ಮುಂಬಯಿ – ನಮಗೆ ವಕ್ಫ್ ಮಸೂದೆ ಒಪ್ಪಿಗೆಯಿಲ್ಲ. ಈ ವಿಷಯದಲ್ಲಿ ಅಗತ್ಯ ಬಿದ್ದರೆ ನಾವು ಬೀದಿಗಿಳಿಯುತ್ತೇವೆ, ಹಾಗೆಯೇ ಸರ್ವೋಚ್ಚ ನ್ಯಾಯಾಲಯದ ಬಾಗಿಲನ್ನೂ ತಟ್ಟುತ್ತೇವೆ. ಶೇ 99 ರಷ್ಟು ಮುಸಲ್ಮಾನರು ಈ ಮಸೂದೆಯಿಂದ ಅತೃಪ್ತರಾಗಿದ್ದಾರೆ, ಇದು ವಾಸ್ತವವಾಗಿದೆ ಎಂದು ರಝಾ ಅಕಾಡೆಮಿ (ಭಾರತದ ಒಂದು ಸುನ್ನಿ ಮುಸಲ್ಮಾನ ಇಸ್ಲಾಮಿಸ್ಟ್ ಸಂಘಟನೆ, ಇದನ್ನು ‘ರಝಾ ಅಕಾಡೆಮಿ’ ಎಂದು ಕರೆಯಲಾಗುತ್ತದೆ) ಈ ಸಂಘಟನೆಯು ಹೇಳಿದೆ. ವಕ್ಫ್ ಸುಧಾರಣಾ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದಕ್ಕೆ ಸಂಘಟನೆಯು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಲೋಕಸಭೆಯಲ್ಲಿ ವಕ್ಫ್ ಸುಧಾರಣಾ ಮಸೂದೆ ಅಂಗೀಕಾರಗೊಂಡ ನಂತರ ರಝಾ ಅಕಾಡೆಮಿಯು ಏಪ್ರಿಲ್ 3 ರಂದು ಮುಂಬಯಿಯಲ್ಲಿ ಸಭೆಯೊಂದನ್ನು ಆಯೋಜಿಸಿತ್ತು. ಅದರಲ್ಲಿ ಅನೇಕ ಮೌಲ್ವಿಗಳು (ಇಸ್ಲಾಂನ ಧಾರ್ಮಿಕ ನಾಯಕ) ಮತ್ತು ಮುಸಲ್ಮಾನ ಸಮುದಾಯದ ಕಾರ್ಯಕರ್ತರು ಉಪಸ್ಥಿತರಿದ್ದರು. ಅವರು ವಕ್ಫ್ ಸುಧಾರಣಾ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದರು. (ಇತರ ಸಮಾಜದ ಜನರ ಭೂಮಿಯನ್ನು ಕಬಳಿಸಿ ವಕ್ಫ್ ಮಂಡಳಿಯ ಹೆಸರಿನಲ್ಲಿ ಭೂಮಿಯನ್ನು ನೋಂದಾಯಿಸಿ ‘ಭೂಮಿ ಜಿಹಾದ್’ ಮಾಡುವುದು ಮತಾಂಧ ಮುಸಲ್ಮಾನರು ಅನುಸರಿಸುತ್ತಿರುವ ಏಕೈಕ ಕಾರ್ಯಕ್ರಮವಾಗಿದೆ. ಈ ಮಸೂದೆಯಿಂದ ಇದು ನಿಲ್ಲಲಿದೆ. ಅದಕ್ಕಾಗಿಯೇ ಮತಾಂಧ ಮುಸಲ್ಮಾನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ! – ಸಂಪಾದಕರು)
