ಕಾನೂನಿನ ಪುಸ್ತಕಗಳಿಗೆ ಬೆಂಕಿ ಹಚ್ಚಿ ! – ‘ಜಮೀಯತ್ ಉಲೇಮಾ-ಎ-ಹಿಂದ್’ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ

  • ‘ಜಮೀಯತ್ ಉಲೇಮಾ-ಎ-ಹಿಂದ್’ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿಯ ವಿವಾದತ್ಮಕ ಹೇಳಿಕೆ !

  • 1991ರ ‘ಧಾರ್ಮಿಕ ಪೂಜಾ ಸ್ಥಳಗಳ ಕಾಯಿದೆ’ ಅನುಸರಿಸದಿದ್ದರೆ ಗಲಭೆ ಏಳುವುದು !

ನವದೆಹಲಿ – ‘ಜಮೀಯತ್ ಉಲೇಮಾ-ಎ-ಹಿಂದ್’ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಸಂವಿಧಾನವನ್ನು ಅವಮಾನಿಸಿದ್ದಾರೆ. ಅವರು, ಕಾನೂನಿನ ಪುಸ್ತಕಗಳನ್ನು ಸುಟ್ಟು ಹಾಕಿ ಎಂದರು. ಇದೇ ರೀತಿ ಮುಂದುವರಿದರೆ ಯಾವ ಧರ್ಮಕ್ಕೂ ನ್ಯಾಯಯುತ ತೀರ್ಪು ಸಿಗುವುದಿಲ್ಲ. 1991ರ ‘ಧಾರ್ಮಿಕ ಆರಾಧನಾ ಸ್ಥಳ’ ಕಾಯ್ದೆಯಿಂದ ಬಾಬ್ರಿ ಮಸೀದಿಯನ್ನು ತೆಗೆದುಹಾಕುವುದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದೆವು. ಬಾಬ್ರಿ ಮಸೀದಿ ಇರುವ ಕಡೆ ರಾಮಜನ್ಮಭೂಮಿ ಇಲ್ಲ. ಬಾಬ್ರಿ ಮಸೀದಿಯ ತೀರ್ಪಿನ ಕುರಿತು, ಯಾವುದೇ ಮಸೀದಿಗೆ ಬಗ್ಗೆ ಈ ರೀತಿ ಸಂಭವಿಸಬಹುದು ಎಂದು ಹೇಳಿದರು.

(ಸೌಜನ್ಯ – TIMES NOW Navbharat)

1. ಮೌಲಾನಾ ಮದನಿ ಮಾತನ್ನು ಮುಂದುವರೆಸುತ್ತಾ, ಬಾಬ್ರಿಯ ನಂತರ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪ್ರಸ್ತುತ ಇಂತಹ ಪ್ರಕರಣಗಳು ಎಷ್ಟು ವೇಗವಾಗಿ ಬರುತ್ತಿವೆ ಮತ್ತು ನ್ಯಾಯಾಲಯಗಳು ಕಾನೂನಿನಲ್ಲಿ ಸಡಿಲತೆ ಮತ್ತು ನಮ್ಯತೆಯನ್ನು ತೋರಿಸುತ್ತಿರುವ ರೀತಿ, ಮಸೀದಿಗಳನ್ನು ನಿಯಂತ್ರಿಸುವ ಜನರ (ಹಿಂದೂಗಳ) ಉದ್ದೇಶವು ಯಶಸ್ವಿಯಾಗುತ್ತಿದೆ. (ನ್ಯಾಯಾಲಯದ ತೀರ್ಪುಗಳನ್ನು ವಿರೋಧಿಸಿದ ಮದನಿಯ ಕಾನೂನುದ್ರೋಹವನ್ನು ತಿಳಿಯಿರಿ ! – ಸಂಪಾದಕರು)

2. ಜ್ಞಾನವಾಪಿಯಲ್ಲಿ ಹಿಂದೂಗಳನ್ನು ಪೂಜಿಸು ನಿರ್ಣಯದ ಬಗ್ಗೆ ಮಾತನಾಡಿ, ಎಲ್ಲಾ ದೇವಾಲಯಗಳನ್ನು ಕೆಡವಬೇಕು ಎಂದು ಮುಸ್ಲಿಮರು ಅಭಿಪ್ರಾಯಪಟ್ಟಿದ್ದರೆ, ದೇವಾಲಯಗಳು ಮತ್ತು ಮಸೀದಿಗಳು ಏನೂ ಉಳಿಯುತ್ತಿರಲಿಲ್ಲ ಎಂದು ಹೇಳಿದರು. ನ್ಯಾಯಾಲಯ ಆತುರದ ನಿರ್ಧಾರ ತೆಗೆದುಕೊಂಡಿದೆ. ಮುಸ್ಲಿಂ ಪಕ್ಷಕ್ಕೆ ತನ್ನ ವಾದವನ್ನು ಮಂಡಿಸಲು ಸಾಕಷ್ಟು ಸಮಯವನ್ನು ನೀಡಲಾಗಿಲ್ಲ.

3. ಬಾಬ್ರಿ ಪ್ರಕರಣದ ಬಗ್ಗೆ ಮಾತನಾಡಿ, ಮಂದಿರ ಕೆಡವಿ ಮಸೀದಿ ಕಟ್ಟಿಲ್ಲ ಎಂದರು. ನ್ಯಾಯಾಲಯದ ಕೆಲಸವು ನಂಬಿಕೆಯ ಮೇಲೆ ತೀರ್ಪು ನೀಡುವುದಲ್ಲ, ಬದಲಾಗಿ ಯುಕ್ತಿವಾದದಿಂದ ನ್ಯಾಯಕೊಡುವುದಾಗಿದೆ. ಒಬ್ಬರಿಗೊಬ್ಬರು (ಹಿಂದೂ ಮತ್ತು ಮುಸ್ಲಿಮರ ನಡುವೆ) ಬಿರುಕು ಸೃಷ್ಟಿಯಾಗುತ್ತಿದೆ.

4. 1991 ರ ಕಾಯಿದೆಯ ಸಹಾಯದಿಂದ ವಿವಾದಗಳನ್ನು ನಿಲ್ಲಿಸಬಹುದು. ಈ ಕಾನೂನನ್ನು ಪ್ರಾಮಾಣಿಕವಾಗಿ ಆಧಾರ ಪಡೆದಿದ್ದರೇ, ದೇಶದಲ್ಲಿ ಗಲಭೆಗಳು ಸಂಭವಿಸುತ್ತವೆ.

ಸಂಪಾದಕೀಯ ನಿಲುವು

ಇದು ಮೌಲಾನಾ ಮದನಿಯ ಅನುಕೂಲಕರ ದ್ವಿಮುಖ ನೀತಿ ! ಒಂದೆಡೆ ಕಾನೂನು ಪುಸ್ತಕಗಳನ್ನು ಸುಟ್ಟು ಹಾಕಿ ಹೇಳುತ್ತಾರೆ ಮತ್ತೊಂದೆಡೆ ಮುಸಲ್ಮಾನರಿಗೆ ಅನುಕೂಲವಾಗುವ ಕಾನೂನಿನ ಭಯವನ್ನು ತೋರಿಸಿ ‘ಗಲಭೆ ಶುರುವಾಗುತ್ತದೆ’ ಎಂದು ಕಿಡಿಕಾರುತ್ತಾರೆ. ಪೊಲೀಸರು ಇಂತಹವರನ್ನು ಹದ್ದುಬಸ್ತಿನಲ್ಲಿಡಬೇಕು !