Karnataka Detergent N Chemicals In IceCream : ಐಸ್‌ಕ್ರೀಮ್‌ನಲ್ಲಿ ಡಿಟರ್ಜೆಂಟ್ ಮತ್ತು ತಂಪು ಪಾನೀಯಗಳಲ್ಲಿ ಫಾಸ್ಫೊರಿಕ್ ಆಮ್ಲದ ಬಳಕೆ!

ಆಹಾರ ಸುರಕ್ಷತಾ ಇಲಾಖೆಯಿಂದ ೯೭ ಅಂಗಡಿಗಳಿಗೆ ನೋಟಿಸ್

ಬೆಂಗಳೂರು – ಕರ್ನಾಟಕದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಐಸ್‌ಕ್ರೀಮ್ ಮತ್ತು ತಂಪು ಪಾನೀಯಗಳನ್ನು ಉತ್ಪಾದಿಸುವ ವಿವಿಧ ಸ್ಥಳೀಯ ಉತ್ಪಾದನಾ ಅಂಗಡಿಗಳ ಮೇಲೆ ದಾಳಿ ನಡೆಸಿತು. ಆಹಾರ ಉತ್ಪನ್ನಗಳ ಗುಣಮಟ್ಟ ಮತ್ತು ಉತ್ಪಾದನಾ ವಿಧಾನಗಳನ್ನು ಮೌಲ್ಯಮಾಪನ ಮಾಡಲು ಈ ದಾಳಿಗಳನ್ನು ನಡೆಸಲಾಯಿತು. ಈ ಕುರಿತು ದೊರೆತ ಮಾಹಿತಿಯ ಪ್ರಕಾರ, ಆಡಳಿತ ಮಂಡಳಿಗೆ ಐಸ್‌ಕ್ರೀಮ್‌ನಲ್ಲಿ ಡಿಟರ್ಜೆಂಟ್ ಪುಡಿಯ ಬಳಕೆಯು ಕಂಡುಬಂದಿದೆ, ಹಾಗೆಯೇ ತಂಪು ಪಾನೀಯಗಳಲ್ಲಿ ಮೂಳೆಗಳನ್ನು ದುರ್ಬಲಗೊಳಿಸುವ ಫಾಸ್ಫೊರಿಕ್ ಆಮ್ಲವನ್ನು ಬಳಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ೯೭ ಅಂಗಡಿಗಳಿಗೆ ಎಚ್ಚರಿಕೆಯ ನೋಟಿಸ್‌ಗಳನ್ನು ಜಾರಿಗೊಳಿಸಿದ್ದಾರೆ. ಅಲ್ಲದೆ, ಐಸ್‌ಕ್ರೀಮ್ ಮತ್ತು ತಂಪು ಪಾನೀಯ ಉತ್ಪಾದಕರಿಗೆ ಒಟ್ಟು ೩೮ ಸಾವಿರ ರೂಪಾಯಿಗಳ ದಂಡವನ್ನು ವಿಧಿಸಲಾಗಿದೆ.

೧. ಅಧಿಕಾರಿಗಳಿಗೆ ಅನೇಕ ಕಡೆಗಳಲ್ಲಿ ಅಸ್ವಚ್ಛ ಪರಿಸ್ಥಿತಿ ಮತ್ತು ನಿರ್ವಹಣೆಯ ಕೊರತೆ ಕಂಡುಬಂದಿತು.

೨. ಕೆಲವು ಉತ್ಪಾದಕರು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಡಿಟರ್ಜೆಂಟ್, ಯೂರಿಯಾ ಅಥವಾ ಪಿಷ್ಟದಿಂದ ತಯಾರಿಸಿದ ಕೃತಕ ಹಾಲನ್ನು ಬಳಸುತ್ತಿರುವುದು ಕಂಡುಬಂದಿತು.

೩. ಅವರು ನೈಸರ್ಗಿಕ ಸಕ್ಕರೆಯ ಬದಲು ಪದಾರ್ಥಗಳ ರುಚಿ ಮತ್ತು ಬಣ್ಣವನ್ನು ಹೆಚ್ಚಿಸಲು ಸ್ಯಾಕರಿನ್ ಮತ್ತು ಹಾನಿಕಾರಕ ಬಣ್ಣಗಳನ್ನು ಬಳಸುತ್ತಿರುವುದು ಕಂಡುಬಂದಿತು.

೪. ಅನೇಕ ಉತ್ಪಾದಕರು ಐಸ್ ಕ್ಯಾಂಡಿ ಮತ್ತು ತಂಪು ಪಾನೀಯಗಳನ್ನು ತಯಾರಿಸಲು ಕಲುಷಿತ ಅಥವಾ ಕುಡಿಯಲು ಯೋಗ್ಯವಲ್ಲದ ನೀರನ್ನು ಬಳಸುತ್ತಿದ್ದರು.

ಸಂಪಾದಕೀಯ ನಿಲುವು

ಜನರ ಜೀವದೊಂದಿಗೆ ಆಟವಾಡುತ್ತಿರುವ ಇಂತಹ ಜನರನ್ನು ಸರಕಾರವು ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕು !