ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಜಗತ್ತಿನಾದ್ಯಂತ ಧ್ವನಿ ಏಳುತ್ತಿದೆ ! – ಪುರಿಯ ಪೂರ್ವಾನ್ಮಯ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

  • ಪತ್ರಕರ್ತರರೊಂದಿಗೆ ಸಂವಾದ ನಡೆಸಿರುವ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ

  • ಪುರಿಯ ಪೂರ್ವಾನ್ಮಯ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರ ಹೇಳಿಕೆ !

ಪುಣೆ, ಡಿಸೆಂಬರ್ ೧೮ (ವಾರ್ತೆ) – ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶಕ್ಕೆ ‘ಹಿಂದೂ ರಾಷ್ಟ್ರ’ ಎಂದು ಹೇಳಲಾರರು. ಸಂವಿಧಾನದ ಮಿತಿಯಲ್ಲಿದ್ದು ಇದು ಆಗಲಾರದು. ದೇಶದ ವಿಭಜನೆ ಹಿಂದೂ ಮತ್ತು ಮುಸಲ್ಮಾನ ಧರ್ಮದಿಂದಲೇ ಆಗಿದೆ. ಮಹಮ್ಮದ್ ಪೈಗಂಬರ್ ಮತ್ತು ಯೇಸು ಇವರ ಪೂರ್ವಜರು ಯಾರಿದ್ದರು ? ಇದನ್ನು ಹುಡುಕಿದರೆ ಹಿಂದೂ ರಾಷ್ಟ್ರವಾಗಲೂ ಏನು ತೊಂದರೆ ? ಹಿಂದೂ ರಾಷ್ಟ್ರ ನಿರ್ಮಾಣ ಮಾಡಲು, ನಮಗೆ ಕಷ್ಟವಿಲ್ಲ. ನಾವು ಏನು ಮಾತನಾಡುತ್ತೇವೆ ಅದು ಆಗುತ್ತದೆ. ಏನು ಆಗುತ್ತದೆ, ಅದನ್ನೇ ನಾವು ಮಾತನಾಡುತ್ತೇವೆ. ಹಿಂದೂ ರಾಷ್ಟ್ರ ನಿರ್ಮಾಣವಾಗಬೇಕು ಎಂದು ಸಂಪೂರ್ಣ ಜಗತ್ತಿನಿಂದ ಧ್ವನಿ ಕೇಳುತ್ತಿದೆ, ಎಂದು ಪುರಿ (ಒಡಿಸ್ಸಾ)ಯ ಪೂರ್ವನ್ಮಯ ಪೀಠದ ಶಂಕರಾಚಾರ್ಯ ಜಗದ್ಗುರು ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಹೇಳಿಕೆ ನೀಡಿದರು. ‘ಶ್ರೀಮದ್ ಜಗದ್ಗುರು ಪುರಿ ಶಂಕರಾಚಾರ್ಯ ಸ್ವಾಗತ ಸಮಿತಿ’, ಪುಣೆ ಇವರ ವತಿಯಿಂದ ಬಿ.ಟಿ. ಕವಡೆ ಮಾರ್ಗದಲ್ಲಿನ ‘ಮಿಯಾಮಿ ಟೆರೆಸ್’ ಇಲ್ಲಿ ಪತ್ರಕರ್ತರ ಸಭೆ ಆಯೋಜಿಸಲಾಗಿತ್ತು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು.

ಹಿಂದೂ ರಾಷ್ಟ್ರದಲ್ಲಿ ಪ್ರತಿಯೊಬ್ಬರ ಲೈಕಿಕ ಮತ್ತು ಪಾರಮಾರ್ಥಿಕ ಅಭಿವ್ಯಕ್ತಿಯ ಮಾರ್ಗ ವೃದ್ಧಿಯಾಗುವುದು !

ಶಂಕರಾಚಾರ್ಯರು ಮಾತು ಮುಂದುವರಿಸುತ್ತಾ, ‘ಹಿಂದೂ ರಾಷ್ಟ್ರದಲ್ಲಿ ಶಿಕ್ಷಣ, ಆರ್ಥಿಕ, ಸಂರಕ್ಷಣೆ ಮತ್ತು ಸೇವೆ ಇವು ವರ್ಣದ ಪ್ರಕಾರ ಕಾರ್ಯ ನಡೆಯುವುದು. ಮಹಿಳೆಯರು ಸುರಕ್ಷಿತವಾಗಿರುವರು. ಗರ್ಭಪಾತ ಇಲ್ಲದೆ ಜನಸಂಖ್ಯೆ ಹಿಡಿತದಲ್ಲಿರುವುದು. ಪ್ರತಿಯೊಬ್ಬ ವ್ಯಕ್ತಿಯ ಜೀವನ ವ್ಯಸನ ಮುಕ್ತವಾಗಿರುವುದು. ಸುಸಂಸ್ಕಾರಿತ, ಸುರಕ್ಷಿತ, ಸುಸಂಪನ್ನ, ಸುಶಿಕ್ಷಿತ ಸೇವೆ, ಸದ್ವಿವೇಕ ಸೇವೆ ಹೀಗೆ ಹಿಂದೂ ರಾಷ್ಟ್ರದಲ್ಲಿ ಸಮಾಜ ರಚನೆ ಇರುವುದು. ಪ್ರತಿಯೊಬ್ಬರ ಆಯುಷ್ಯದಲ್ಲಿ ಲೌಕಿಕ ಮತ್ತು ಪಾರಮಾರ್ಥಿಕ ಅಭಿವ್ಯಕ್ತಿ ಇದೇ ಮಾರ್ಗದಿಂದ ವಿಕಸಿತವಾಗುವುದು.’ ಎಂದು ಹೇಳಿದರು.

