‘ಹಿಂದೂ ಧರ್ಮದಲ್ಲಿ ಅನೇಕ ದೇವತೆಗಳಿಗೆ ವಿಶಿಷ್ಟ ವಾಹನಗಳಿರುತ್ತವೆ. ದೇವತೆಗಳಿಗೆ ವಿಶಿಷ್ಟ ವಾಹನಗಳಿರುವುದರ ಹಿಂದಿನ ಅಧ್ಯಾತ್ಮಶಾಸ್ತ್ರವು ಮುಂದಿನಂತಿದೆ.
೧. ‘ವಾಹನ’ ಶಬ್ದದ ಅರ್ಥ : ‘ವಾಹನ’ ಶಬ್ದದ ಅರ್ಥ ‘ವಹನ ಮಾಡುವುದು (ಕರೆದುಕೊಂಡು ಹೋಗುವುದು)’
೨. ವಿಶಿಷ್ಟ ದೇವತೆಗೆ ವಿಶಿಷ್ಟ ವಾಹನವಿರುವುದರ ಹಿಂದಿನ ಅಧ್ಯಾತ್ಮಶಾಸ್ತ್ರ
ಕೆಲವು ಪಶು-ಪಕ್ಷಿಗಳು ಸಾತ್ತ್ವಿಕವಾಗಿರುವುದರಿಂದ ಅವುಗಳಲ್ಲಿ ವಿಶಿಷ್ಟ ದೇವತೆಯ ತತ್ತ್ವವನ್ನು ವಹನ ಮಾಡುವ (ಕರೆದುಕೊಂಡು ಹೋಗುವ) ಕ್ಷಮತೆ ಇರುತ್ತದೆ. ಯಾವಾಗ ದೇವತೆಗಳ ಭಕ್ತರು ದೇವತೆಗಳಿಗೆ ಆವಾಹನೆ ಮಾಡುತ್ತಾರೆಯೋ, ಆಗ ಸಗುಣದಿಂದ ದರ್ಶನವನ್ನು ನೀಡಲು ಅಥವಾ ಪೃಥ್ವಿಯ ಮೇಲೆ ಬಂದಿರುವ ಪಾತಾಳದಲ್ಲಿನ ಅನಿಷ್ಟ ಶಕ್ತಿಗಳೊಂದಿಗೆ ಸೂಕ್ಷ್ಮ ಯುದ್ಧವನ್ನು ಮಾಡಲು ದೇವತೆಗಳಿಗೆ ಅವರ ದೈವೀ ಲೋಕದಿಂದ ಪೃಥ್ವಿಯ ಮೇಲೆ ಬರಬೇಕಾಗುತ್ತದೆ, ಆಗ ದೇವತೆಗಳ ಸಗುಣ ತತ್ತ್ವವನ್ನು ವಹನ ಮಾಡುವ (ಕರೆದುಕೊಂಡು ಹೋಗುವ) ಕ್ಷಮತೆಯು ವಿಶಿಷ್ಟ ಸಾತ್ತ್ವಿಕ ಪಶು-ಪಕ್ಷಿಗಳಲ್ಲಿ ಇರುವುದರಿಂದ ದೇವತೆಗಳು ವಿಶಿಷ್ಟ ಪಶುವನ್ನು ಅಥವಾ ಪಕ್ಷಿಯನ್ನು ಅವರ ವಾಹನವೆಂದು ಅವುಗಳ ಮೇಲೆ ಆರೂಢರಾಗಿ ಪೃಥ್ವಿಯ ಮೇಲೆ ಅಥವಾ ಇತರ ಸ್ಥಳಗಳಿಗೆ ಹೋಗುತ್ತಾರೆ.