ಮೌಲ್ವಿ ಖಲಿದಿ ರಹಮಾನ ನೂರ ಮಾತನಾಡಿ, ವಕ್ಫ್ ಸುಧಾರಣಾ ಮಸೂದೆ ಅಂಗೀಕಾರಗೊಂಡ ನಂತರ ಸಂಭ್ರಮಿಸುವ ಜನರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಎಚ್ಚರಿಕೆಯ ಮೇಲೆ ಕುಣಿಯುವವರಾಗಿದ್ದಾರೆ. ಅವರು ಸಾಕಿದ ನಾಯಿಗಳು. ಇದು ನಮ್ಮ ಧಾರ್ಮಿಕ ಪ್ರಶ್ನೆ. (ನಿಮ್ಮ ಧಾರ್ಮಿಕ ಪ್ರಶ್ನೆಯಾಗಿದ್ದರೆ, ಅದನ್ನು ನಿಮ್ಮ ಸಮಾಜಕ್ಕೆ ಸೀಮಿತಗೊಳಿಸಿ. ಇತರರ ಭೂಮಿಯನ್ನು ಕಬಳಿಸಿ ಅದರಿಂದ ವಕ್ಫ್ ಮಂಡಳಿ ಏನು ಸಾಧಿಸುತ್ತಿದೆ? ಇದರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಯಾವುದೇ ಸಂಬಂಧವಿಲ್ಲದಿದ್ದರೂ ಅದರ ಹೆಸರನ್ನು ಹೇಳುವುದು ಹಾಸ್ಯಾಸ್ಪದವಾಗಿದೆ! – ಸಂಪಾದಕರು) ಅದಕ್ಕಾಗಿ ನಾವು ಯಾವುದೇ ‘ಕುರ್ಬಾನಿ’ (ತ್ಯಾಗ) ಮಾಡಲು ಸಿದ್ಧರಿದ್ದೇವೆ. ನಾವು ಈ ಮಸೂದೆಯನ್ನು ಒಪ್ಪಿಕೊಳ್ಳುವುದಿಲ್ಲ. ಈ ವಿಷಯದಲ್ಲಿ ಎಷ್ಟು ವಿರೋಧವಿರುತ್ತದೋ ಅಷ್ಟೂ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಸುಳ್ಳುಗಾರರು. (‘ಕಳ್ಳನಿಗೊಂದು ಪಿಳ್ಳೆ ನೆವ’ ಎಂಬ ಗಾದೆಯನ್ನು ನಿಜವಾಗಿಸುವ ಮೌಲ್ವಿ ಖಲಿದಿ ರಹಮಾನ್ ನೂರ್! – ಸಂಪಾದಕರು) ಭಾಜಪ ನಾಯಕರು ಹೆಣ್ಣುಮಕ್ಕಳ ಮೇಲೆ ಅತಿ ಹೆಚ್ಚು ದೌರ್ಜನ್ಯ ಮಾಡುತ್ತಿದ್ದಾರೆ. (‘ಲವ್ ಜಿಹಾದ್’ ಮೂಲಕ ಹಿಂದೂಗಳ ಹೆಣ್ಣುಮಕ್ಕಳನ್ನು ಅಪಹರಿಸಿ ಅವರನ್ನು ಇಸ್ಲಾಂಗೆ ಮತಾಂತರ ಮಾಡಲು ಒತ್ತಾಯಿಸುವ ಮತಾಂಧರ ಬಗ್ಗೆ ಮೌಲ್ವಿ ಖಲಿದಿ ರಹಮಾನ ನೂರ ಯಾವಾಗಲಾದರೂ ಮಾತನಾಡುತ್ತಾರೆಯೇ? – ಸಂಪಾದಕರು) ಆದ್ದರಿಂದ ಅವರು ಏನು ಹೇಳುತ್ತಾರೋ ಅದೆಲ್ಲ ಸುಳ್ಳು. ಅವರು ನಮ್ಮ ಒಳ್ಳೆಯದಕ್ಕಾಗಿ ಕೆಲಸ ಮಾಡುತ್ತಿದ್ದರೆ, ಅವರು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು. ನಮ್ಮೊಂದಿಗೆ ಸಂವಾದ ನಡೆಸುತ್ತಿದ್ದರು. ಭಾಜಪ ಮುಸಲ್ಮಾನರಿಗಾಗಿ ಅಲ್ಲ, ತಮಗಾಗಿ ಮತ್ತು ತಮ್ಮ ಸ್ನೇಹಿತರಿಗಾಗಿ ಕೆಲಸ ಮಾಡುತ್ತಿದೆ, ಎಂದು ಹೇಳಿದರು.
