ಚೈತ್ರ ಶುಕ್ಲ ಪಕ್ಷ ಪಾಡ್ಯದಂದು ಅಂದರೆ ಯುಗಾದಿಯಂದು ಹಿಂದೂಗಳ ಹೊಸ ವರ್ಷ ಪ್ರಾರಂಭವಾಗುತ್ತದೆ. ತನ್ನಿಮಿತ್ತ ಈ ವರ್ಷ ಕನ್ನಡಿಗರು ಶುದ್ಧ ಕನ್ನಡ ಭಾಷೆಯಲ್ಲಿ ಮಾತನಾಡುವ ಸಂಕಲ್ಪ ಮಾಡಿ ಅದನ್ನು ಪೂರ್ಣತ್ವಕ್ಕೆ ಒಯ್ಯಬೇಕು. ಭಾಷೆ, ಮಾತು ಮತ್ತು ಲೇಖನ ಇವುಗಳ ಸಂದರ್ಭದಲ್ಲಿ ಕನ್ನಡ ಭಾಷೆಯ ಸದ್ಯದ ಸ್ಥಿತಿ ಎಷ್ಟು ದಯನಿಯವಾಗಿದೆಯೆನ್ನುವುದು, ಮನೆಮನೆಗಳಲ್ಲಿ ಮಾತನಾಡುವ ಕನ್ನಡದ ಉಚ್ಚಾರದಿಂದಲೇ ಅರಿವಾಗುತ್ತದೆ. ಭಾಷಾ ಶುದ್ಧಿಯು ರಾಷ್ಟ್ರಹಿತದ ಮತ್ತು ಸ್ವರಕ್ಷಣೆಯ ವಿಷಯವಾಗಿದೆ. ಇದನ್ನು ಕಾರ್ಯಗತಗೊಳಿಸಲು ರಕ್ತ ಹರಿಸುವ ಅವಶ್ಯಕತೆಯಿಲ್ಲ ಅಥವಾ ಹಣಕಾಸಿನ ವೆಚ್ಚವೂ ಆಗುವುದಿಲ್ಲ. ಇದಕ್ಕೆ ಕೇವಲ ಮನಸ್ಸಿನ ಸಂಕಲ್ಪಶಕ್ತಿಯ ಅವಶ್ಯಕತೆಯಿದೆ. ಭಾಷಾಶುದ್ಧಿಯಿಂದ ಸಮಾಜದ ರಚನೆಯಾಗುತ್ತದೆ. ಸಮಾಜದಲ್ಲಿ ಅಭಿವೃದ್ಧಿಶೀಲ ಮನಸ್ಸು ಮತ್ತು ಬುದ್ಧಿಯ ಸಂಯೋಗವಿದ್ದರೆ. ಸುದೃಢ ರಾಷ್ಟ್ರ ನಿರ್ಮಾಣವಾಗುತ್ತದೆ. ಭಾಷಾಶುದ್ಧಿಯ ವ್ರತವನ್ನು ಅಂಗೀಕರಿಸುವುದು ಎಂದರೆ ಪ್ರತಿ ಜೀವವು ಯೋಗ್ಯ ಅಂದರೆ ಶುದ್ಧ ಭಾಷೆ ಉಚ್ಚರಿಸುವುದಾಗಿದೆ. ಅದರೊಂದಿಗೆ ಭಾಷೆಯಲ್ಲಿರುವ ದೇವರೂಪಿ ಚೈತನ್ಯವನ್ನು ಸ್ವತಃ ಗ್ರಹಿಸಲು ಪ್ರಯತ್ನಿಸಿದರೆ ವಾಯುಮಂಡಲ ಹಾಗೂ ಸಮಾಜ ಶುದ್ಧಗೊಳ್ಳುತ್ತದೆ. ಶುದ್ಧಭಾಷೆಯ ಉಚ್ಚಾರಣೆಯಿಂದ ಜೀವದಲ್ಲಿ ನಿಧಾನವಾಗಿ ಚೈತನ್ಯದ ಬೀಜವು ಮೊಳಕೆಯೊಡೆದು ಈಶ್ವರೀ ಗುಣಗಳ ಸಂವರ್ಧನೆ ಪ್ರಾರಂಭವಾಗುತ್ತದೆ. ಇದಕ್ಕಾಗಿ ಪರಕೀಯ ಭಾಷೆಗಳ ಗುಲಾಮಗಿರಿಯನ್ನು ನಷ್ಟಗೊಳಿಸಲು ಕ್ರಿಯಾಶೀಲರಾಗಿರಿ.