೩. ವಿಶಿಷ್ಟ ದೇವತೆಗಳು ಅವರ ವಿಶಿಷ್ಟ ವಾಹನದ ಮೇಲೆ ಆರೂಢವಾಗುವುದರಿಂದ ಸೂಕ್ಷ್ಮ ಸ್ತರದಲ್ಲಿ ಆಗುವ ಪ್ರಕ್ರಿಯೆ
‘ವಾಯುಗತಿ’ ಅಂದರೆ, ‘ವಾಯುವಿನ ವೇಗ’ ಮತ್ತು ‘ಮನೋಜವಾ’ ಅಂದರೆ, ‘ಮನಸ್ಸಿನ ವೇಗ’. ವಾಯುವಿನ ವೇಗಕ್ಕಿಂತ ‘ಮನೋಜವಾ’, ಮನೋಜವಾಕ್ಕಿಂತ ‘ಹಂಸ’ ವೇಗ ಮತ್ತು ‘ಹಂಸ’ ವೇಗಕ್ಕಿಂತ ‘ಮಹಾಹಂಸ’ದ ವೇಗವು ಹೆಚ್ಚು ಸೂಕ್ಷ್ಮತರ ಮತ್ತು ತೀವ್ರವಾಗಿದೆ. ವಿವಿಧ ದೇವತೆಗಳು ‘ಹಂಸ’ ವೇಗದಿಂದ ಮತ್ತು ಅವತಾರಗಳು ‘ಮಹಾಹಂಸ’ದ ವೇಗದಿಂದ ಬ್ರಹ್ಮಾಂಡದಲ್ಲಿ ಕಾರ್ಯನಿರತರಾಗುತ್ತಾರೆ. ಆದುದರಿಂದ ಯಾವಾಗ ದೇವತೆಗಳ ಸಗುಣ ರೂಪಗಳಿಗೆ ಹಂಸ ಅಥವಾ ಮಹಾಹಂಸದ ವೇಗದಿಂದ ಇಚ್ಛಿತ ಸ್ಥಳಕ್ಕೆ ತಲುಪಬೇಕಾಗಿರುತ್ತದೆಯೋ, ಆಗ ಈ ತೀವ್ರ ಗತಿಯಿಂದ ದೇವತೆಗಳ ತತ್ತ್ವಗಳನ್ನು ಧರಿಸಿ ಅವರನ್ನು ಕರೆದುಕೊಂಡು ಹೋಗುವ ದೇವತೆಯ ವಿಶಿಷ್ಟ ರೀತಿಯ ವಾಹನವು ಉಪಯುಕ್ತವಾಗುತ್ತದೆ. ಆದುದರಿಂದ ವಿಶಿಷ್ಟ ದೇವತೆಗೆ ವಿಶಿಷ್ಟ ವಾಹನ ಇರುತ್ತದೆ.
ದೇವತೆಗಳು ಮತ್ತು ಅವರ ವಾಹನಗಳು
ಟಿಪ್ಪಣಿ ೧ : ಹಿಂದೂ ಧರ್ಮಕ್ಕನುಸಾರ ಸರಸ್ವತಿದೇವಿಯ ವಾಹನವು ಬಿಳಿ ಬಣ್ಣದ ರಾಜಹಂಸವಾಗಿದೆ, ಆದರೆ ಜೈನ ಪಂಥಕ್ಕನುಸಾರ ಸರಸ್ವತಿದೇವಿಯ ವಾಹನವು ನವಿಲಾಗಿದೆ. ರಾಜಹಂಸವು ಸಾತ್ತ್ವಿಕವಾಗಿದೆ ಮತ್ತು ನವಿಲು ಸತ್ತ್ವ-ರಜಪ್ರಧಾನವಾಗಿದೆ. ಸರಸ್ವತಿದೇವಿಯು ಸತ್ತ್ವಪ್ರಧಾನವಾಗಿರುವುದರಿಂದ ಅವಳ ವಾಹನವು ನವಿಲು ಆಗಿರದೇ ರಾಜಹಂಸವಾಗಿದೆ.
ಟಿಪ್ಪಣಿ ೨ : ಜಾಲತಾಣದಲ್ಲಿ ದೊರಕುವ ಮಾಹಿತಿಗನುಸಾರ ಮಹಾಲಕ್ಷ್ಮಿದೇವಿಯ ವಾಹನವು ‘ಗೂಬೆ’ ಆಗಿದೆ. ‘ಗೂಬೆ’ ಈ ಪಕ್ಷಿಯು ಸಾತ್ತ್ವಿಕ ಇಲ್ಲದಿರುವುದರಿಂದ ‘ಅದು ಮಹಾಲಕ್ಷ್ಮಿದೇವಿಯ ವಾಹನ ಆಗಲಾರದು’, ಎಂದು ನನಗೆ ಅನಿಸುತ್ತದೆ. ನನಗೆ ಸೂಕ್ಷ್ಮದಿಂದ ಲಭಿಸಿದ ಜ್ಞಾನಕ್ಕನುಸಾರ ಮಹಾಲಕ್ಷ್ಮಿದೇವಿಯ ವಾಹನವು ಬಿಳಿ ಆನೆ ಆಗಿದೆ. ‘ಆನೆ’ ಈ ಪ್ರಾಣಿ ಶಕ್ತಿಸಹಿತ ಐಶ್ವರ್ಯದ ಪ್ರತೀಕವೂ ಆಗಿದೆ. ಅದೇ ರೀತಿ ಅಷ್ಟಲಕ್ಷ್ಮಿಗಳಲ್ಲಿನ ‘ಗಜಲಕ್ಷ್ಮಿ’ ಈ ರೂಪವು ‘ಗಜದ ಮೇಲೆ’ ಅಂದರೆ, ಆನೆಯ ಮೇಲೆ ಆರೂಢವಾಗಿರುತ್ತದೆ. ಆದುದರಿಂದ ಮಹಾಲಕ್ಷ್ಮಿಯ ವಾಹನವು ಗೂಬೆ ಆಗಿರದೇ ಬಿಳಿ ಆನೆಯೇ ಆಗಿದೆ.
