ಬಂಗಾಳದ ತೃಣಮೂಲ ಕಾಂಗ್ರೆಸ್ ಸರಕಾರದ ಸಚಿವ ಫಿರ್ಹಾದ್ ಹಕೀಮ್ ಅವರಿಂದ ಹಿಂದೂಗಳಲ್ಲಿ ನಡುಕ ಹುಟ್ಟಿಸುವ ಹೇಳಿಕೆ
ಕೋಲಕಾತಾ (ಬಂಗಾಳ) – ಬಂಗಾಳದಲ್ಲಿ ನಾವು (ಮುಸ್ಲಿಮರು) ಶೇ 33 ಇದ್ದೇವೆ ಮತ್ತು ಇಡೀ ದೇಶದಲ್ಲಿ ಶೇಕಡಾ 17 ರಷ್ಟಿದ್ದೇವೆ. ನಾವು ಸಂಖ್ಯೆಯಲ್ಲಿ ಕಡಿಮೆ ಇರಬಹುದು; ಆದರೆ ಅಲ್ಲಾಹನ ಕೃಪೆಯಿಂದ ಮುಂದೊಂದು ದಿನ ನಾವು ಬಹುಸಂಖ್ಯಾತರಾಗುತ್ತೇವೆ. ಆ ಸಮಯದಲ್ಲಿ ನಾವು ನ್ಯಾಯಕ್ಕಾಗಿ ಮೇಣದಬತ್ತಿಯನ್ನು ಬೆಳಗಿಸುವ ಅಗತ್ಯವಿರುವುದಿಲ್ಲ. ಆಗ ನಾವು ನಮ್ಮ ಧ್ವನಿಯನ್ನು ತಾನಾಗಿಯೇ ಕೇಳುವಂತಹ ಸ್ಥಿತಿಯಲ್ಲಿರುತ್ತೇವೆ ಮತ್ತು ನ್ಯಾಯಕ್ಕಾಗಿ ನಮ್ಮ ಕೂಗನ್ನು ಕೇಳಿಸಿಕೊಳ್ಳುತ್ತಾರೆ.’ ಎಂದು ಬಂಗಾಳದ ತೃಣಮೂಲ ಕಾಂಗ್ರೆಸ್ ಸರಕಾರದ ಸಚಿವ ಫಿರ್ಹಾದ್ ಹಕೀಮ್ ಹೇಳಿದ್ದಾರೆ. ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು. ಹಕೀಂ ಅವರ ಹೇಳಿಕೆಯನ್ನು ಭಾಜಪ ಟೀಕಿಸಿದೆ.
ಹಕೀಮ್ ತಮ್ಮ ಮಾತು ಮುಂದುವರಿಸಿ, ನ್ಯಾಯಾಂಗದಲ್ಲಿ ಮುಸ್ಲಿಂ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸಬೇಕು. ಈ ಸಂಖ್ಯೆಯನ್ನು ಸಬಲೀಕರಣ ಮತ್ತು ಕಠಿಣ ಪರಿಶ್ರಮದ ಮೂಲಕ ತುಂಬಿಕೊಳ್ಳಬಹುದು. ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ರಾಷ್ಟ್ರದ ಪ್ರಗತಿಗಾಗಿ ಇತರ ಸಮುದಾಯಗಳೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂದು ನಮಗೆ ವಿಶ್ವಾಸವಿದೆ’ ಎಂದು ಹೇಳಿದರು.
