‘ಹಿಂದೊಮ್ಮೆ ಒಂದು ಕ್ಷೇತ್ರದ ಕೆಲವು ಗಣ್ಯ ವ್ಯಕ್ತಿಗಳು ಪ.ಪೂ. ಡಾಕ್ಟರರನ್ನು ಭೇಟಿಯಾಗಲು ಬರುವವರಿದ್ದರು.’ ಅವರನ್ನು ಭೇಟಿಯಾಗುವಾಗ ಏನು ವಿಷಯ ಹೇಳಬೇಕು ?’, ಇದರ ಬಗ್ಗೆ ಪ.ಪೂ. ಡಾಕ್ಟರರು ಗಣಕೀಯ ಕಡತದಲ್ಲಿ (ಕಂಪ್ಯೂಟರ್‌ನಲ್ಲಿ) ಬೆರಳಚ್ಚು ಮಾಡಿದ್ದರು. ಪ.ಪೂ ಡಾಕ್ಟರರು ಹೇಳಿದ ತಿದ್ದುಪಡಿಯನ್ನು ನಾನು ಕಡತದಲ್ಲಿ ಮಾಡುತ್ತಿದ್ದೆ. ಆ ಕಡತವು ಅರ್ಥವಾಗಲು ತುಂಬಾ ಕಠಿಣವಾಗಿತ್ತು. ೨ – ೩ ದಿನ ಈ ಸೇವೆ ನಡೆಯುತ್ತಿತ್ತು. ಈ ಸೇವೆ ಮಾಡುವಾಗ ನನಗೆ ತುಂಬಾ ಆಧ್ಯಾತ್ಮಿಕ ತೊಂದರೆಯಾಗುತ್ತಿತ್ತು. ನಾನು ಅದರಲ್ಲಿ ಏನು ತಿದ್ದುಪಡಿ ಮಾಡುತ್ತಿದ್ದೇನೆ, ಇದು ಸಹ ನನಗೆ ಸರಿಯಾಗಿ ತಿಳಿಯುತ್ತಿರಲಿಲ್ಲ ನನಗೆ ಆಗುತ್ತಿರುವ ತೊಂದರೆಯ ಬಗ್ಗೆ ನಾನು ಪ.ಪೂ.ಡಾಕ್ಟರರಿಗೆ ತಿಳಿಸಿದ ನಂತರ ಅವರು, ‘ಹಾಂ ! ತೊಂದರೆಯು ತುಂಬ ಹೆಚ್ಚಾಗಿದೆ. ನನಗೂ ತುಂಬ ತೊಂದರೆಯಾಗುತ್ತಿದೆ’ ಎಂದು ಹೇಳಿದರು.
ಅನಂತರ ಒಬ್ಬ ಸಾಧಕರು ‘ಇವತ್ತಿನ ಭೇಟಿ ರದ್ದಾಗಿದೆ. ಇವತ್ತಿನ ಬದಲು ನಾಡಿದ್ದು ಭೇಟಿ ಇದೆ’, ಎಂದು ಸಂದೇಶ ನೀಡಿದರು. ಆಗ ಪ.ಪೂ. ಡಾಕ್ಟರರು ಹೇಳಿದರು, ‘ಇವತ್ತಿನ ಸತ್ಸಂಗ ರದ್ದಾಯಿತು. ನಮ್ಮ ಸೇವೆ ಪೂರ್ಣವಾಗಲಿಲ್ಲವೆಂದು ದೇವರೇ ನಮ್ಮ ಕಾಳಜಿಯನ್ನು ತೆಗೆದುಕೊಂಡರು. ನಮಗೆ ಎರಡು ದಿನ ಹೆಚ್ಚಿಗೆ ಕೊಟ್ಟರು; ಆದರೆ ನಾವು ಮಾತ್ರ ಸೇವೆ ಪೂರ್ಣ ಮಾಡಲು ಕಡಿಮೆ ಬಿದ್ದೆವು’. ಸ್ವಲ್ಪ ಸಮಯದ ನಂತರ ಅವರು ಹೇಳಿದರು ‘ಇದು ಮಾತ್ರ ದೇವರ ಲೀಲೆಯೇ ಇದೆ’ ! ಎಂದರು. ನಂತರ ನನಗೆ ‘ದೇವರು ಈ ತಪ್ಪಿನಿಂದ ನನ್ನನ್ನು ಕಾಪಾಡಿದ ಬಗ್ಗೆ ನನ್ನ ಮನಸ್ಸಿನಲ್ಲಿ ಕೃತಜ್ಞತೆ ಮೂಡಿತು.’
– ಕು. ತೃಪ್ತಿ ಕುಲಕರ್ಣಿ, ಸನಾತನ ಆಶ್ರಮ, ರಾಮನಾಥಿ ಗೋವಾ. (೨೫.೮.೨೦೨೩)