Trump Import Tariff : ಭಾರತದ ಮೇಲೆ ಮೊದಲು ಶೇ. 26, ನಂತರ ಶೇ. 27 ಮತ್ತು ಈಗ ಮತ್ತೆ ಶೇ. 26 ವ್ಯಾಪಾರ ತೆರಿಗೆ !

ಟ್ರಂಪ್ ಆಡಳಿತದಿಂದ ಬದಲಾಗುತ್ತಿರುವ ಅಂಕಿಅಂಶಗಳು !

ವಾಷಿಂಗ್ಟನ (ಅಮೇರಿಕಾ) – ಅಮೇರಿಕದ ಟ್ರಂಪ್ ಆಡಳಿತದಿಂದ ಭಾರತದ ಮೇಲೆ ಮೊದಲು ಶೇ.26, ನಂತರ ಶೇ.27, ಮತ್ತು ಈಗ ಮತ್ತೆ ಶೇ.26 ವ್ಯಾಪಾರ ತೆರಿಗೆಯನ್ನು ವಿಧಿಸಲಾಗಿದೆ, ಈ ತೆರಿಗೆ ಏಪ್ರಿಲ್ 9 ರಿಂದ ಜಾರಿಗೆ ಬರಲಿದೆ.

1. ವಿವಿಧ ದೇಶಗಳ ವಿರುದ್ಧ ಪರಸ್ಪರ ತೆರಿಗೆ ವಿಧಿಸುವುದಾಗಿ ಘೋಷಿಸುವಾಗ, ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ಫಲಕವನ್ನು ತೋರಿಸಿ, ಅದರಲ್ಲಿ ಭಾರತದ ಮೇಲೆ ಶೇಕಡಾ 26 ರಷ್ಟು ತೆರಿಗೆ ವಿಧಿಸುವ ಬಗ್ಗೆ ಉಲ್ಲೇಖವಿತ್ತು. ಈ ಫಲಕದ ಮೇಲೆ ಹಲವು ದೇಶಗಳ ಹೆಸರುಗಳು ಮತ್ತು ಅವುಗಳ ಮೇಲೆ ವಿಧಿಸಲಾಗುವ ತೆರಿಗೆಯ ಶೇಕಡಾವಾರು ಮಾಹಿತಿಯ ವಿವರಗಳು ತಿಳಿಸಲಾಗಿತ್ತು. ಈ ಸಮಯದಲ್ಲಿ, ಟ್ರಂಪ್ ಮಾತನಾಡಿ, ಭಾರತವು ಅಮೇರಿಕದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇಕಡಾ 52 ರಷ್ಟು ತೆರಿಗೆ ವಿಧಿಸುತ್ತದೆ; ಆದರೆ ಅಮೇರಿಕ ಭಾರತಕ್ಕೆ ಶೇಕಡಾ 26 ರಷ್ಟು ರಿಯಾಯಿತಿ ದರದಲ್ಲಿ ತೆರಿಗೆ ವಿಧಿಸುತ್ತಿದೆ ಎಂದು ಹೇಳಿದ್ದರು.

2. ಆದಾಗ್ಯೂ, ಟ್ರಂಪ್ ಆಡಳಿತವು ಪ್ರಸಾರ ಮಾಡಿದ ಅಧಿಕೃತ ದಾಖಲೆಗಳು ಭಾರತದ ಮೇಲೆ ಶೇಕಡಾ 27 ರಷ್ಟು ತೆರಿಗೆ ವಿಧಿಸುವ ಬಗ್ಗೆ ಮಾತನಾಡಿದ್ದವು. ಆದರೆ, ಇತ್ತೀಚಿನ ಅಂಕಿಅಂಶಗಳು ಇದು ಶೇ. 26 ಎಂದು ಹೇಳಲಾಗಿದೆ.

3. ತಜ್ಞರ ಪ್ರಕಾರ, ತೆರಿಗೆಗಳಲ್ಲಿ ಶೇಕಡಾ ಒಂದು ವ್ಯತ್ಯಾಸವು ವ್ಯವಹಾರದಲ್ಲಿ ಯಾವುದೇ ಗಮನಾರ್ಹ ವ್ಯತ್ಯಾಸವನ್ನುಂಟು ಮಾಡುವುದಿಲ್ಲ ಎಂದು ಹೇಳಲಾಗಿದೆ.

ಭಾರತದ ಒಟ್ಟು ಸರಕು ರಫ್ತಿನಲ್ಲಿ ಅಮೇರಿಕದ ಪಾಲು ಶೇ. 18 !

2021-22 ರಿಂದ 2023-24 ರವರೆಗೆ ಅಮೇರಿಕವು ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ಆಗಿದೆ. ಭಾರತದ ಒಟ್ಟು ಸರಕು ರಫ್ತಿನಲ್ಲಿ ಅಂದಾಜು ಶೇ. 18, ಆಮದುಗಳಲ್ಲಿ ಶೇ. 6.22 ಮತ್ತು ದ್ವಿಪಕ್ಷೀಯ ವ್ಯಾಪಾರದಲ್ಲಿ ಶೇ. 10.73 ರಷ್ಟು ಪಾಲನ್ನು ಅಮೇರಿಕಾ ಹೊಂದಿದೆ.

ಭಾರತವು ಅಮೇರಿಕಕ್ಕೆ ಯಾವ ಸರಕುಗಳನ್ನು ಹೆಚ್ಚು ರಫ್ತು ಮಾಡುತ್ತದೆ?

2024 ರಲ್ಲಿ ಭಾರತವು ಅಮೇರಿಕಕ್ಕೆ ಮಾಡುವ ಪ್ರಮುಖ ರಫ್ತುಗಳಲ್ಲಿ ಔಷಧಗಳು, ದೂರಸಂಪರ್ಕ ಉಪಕರಣಗಳು, ಅಮೂಲ್ಯ ಮತ್ತು ಅರೆ-ಅಮೂಲ್ಯ ಕಲ್ಲುಗಳು, ಪೆಟ್ರೋಲಿಯಂ ಉತ್ಪನ್ನಗಳು, ಚಿನ್ನ ಮತ್ತು ಇತರ ಅಮೂಲ್ಯ ಲೋಹದ ಆಭರಣಗಳು, ಸಿದ್ಧ ಹತ್ತಿ ಉಡುಪುಗಳು ಮತ್ತು ಕಬ್ಬಿಣದ ಉತ್ಪನ್ನಗಳು ಸೇರಿವೆ.