ಕೊರೊನಾ ಸೋಂಕು ಮತ್ತು ನಂತರದ ಅವಧಿಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದ ವಾಯುವೇಗದಲ್ಲಿ ಹಬ್ಬಿದ ಸನಾತನ ಸಂಸ್ಥೆಯ ಧರ್ಮಕಾರ್ಯದ ಪಕ್ಷಿನೋಟ !

‘ಕೊರೊನಾ ಮಹಾಮಾರಿಯಿಂದ ಉದ್ಭವಿಸಿದ ಸಂಚಾರನಿಷೇಧವು ಜನರ ಜೀವನವನ್ನೇ ಬದಲಾಯಿಸಿತು ಹಾಗೂ ಪ್ರತ್ಯಕ್ಷ ಕೆಲಸದ ಪದ್ಧತಿ ‘ಆನ್‌ಲೈನ್’ ಆಗಿತ್ತು. ಇಂದು ಕೂಡ ಆ ಪದ್ಧತಿ ‘ವರ್ಕ್ ಫ್ರಮ್‌ ಹೋಮ್‌ (ಮನೆಯಲ್ಲಿದ್ದು ಕೆಲಸ ಮಾಡುವುದು)’ ಮುಂದುವರಿದಿದೆ. ಪ್ರತ್ಯಕ್ಷ ಮಾಡಬೇಕಾದ ವಿಷಯಗಳು ಈಗ ಸಹಜವಾಗಿ ‘ಆನ್‌ಲೈನ್‌’ನಲ್ಲಿ ಆಗುತ್ತಿವೆ. ಸನಾತನದ ಅನೇಕ ಉಪಕ್ರಮಗಳು ಕೂಡ ‘ಆನ್‌ಲೈನ್‌’ದಲ್ಲಿ ಆರಂಭವಾಗಿದ್ದವು. ಅದರ ಮೂಲಕ ವಿವಿಧ ಕ್ಷೇತ್ರಗಳಲ್ಲಿನ ಜನರು ಈ ಉಪಕ್ರಮದಲ್ಲಿ ಪಾಲ್ಗೊಂಡರು. ಇದರ ಮೂಲಕ ಮಾರ್ಗದರ್ಶನ ದೊರೆತು ‘ಸನಾತನ ಪ್ರಭಾತ’ದ ವಾಚಕರು, ಜಾಹೀರಾತುದಾರರು, ಹಾಗೂ ಸನಾತನದ ಹಿತಚಿಂತಕರು ಸಾಧನೆ ಮಾಡಲು ಆರಂಭಿಸಿದ್ದಾರೆ. ಒಟ್ಟಾರೆ ಈ ಕಾಲ ಸಾಧಕರ ಸಾಧನೆಗಾಗಿ ಹಾಗೂ ಸನಾತನದ ಕಾರ್ಯವೃದ್ಧಿಗಾಗಿ ಸುವರ್ಣಾವಕಾಶವಾಯಿತು.

