ಜಮಿಯತ ಉಲೇಮಾ-ಎ-ಹಿಂದ್‌ನ ಮುಫ್ತಿ ಮುಹಮ್ಮದ ಅಕ್ಬರ ಕಾಸಮಿಯವರ ಬೆದರಿಕೆ
ಅಲಿಗಢ (ಉತ್ತರಪ್ರದೇಶ) – ವಕ್ಫ ತಿದ್ದುಪಡಿ ಮಸೂದೆಯು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕಾರವಾದ ನಂತರ, ವಿವಿಧ ಮುಸ್ಲಿಂ ಸಂಘಟನೆಗಳು ಆಕ್ರಮಣಕಾರಿಯಾಗಿವೆ. ಅಲಿಗಢನ ಜಮಿಯತ ಉಲೇಮಾ-ಎ-ಹಿಂದ್ ಸಂಘಟನೆಯ ನಗರಾಧ್ಯಕ್ಷರಾದ ಮುಫ್ತಿ ಮೊಹಮ್ಮದ ಅಕ್ಬರ ಕಾಸಮಿಯವರು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಮಸೂದೆಯು ಮುಸ್ಲಿಮರ ಧಾರ್ಮಿಕ ಹಕ್ಕುಗಳನ್ನು ಹಿಸುಕಿ ಹಾಕುತ್ತದೆ. ಹಾಗಾಗಿ ಮುಸ್ಲಿಮರು ಬೀದಿಗಿಳಿದು ಇದನ್ನು ವಿರೋಧಿಸುತ್ತಾರೆ. ಸ್ವಾತಂತ್ರ್ಯದ ಸಮಯದಲ್ಲಿ ಮುಸ್ಲಿಮರು ಬೀದಿಗಿಳಿದಂತೆಯೇ ಈ ಚಳುವಳಿಯೂ ಇರುತ್ತದೆ ಎಂದು ಕಾಸಮಿಯವರು ಹೇಳಿದ್ದಾರೆ.
🚨 “Withdraw the Waqf Bill or we’ll hit the streets!” – Threat by Mufti Mohammad Akbar Qasmi of Jamiat Ulema-e-Hind
📜 The Bill was passed by Parliament, yet no one dares call him anti-democratic?
❓What right do those who reject laws made by Parliament—and threaten to overturn… pic.twitter.com/nVOu1jEgPo
— Sanatan Prabhat (@SanatanPrabhat) April 4, 2025
ಅವರು ಮುಂದುವರಿದು,
1. ನಮ್ಮ ಹೋರಾಟ ಮುಂದುವರಿಯುತ್ತದೆ. ಸಂವಿಧಾನವು ನೀಡಿರುವ ಹಕ್ಕುಗಳ ಪ್ರಕಾರ ನಾವು ನಮ್ಮ ಧ್ವನಿಯನ್ನು ಎತ್ತುತ್ತೇವೆ. ಯಾವುದೇ ಪರಿಸ್ಥಿತಿಯಲ್ಲೂ ಈ ಮಸೂದೆಯನ್ನು ಹಿಂಪಡೆಯಬೇಕು, ಇದಕ್ಕಾಗಿ ನಾವು ಪ್ರಯತ್ನಿಸುತ್ತೇವೆ; ಏಕೆಂದರೆ ಈ ಮಸೂದೆಯ ವಿರುದ್ಧ ಮುಸ್ಲಿಮರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
2. ಜನರು ಬೀದಿಗಿಳಿಯಲು ಸಿದ್ಧತೆ ನಡೆಸುತ್ತಿದ್ದಾರೆ. ಮುಸ್ಲಿಮರಿಗೆ ಈ ರೀತಿ ಕಿರುಕುಳ ನೀಡಿದರೆ ಪರಿಸ್ಥಿತಿ ಏನು ಬೇಕಾದರೂ ಆಗಬಹುದು. ಹಿಂದೂಸ್ತಾನವು ಗಂಗಾ-ಜಮುನಾ ಸಂಸ್ಕೃತಿಯ ದೇಶವಾಗಿದೆ. ವಕ್ಫ್ ಮಸೂದೆಯಿಂದ ಈ ಸಂಸ್ಕೃತಿಗೆ ಹಾನಿಯಾಗುವುದು, ಎಂದು ಹೇಳಿದರು.
“ದಾರಾ ಶಿಕೋಹ್ ಫೌಂಡೇಶನ್” ನಿಂದ ಈ ಮಸೂದೆಗೆ ಬೆಂಬಲ“ದಾರಾ ಶಿಕೋಹ್ ಫೌಂಡೇಶನ್”ನ ಅಧ್ಯಕ್ಷ ಆಮಿರ್ ರಶೀದರವರು ವಕ್ಫ್ ಮಸೂದೆಯನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಅವರು ಮಾತನಾಡುತ್ತ, ಈ ಕಾನೂನಿನಿಂದ ಬಡ ಮುಸಲ್ಮಾನರಿಗೆ ಲಾಭವಾಗುವುದು. ಬಡ ಮುಸ್ಲಿಂ ಸಮುದಾಯಗಳ ಮಕ್ಕಳಿಗೆ ವಕ್ಫ್ ಆಸ್ತಿಗಳಿಂದ ವಿದ್ಯಾರ್ಥಿವೇತನ ಸಿಗುವುದು. ವಿಧವೆಯರಿಗೆ ಪಿಂಚಣಿ ನೀಡಲಾಗುವುದು. ಶಾಲಾ-ಕಾಲೇಜುಗಳು ತೆರೆಯಲಿವೆ. ಇಲ್ಲಿಯವರೆಗೆ, ಕೆಲವರು ವಕ್ಫ್ ನ ಆಸ್ತಿಯನ್ನು ಆಕ್ರಮಿಸಿಕೊಂಡಿದ್ದರು, ಈಗ ಅದಕ್ಕೆ ಬೀಗ ಬೀಳುವುದು. ಸರಕಾರದ ಈ ಕ್ರಮ ಶ್ಲಾಘನೀಯವಾಗಿದೆ, ಎಂದು ಹೇಳಿದರು. |
ಸಂಪಾದಕೀಯ ನಿಲುವುಸಂಸತ್ತು ಅಂಗೀಕರಿಸಿರುವ ಮಸೂದೆಯನ್ನು ವಿರೋಧಿಸುವ ಮುಫ್ತಿ ಮೊಹಮ್ಮದ ಅಕ್ಬರ ಕಾಸಮಿಯವರನ್ನು ಈಗ ಯಾರೂ ಪ್ರಜಾಪ್ರಭುತ್ವ ದ್ರೋಹಿ ಎಂದು ಏಕೆ ಕರೆಯುತ್ತಿಲ್ಲ ? ಸಂಸತ್ತು ಮಾಡಿರುವ ಕಾನೂನುಗಳನ್ನು ಪಾಲಿಸದವರಿಗೆ ಮತ್ತು ಅವುಗಳನ್ನು ರದ್ದುಗೊಳಿಸುವ ಬೆದರಿಕೆ ಹಾಕುವವರಿಗೆ ಈ ದೇಶದಲ್ಲಿ ವಾಸಿಸುವ ಹಕ್ಕಿದೆಯೇ ? |