ಮುಖ್ಯ ನ್ಯಾಯಮೂರ್ತಿ ಮತ್ತು ‘ಕೊಲಿಜಿಯಂ’ ಇವರಿಂದ ಅಲಹಾಬಾದ ಹೈ ಕೋರ್ಟ್ ನ್ಯಾಯಮೂರ್ತಿ ಶೇಖರ್ ಯಾದವ ಕುರಿತು ಅಸಮಾಧಾನ

ಅಲಹಾಬಾದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶೇಖರ್ ಯಾದವ ಅವರ ಸಮಾನ ನಾಗರಿಕ ಕಾನೂನಿನ ಕುರಿತು ಹೇಳಿಕೆ ನೀಡಿದ ಪ್ರಕರಣ

(‘ಕೊಲಿಜಿಯಂ’ ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂ ಕೋರ್ಟ್‌ನ 4 ಅತ್ಯಂತ ಹಿರಿಯ ನ್ಯಾಯಾಧೀಶರನ್ನು ಒಳಗೊಂಡಿದೆ. ಈ ಗುಂಪು ದೇಶದ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆಗಳ ಬಗ್ಗೆ ನಿರ್ಧರಿಸುತ್ತದೆ.)

ನವದೆಹಲಿ – ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ನೇತೃತ್ವದಲ್ಲಿ ನಡೆದ ಸರ್ವೋಚ್ಚ ನ್ಯಾಯಾಲಯದ ‘ಕೊಲಿಜಿಯಂ’ನ ಅಲಹಾಬಾದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶೇಖರ್ ಯಾದವ ಅವರೊಂದಿಗೆ ಸಭೆ ನಡೆಯಿತು. ಆಗ ನ್ಯಾಯಮೂರ್ತಿ ಶೇಖರ ಯಾದವ ಹೇಳಿಕೆಗೆ ಕೊಲಿಜಿಯಂ ಅಸಮಾಧಾನ ವ್ಯಕ್ತಪಡಿಸಿತು.

1. ಕೆಲವು ದಿನಗಳ ಹಿಂದೆ, ಉಚ್ಚ ನ್ಯಾಯಾಲಯದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಸಮಾನ ನಾಗರಿಕ ಕಾನೂನಿಗೆ ಸಂಬಂಧಿಸಿದಂತೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುವಾಗ ನ್ಯಾಯಮೂರ್ತಿ ಶೇಖರ ಯಾದವ ಅವರು ಕೆಲವು ಹೇಳಿಕೆಗಳನ್ನು ನೀಡಿದ್ದರು. ಇದರಿಂದ ಅವರನ್ನು ಟೀಕೆಗಳು ಆರಂಭವಾಯಿತು. ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಅವರ ವಿರುದ್ಧ ದೋಷಾರೋಪಣೆ ನಡೆಸುವಂತೆ (ಹುದ್ದೆಯಿಂದ ತೆಗೆಯುವ ಪ್ರಕ್ರಿಯೆ) ಒತ್ತಾಯಿಸಿದವು. ಅಲ್ಲದೆ ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶೇಖರ ಯಾದವ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಅದರ ನಂತರ, ಮುಖ್ಯ ನ್ಯಾಯಮೂರ್ತಿಗಳು ಕೊಲಿಜಿಯಂನೊಂದಿಗೆ ಮೇಲಿನ ಸಭೆ ನಡೆಸಿದರು. ಈ ಸಭೆಯಲ್ಲಿ ನ್ಯಾಯಮೂರ್ತಿ ಶೇಖರ ಯಾದವ ಅವರು ತಮ್ಮ ಪರ ವಾದ ಮಂಡಿಸಿದರು.

2. ಈ ವೇಳೆ ಕೊಲಿಜಿಯಂ ನ್ಯಾಯಮೂರ್ತಿ ಶೇಖರ ಯಾದವ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಇಂತಹ ಹೇಳಿಕೆಯನ್ನು ತಪ್ಪಿಸಬಹುದಿತ್ತು ಎಂಬ ನಿಲುವು ತಳೆದಿದೆ. ಸುಮಾರು ಅರ್ಧ ಗಂಟೆ ಕಾಲ ಸಭೆ ನಡೆಯಿತು. ಇದರ ಸಂಪೂರ್ಣ ಮಾಹಿತಿ ಬಹಿರಂಗವಾಗಿಲ್ಲ.

3. ರಾಜ್ಯಸಭೆಯಲ್ಲಿ ನ್ಯಾಯಮೂರ್ತಿ ಶೇಖರ ಯಾದವ ವಿರುದ್ಧ ದೋಷಾರೋಪಣೆಯ ನಿರ್ಣಯ ಮಂಡಿಸಿದ ನಂತರ ಈ ಪ್ರಸ್ತಾಪವನ್ನು ಸ್ಪೀಕರ್ ಅವರು ಅನುಮೋದಿಸಿದರೆ ನ್ಯಾಯಮೂರ್ತಿ ಶೇಖರ ಯಾದವ ವಿರುದ್ಧ ದೋಷಾರೋಪಣೆ ಮೊಕದ್ದಮೆ ನಡೆಸಲಾಗುವುದು.