ಕೊರೊನಾದ ಆಪತ್ತು ಬಂದಾಗ ಸನಾತನದ ಎಲ್ಲ ಕಾರ್ಯಗಳು ‘ಆನ್‌ಲೈನ್’ ನಡೆಯುತ್ತಿದ್ದವು. ೨೦೨೨ ರ ಮಹಾಶಿವರಾತ್ರಿಯಿಂದ ಸನಾತನದ ಸಾಧಕರು ಪುನಃ ಪ್ರತ್ಯಕ್ಷ ಕಾರ್ಯ ಮಾಡಲು ಪ್ರಯತ್ನಿಸಿದರು. ೨೦೨೩ ರಲ್ಲಿ ಹೊಸ ಸಾಧಕ-ನಿರ್ಮಿತಿಯ ಧ್ಯೇಯವನ್ನಿಟ್ಟು ಉಪಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದರಿಂದ ಒಳ್ಳೆಯ ಪರಿಣಾಮವಾಗಿ ವರ್ಷವಿಡೀ ಸಾವಿರಾರು ಹೊಸ ಸಾಧಕರು ಸಾಧನೆಯನ್ನು ಆರಂಭಿಸಿದರು; ಆದ್ದರಿಂದಲೆ ೨೦೨೪ ರಲ್ಲಿ ಹೊಸ ಸಾಧಕರ ಕ್ಷಮತೆಯನ್ನು ಪುರಸ್ಕರಿಸುತ್ತಾ ಸನಾತನದ ಕಾರ್ಯವನ್ನು ಶಿಸ್ತುಬದ್ಧಗೊಳಿಸಲು ಸಂಘಟನಾತ್ಮಕ ರಚನೆಯ ನಿಯೋಜನೆ ಮಾಡಲಾಯಿತು. ‘ಕಳೆದ ೪ ವರ್ಷಗಳ ಅವಧಿಯಲ್ಲಿ ಸನಾತನದ ಕಾರ್ಯದ ವೇಗ ಗಗನಕ್ಕೇರಿತು’, ಇದು ಕೇವಲ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಾಗಿದೆ. ‘ಸನಾತನದ ಧರ್ಮಕಾರ್ಯ ಹೇಗೆ ವೃದ್ಧಿಯಾಯಿತು ?’, ಎಂಬುದನ್ನು ಈ ಲೇಖನದಿಂದ ತಿಳಿದುಕೊಳ್ಳೋಣ.

೨೬/೮ ರಲ್ಲಿ ಪ್ರಕಾಶನವಾದ ಲೇಖನದಲ್ಲಿ ನಾವು ‘ಕೊರೊನಾದ ಕಾಲದಲ್ಲಿ ಸಾಧಕರಿಗೆ ವ್ಯಷ್ಟಿ ಸಾಧನೆಯನ್ನು ಶಿಸ್ತುಬದ್ಧಗೊಳಿಸಲು ಸಾಧ್ಯವಾಗುವುದು ಹಾಗೂ ಪ್ರತಿಯೊಂದು ಜಿಲ್ಲೆಯಲ್ಲಿ ಆರಂಭವಾದ ‘ಆನ್‌ಲೈನ್‌ ಸಾಧನಾ ಸತ್ಸಂಗ’ಗಳ ವಿಷಯವನ್ನು ಓದಿದೆವು. ಇಂದು ಲೇಖನದ ಮುಂದಿನ ಭಾಗವನ್ನು ನೋಡೋಣ.                                 (ಭಾಗ ೨)

ಈ ಸಂಚಿಕೆಯ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/129395.html
ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

೪. ಶ್ರೇಣಿಗನುಸಾರ ಸಾಧನಾ ಸತ್ಸಂಗ

೪ ಆ. ‘ಆನ್‌ಲೈನ್’ ಸಾಧನಾ ಪ್ರವಚನ ಮಾಲಿಕೆಗಳಿಗೆ ಸಿಕ್ಕಿದ ಅಪ್ರತಿಮ ಪ್ರೋತ್ಸಾಹ : ‘ಆನ್‌ಲೈನ್’ ಸಾಧನಾ ಸತ್ಸಂಗಗಳನ್ನು ಆರಂಭಿಸುವ ಮೊದಲು ಸಂಸ್ಥೆಯ ಸ್ತರದಲ್ಲಿ ಕೊರೊನಾ ಮಹಾಮಾರಿಯ ಮೊದಲು ಮತ್ತು ಕೊರೊನಾದ ಅವಧಿಯಲ್ಲಿ ಜೊತೆಗೂಡಿದ ಜಿಜ್ಞಾಸುಗಳ ಹೆಸರುಗಳನ್ನು ಸಂಗ್ರಹಿಸಲಾಯಿತು. ಅನಂತರ ಪ್ರತಿಯೊಂದು ಜಿಲ್ಲೆಯಲ್ಲಿ ಉತ್ತಮ, ಮಧ್ಯಮ, ಸಾಮಾನ್ಯ ಮತ್ತು ಅಪರಿಚಿತ ಹಾಗೆಯೇ ಅವರ ಭಾಷೆಗನುಸಾರ ಜಿಜ್ಞಾಸುಗಳ ಗುಂಪುಗಳನ್ನು ಮಾಡಲಾಯಿತು. ಅದಕ್ಕನುಸಾರ ಮರಾಠಿ, ಹಿಂದಿ, ಆಂಗ್ಲ, ಗುಜರಾತಿ, ಬಂಗಾಲಿ, ಕನ್ನಡ, ತೆಲುಗು ಮತ್ತು ಮಲಯಾಳಮ್‌ ಈ ೯ ಭಾಷೆಗಳಲ್ಲಿ ಸತ್ಸಂಗಗಳನ್ನು ಆರಂಭಿಸುವ ಮೊದಲು ೩ ವಾರ ಆನ್‌ಲೈನ್‌ ಸಾಧನಾ ಪ್ರವಚನಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಯಿತು. ಮೊದಲ ಆನ್‌ಲೈನ್‌ ಪ್ರವಚನ ಅಕ್ಟೋಬರ ೨೦೨೦ ರಲ್ಲಿ ನಡೆಯಿತು ಹಾಗೂ ೯ ನೇ ಆನ್‌ಲೈನ್‌ ಪ್ರವಚನ ಮಾರ್ಚ್ ೨೦೨೪ ರಲ್ಲಿ ನಡೆಯಿತು. ಈ ಪ್ರವಚನಗಳ ವರದಿಯನ್ನು ಪಕ್ಕದ ಕೋಷ್ಟಕದಲ್ಲಿ ನೋಡಬಹುದು.