ಇಂತಹ ಹೇಳಿಕೆಗಳು ಭಾರತದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿ ನಿರ್ಮಾಣಮಾಡುವಂತಿದೆ ! – ಕೇಂದ್ರ ಸಚಿವ ಸುಕಾಂತ ಮಜುಂದಾರ
ಕೇಂದ್ರ ಸಚಿವ ಮತ್ತು ಬಂಗಾಳ ಭಾಜಪ ಅಧ್ಯಕ್ಷ ಸುಕಾಂತ ಮಜುಂದಾರ ಮಾತನಾಡಿ, ‘ಹಕೀಮ್ ಬಹಿರಂಗವಾಗಿ ಧಾರ್ಮಿಕ ದ್ವೇಷವನ್ನು ಪ್ರಚೋದಿಸುತ್ತಿದ್ದಾರೆ ಮತ್ತು ಅಪಾಯಕಾರಿ ಕಾರ್ಯಸೂಚಿಯನ್ನು ಮುಂದಿಡುತ್ತಿದ್ದಾರೆ. ಇದು ಕೇವಲ ದ್ವೇಷದ ಭಾಷಣವಲ್ಲ, ಇಂತಹ ಹೇಳಿಕೆಗಳು ಭಾರತದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿಯನ್ನು ಸೃಷ್ಟಿಸಬಹುದು. ಇಂಡಿ ಒಕ್ಕೂಟ ಈ ಬಗ್ಗೆ ಏಕೆ ಮೌನವಾಗಿದೆ ? ಈ ಬಗ್ಗೆ ಅವರ ಅಭಿಪ್ರಾಯ ತಿಳಿಸುವಂತೆ ಸವಾಲು ಹಾಕುತ್ತೇನೆ. ನಮ್ಮ ದೇಶವು ತನ್ನ ಏಕತೆ ಮತ್ತು ಸಮಗ್ರತೆಗೆ ಇಂತಹ ಬೆದರಿಕೆಗಳನ್ನು ಸಹಿಸುವುದಿಲ್ಲ’ ಎಂದು ಹೇಳಿದರು.
ಪರಿಸ್ಥಿತಿ ಅತ್ಯಂತ ಆತಂಕಕಾರಿ ! – ಭಾಜಪಪ ನಾಯಕ ಅಮಿತ ಮಾಳವೀಯ
ಭಾಜಪ ಮಾಹಿತಿ-ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ ಮಾಳವಿಯ ಅವರು ಹಕೀಮ್ ಅವರ ಹೇಳಿಕೆಯನ್ನು ಟೀಕಿಸುತ್ತಾ, ‘ಫಿರ್ಹಾದ್ ಹಕೀಮ್ ಅವರು ಬಂಗಾಳವು ಶೀಘ್ರದಲ್ಲೇ ಮುಸ್ಲಿಂ ಬಹುಮತವಾಗಲಿದೆ ಎಂದು ಹೇಳಿಕೊಂಡಿದ್ದಾರೆ’, ಹಕೀಮ್ ಅವರು ಮುಸ್ಲಿಮರು ಇನ್ನು ಮುಂದೆ ಶಾಂತಿಯುತ ಪ್ರದರ್ಶನಗಳು ಅಥವಾ ಮೆರವಣಿಗೆಗಳ ಮೇಲೆ ಅವಲಂಬಿತರಾಗುವುದಿಲ್ಲ; ಬದಲಾಗಿ ಅವರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ. ಅವರು ಶರೀಯತ್ ಕಾನೂನಿನತ್ತ ಬೆರಳು ತೋರುತ್ತಿರುವುದು ಕಂಡು ಬರುತ್ತಿದೆ. ಈ ಪರಿಸ್ಥಿತಿಯು ತುಂಬಾ ಆತಂಕಕಾರಿಯಾಗಿದೆ. ಕೋಲಕಾತಾದ ದೊಡ್ಡ ಭಾಗಗಳಲ್ಲಿ, ವಿಶೇಷವಾಗಿ ಕೊಳಚೆ ಪ್ರದೇಶಗಳಲ್ಲಿ, ರೋಹಿಂಗ್ಯಾ ಸೇರಿದಂತೆ ನುಸುಳುಕೋರರಿಂದ ಪ್ರಾಬಲ್ಯ ಹೊಂದಿವೆ. ಹಕಿಮ್ ಹೇಳಿಕೆಯಿಂದ ಅಕ್ರಮ ವಲಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಇದು ಜನಸಂಖ್ಯಾ ಬದಲಾವಣೆಗೆ ಕಾರಣವಾಗಬಹುದು’ ಎಂದು ಹೇಳಿದರು.
‘We may be a minority today, but one day we will be a majority!’ – Firhad Hakim, Trinamool Congress
Bengal’s Trinamool Congress government minister Firhad Hakim’s terr@r inducing statement towards Hindus.
Once Mu$l!ms reach a majority in Bengal, then what is going on in… pic.twitter.com/dFzcn6JtEX
— Sanatan Prabhat (@SanatanPrabhat) December 15, 2024
ಸಂಪಾದಕೀಯ ನಿಲುವು
|