ಶಿಕ್ಷೆ
‘ಒಬ್ಬನಿಂದ ತಪ್ಪಾದಾಗ ‘ಅವನು ಆ ತಪ್ಪನ್ನು ಪುನಃ ಮಾಡಬಾರದು, ಎಂಬ ಅರಿವು ಅವನಲ್ಲಿ ನಿರ್ಮಾಣವಾಗಲು ಮತ್ತು ಆ ತಪ್ಪಿನಿಂದ ಅವನಿಂದ ಆಗಿರುವ ಪಾಪದ ಕ್ಷಾಲನೆಯಾಗಬೇಕೆಂದು ಹೇಳಿದ ಕೃತಿಯೆಂದರೆ ‘ಶಿಕ್ಷೆ. ಆದುದರಿಂದ ಒಂದೇ ರೀತಿಯ ತಪ್ಪು ಮಾಡುವವರಿಗೆ ಒಂದೇ ತರಹದ ಶಿಕ್ಷೆ ಇರುತ್ತದೆ.
ಪ್ರಾಯಶ್ಚಿತ್ತ
ಒಬ್ಬನಿಂದ ತಪ್ಪಾದರೆ, ಕೆಲವೊಮ್ಮೆ ಅವನಿಗೆ ಆ ತಪ್ಪಿನ ಅರಿವಾಗಿರುತ್ತದೆ, ಹಾಗೆಯೇ ಅವನಿಗೆ ಆ ‘ತಪ್ಪು ಆಗಿರುವ ಬಗ್ಗೆ ಪಶ್ಚಾತ್ತಾಪವೆನಿಸುತ್ತದೆ. ಆದುದರಿಂದ ಅವನು ಆ ತಪ್ಪಿನಿಂದ ಆಗಿರುವ ಪಾಪದ ಪರಿಮಾರ್ಜನೆಗಾಗಿ ಸ್ವತಃ ಮಾಡಿದ ಕೃತಿಯೆಂದರೆ ‘ಪ್ರಾಯಶ್ಚಿತ್ತ. ವ್ಯಕ್ತಿಗನುಸಾರ ತಪ್ಪಿನ ದುಷ್ಪರಿಣಾಮಗಳ ಅರಿವು, ದೋಷಗಳ ತೀವ್ರತೆ, ತಪ್ಪುಗಳ ಪುನರಾವರ್ತನೆ, ತಪ್ಪಾದ ನಂತರ ಅನಿಸುವ ಪಶ್ಚಾತ್ತಾಪ, ಈ ಮೊದಲು ಒಂದೇತರಹದ ತಪ್ಪಿಗಾಗಿ ಪ್ರಾಯಶ್ಚಿತ್ತವನ್ನು ತೆಗೆದುಕೊಂಡರೂ, ಅದರ ಪರಿಣಾಮ ಎಷ್ಟಾಯಿತು ? ಇಂತಹ ವಿವಿಧ ಘಟಗಳಿಗನುಸಾರ ಪ್ರಾಯಶ್ಚಿತ್ತದ ತೀವ್ರತೆಯು ಅವಲಂಬಿಸಿರುತ್ತದೆ. ಆದುದರಿಂದ ತಪ್ಪು ಒಂದೇ ಇದ್ದರೂ, ಪ್ರಾಯಶ್ಚಿತ್ತವು ವ್ಯಕ್ತಿಗನುಸಾರ ಮತ್ತು ಕಾಲಕ್ಕನುಸಾರ ಬದಲಾಗುತ್ತದೆ.
– (ಪರಾತ್ಪರ ಗುರು) ಡಾ. ಆಠವಲೆ (೩೦.೮.೨೦೨೧)