8yrs of Yogi Government : ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಸರಕಾರ 8 ವರ್ಷ ಪೂರ್ಣ

• 8 ವರ್ಷಗಳಲ್ಲಿ ಪ್ರಮುಖ ಅಪರಾಧಗಳಲ್ಲಿ ಶೇ. 85 ರಷ್ಟು ಇಳಿಕೆ!

• 80 ಸಾವಿರ ಗೂಂಡಾಗಳನ್ನು ಜೈಲಿಗೆ ಹಾಕಲಾಗಿದೆ!

• 222 ಗೂಂಡಾಗಳ ಎನ್ಕೌಂಟರ್ !

• 14 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ!

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸರಕಾರ 8 ವರ್ಷ ಪೂರೈಸಿದೆ. ಈ ಅವಧಿಯಲ್ಲಿ ಸರಕಾರ ಕೈಗೊಂಡ ಕಠಿಣ ಕ್ರಮಗಳ ಪರಿಣಾಮವಾಗಿ 2016 ರ ಹೋಲಿಕೆಯಲ್ಲಿ ರಾಜ್ಯದ ದೊಡ್ಡ ಅಪರಾಧಗಳಲ್ಲಿ ಶೇ. 85 ರಷ್ಟು ಗಮನಾರ್ಹ ಇಳಿಕೆ ಕಂಡು ಬಂದಿದೆ.

೧. 2016 ರ ಹೋಲಿಕೆಯಲ್ಲಿ ರಾಜ್ಯದಲ್ಲಿ ದರೋಡೆ ಪ್ರಕರಣಗಳಲ್ಲಿ ಶೇ. 85 ಮತ್ತು ಕೊಲೆ ಪ್ರಕರಣಗಳಲ್ಲಿ ಶೇ.41 ರಷ್ಟು ಇಳಿಕೆ ಕಂಡು ಬಂದಿದೆ. ವರದಕ್ಷಿಣೆ ಸಾವಿನ ಪ್ರಮಾಣದಲ್ಲಿಯೂ ಇದೇ ರೀತಿಯ ಇಳಿಕೆ ಕಂಡುಬಂದಿದೆ ಎಂದು ಸರಕಾರ ಹೇಳಿದೆ.

೨. ಕಳೆದ 8 ವರ್ಷಗಳಲ್ಲಿ 222 ಅಪರಾಧಿಗಳು ವಿವಿಧ ಎನ್ಕೌಂಟರ್‍‌ಗಳಲ್ಲಿ ಹತರಾಗಿದ್ದಾರೆ, 8 ಸಾವಿರದ 118 ಅಪರಾಧಿಗಳು ಗಾಯಗೊಂಡಿದ್ದಾರೆ. ಅನೇಕ ಬಾರಿ ಎನ್ಕೌಂಟರ್‍‌ನಲ್ಲಿ ಸಾಯುವ ಭಯದಿಂದ ಅಪರಾಧಿಗಳು ಸ್ವತಃ ಪೊಲೀಸ್ ಠಾಣೆಗಳಿಗೆ ಹಾಜರಾಗಿರುವುದು ಕಂಡು ಬಂದಿದೆ.

೩. ಸುಮಾರು 80 ಸಾವಿರ ಅಪರಾಧಿಗಳನ್ನು ಜೈಲಿಗೆ ಹಾಕಲಾಗಿದೆ. 900 ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ.

೪. ರಾಜ್ಯದ ಮಾಫಿಯಾಗಳು ಅಪರಾಧದಿಂದ ಗಳಿಸಿದ ಹಣದಿಂದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದರು. ಸರಕಾರ ಅಂತಹ ಮಾಫಿಯಾಗಳ ಮೇಲೆ ಕ್ರಮ ಕೈಗೊಂಡು ಇದುವರೆಗೆ 4 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

೫. ಗೂಂಡಾ ಕಾಯ್ದೆಯಡಿ ರಾಜ್ಯದಲ್ಲಿ 14 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 68 ಮಾಫಿಯಾಗಳು ಮತ್ತು ಅವರ ಗುಂಪಿನ 1 ಸಾವಿರದ 400 ಕ್ಕೂ ಹೆಚ್ಚು ಗೂಂಡಾಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.

೬. ಸರಕಾರವು ಪೊಲೀಸ್ ಇಲಾಖೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹೊಸ ನೇಮಕಾತಿಗಳನ್ನು ಮಾಡಿದೆ. 2017 ರಲ್ಲಿ ಉತ್ತರ ಪ್ರದೇಶ ಪೊಲೀಸರಲ್ಲಿ 2 ಲಕ್ಷಕ್ಕೂ ಹೆಚ್ಚು ಪೊಲೀಸರ ಕೊರತೆಯಿತ್ತು. ಸರಕಾರವು 2 ದೊಡ್ಡ ನೇಮಕಾತಿಗಳ ನಂತರವೂ ಇನ್ನೂ 50 ಸಾವಿರ ಪೊಲೀಸರ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಸರಕಾರ 28 ಸಾವಿರ ಜನರನ್ನು ಪೊಲೀಸ್ ಇಲಾಖೆಗೆ ನೇಮಿಸಿಕೊಳ್ಳಲಿದೆ.

೭. ರಾಜ್ಯದಲ್ಲಿ ಪೊಲೀಸ್ ನೇಮಕಾತಿಯ ಜೊತೆಗೆ 126 ಹೊಸ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ. 86 ಹೊಸ ಪೊಲೀಸ್ ಚೌಕಿಗಳನ್ನು ಸಹ ಸ್ಥಾಪಿಸಲಾಗಿದೆ.

ಸಂಪಾದಕೀಯ ನಿಲುವು

  • ಯೋಗಿ ಆದಿತ್ಯನಾಥ ಅವರ ಸರಕಾರ ಏನು ಮಾಡಿದೆಯೋ, ಅದನ್ನು ಇತರ ರಾಜ್ಯಗಳ ಸರಕಾರಗಳು ಏಕೆ ಮಾಡಲು ಸಾಧ್ಯವಿಲ್ಲ? ಯೋಗಿ ಆದಿತ್ಯನಾಥ ಅವರ ಹಿಂದೆ ಸಾಧನೆಯ ಬಲವಿದೆ ಎಂಬುದನ್ನು ಗಮನಿಸಬೇಕು !
  • ನಿಸ್ವಾರ್ಥಿ, ತ್ಯಾಗಿ ಸಂತರು ನಿಜವಾದ ಅರ್ಥದಲ್ಲಿ ಜನತೆಯ ಉತ್ತಮ ಆಡಳಿತಗಾರರಾಗಬಲ್ಲರು ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಜನರು ಈಗ ಎಲ್ಲೆಡೆ ಇಂತಹ ಆಡಳಿತಗಾರರನ್ನು ಆಗ್ರಹಿಸಬೇಕು! ಆಗ ಮಾತ್ರ ರಾಮರಾಜ್ಯ ಸಾಕಾರಗೊಳ್ಳುತ್ತದೆ !