ಜಿಲ್ಲೆಗಳಲ್ಲಿ ಜೊತೆಗೂಡಿದ ಜಿಜ್ಞಾಸುಗಳ (ಗ್ರಂಥಪ್ರದರ್ಶನದಲ್ಲಿ ಸಿಕ್ಕಿದ ವಿಳಾಸ, ಜಾಲತಾಣದಿಂದ ಸಿಕ್ಕಿದ ಸಂಪರ್ಕ, ಸಾತ್ತ್ವಿಕ ಉತ್ಪಾದನೆ ಇಷ್ಟವಾಗಿರುವುದರಿಂದ ಸಂಚಾರಿವಾಣಿಯ ಮೂಲಕ ಬಂದಿರುವ ಸಂಪರ್ಕ, ‘ಸನಾತನ ಪ್ರಭಾತ’ ನಿಯತಕಾಲಿಕೆಗಳ ಹೊಸ ವಾಚಕರು, ಗುರುಪೂರ್ಣಿಮೆಗಳಿಗೆ ಬಂದಿರುವ ಜಿಜ್ಞಾಸುಗಳು, ಹೀಗೆ ಅನೇಕ ವಿಧಗಳಿಂದ ಜೊತೆಗೂಡಿದ ಜಿಜ್ಞಾಸುಗಳ) ಮಾಹಿತಿಯನ್ನು ಸಂಗ್ರಹಿಸಿ ಅವರಿಗಾಗಿ ವರ್ಷದಲ್ಲಿ ೨ ಬಾರಿ ಸಂಸ್ಥೆಯ ಸ್ತರದಲ್ಲಿ ಪ್ರವಚನ ಮಾಲಿಕೆಯನ್ನು ತೆಗೆದುಕೊಳ್ಳುವ ಕಾರ್ಯಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಆದ್ದರಿಂದ ಜಿಜ್ಞಾಸು ಯಾವುದೇ ಮಾಧ್ಯಮದಿಂದ ಜೋಡಿಸಲ್ಪಟ್ಟಿದ್ದರೂ ಅವನು ಸತ್ಸಂಗದಲ್ಲಿರಬೇಕೆಂಬ ಪ್ರಯತ್ನ ಆರಂಭವಾಯಿತು. ಇದರಿಂದ ಸತ್ಸಂಗಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು.

