|

ಛತ್ತರಪುರ (ಮಧ್ಯಪ್ರದೇಶ) – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ಇಲ್ಲಿ ‘ಹಿಂದೂ ಗ್ರಾಮ’ಕ್ಕೆ ಅಡಿಪಾಯ ಹಾಕಿದ್ದಾರೆ. ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ಈ ಗ್ರಾಮದಲ್ಲಿ 1 ಸಾವಿರ ಹಿಂದೂ ಕುಟುಂಬಗಳನ್ನು ನೆಲೆಗೊಳಿಸಲಿದ್ದಾರೆ. ಈ ಗ್ರಾಮವನ್ನು ಅವರ ಪವಿತ್ರ ಸ್ಥಳವಾದ ಗಢ ಗ್ರಾಮದ ಬಳಿ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಬಾಗೇಶ್ವರ ಧಾಮಕ್ಕೆ ಸಂಬಂಧಿಸಿದ ಸಂಸ್ಥೆಯಿಂದ ಭೂಮಿಯನ್ನು ಸಹ ಒದಗಿಸಲಾಗುತ್ತಿದೆ. ಇಲ್ಲಿ 2 ಕುಟುಂಬಗಳು ಈಗಾಗಲೇ ಮನೆಗಳನ್ನು ಕಟ್ಟಲು ಒಪ್ಪಿಗೆ ನೀಡಿವೆ, ಆದರೆ 50 ಕುಟುಂಬಗಳು ಈ ಗ್ರಾಮದಲ್ಲಿ ನೆಲೆಸಲು ಇಚ್ಛೆ ವ್ಯಕ್ತಪಡಿಸಿವೆ.
ಈ ಗ್ರಾಮದ ಮೂಲಕ ಹಿಂದೂ ರಾಷ್ಟ್ರದ ಅಡಿಪಾಯ ಹಾಕಲಾಗಿದೆ!
ಧೀರೇಂದ್ರಕೃಷ್ಣ ಶಾಸ್ತ್ರಿ ಇವರು, ಹಿಂದೂ ಗ್ರಾಮದಿಂದ ಹಿಂದೂ ತಾಲೂಕು, ಹಿಂದೂ ಜಿಲ್ಲೆ ಮತ್ತು ಹಿಂದೂ ರಾಜ್ಯ ನಿರ್ಮಾಣವಾಗುತ್ತದೆ. ಗಢದಲ್ಲಿ ಗ್ರಾಮವಲ್ಲ, ಹಿಂದೂ ರಾಷ್ಟ್ರದ ಅಡಿಪಾಯ ಹಾಕಲಾಗಿದೆ. ಈ ಗ್ರಾಮವು ಮುಂದಿನ 2 ವರ್ಷಗಳಲ್ಲಿ ಸಿದ್ಧವಾಗುತ್ತದೆ. ಇಲ್ಲಿ ವಾಸಿಸುವವರಿಗೆ ಸಂಸ್ಕೃತ ಶಾಲೆ, ಗೋಶಾಲೆ ಮತ್ತು ಯಜ್ಞ ಶಾಲೆಯಂತಹ ಸೌಲಭ್ಯಗಳು ಸಿಗುತ್ತವೆ.
🚩 India’s First ‘Hindu Village’ to Be Established in Chhatarpur, MP! 🚩
🛕 Foundation laid by Pandit Dhirendra Krishna Shastri
(@bageshwardham)Village to include a Sanskrit school, Gaushala & Yagyashala
🚩 This initiative lays the foundation of a Hindu Rashtra!
Not… pic.twitter.com/Yal0zyghmO
— Sanatan Prabhat (@SanatanPrabhat) April 4, 2025
ಸಂಪಾದಕೀಯ ನಿಲುವುರಾಜಕೀಯ ಪಕ್ಷಗಳು ಮತ್ತು ನಾಯಕರುಗಳಲ್ಲ, ಸಂತರು ಮಾತ್ರ ಹಿಂದೂ ರಾಷ್ಟ್ರವನ್ನು ಪ್ರತ್ಯಕ್ಷವಾಗಿ ನಿರ್ಮಿಸಬಲ್ಲರು, ಇದು ಇದರಿಂದ ಸ್ಪಷ್ಟವಾಗುತ್ತದೆ! |