ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಸೂಕ್ಷ್ಮ ಜಗತ್ತಿನ ಬಗೆಗಿನ ಅನುಭವವನ್ನು ಈ ಲೇಖನಮಾಲಿಕೆಯಿಂದ ನಾವು ನೋಡುತ್ತಿದ್ದೇವೆ. ಕಳೆದ ವಾರದ ಸಾಪ್ತಾಹಿಕದ ಸಂಚಿಕೆಯಲ್ಲಿ ಈ ಲೇಖಮಾಲೆಯ ಕೆಲವು ಭಾಗಗಳನ್ನು ನೋಡಿದೆವು. ಈ ವಾರದಲ್ಲಿ ಈ ಮಾಲಿಕೆಯ ಕೊನೆಯ ಭಾಗವನ್ನು ನೋಡೋಣ. (ಭಾಗ ೧೮)
‘ಒಮ್ಮೆ ಪರಾತ್ಪರ ಗುರು ಡಾ. ಆಠವಲೆಯವರು ನಮಗೆ ಸುತ್ತಮುತ್ತಲಿನ ನಿಸರ್ಗದ ಪರೀಕ್ಷಣೆಯನ್ನು ಮಾಡಲು ಹೇಳಿದರು. ಆಗ ನಾವು ಫೋಂಡಾ (ಗೋವಾ) ದಲ್ಲಿನ ‘ಸುಖಸಾಗರ’ ಆಶ್ರಮದಲ್ಲಿದ್ದೆವು. ನಾವು ಅಲ್ಲಿ ಕುಳಿತುಕೊಂಡೇ ಪರೀಕ್ಷಣೆಯನ್ನು ಮಾಡಲು ಆರಂಭಿಸಿದೆವು. ಪರೀಕ್ಷಣೆ ಮಾಡಿದ ನಂತರ ನಾವು ತಕ್ಷಣ ಗುರುದೇವರ ಬಳಿ ಹೋಗಿ ನಮ್ಮ ಪರೀಕ್ಷಣೆಯನ್ನು ಹೇಳಿದೆವು. ಆಗ ಗುರುದೇವರು, ”ಅಬ್ಬಾ, ನೀವು ಇಷ್ಟೊಂದು ಬೇಗ ಹೊರಗೆ ಹೋಗಿ ನಿಸರ್ಗವನ್ನು ನೋಡಿ ಬಂದಿದ್ದೀರಾ !” ಎಂದು ಕೇಳಿದರು. ಅದಕ್ಕೆ ನಾವು, ”ಇಲ್ಲ ಗುರುದೇವರೇ, ನಾವು ಹೊರಗೆ ಹೋಗಲಿಲ್ಲ. ಇಲ್ಲಿ ಕುಳಿತುಕೊಂಡೇ ಪರೀಕ್ಷಣೆಯನ್ನು ಮಾಡಿದೆವು” ಎಂದು ಹೇಳಿದೆವು. ಆಗ ಗುರುದೇವರು ಪರೀಕ್ಷಣೆಯಲ್ಲಿನ ನಮ್ಮ ತಪ್ಪನ್ನು ಗಮನಕ್ಕೆ ತಂದುಕೊಟ್ಟರು. ಅವರು, ”ಸುಖಸಾಗರ’ ಆಶ್ರಮದ ಮುಂದೆ ಒಂದು ಉದ್ಯಾನವಿದೆ. ಅಲ್ಲಿ ಹೋಗಲು ಎಷ್ಟು ಸಮಯ ಬೇಕಾಗುತ್ತದೆ ? ಎಲ್ಲಿ ಸಾಧ್ಯವಾಗುತ್ತದೆಯೋ, ಅಲ್ಲಿ ಪ್ರತ್ಯಕ್ಷ ಹೋಗಿಯೇ ಪರೀಕ್ಷಣೆಯನ್ನು ಮಾಡಬೇಕು. ಅದರಿಂದ ನಮ್ಮ ಸೂಕ್ಷ್ಮದಲ್ಲಿನ ಶಕ್ತಿ ಉಳಿಯುತ್ತದೆ, ಇಲ್ಲದಿದ್ದರೆ ಇಲ್ಲಿ ಕುಳಿತುಕೊಂಡೇ ಪರೀಕ್ಷಣೆ ಮಾಡುವುದರಲ್ಲಿ ನಮ್ಮ ಸಾಧನೆ ಖರ್ಚಾಗುತ್ತದೆ” ಎಂದು ಹೇಳಿದರು.
ಅವರು, ”ನಮ್ಮ ಸಾಧನೆಯ ಶಕ್ತಿ ಅಥವಾ ಸಂಚಯವನ್ನು ನಾವು ಉಳಿಸಬೇಕು. ಬ್ಯಾಂಕ್‌ನಲ್ಲಿನ ಉಳಿತಾಯದ ಖಾತೆಯಲ್ಲಿ ಜಮೆಯಾಗಿರುವ ಹಣವನ್ನು ನಾವು ಅನಾವಶ್ಯಕವಾಗಿ ಖರ್ಚು ಮಾಡುವುದಿಲ್ಲ ಅಲ್ಲವೇ ? ಇದು ಹಾಗೆಯೇ ಇದೆ. ನಾವು ‘ಸಾಧನೆಯನ್ನು ಮಾಡುವಾಗ ಅದು ಖರ್ಚಾಗುವುದಿಲ್ಲವಲ್ಲ’, ಎಂಬ ವಿಚಾರವನ್ನು ಮಾಡಬೇಕು, ಇಲ್ಲದಿದ್ದರೆ ಸಾಧನೆಯಲ್ಲಿನ ಗುಣಮಟ್ಟ ಕಡಿಮೆಯಾಗುತ್ತ ಹೋಗುತ್ತದೆ. ವ್ಯವಹಾರದಲ್ಲಿ ನಾವು ಹಣವನ್ನು ಹೇಗೆ ಮಿತವಾಗಿ ಖರ್ಚು ಮಾಡುತ್ತೇವೆ, ಇದು ಹಾಗೆಯೇ ಇದೆ. ನಾವು ಪರೀಕ್ಷಣೆ ಮಾಡುವ ಸ್ಥಳವು ಇಲ್ಲಿಂದ ದೂರವಿದ್ದರೆ ಅದು ಸರಿಯಿದೆ; ಆದರೆ ಹತ್ತಿರದ ಸ್ಥಳದಲ್ಲಿ ಮಾತ್ರ ಅಲ್ಲಿ ಹೋಗಿಯೇ ಪರೀಕ್ಷಣೆಯನ್ನು ಮಾಡಬೇಕು” ಎಂದು ಹೇಳಿದರು. ಗುರುದೇವರು ನಮಗೆ ಪರೀಕ್ಷಣೆ ಮಾಡುವುದರಲ್ಲಿ ತುಂಬಾ ಮಹತ್ವದ ವಿಷಯವನ್ನು ಕಲಿಸಿದರು ಮತ್ತು ‘ಸಾಧನೆಯ ಶಕ್ತಿಯನ್ನು ಅನಾವಶ್ಯಕವಾಗಿ ಖರ್ಚು ಮಾಡಬಾರದು’, ಎಂಬುದನ್ನೂ ಕಲಿಸಿದರು.
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಚೆನ್ನೈ, ತಮಿಳುನಾಡು. (೧.೩.೨೦೨೨) (ಮುಕ್ತಾಯ)