ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಅದ್ವಿತೀಯ ಕಾರ್ಯಪದ್ಧತಿಯಿಂದ ಸದ್ಗುರು ರಾಜೇಂದ್ರ ಶಿಂದೆ ಇವರಿಗೆ ಕಲಿಯಲು ಸಿಕ್ಕಿದ ಅಂಶಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
(ಸದ್ಗುರು) ಶ್ರೀ. ರಾಜೇಂದ್ರ ಶಿಂದೆ

ಕಳೆದ ವಾರದ ಸಂಚಿಕೆಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಸಾಧಕರ ಸಾಧನೆಯಾಗಬೇಕು’, ಎಂಬುದಕ್ಕಾಗಿ ಹಾಕಿಕೊಟ್ಟ ಕಾರ್ಯಪದ್ಧತಿಯನ್ನು ನೋಡಿದೆವು. ಈ ವಾರ ಈ ಕಾರ್ಯಪದ್ಧತಿಗಳ ಬಗ್ಗೆ ಬರೆದು ಕೊಡುವಾಗ ಸದ್ಗುರು ರಾಜೇಂದ್ರ ಶಿಂದೆ ಇವರಿಗೆ ಕಲಿಯಲು ಸಿಕ್ಕಿದ ಅಂಶಗಳನ್ನು ನೋಡಲಿದ್ದೇವೆ.        (ಭಾಗ ೪)

೨೩. ‘ಪರಾತ್ಪರ ಗುರು ಡಾ. ಆಠವಲೆಯವರ ಯಾವ ಬೋಧನೆಯಿಂದ ಆಧ್ಯಾತ್ಮಿಕ ಪ್ರಗತಿಯಾಯಿತು’, ಈ ಬಗ್ಗೆ ಬರೆಯುವಾಗ ಕಲಿಯಲು ಸಿಕ್ಕಿದ ಅಂಶಗಳು

ಅ. ‘ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಪ್ರತಿಯೊಬ್ಬ ಸಾಧಕನ ಆಧ್ಯಾತ್ಮಿಕ ಪ್ರಗತಿಗಾಗಿ ಎಷ್ಟೆಲ್ಲ ಮಾಡುತ್ತಿದ್ದಾರೆ ?’, ಇದು ಗಮನಕ್ಕೆ ಬಂದಿತು. ಅದರಿಂದ ಕೃತಜ್ಞತಾಭಾವ ಹೆಚ್ಚಾಗಲು ಸಹಾಯವಾಯಿತು.

ಆ. ‘ವ್ಯಕ್ತಿಗಳೆಷ್ಟೋ ಅಷ್ಟು ಪ್ರಕೃತಿಗಳು, ಅಷ್ಟೇ ಸಾಧನಾಮಾರ್ಗಗಳು’ ಈ ಸಾಧನೆಯ ಮೂಲಭೂತ ಸಿದ್ಧಾಂತಕ್ಕನುಸಾರ ಪ.ಪೂ. ಡಾಕ್ಟರರು ಪ್ರತಿಯೊಬ್ಬ ಸಾಧಕನಿಗೆ ಅವನ ಪ್ರಗತಿಗಾಗಿ ಏನು ಆವಶ್ಯಕವಿದೆಯೋ, ಆ ಸಾಧನೆಯ ಮಾಧ್ಯಮವನ್ನು ಲಭ್ಯ ಮಾಡಿಕೊಟ್ಟಿದ್ದಾರೆ. ಇದರಿಂದ ಅವರ ಸಾಧಕರ ಬಗ್ಗೆ ಇರುವ ‘ಪ್ರೀತಿ’ ಈ ಗುಣವು ಕಲಿಯಲು ಸಿಕ್ಕಿತು.