೪ ಇ. ವೆಬ್‌ಸೈಟ್‌ನ ವಾಚಕರಿಗಾಗಿ ‘ವೆಬ್‌ಸಾಧನಾ ಸತ್ಸಂಗ’ ಪ್ರಾರಂಭ : ಪ್ರತಿ ತಿಂಗಳು ವೆಬ್‌ಸೈಟ್‌ನ (ಜಾಲತಾಣದ) ವಾಚಕರಿಗಾಗಿ ಸಾಧನೆಯ ಮುಂದಿನ ಮಾರ್ಗದರ್ಶನ ನೀಡುವ ವ್ಯವಸ್ಥೆ ಇರಲಿಲ್ಲ. ಅದಕ್ಕನುಸಾರ ಜಾಲತಾಣದಲ್ಲಿ ಪ್ರತಿ ತಿಂಗಳು ಜೊತೆಗೂಡಿದ  ಜಿಜ್ಞಾಸುಗಳಿಗಾಗಿ ಮರಾಠಿ, ಹಿಂದಿ, ಕನ್ನಡ ಮತ್ತು ಆಂಗ್ಲ ಈ ೪ ಭಾಷೆಗಳಲ್ಲಿ ಪ್ರತಿವಾರ ‘ಸಾಧನಾ ಸಂವಾದ’ ಉಪಕ್ರಮವನ್ನು ಆರಂಭಿಸಲಾಯಿತು. ‘ಜಾಲತಾಣದಲ್ಲಿನ ಮಾಹಿತಿಯನ್ನು ಓದಿ ಅವರಿಗೆ ಏನು ಇಷ್ಟವಾಯಿತು ? ಅವರು ಸದ್ಯ ಯಾವ ಸಾಧನೆ ಮಾಡುತ್ತಿದ್ದಾರೆ ? ಸಾಧನೆಯ ವಿಷಯದಲ್ಲಿ ಸಂದೇಹ ನಿವಾರಣೆ ಹಾಗೂ ಸಂಸ್ಥೆ ಮತ್ತು ಸಂಸ್ಥಾಪಕರ ಮಾಹಿತಿ’, ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಈ ಸಂವಾದ ನಿಯಮಿತವಾಗಿ ೪ ಭಾಷೆಗಳಲ್ಲಿ ತೆಗೆದುಕೊಳ್ಳಲಾಗುತ್ತದೆ. ಈ ಸಂವಾದದ ಫಲಿತಾಂಶವೆಂದರೆ ಸದ್ಯ ೭ ಸತ್ಸಂಗ ಆರಂಭವಾಗಿದ್ದು ೯೫ ಜಿಜ್ಞಾಸುಗಳು ಸಾಧಕರಾಗಿದ್ದಾರೆ.

೪ ಈ. ಪ್ರತ್ಯಕ್ಷ ‘ಸಾಧನಾ ಸತ್ಸಂಗ’ಗಳ ಆರಂಭ : ಕೊರೊನಾದಿಂದಾಗಿ ೨೦೨೨ ರ ವರೆಗೆ ಸಾಧನಾ ಸತ್ಸಂಗ ಆನ್‌ಲೈನ್‌ನಲ್ಲಿ ನಡೆಯುತ್ತಿತ್ತು. ೨೦೨೩ ರಲ್ಲಿ ಹೊಸ ಪರಿಸರದಲ್ಲಿ ಪ್ರಸಾರ ಮಾಡುವ ದೃಷ್ಟಿಯಲ್ಲಿ ಪ್ರತ್ಯಕ್ಷ ಸತ್ಸಂಗದ ಉಪಕ್ರಮವನ್ನು ಪುನಃ ಆರಂಭಿಸಲಾಯಿತು. ಇದರ ಮೂಲಕ ಈಗ ೮೨ ಊರುಗಳಲ್ಲಿ ಪ್ರತ್ಯಕ್ಷ ಸಾಧನಾ ಸತ್ಸಂಗಗಳು ನಡೆಯುತ್ತಿದ್ದು ಅವುಗಳಲ್ಲಿ ೧ ಸಾವಿರದ ೬೦೦ ಜಿಜ್ಞಾಸುಗಳು ನಿಯಮಿತವಾಗಿ ಉಪಸ್ಥಿತರಿರುತ್ತಾರೆ.

