4 ತಿಂಗಳ ಮಗುವಿನ ಸುನ್ನತಿಗೂ ಪ್ರಯತ್ನ!
ಲಕ್ಷ್ಮಣಪುರಿ – ಉತ್ತರ ಪ್ರದೇಶ ರಾಜ್ಯದ ಮೀರಾ ಸರಾಯ್ ನ ನಿವಾಸಿ ರಾಜಕುಮಾರ (24) ಎಂಬ ಯುವಕನ ಮದುವೆ ಶೇಖೂಪುರ ನ ಮುಸ್ಲಿಂ ಯುವತಿ ಅಫ್ರೋಜ್ (23) ಜೊತೆ ಆಗಸ್ಟ್ 4, 2023 ರಂದು ನಡೆದಿತ್ತು. ಈ ದಂಪತಿಗೆ 4 ತಿಂಗಳ ಮಗುವೂ ಇದೆ. ಆದರೆ ಈಗ ಅಫ್ರೋಜ್ ತನ್ನ ಪತಿಯ ಮೇಲೆ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ ಹೇರುತ್ತಿದ್ದಾಳೆ ಎಂದು ಆರೋಪಿಸಲಾಗಿದೆ. ನನ್ನ ಮತ್ತು ನನ್ನ 4 ವರ್ಷದ ಮಗನ ಸುನ್ನತಿ ಮಾಡಲು ಅಫ್ರೋಜ್ ಮತ್ತು ಆಕೆಯ ಸಂಬಂಧಿಕರು ಒತ್ತಡ ಹೇರುತ್ತಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ. ‘ನಾನು ಇಸ್ಲಾಂ ಧರ್ಮ ಸ್ವೀಕರಿಸಲು ಬಯಸುವುದಿಲ್ಲ ಮತ್ತು ನನ್ನ ಮಗನನ್ನೂ ಇಸ್ಲಾಂ ಸ್ವೀಕರಿಸಲು ಬಿಡುವುದಿಲ್ಲ ಎಂದು ಯುವಕ ಹೇಳಿದ್ದಾನೆ. ನನಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಆತ ಮನವಿ ಮಾಡಿದ್ದಾನೆ. ಈ ಯುವಕ ಬಾಣಸಿಗನಾಗಿ(ಅಡುಗೆ ಮಾಡುವವ) ಕೆಲಸ ಮಾಡುತ್ತಾನೆ.
1.ಮದುವೆಯ ನಂತರ, ಯುವತಿಯ ಕುಟುಂಬದವರು ರಾಜಕುಮಾರನ ಮೇಲೆ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ ಹೇರಿದರು, ಆತನನ್ನು ಮಸೀದಿಗೆ ಕರೆದೊಯ್ದು ಬಲವಂತವಾಗಿ ನಮಾಜ್ ಮಾಡಿಸಿದರು. ನಂತರ ಮಾಂಸ ತಿನ್ನಿಸಿದರು. ಈ ಎಲ್ಲ ವಿಷಯಗಳನ್ನು ವಿರೋಧಿಸಿದಾಗ ಅಫ್ರೋಜ್ ಆತನಿಗೆ ವಿಚ್ಛೇದನ ನೀಡಿದಳು. ಆದರೆ ಮತ್ತೆ ಮಧ್ಯಸ್ಥಿಕೆ ನಡೆದು 2024 ರಿಂದ ಇಬ್ಬರೂ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು.
2.ಈದ್ ಹಬ್ಬದ ನಿಮಿತ್ತ ರಾಜಕುಮಾರ ತನ್ನ ಹೆಂಡತಿಯ ಮನೆಗೆ ಹೋದಾಗ, ಆತನ ಹೆಂಡತಿಯ ಸಂಬಂಧಿಕರು ಮಗುವಿಗೆ ಮಾಂಸ ತಿನ್ನಿಸುತ್ತಿರುವುದು ಆತನ ಗಮನಕ್ಕೆ ಬಂತು. ಇದನ್ನು ವಿರೋಧಿಸಿದಾಗ ಅಫ್ರೋಜ್, ಮೌಲಾನ ಮತ್ತು ಇತರ ಸಂಬಂಧಿಕರನ್ನು ಕರೆಸಿ ರಾಜಕುಮಾರ ಮೇಲೆ ಮತ್ತೆ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ ಹೇರಿದಳು, ಅಲ್ಲದೇ ಆತನ ಸುನ್ನತಿ ಮಾಡಲು ಪ್ರಯತ್ನಿಸಿದಳು. ಆದರೆ ರಾಜಕುಮಾರ ತನ್ನ ಮಗುವನ್ನು ಕರೆದುಕೊಂಡು ಅಲ್ಲಿಂದ ಪರಾರಿಯಾದನು.
ಸಂಪಾದಕೀಯ ನಿಲುವುಮುಸ್ಲಿಂ ಯುವಕರು ಮಾತ್ರವಲ್ಲ, ಮುಸ್ಲಿಂ ಯುವತಿಯರೂ ಕೂಡ ಲವ್ ಜಿಹಾದ್ ಮಾಡಿ ಹಿಂದೂ ಯುವಕರ ಜೀವನವನ್ನು ಹಾಳು ಮಾಡುತ್ತಾರೆ ಎಂಬುದನ್ನು ಗಮನಿಸಿ! |