ಇ. ‘ಸಾಧಕರ ಪ್ರಗತಿಯಾಗಬೇಕೆಂದು’, ಅವರು ರಚಿಸಿದ ಕಾರ್ಯಪದ್ಧತಿಗಳನ್ನು ನೋಡಿ ಅಚ್ಚರಿಯಾಗುತ್ತದೆ. ಆ ಕಾರ್ಯಪದ್ಧತಿಗಳು ಎಷ್ಟು ಪರಿಪೂರ್ಣವಾಗಿವೆಯೆಂದರೆ, ‘ಮುಂದಿನ ಕಾಲದಲ್ಲಿ ಅನೇಕ ಸಂತರಿಗೆ ಸಾಧಕರನ್ನು ರೂಪಿಸಲು ಅವು ಮಾರ್ಗದರ್ಶಕವಾಗಲಿವೆ’. ಇದರಿಂದ ‘ಸಾಧಕರು ಸಾಧನೆಯಲ್ಲಿ ಮುಂದೆ ಹೋಗಬೇಕು’, ಈ ಬಗೆಗಿನ ಅವರ ತಳಮಳ ಕಲಿಯಲು ಸಿಕ್ಕಿತು.

ಈ. ಕಲಿಯುಗದಲ್ಲಿ ಮನುಷ್ಯನಲ್ಲಿರುವ ‘ಸ್ವಭಾವದೋಷ ಮತ್ತು ಅಹಂ’ ಇವುಗಳಿಂದಾಗಿ ಅವನಿಗೆ ಆಧ್ಯಾತ್ಮಿಕ ಪ್ರಗತಿ ಮಾಡಿಕೊಳ್ಳುವುದು, ಸಾಧನೆಯಲ್ಲಿ ಸಾತತ್ಯತೆ ಉಳಿಸಿಕೊಳ್ಳುವುದು ಕಠಿಣವಾಗಿರುತ್ತದೆ. ಈ ಸಮಸ್ಯೆಯ ಮೂಲಕ್ಕೆ ಹೋಗಿ ಸ್ವಭಾವದೋಷ ನಿರ್ಮೂಲನೆಯ ಪ್ರಕ್ರಿಯೆಯನ್ನು ಕಂಡು ಹಿಡಿದು ‘ಅದು ಸಾಮಾನ್ಯ ಸಾಧಕನಿಗೂ ಸುಲಭವಾಗಿ ಮಾಡಲು ಸಾಧ್ಯವಾಗುವಷ್ಟು’ ಸುಲಭ ಮಾಡಿದ್ದಾರೆ. ಇದರಿಂದ ‘ಪ್ರತಿಯೊಂದು ಸಮಸ್ಯೆಯ ಮೂಲಕ್ಕೆ ಹೋಗಿ ಉಪಾಯಯೋಜನೆಯನ್ನು ಹೇಗೆ ಮಾಡಬೇಕು ?’, ಎಂದು ಕಲಿಯಲು ಸಿಕ್ಕಿತು.

ಉ. ಕೆಟ್ಟ ಶಕ್ತಿಗಳು ಸಾಧನೆ ಮಾಡುವವರಿಗೆ ಬಹಳ ತೊಂದರೆಗಳನ್ನು ನೀಡುತ್ತವೆ. ಆ ಸಾಧಕರ ಸಾಧನೆಯಲ್ಲಿ ಅಡಚಣೆ ತರಲು ಅನೇಕ ರೀತಿಯಲ್ಲಿ ಪ್ರಯತ್ನಿಸುತ್ತಿರುತ್ತವೆ. ಸಾಧಕರ ಸಾಧನೆಯಲ್ಲಿನ ಅಡಚಣೆಗಳನ್ನು ದೂರ ಮಾಡಲು ಪ.ಪೂ. ಡಾಕ್ಟರರು ತೊಂದರೆಗಳ ತೀವ್ರತೆ ಮತ್ತು ಕಾಲ ಇವುಗಳಿಗನುಸಾರ ನಿರಂತರ ಹೊಸ ಉಪಾಯಯೋಜನೆಗಳನ್ನು ಕಂಡು ಹಿಡಿದರು. ತೊಂದರೆ ನೀಡುವ ಕೆಟ್ಟ ಶಕ್ತಿಗಳೊಂದಿಗೆ ತಾವು ಸ್ವತಃ ಸೂಕ್ಷ್ಮದಿಂದ ಹೋರಾಡಿ ಅವರು ಸಾಧಕರನ್ನು ಈ ತೊಂದರೆಗಳಿಂದ ಕಾಪಾಡಿದರು.

