ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಹಿರಿಯ ಸಹೋದರ ಅನಂತ ಆಠವಲೆಯವರಿಗೆ ವಯಸ್ಸಾದುದರಿಂದ ಈಗ ಅವರು ಸನಾತನ ಸಂಸ್ಥೆಯ ರಾಮನಾಥಿಯಲ್ಲಿರುವ ಆಶ್ರಮಕ್ಕೆ ಬರುವುದಿಲ್ಲ, ಆದರೆ ಬಹಳ ದಿನಗಳ ನಂತರ, ಮತ್ತೊಮ್ಮೆ ಆಶ್ರಮವನ್ನು ನೋಡಬೇಕೆಂಬ ವಿಚಾರದಿಂದ ೧೯.೯.೨೦೨೪ ರಂದು ಆಶ್ರಮಕ್ಕೆ ಬಂದು ಪರಮಪೂಜ್ಯರನ್ನು ಭೇಟಿಯಾದರು. ಹಿಂದಿರುಗುವ ಮೊದಲು ಇದ್ದಕ್ಕಿದ್ದಂತೆಯೇ ಅವರ ಮನಸ್ಸಿನಲ್ಲಿ ‘ಎಲ್ಲ ಸಾಧಕರಿಗೆ ಆನಂದ ನೀಡುವಂತಹ ಏನಾದರೂ ಹೇಳಬೇಕು’, ಎಂಬ ವಿಚಾರ ಬಂದಿತು. ಅವರು ಆ ಸಮಯದಲ್ಲಿ ಹೇಳಿದ್ದನ್ನು ಮುಂದೆ ಕೊಡಲಾಗಿದೆ.
‘ಆಶ್ರಮದಲ್ಲಿರುವ ಎಲ್ಲ ಸಾಧಕರಿಗೆ, ಹೊರಗಿದ್ದೂ ಸನಾತನ ಸಂಸ್ಥೆಯ ಕಾರ್ಯಕ್ಕಾಗಿ ದಿನವಿಡಿ ತಮ್ಮನ್ನು ತಾವು ತೊಡಗಿಸಿಕೊಂಡ ಸಾಧಕರಿಗೆ, ಆನಂದ ನೀಡುವಂತಹ ಒಂದು ವಿಷಯವನ್ನು ಹೇಳಬೇಕಾಗಿದೆ, ಅದೇನೆಂದರೆ ನೀವೆಲ್ಲ ಸನಾತನದ ಸಾಧಕರು ನಿಮ್ಮ ಪರಮಗುರುಗಳ ಕೃಪೆಯಿಂದ ಮುಕ್ತಿಯ ಬಳಿಗೆ ತಲುಪುತ್ತಿರುವಿರಿ. ಅದು ಹೇಗೆ ? ಅದನ್ನು ಸಹ ಹೇಳುತ್ತೇನೆ.
ಮನುಷ್ಯನು ದಿನವಿಡಿ ಏನಾದರೂ ಕರ್ಮವನ್ನು ಮಾಡುತ್ತಲೇ ಇರುತ್ತಾನೆ. ಕೆಲವೊಮ್ಮೆ ಮಾಡಬಾರದ ಕರ್ಮವು ಕೈಯಿಂದ ಘಟಿಸುತ್ತದೆ ಮತ್ತು ಪಾಪ ತಗಲುತ್ತದೆ. ಇತರರ ಹಿತಕ್ಕಾಗಿಯೂ ಕರ್ಮವು ಘಟಿಸಬಹುದು ಮತ್ತು ಅದರಿಂದ ಪುಣ್ಯ ಸಿಗುತ್ತದೆ. ಇದು ಕ್ರಿಯಮಾಣವಾಗಿರುತ್ತದೆ, ಅಂದರೆ ಭೋಗಿಸಲು ಹೊಸದಾಗಿ ಜೋಡಿಸಲ್ಪಟ್ಟ ಪಾಪ-ಪುಣ್ಯ. ನಿಮ್ಮ ಪರಮಗುರುಗಳು ನಿಮ್ಮೆಲ್ಲರಿಗೂ ಉತ್ತಮ ಸಂಸ್ಕಾರಗಳನ್ನು ನೀಡುವುದರ ಜೊತೆಗೆ ನಿಮ್ಮನ್ನು ದಿನವಿಡಿ ಸೇವೆಯಲ್ಲಿ ತೊಡಗಿಸಿಟ್ಟಿದ್ದಾರೆ. ಒಳ್ಳೆಯ ಸಂಸ್ಕಾರಗಳಿಂದಾಗಿ ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳೇ ಇರುತ್ತವೆ, ಪಾಪದ ಕಡೆಗೆ ಮನಸ್ಸು ಹೋಗುವುದೇ ಇಲ್ಲ ಮತ್ತು ನಿರಂತರ ಸೇವೆಯಲ್ಲಿ ಇರುವುದರಿಂದ ಕೈಯಿಂದ ಪಾಪಕರ್ಮಗಳು ಸಂಭವಿಸುವ ಅವಕಾಶವೇ ಉಳಿಯುವುದಿಲ್ಲ. ಇನ್ನೊಂದೆಂದರೆ ಪುಣ್ಯಕರ್ಮವೂ ವ್ಯಕ್ತಿಯನ್ನು ಮುಕ್ತಿಯಿಂದ ದೂರವಿಡುತ್ತದೆ. ಆದರೆ ನೀವು ಪುಣ್ಯಕರ್ಮದ ಶ್ರೇಯಸ್ಸನ್ನು ತೆಗೆದುಕೊಳ್ಳುವುದಿಲ್ಲ. ಎಲ್ಲವನ್ನೂ ಗುರುಗಳೇ ಮಾಡಿಸಿಕೊಂಡಿದ್ದಾರೆ, ಈಶ್ವರನೇ ಮಾಡಿಸಿಕೊಂಡಿದ್ದಾನೆ ಎಂಬ ಭಾವ ಮನಃಪೂರ್ವಕ ನಿಮ್ಮಲ್ಲಿರುತ್ತದೆ. ಇದಲ್ಲದೇ ಮಾಡಿದ ಸೇವೆಯಿಂದ ನೀವು ಏನನ್ನೂ ಪಡೆಯಲು ಇಚ್ಛಿಸುವುದಿಲ್ಲ, ನಿಷ್ಕಾಮದಿಂದ ಮಾಡುತ್ತೀರಿ. ಕರ್ತೃತ್ವ ತೆಗೆದುಕೊಳ್ಳದ ಕಾರಣ ಮತ್ತು ನಿಷ್ಕಾಮದಿಂದ ಆ ಸತ್ಕರ್ಮದ ಫಲ, ಅಂದರೆ ಪುಣ್ಯವೂ ನಿಮಗೆ ಸೇರುವುದಿಲ್ಲ. ಅಂದರೆ ನಿಮ್ಮಿಂದ ಹೊಸ ಪಾಪ ಮತ್ತು ಪುಣ್ಯ ಸಹ ಸಂಭವಿಸುವುದೇ ಇಲ್ಲ; ಸಂಚಿತದಲ್ಲಿ, ಸಂಗ್ರಹದಲ್ಲಿ ಶೇಖರಣೆಯಾಗುವುದಿಲ್ಲ.
ಪುನಃ ಪುನಃ ಜನ್ಮಗಳನ್ನು ಪಡೆಯುವ ಕಾರಣವೇನು ? ಹಿಂದಿನ ಜನ್ಮಗಳಲ್ಲಿನ ಭೋಗಿಸದೇ ಉಳಿದ ಪಾಪ-ಪುಣ್ಯಗಳ ಫಲಗಳನ್ನು ಭೋಗಿಸಲು ಮುಂದಿನ ಜನ್ಮವು ಆಗುತ್ತಿರುತ್ತದೆ. ಹಿಂದಿನ ಜನ್ಮಗಳಲ್ಲಿನ ಭೋಗಿಸಬೇಕಾದ ಪಾಪ-ಪುಣ್ಯಗಳು ಪ್ರಸ್ತುತ ಜನ್ಮದಲ್ಲಿ ಇಲ್ಲವಾದರೆ ಮುಂದಿನ ಒಂದೆರಡು ಜನ್ಮಗಳಲ್ಲಿ ಭೋಗಿಸಿ ತೀರಿಸಬಹುದು. ಮೇಲೆ ಹೇಳಿದಂತೆ ನಿಮ್ಮ ಪಾಪ-ಪುಣ್ಯಗಳಿಗೆ ಹೊಸ ಸೇರ್ಪಡೆ ಇರುವುದೇ ಇಲ್ಲ. ಈ ರೀತಿ ಎಲ್ಲ ಪಾಪ-ಪುಣ್ಯಗಳ ಫಲಗಳನ್ನು ಭೋಗಿಸಿ ಮುಗಿಸುವುದರಿಂದ ಪುನರ್ಜನ್ಮಕ್ಕೆ ಕಾರಣವೇ ಉಳಿಯುವುದಿಲ್ಲ ! ನೀವು ಮುಕ್ತರೇ ಆಗುವಿರಿ !’
– ಪೂ. ಅನಂತ ಆಠವಲೆ (೧೯.೯.೨೦೨೪)
ಪ.ಪೂ. ಡಾಕ್ಟರರ ‘ಏಕೋಹಂ ಬಹುಸ್ಯಾಮ್ |’, ಅಂದರೆ ‘ಸನಾತನ ಸಂಸ್ಥೆ’ ಆಗಿದೆಪ.ಪೂ. ಡಾಕ್ಟರರು ಊರೂರುಗಳಿಗೆ ಸಂಚಾರ ಮಾಡಿ ಪ್ರವಚನಗಳ ಮಾಧ್ಯಮದಿಂದ ಮಾಡಿದ ಅಧ್ಯಾತ್ಮ ಪ್ರಸಾರದಿಂದಾಗಿ ‘ಏಕೋಹಂ ಬಹುಸ್ಯಾಮ್ |’, ಅಂದರೆ ‘ನಾನು ಒಬ್ಬನಾಗಿದ್ದೇನೆ. ನನ್ನಂತಹ ಅನೇಕರು ಆಗಬೇಕು’ ಎಂಬ ಬ್ರಹ್ಮನ ವಚನದಂತೆ ಓರ್ವ ಪ.ಪೂ. ಡಾಕ್ಟರರಿಂದ ಅನೇಕ ಸಾಧಕರಿರುವ ಸನಾತನ ಸಂಸ್ಥೆಯ ನಿರ್ಮಿತಿ ಆಯಿತು.’ – ಸದ್ಗುರು (ದಿ.) ಡಾ. ವಸಂತ ಬಾಳಾಜಿ ಆಠವಲೆ (ಅಪ್ಪಾಕಾಕಾ), ಚೆಂಬೂರ್ ಮುಂಬಯಿ. |