ಮಹಮ್ಮದ ಸಯೀದ ನೂರಿ ಮಾತನಾಡಿ, ಸರಕಾರ ಹೇಳುವುದು ಒಂದು ಮಾಡುವುದು ಇನ್ನೊಂದು. ಈ ಮಸೂದೆಯ ಮೇಲೆ ನಮಗೆ ಶೇ 1 ರಷ್ಟೂ ನಂಬಿಕೆಯಿಲ್ಲ. ಈಗ ವಕ್ಫ್ ನ ಭೂಮಿಯನ್ನು ಕಬಳಿಸಲಾಗುತ್ತದೆ. ಮುಸಲ್ಮಾನರ ಆಸ್ತಿ ಸುರಕ್ಷಿತವಾಗಿರುವುದಿಲ್ಲ. ಹಿಂದಿನ ಇತಿಹಾಸವನ್ನು ನೋಡಿದರೆ ಈ ಸರಕಾರದ ಮೇಲೆ ನಮಗೆ ನಂಬಿಕೆಯಿಲ್ಲ. ನಾವು ಇಂದಿನ ಸಭೆಯಲ್ಲಿ ಎಲ್ಲಾ ಕಾನೂನು ಮಾರ್ಗಗಳ ಬಗ್ಗೆ ಚರ್ಚಿಸಿದ್ದೇವೆ. ನಾವು ನಮ್ಮ ಆಸ್ತಿಯನ್ನು ರಕ್ಷಿಸಿಕೊಳ್ಳುತ್ತೇವೆ, ಎಂದು ಹೇಳಿದರು.
ಸಂಪಾದಕೀಯ ನಿಲುವುಮುಂಬಯಿಯ ಆಜಾದ ಮೈದಾನದಲ್ಲಿ ಆಗಸ್ಟ್11, 2012 ರಂದು ನಡೆದ ಗಲಭೆಗೆ 14 ವರ್ಷಗಳಾಗಿವೆ, ಆದರೂ ರಝಾ ಅಕಾಡೆಮಿ ಸೇರಿದಂತೆ ಸಂಬಂಧಿತ ಆರೋಪಿಗಳಿಗೆ ಇನ್ನೂ ಶಿಕ್ಷೆಯಾಗಿಲ್ಲ. ರಝಾ ಅಕಾಡೆಮಿಯ ಎಚ್ಚರಿಕೆಯನ್ನು ಸರಕಾರ ನಿರ್ಲಕ್ಷಿಸದೇ, ಅದು ಮತ್ತೆ ಆಕ್ರಮಣಕಾರಿಯಾಗಿ ಗಲಭೆಗಳನ್ನು ನಡೆಸದಂತೆ ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲಿಯವರೆಗೆ ಆಜಾದ ಮೈದಾನ ಗಲಭೆ ಪ್ರಕರಣದಲ್ಲಿ ರಝಾ ಅಕಾಡೆಮಿಯ ಮೇಲೆ ಕಠಿಣ ಕ್ರಮ ಕೈಗೊಂಡಿದ್ದರೆ, ಈ ಸಂಘಟನೆಯು ಮತ್ತೆ ಇಂತಹ ಆಕ್ರಮಣಕಾರಿ ನೀತಿಯನ್ನು ಅನುಸರಿಸುವ ಧೈರ್ಯ ಮಾಡುತ್ತಿರಲಿಲ್ಲ! |