೨೪. ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದ ಲಾಭ ಪಡೆಯುವ ಪ್ರಯತ್ನ ಕಡಿಮೆಯಾಗುವುದು

ಸಾಕ್ಷಾತ್‌ ವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಲಾಭ ಪಡೆಯಲು ‘ನನ್ನಿಂದ ಪ್ರಯತ್ನ ಬಹಳ ಕಡಿಮೆಯಾಯಿತು. ಈಗಲೂ ನನ್ನ ಪ್ರಯತ್ನ ಕಡಿಮೆ ಇದೆ’, ಎಂದು ನನ್ನ ಗಮನಕ್ಕೆ ಬಂದಿತು. ‘ಈಗಲೂ ನಾವು ಮಾಡುತ್ತಿರುವ ಸಾಧನೆಯ ವೇಗ ಬಹಳ ಕಡಿಮೆ ಇದೆ, ಅದನ್ನು ಬೆಳೆಸಬೇಕು’, ಎಂಬುದು ಸಹ ಗಮನಕ್ಕೆ ಬಂದಿತು.

೨೫. ಕೃತಘ್ನತೆಯ ಅರಿವಾಗುವುದು

ಗುರುದೇವಾ, ಈ ಲೇಖನವನ್ನು ಬರೆಯುವಾಗ ನನಗೆ ನನ್ನಲ್ಲಿರುವ ಕೃತಘ್ನತೆಯ ಅರಿವಾಯಿತು. ತಾವು ನನಗೆ ಮೇಲಿಂದ ಮೇಲೆ ಬಹಳಷ್ಟು ಕಲಿಸಿರುವಿರಿ; ಆದರೆ ಅದರಲ್ಲಿನ ಬಹಳ ಕಡಿಮೆ ಭಾಗವನ್ನು ನಾನು ಶಬ್ದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಯಿತು; ಏಕೆಂದರೆ ನನ್ನಲ್ಲಿನ ಕಲಿಯುವ ವೃತ್ತಿಯ ಅಭಾವದಿಂದಾಗಿ ತಾವು ಕಾಲ ಕಾಲಕ್ಕೆ ಕಲಿಸಿದ ಅನೇಕ ಅಂಶಗಳನ್ನು ನಾನು ಆಯಾ ಸಮಯದಲ್ಲಿ ಬರೆದಿಟ್ಟಿಲ್ಲ.

೨೬. ಕ್ಷಮೆಯಾಚನೆ

ವಾಸ್ತವದಲ್ಲಿ ಕೆಲವು ದಿನಗಳ ಹಿಂದೆ ಘಟಿಸಿದ ವಿಷಯಗಳೂ ನನಗೆ ಸರಿಯಾಗಿ ನೆನಪಿಲ್ಲ. ಆದುದರಿಂದ ನನಗೆ ಹಿಂದಿನದೆಲ್ಲವೂ ನೆನಪಾಯಿತು ಮತ್ತು ನಾನು ಬರೆದೆನು, ಹೀಗಿರದೇ ‘ಈ ಲೇಖನವನ್ನು ಬರೆಯುವಾಗ ನನಗೆ ಆ ಅಂಶಗಳನ್ನು ನೆನಪಿಸಿಕೊಟ್ಟಿದ್ದಕ್ಕಾಗಿ ಗುರುದೇವಾ, ತಮ್ಮ ಬಹಳಷ್ಟು ಶಕ್ತಿ ಖರ್ಚಾಗಿರಬಹುದು, ಇದಕ್ಕಾಗಿ ನನ್ನನ್ನು ಕ್ಷಮಿಸಬೇಕು’, ಎಂದು ತಮ್ಮ ಚರಣಗಳಲ್ಲಿ ಪ್ರಾರ್ಥನೆ.