ಸೃಷ್ಟಿಯ ಉತ್ಪತ್ತಿಯಿಂದ ನಡೆಯುವ ಸಂವಿಧಾನ ಹಿಂದೂ ರಾಷ್ಟ್ರದಲ್ಲಿ ಇರುವುದು !

ಮನುಸ್ಮೃತಿ ಬಗ್ಗೆ ಮಾತನಾಡಿದ ಅವರು, ”ಸೃಷ್ಟಿಯ ಉತ್ಪತ್ತಿಯಿಂದ ಶ್ರೀರಾಮ, ಶ್ರೀಕೃಷ್ಣ ಇವರಿಂದ ಛತ್ರಪತಿ ಶಿವಾಜಿ ಮಹಾರಾಜರವರೆಗೆ ಯಾವ ಸಂವಿಧಾನ ಮುಂದುವರೆದಿತ್ತು. ಆ ಸಂವಿಧಾನದಿಂದಲೇ ಧರ್ಮರಾಜ್ಯ, ರಾಮರಾಜ್ಯ ನೀಡಿದ್ದರು. ಭಾರತ ವಿಶ್ವಗುರು ಆಗಿತ್ತು, ಅದೇ ಸಂವಿಧಾನ ಹಿಂದೂ ರಾಷ್ಟ್ರದಲ್ಲಿ ಇರುವುದು.’ ಎಂದು ಹೇಳಿದರು.

ಹಿಂದುಗಳು ಧರ್ಮಾಚರಣೆ ಮಾಡಿದರೆ ಅವರ ರಕ್ಷಣೆ !

ಶಂಕರಾಚಾರ್ಯರು ಮಾತು ಮುಂದುವರೆಸಿ, ಧರ್ಮಾಚರಣೆ ಮಾಡಿದರೆ ಹಿಂದೂ ಪೂಜ್ಯವಾಗುವನು. ಕೇವಲ ಹೊಟ್ಟೆ (ತಿನ್ನುವುದು ಕುಡಿಯುವುದು) ಮತ್ತು ಕುಟುಂಬ ಇಷ್ಟನ್ನೇ ಹಿಂದೂ ಯೋಚನೆ ಮಾಡುತ್ತಾರೆ. ಅವನು ಹಿಂದೂ ರಾಷ್ಟ್ರ, ಧರ್ಮದ ಪ್ರಕಾರ ಮಾರ್ಗಕ್ರಮಣ, ಸೇವೆ ಮತ್ತು ಸಂಘಟಿತವಾಗಿದ್ದರೆ, ಆಗ ಅವನು ಪೂಜ್ಯನಾಗುವನು. ಇಲ್ಲವಾದರೆ ಅಲ್ಲಿ ಕೂಡ (ಬಾಂಗ್ಲಾದೇಶದಲ್ಲಿ) ಕೊಲ್ಲಲ್ಪಡುವನು ಮತ್ತು ಇಲ್ಲಿ ಕೂಡ (ಭಾರತದಲ್ಲಿ) ಕೊಲ್ಲಲ್ಪಡುವನು. ಆದ್ದರಿಂದ ಹಿಂದುಗಳು ಅನೇಕ ಸ್ಥಳದಿಂದ ಫಲಾಯನ ಮಾಡಬೇಕಾಯಿತು. ಅದಕ್ಕಾಗಿ ಭಗವಂತನ ನಾಮ ಸ್ಮರಣೆಮಾಡಿ’, ಎಂದು ಹೇಳಿದರು.

ಹಿಂದೂ ಶಬ್ದದ ಅರ್ಥ

ಶಂಕರಾಚಾರ್ಯರು ಹಿಂದೂ ಶಬ್ದದ ಅರ್ಥ ಹೇಳುವಾಗ, ಹಿಂದೂ ಶಬ್ದದ ೨ ಅರ್ಥಗಳಿವೆ. ಮೊದಲನೆಯದು ‘ಹಿಮಾಲಯದಿಂದ ಕನ್ಯಾಕುಮಾರಿಯ ವರೆಗಿನ ಭೂಮಿಗೆ ‘ಹಿಂದೂಸ್ಥಾನ’ ಎಂದು ಹೇಳುತ್ತಾರೆ.’ ಇನ್ನೊಂದು ಹಿಂದೂ ಎಂದರೆ ‘ತನ್ನಲ್ಲಿನ ಸ್ವಭಾವದೋಷ ದೂರಗೊಳಿಸುವವನು, ಕಿಳಿರಮೆ, ದಾರಿದ್ರ ದೂರಗೊಳಿಸುವವ ಹಿಂದೂ’ ಹೇಗೆ ಇರುವುದು’ ಎಂದು ಹೇಳಿದರು.