ಟಿಪ್ಪಣಿ ೩ : ‘ಮಹಾಗೌರಿ’ ಮತ್ತು ‘ಶೈಲಪುತ್ರಿ’ ಈ ದೇವಿಯ ರೂಪಗಳು ಬಿಳಿ ಶುಭ್ರ ವೃಷಭದ ಮೇಲೆ (ಹೋರಿಯ ಮೇಲೆ) ಆರೂಢವಾಗಿವೆ.
ನವಗ್ರಹಗಳು ಮತ್ತು ಅವರ ವಾಹನಗಳು
ಟಿಪ್ಪಣಿ ೧ – ‘ಕಮಲ’ವು ಜ್ಞಾನದ ಪ್ರತೀಕವಾಗಿದೆ. ಸಂಪೂರ್ಣ ಅರಳಿದ ಕಮಲದಿಂದ ಜ್ಞಾನಶಕ್ತಿ ಪ್ರವಹಿಸುತ್ತಿರುತ್ತದೆ. ‘ಗುರು’ ಗ್ರಹವು ಜ್ಞಾನಸ್ವರೂಪವಾಗಿರುವುದರಿಂದ ಗುರುಗ್ರಹದ ಆಸನವು ಕಮಲವಾಗಿದೆ.
ಟಿಪ್ಪಣಿ ೨ – ‘ಕಾಗೆ ಮತ್ತು ರಣಹದ್ದು’, ಇವು ತಮೋಗುಣಿ ಪಕ್ಷಿಗಳಾಗಿರುವುದರಿಂದ ಅವು ತಮೋಗುಣಿ ಶನಿಯ ವಾಹನಗಳಾಗಿವೆ. ಕೇತುವೂ ತಮೋಗುಣಿ ಆಗಿರುವುದರಿಂದ ಅವನ ವಾಹನವೂ ರಣಹದ್ದು ಆಗಿದೆ.
ದೇವತೆಗಳ ವಾಹನಗಳಿಗೆ ದೇವತ್ವ ಪ್ರಾಪ್ತವಾಗಿದೆ
‘ದೇವತೆಗಳ ಸಗುಣ ರೂಪವನ್ನು ಕರೆದುಕೊಂಡು ಹೋಗುವುದರಿಂದ ದೇವತೆಗಳ ವಾಹನಗಳಿಗೂ ದೇವತ್ವ ಪ್ರಾಪ್ತವಾಗಿದೆ. ಆದುದರಿಂದ ಹಿಂದೂ ಧರ್ಮದಲ್ಲಿ ಮಣ್ಣೆತ್ತಿನ ಅಮವಾಸ್ಯೆಗೆ ಶಿವನ ವಾಹನವಾಗಿರುವ ಎತ್ತುಗಳ, ಕೆಲವು ಧಾರ್ಮಿಕ ವಿಧಿಗಳಲ್ಲಿ ವಿಷ್ಣುವಾಹನ ಗರುಡನ ಮತ್ತು ಅಶ್ವಮೇಘದಂತಿರುವ ಯಜ್ಞಗಳಲ್ಲಿ ಅಶ್ವದ ಅಂದರೆ, ಕುದುರೆಯ ಪೂಜೆಯನ್ನು ಮಾಡಲಾಗುತ್ತದೆ.’
– ಕು. ಮಧುರಾ ಭೊಸಲೆ (ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ) ಆಧ್ಯಾತ್ಮಿಕ ಮಟ್ಟ ಶೇ. ೬೩), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೪.೧೦.೨೦೨೧)