೨೭. ಕೃತಜ್ಞತೆ

ಹೇ ಗುರುದೇವಾ, ನನ್ನದು ಸಮಷ್ಟಿ ಪ್ರಚಾರ ಮಾಡುವ ಪ್ರಕೃತಿಯಾಗಿದೆ; ಆದರೆ ಕಳೆದ ೧೩ ವರ್ಷಗಳಿಂದ ಅನಾರೋಗ್ಯದಿಂದಾಗಿ ನಾನು ಪ್ರಚಾರಕ್ಕೆ ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ; ಆದರೆ ತಮಗೆ ನನ್ನ ಸಾಧನೆಯ ಬಗ್ಗೆ ಹೆಚ್ಚು ಕಾಳಜಿ ಇರುವುದರಿಂದ ತಾವು ನನಗೆ ಬರವಣಿಗೆಗಾಗಿ ಕಾಲಕಾಲಕ್ಕೆ ವಿಷಯಗಳನ್ನು ಸೂಚಿಸಿ ನನ್ನಿಂದ ಅನೇಕ ವಿಷಯಗಳ ಕುರಿತು ಲೇಖನಗಳನ್ನು ಬರೆಯಿಸಿಕೊಂಡಿರುವಿರಿ ಮತ್ತು ಆ ಮಾಧ್ಯಮದಿಂದ ನನಗೆ ಸಮಷ್ಟಿ ಸಾಧನೆಯನ್ನು ಮಾಡುವ ಅವಕಾಶ ನೀಡಿದಿರಿ. ‘೨೦-೨೫ ವರ್ಷಗಳ ಹಿಂದೆ ಘಟಿಸಿದ ಅನೇಕ ಘಟನೆಗಳನ್ನು ನೀವೇ ನನಗೆ ನೆನಪಿಸಿಕೊಟ್ಟು ನನ್ನಿಂದ ಈ ಲೇಖನವನ್ನು ತಯಾರಿಸಿಕೊಂಡು ನನ್ನ ಸಮಷ್ಟಿ ಸಾಧನೆಯನ್ನು ಮಾಡಿಸಿಕೊಳ್ಳುತ್ತಿರುವಿರಿ’, ಇದಕ್ಕಾಗಿ ತಮ್ಮ ಚರಣಗಳಲ್ಲಿ ಅನಂತ ಕೋಟಿ ಕೃತಜ್ಞತೆಗಳು !

೨೮. ಪ್ರಾರ್ಥನೆ

‘ಹೇ ಭಗವಂತಾ, ಹೇ ಸಚ್ಚಿದಾನಂದ ಪರಬ್ರಹ್ಮ ಗುರುದೇವರೇ, ನಾವು ರ್ಪೂವಾಗಿ ಶರಣಾಗಿದ್ದೇವೆ. ಕಲಿಯಗದ ಈ ರಜ-ತಮಾತ್ಮಕ ವಾತಾವರಣದಲ್ಲಿ ನಮ್ಮ ಸಾಧನೆಯೆಂಬ ಕುದುರೆ ನಡುನಡುವೆ ಆ ಕಡೆಗೆ ಈ ಕಡೆಗೆ ಅಲೆದಾಡುತ್ತಿರುತ್ತದೆ. ಅದನ್ನು ಸ್ಥಿರಗೊಳಿಸಿ, ತಮಗೆ ಅಪೇಕ್ಷಿತ ಸಾಧನೆಯನ್ನು ತಾವು ನಮ್ಮೆಲ್ಲ ಸಾಧಕರಿಂದ ಮಾಡಿಸಿಕೊಳ್ಳಿ’, ಇದೇ ತಮ್ಮ ಚರಣಗಳಲ್ಲಿ ಆರ್ತತೆಯಿಂದ ಪ್ರಾರ್ಥನೆ.’ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೂಚಿಸಿದ ಶಬ್ದಪುಷ್ಪಗಳನ್ನು ಕೃತಜ್ಞತಾಭಾವದಿಂದ ಅವರ ಚರಣಗಳಲ್ಲಿ ಅರ್ಪಿಸುತ್ತೇನೆ !’                       (ಮುಕ್ತಾಯ)

ಇದಂ ನ ಮಮ | (ಈ ಬರವಣಿಗೆ ನನ್ನದಲ್ಲ !)

– (ಸದ್ಗುರು) ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ. (೧೭.೪.೨೦೨೪)