PM Modi Sri Lanka Visit : ತಕ್ಷಣ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಬೇಕು !

ಪ್ರಧಾನಿ ಮೋದಿಯವರ ಶ್ರೀಲಂಕಾ ಭೇಟಿ; ಮಹತ್ವಪೂರ್ಣ ಬೇಡಿಕೆ

ಕೊಲಂಬೊ (ಶ್ರೀಲಂಕಾ) – ಶ್ರೀಲಂಕಾಗೆ 3 ದಿನಗಳ ಭೇಟಿ ನೀಡಿರುವ ಪ್ರಧಾನಿ ಮೋದಿ, ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸಾನಾಯಕೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾರತೀಯ ಮೀನುಗಾರರ ಬಂಧನದ ಬಗ್ಗೆ ಚರ್ಚಿಸಿದರು. ಇದು ಮೀನುಗಾರರ ಜೀವನೋಪಾಯದ ವಿಷಯ ಎಂದು ಪ್ರಧಾನಿ ಮೋದಿ ಹೇಳಿದರು. ಮೀನುಗಾರರನ್ನು ತಕ್ಷಣ ಬಿಡುಗಡೆ ಮಾಡುವ ಮತ್ತು ಅವರ ದೋಣಿಗಳನ್ನು ಬಿಡುಗಡೆ ಮಾಡುವ ಬಗ್ಗೆ ನಾವು ಮಾತನಾಡಿದ್ದೇವೆ. ಈ ವಿಷಯದಲ್ಲಿ ನಾವು ಮಾನವೀಯತೆಯಿಂದ ಮುಂದುವರಿಯಬೇಕೆಂದು ನಾವು ಸಹಮತ ಹೊಂದಿದ್ದೇವೆ ಎಂದರು.

ಶ್ರೀಲಂಕಾ ಸರಕಾರ ತಮಿಳು ಹಿಂದೂಗಳ ಹಕ್ಕುಗಳನ್ನು ಜಾರಿಗೊಳಿಸುತ್ತದೆ ಎಂದು ನಾನು ನಂಬುತ್ತೇನೆ !

ಶ್ರೀಲಂಕಾದಲ್ಲಿರುವ ತಮಿಳು ಹಿಂದೂಗಳ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಶ್ರೀಲಂಕಾ ಸರಕಾರ ತಮಿಳು ಜನರ ನಿರೀಕ್ಷೆಗಳನ್ನು ಈಡೇರಿಸುತ್ತದೆ ಮತ್ತು ಶ್ರೀಲಂಕಾ ಸಂವಿಧಾನದಡಿಯಲ್ಲಿ ಅವರಿಗೆ ನೀಡಲಾಗಿರುವ ಸಂಪೂರ್ಣ ಹಕ್ಕುಗಳನ್ನು ಜಾರಿಗೊಳಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಪ್ರಧಾನಿ ಮೋದಿಗೆ ಮಿತ್ರ ವಿಭೂಷಣ ಪ್ರಶಸ್ತಿ ಪ್ರದಾನ

ಇದಕ್ಕೂ ಮುನ್ನ ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸಾನಾಯಕೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಮಿತ್ರ ವಿಭೂಷಣ’ ಪ್ರಶಸ್ತಿ ನೀಡಿ ಗೌರವಿಸಿದರು. ಈ ಪ್ರಶಸ್ತಿಯು ಶ್ರೀಲಂಕಾದ ನಾಗರಿಕರಲ್ಲದವರಿಗೆ ನೀಡುವ ಅತ್ಯುನ್ನತ ಗೌರವವಾಗಿದೆ. ಈ ಹಿಂದೆ, ಪ್ಯಾಲೆಸ್ಟೀನಿಯನ್ ನಾಯಕರಾದ ಮೆಹಬೂಬ ಅಬ್ಬಾಸ್ ಮತ್ತು ಯಾಸರ್ ಅರಾಫತ್ ಅವರಿಗೆ ಈ ಗೌರವವನ್ನು ನೀಡಲಾಗಿತ್ತು.

ಸಂಪಾದಕೀಯ ನಿಲುವು

  • ಪ್ರಸ್ತುತ ಭಾರತದ ಕರುಣೆಯ ಮೇಲೆ ಬದುಕುತ್ತಿರುವ ಶ್ರೀಲಂಕಾವನ್ನು ಭಾರತೀಯ ಮೀನುಗಾರರನ್ನು ಬಂಧಿಸುವ ಧೈರ್ಯ ಮಾಡಬೇಡಿ ಎಂದು ಭಾರತ ಎಚ್ಚರಿಸಬೇಕು.
  • ಶ್ರೀಲಂಕಾ ಭಾರತೀಯ ಮೀನುಗಾರರನ್ನು ಬಂಧಿಸುತ್ತಿದೆ ಎಂದರೆ ಅದು ಭಾರತದ ಜೊತೆ ಅನುಚಿತವಾಗಿ ವರ್ತಿಸುತ್ತಿದೆ ಮತ್ತು ಭಾರತಕ್ಕೆ ಬೆಲೆ ಕೊಡುವುದಿಲ್ಲ ಎಂದು ಕಂಡು ಬರುತ್ತದೆ.