೫. ಕೊರೊನಾದ ಸಮಯದಲ್ಲಿ ವಿವಿಧ ವರ್ಗದವರಿಗಾಗಿ ‘ಒತ್ತಡಮುಕ್ತಿಗಾಗಿ ಅಧ್ಯಾತ್ಮ’, ಈ ವಿಷಯದಲ್ಲಿ ಆನ್‌ಲೈನ್‌ ಪ್ರವಚನಗಳು

೫ ಅ. ಪತ್ರಕರ್ತರಿಗಾಗಿ ಆಯೋಜಿಸಿದ ‘ಆನ್‌ಲೈನ್’ ಪರಿಸಂವಾದದಿಂದ ಅವರಿಗೆ ಮಾನಸಿಕ ಆಧಾರ ದೊರೆತು ಒತ್ತಡಮುಕ್ತ ಜೀವನ ನಡೆಸಲು ದೃಷ್ಟಿಕೋನ ಸಿಗುವುದು : ಕೊರೊನಾದಿಂದಾಗಿ ಸಾಮಾನ್ಯ ಜನರ ಜೀವನದಲ್ಲಿ ಅಡಚಣೆಗಳು ಹಾಗೂ ಒತ್ತಡವಿತ್ತು. ಪತ್ರಕರ್ತರೂ ಅದಕ್ಕೆ ಹೊರತಾಗಿರಲಿಲ್ಲ. ಈ ಅವಧಿಯಲ್ಲಿ ಅನೇಕ ಪತ್ರಕರ್ತರು ಮತ್ತು ಸಂಪಾದಕರು ಕೂಡ ನೌಕರಿಯನ್ನು ಕಳೆದುಕೊಳ್ಳಬೇಕಾಗಿತ್ತು. ಕೆಲವು ವರ್ತಮಾನಪತ್ರಿಕೆಗಳು ಮುಚ್ಚಲ್ಪಟ್ಟವು. ಕೆಲವರಿಗೆ ಬೇರೆ ಕಡೆ ಕಡಿಮೆ ವೇತನದಲ್ಲಿ ನೌಕರಿ ಮಾಡಬೇಕಾಯಿತು. ಅದರಿಂದ ಅನೇಕರು ನಿರಾಶೆಗೊಂಡಿದ್ದರು. ಪತ್ರಕರ್ತ ಬಾಂಧವರನ್ನು ಈ ಒತ್ತಡದಿಂದ ಹೊರಗೆ ತಂದು ಆನಂದಮಯ ಜೀವನ ನಡೆಸುವ ಮಾರ್ಗ ತೋರಿಸಲು ಹಾಗೂ ಅವರಿಗೆ ಆಧಾರ ನೀಡಲು ಸನಾತನ ಸಂಸ್ಥೆಯ ವತಿಯಿಂದ ‘ಆನ್‌ಲೈನ್’ ಪತ್ರಕರ್ತರ ಸಂವಾದ ನಡೆಸಲಾಯಿತು. ಮಹಾರಾಷ್ಟ್ರ, ಗೋವಾ, ಛತ್ತೀಸಗಡ, ಮತ್ತು ಗುಜರಾತ ಈ ರಾಜ್ಯಗಳಲ್ಲಿನ ಪತ್ರಕರ್ತರಿಗಾಗಿ ಒಂದು ಮತ್ತು ಉತ್ತರಪ್ರದೇಶ, ಬಿಹಾರ ಮತ್ತು ಝಾರಖಂಡ ಈ ರಾಜ್ಯಗಳಲ್ಲಿನ ಪತ್ರಕರ್ತರಿಗಾಗಿ ಒಂದು, ಹೀಗೆ ೨ ಪರಿಸಂವಾದಗಳನ್ನು ಆಯೋಜಿಸಲಾಗಿತ್ತು. ಇವೆರಡೂ ಪರಿಸಂವಾದಗಳು ನೂರಾರು ಪತ್ರಕರ್ತರ ಉಪಸ್ಥಿತಿಯಲ್ಲಿ ನೆರವೇರಿತು. ಅದರಿಂದ ಪತ್ರಕರ್ತರಿಗೆ ಮಾನಸಿಕ ಆಧಾರ ಸಿಕ್ಕಿತು, ‘ಒತ್ತಡಮುಕ್ತ ಜೀವನವನ್ನು ಹೇಗೆ ನಡೆಸಬೇಕು ?’, ಎಂಬುದರ ದೃಷ್ಟಿಕೋನ ಸಿಕ್ಕಿತು. ಈ ಉಪಕ್ರಮದಿಂದಾಗಿ ಪತ್ರಕರ್ತರೊಂದಿಗೆ ಆತ್ಮೀಯತೆ ಬೆಳೆಯಿತು. ಕಳೆದ ೪ ವರ್ಷಗಳಿಂದ ಈ ಪತ್ರಕರ್ತರು ಸನಾತನದ ಕಾರ್ಯಗಳಿಗೆ ಉಚಿತವಾಗಿ ಪ್ರಸಿದ್ಧಿ ನೀಡುತ್ತಿದ್ದಾರೆ.

೫ ಆ. ಸನಾತನದ ಜಾಹೀರಾತುದಾರರು, ಅರ್ಪಣೆದಾರರು ಹಾಗೂ ಉದ್ಯಮಿಗಳಿಗಾಗಿ ಒತ್ತಡಮುಕ್ತಿಗಾಗಿ ಪ್ರವಚನಗಳು : ಕೊರೋನಾ ಮಹಾಮಾರಿಯ ಸಮಯದಲ್ಲಿ ಸಂಚಾರನಿಷೇಧದಿಂದಾಗಿ ಒಂದು ರೀತಿಯಲ್ಲಿ ಆರ್ಥಿಕ ಹಿನ್ನಡೆಯ ವಾತಾವರಣವಿತ್ತು. ಅನೇಕ ಉದ್ಯಮಿಗಳು ಉದ್ಯೋಗವ್ಯವಸಾಯದಲ್ಲಿ ಹೂಡಿರುವ ಹಣ ಒಂದು ರೀತಿಯಲ್ಲಿ ಆರ್ಥಿಕ ಹಾನಿಯೇ ಆಗಿತ್ತು. ಆದ್ದರಿಂದ ಉದ್ಯೋಗ ಕ್ಷೇತ್ರದಲ್ಲಿ ನಿರಾಶೆಯ ವಾತಾವರಣವಿತ್ತು. ಸನಾತನದೊಂದಿಗೆ ಅರ್ಪಣೆ, ಜಾಹೀರಾತು ಇತ್ಯಾದಿಗಳ ಮೂಲಕ ಜೋಡಿಸಲ್ಪಟ್ಟಿರುವ ಉದ್ಯಮಿಗಳು ಮತ್ತು ವ್ಯವಸಾಯ ಮಾಡುವವರಿಗಾಗಿ ಅಲ್ಲಲ್ಲಿ ಆನ್‌ಲೈನ್‌ ಒತ್ತಡಮುಕ್ತಿಯ ಪ್ರವಚನಗಳನ್ನು ಆಯೋಜಿಸಲಾಯಿತು. ನಿರಾಶೆಯಿಂದ ಹೊರಗೆ ಬರಲು ಅನೇಕ ಉದ್ಯಮಿಗಳು ಈ ಪ್ರವಚನದ ನಂತರ ಸ್ವಯಂಸೂಚನೆಗಳನ್ನು ಮಾಡಿಸಿಕೊಂಡರು. ಅನೇಕರಿಂದ ಸನಾತನದ ಸಾಧಕರೊಂದಿಗೆ ಸಾಧನೆಯ ವಿಷಯದಲ್ಲಿ ನಿಯಮಿತ ಸಂಪರ್ಕ ಆರಂಭವಾಯಿತು.

