ಶಾಹಜಹಾಪುರ (ಉತ್ತರಪ್ರದೇಶ) – ಇಲ್ಲಿ ಮುಸ್ಲಿಮರ ಧಾರ್ಮಿಕ ಪುಸ್ತಕ ಕುರಾನ್‌ನ ಪುಟಗಳನ್ನು ಹರಿದು ರಸ್ತೆಯ ಮೇಲೆ ಎಸೆದ ಘಟನೆ ಬಹಿರಂಗವಾದ ನಂತರ ಸಾವಿರಾರು ಮುಸ್ಲಿಮರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದರು. ಈ ಘಟನೆ ಏಪ್ರಿಲ್ 3 ರ ರಾತ್ರಿ ನಡೆದಿದೆ. ಪೊಲೀಸರು ಸ್ಥಳಕ್ಕೆ ತಲುಪಿ ಪ್ರತಿಭಟನಾಕಾರರನ್ನು ಶಾಂತಗೊಳಿಸಿದರು. ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಆತನ ಹೆಸರು ನಾಜಿಮ್ ಎಂದು ತಿಳಿದುಬಂದಿದ್ದು, ಆತ ಮಾನಸಿಕ ಅಸ್ವಸ್ಥ ಎಂದು ಪೊಲೀಸರು ಹೇಳಿದ್ದಾರೆ.
ಸಂಪಾದಕೀಯ ನಿಲುವುಕುರಾನ್ನ ಪುಟಗಳನ್ನು ಹರಿದು ಹಾಕಿದವನು ಮುಸ್ಲಿಮನಾಗಿರದಿದ್ದರೆ, ಇಲ್ಲಿ ಗಲಭೆ ಸಂಭವಿಸುತ್ತಿತ್ತು, ಇದರಲ್ಲಿ ಯಾವುದೇ ಸಂದೇಹವಿಲ್ಲ ! |