ್ಬಳಿಗೆ, ಎರಡನೇ ದಿನ ಇಬ್ಬರಿಗೆ, ಒಂಭತ್ತನೇ ದಿನ ಒಂಭತ್ತು ಕುಮಾರಿಯರಿಗೆ, ಹೀಗೆ ಏರಿಕೆ ಕ್ರಮದಲ್ಲಿ ಭೋಜನವನ್ನು ನೀಡಬೇಕೆಂಬ ವಿಧಾನವಿದೆ. ಎರಡರಿಂದ ಹತ್ತು ವರ್ಷಗಳ ವಯಸ್ಸಿನ ಕುಮಾರಿಯರನ್ನು ಭೋಜನಕ್ಕೆ ಆಮಂತ್ರಿಸುತ್ತಾರೆ. ಪ್ರತಿಯೊಂದು ವರ್ಣದವರೂ ತಮ್ಮ ತಮ್ಮ ವರ್ಣದ ಕುಮಾರಿಯರನ್ನು ಭೋಜನಕ್ಕೆ ಆಮಂತ್ರಿಸಬೇಕಾಗಿರುತ್ತದೆ.

ಶ್ರೀ ಗಣೇಶನ ಪೂಜೆಯನ್ನು ಮಾಡಲು ಮಾರ್ಗದರ್ಶಕವಾಗಿರುವ ಸನಾತನದ ‘ಗಣೇಶ ಪೂಜೆ ಮತ್ತು ಆರತಿ ಆಪ್ !

ಗಣೇಶೋತ್ಸವವು ಎಲ್ಲ ಹಿಂದೂಗಳ ಶ್ರದ್ಧೆಯ ಹಾಗೂ ಆನಂದದ ಹಬ್ಬವಾಗಿದೆ ! ಭಾದ್ರಪದ ಶುಕ್ಲ ಪಕ್ಷ ಚತುರ್ಥಿಯ ದಿನ ಶ್ರೀ ಗಣೇಶನ ಆಗಮನದಿಂದ ಮಂಗಲಮಯವಾಗುವ ವಾತಾವರಣದಿಂದ ಭಕ್ತರಲ್ಲಿ ಆನಂದ ಹಾಗೂ ಉತ್ಸಾಹ ಸಂಚರಿಸುತ್ತದೆ. ಈ ವರ್ಷ ಮಾತ್ರ ಈ ಉತ್ಸಾಹಕ್ಕೆ ಕೊರೋನಾದ ಕರಿನೆರಳು ಬಂದಿದೆ. ಆದ್ದರಿಂದ ಈ ವರ್ಷ ಸರಕಾರವೂ ಗಣೇಶೋತ್ಸವವನ್ನು ಸರಳವಾಗಿ ಆಚರಿಸಲು ಕರೆ ನೀಡಿದೆ.