೫ ಆ ೧. ‘ಸಾಧಕರು ಗುರುಕಾರ್ಯಕ್ಕಾಗಿ ಸಮರ್ಪಿಸಿಕೊಂಡು ಸೇವೆಯನ್ನು ಮಾಡುತ್ತಿದ್ದಾರೆ’, ಎಂಬುದನ್ನು ನೋಡಿ ಹಿತಚಿಂತಕರಿಗೂ ತ್ಯಾಗದ ಮಹತ್ವ ತಿಳಿಯಿತು, ಅನೇಕರು ನಿತ್ಯಕ್ಕಿಂತ ಹೆಚ್ಚು ಸಹಾಯ ಮಾಡಿದರು ಹಾಗೂ ಇದುವರೆಗೂ ಅವರು ಸಕ್ರಿಯರಾಗಿದ್ದಾರೆ : ಈ ಅವಧಿಯಲ್ಲಿ ಸನಾತನದ ಕಾರ್ಯಪದ್ಧತಿಯನ್ನು ನೋಡಿ ‘ಆಶ್ರಮ ಹೇಗೆ ನಡೆಯುತ್ತದೆ ? ಸಾಧಕರು ಹೇಗೆ ತ್ಯಾಗ ಮಾಡಿ ಜೀವನ ನಡೆಸುತ್ತಾರೆ ? ಸಾಧಕರು ಗುರುಕಾರ್ಯಕ್ಕಾಗಿ ಸಮರ್ಪಿಸಿಕೊಂಡು ಹೇಗೆ ಸೇವೆ ಮಾಡುತ್ತಾರೆ ? ಸಾಧಕರ ನಿರಪೇಕ್ಷ ಭಾವ’ವನ್ನು ನೋಡಿ ಪ್ರಭಾವಿತಗೊಂಡಿರುವ ಹಿತಚಿಂತಕ ಉದ್ಯಮಿಗಳು ಮತ್ತು ವ್ಯಾಪಾರಿಗಳಿಗೂ ‘ತಾವು ತಮ್ಮ ಧರ್ಮಕಾರ್ಯವನ್ನು ಹೆಚ್ಚಿಸಬೇಕು ಹಾಗೂ ತ್ಯಾಗ ಮಾಡಬೇಕು’, ಎಂದು ಅನಿಸಿತು. ಅನೇಕರು ನಿತ್ಯಕ್ಕಿಂತ ಹೆಚ್ಚು ಆರ್ಥಿಕ ಅಥವಾ ಇನ್ನಿತರ ಯೋಗದಾನ ನೀಡಿದರು. ಪ್ರತ್ಯಕ್ಷ ಕಾರ್ಯ ನಡೆಯದಿರುವುದರಿಂದ ಆ ಸಮಯದಲ್ಲಿ ಗುರುಪೂರ್ಣಿಮೆಯನ್ನೂ ‘ಆನ್‌ಲೈನ್’ ನಡೆಸಬೇಕಾಯಿತು. ಆಗ ಅಡಚಣೆಯಿದ್ದರೂ ಎಲ್ಲರ ಪ್ರಯತ್ನದಿಂದ ನಿತ್ಯದಂತೆ ನಿಧಿಸಂಗ್ರಹವಾಯಿತು ಹಾಗೂ ಜಾಹೀರಾತು ಸಿಕ್ಕಿದವು. ಅಂದಿನಿಂದಲೂ ಇವರೆಲ್ಲ ಉತ್ತಮವಾಗಿ ಸಹಕರಿಸುತ್ತಿದ್ದಾರೆ.

೫ ಆ ೨. ಉದ್ಯಮಿಗಳ ಸತ್ಸಂಗ ನಿಯಮಿತವಾಗಿ ಆರಂಭವಾಗುವುದು : ಒತ್ತಡಮುಕ್ತಿಯ ಪ್ರವಚನದ ನಂತರ ಮಹಾರಾಷ್ಟ್ರ, ಗೋವಾ, ಕರ್ನಾಟಕ, ಉತ್ತರಪ್ರದೇಶ ಮತ್ತು ಝಾರ್ಖಂಡ ಈ ಸ್ಥಳಗಳಲ್ಲಿ ಉದ್ಯಮಿಗಳ ಸತ್ಸಂಗಗಳು ಇಂದು ಕೂಡ ನಿಯಮಿತವಾಗಿ ನಡೆಯುತ್ತಿವೆ.                  (ಮುಂದುವರಿಯುವುದು)

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರು)