|
ನವದೆಹಲಿ – ಎಂ.ಎಫ್. ಹುಸೇನ್ ನ ಆಕ್ಷೇಪಾರ್ಹ ಚಿತ್ರಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ಓರ್ವ ವ್ಯಕ್ತಿಯ ಚಿಂತೆಯನ್ನು ಇಡೀ ಹಿಂದೂ ಸಮಾಜದ ಚಿಂತೆಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ದೆಹಲಿ ಆರ್ಟ್ ಗ್ಯಾಲರಿಯ ವಕೀಲ ಮಕರಂದ್ ಅಡ್ಕರ್ ದೆಹಲಿ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ. ಈ ಆರ್ಟ್ ಗ್ಯಾಲರಿಯಲ್ಲಿ ಕೆಲವು ತಿಂಗಳ ಹಿಂದೆ ಎಂ.ಎಫ್. ಹುಸೇನ್ ಅವರ ಹಿಂದೂ ದೇವತೆಗಳ ಆಕ್ಷೇಪಾರ್ಹ ಚಿತ್ರಗಳ ಪ್ರದರ್ಶನವನ್ನು ವಿರೋಧಿಸಿ ವಕೀಲೆ ಅಮಿತಾ ಸಚ್‌ದೇವ್ ಅರ್ಜಿ ಸಲ್ಲಿಸಿ ಗ್ಯಾಲರಿ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿದ್ದಾರೆ. ಅದರ ವಿಚಾರಣೆಯ ಸಂದರ್ಭದಲ್ಲಿ ಗ್ಯಾಲರಿಯ ವಕೀಲರು ವಾದ ಮಂಡಿಸುತ್ತಿದ್ದರು.
ವಕೀಲ ಅಡ್ಕರ್ ತಮ್ಮ ವಾದದಲ್ಲಿ,
೧. ಆರ್ಟ್ ಗ್ಯಾಲರಿಯ ಪ್ರದರ್ಶನದಲ್ಲಿ ೩೦ ದಿನಗಳವರೆಗೆ ರೇಖಾಚಿತ್ರಗಳು ಇದ್ದವು. ಸಾವಿರಾರು ಜನರು ಚಿತ್ರಗಳನ್ನು ನೋಡಿದ್ದಾರೆ. ದೂರುದಾರರನ್ನು (ವಕೀಲೆ ಅಮಿತಾ ಸಚ್‌ದೇವ್) ಹೊರತುಪಡಿಸಿ ಯಾರೂ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಅವರ ಚಿಂತೆಗಳನ್ನು ಇಡೀ ಹಿಂದೂ ಸಮುದಾಯದ ಚಿಂತೆಗಳೆಂದು ಪರಿಗಣಿಸಲು ಸಾಧ್ಯವಿಲ್ಲ. ಕಲೆಯನ್ನು ಅರ್ಥಮಾಡಿಕೊಳ್ಳಲು ನೀವು ನಿಮ್ಮ ಮೆದುಳನ್ನು ಸ್ವಲ್ಪ ವಿಸ್ತರಿಸಬೇಕಾಗುತ್ತದೆ. (ಹಿಂದೂಗಳು ಸಹಿಷ್ಣುಗಳಾಗಿರುವುದರಿಂದ ಈ ವಾದವನ್ನು ಮಂಡಿಸಲಾಗಿದೆ, ಇಲ್ಲಿ ಇತರ ಧರ್ಮಗಳ ಉಲ್ಲೇಖವಿದ್ದರೆ, ವಾದ ಮಂಡಿಸಿದವರ ಮೆದುಳು ಉಳಿಯುತ್ತಿತ್ತೇ? – ಸಂಪಾದಕರು)
೨. ಹುಸೇನ್ ಈ ಹಿಂದೆ ದೇವತೆಗಳ ಬೆತ್ತಲೆ ಚಿತ್ರಗಳನ್ನು ರಚಿಸಿದ್ದರು. ಅವರ ವಿರುದ್ಧ ಅನೇಕ ದೂರುಗಳು ಇದ್ದವು. ಅವರು ಎಂದಿಗೂ ಕ್ಷಮೆಯಾಚಿಸಲಿಲ್ಲ. (ಕ್ಷಮೆಯಾಚಿಸಲಿಲ್ಲ; ಆದರೆ ಹುಸೇನ್ ದೇಶ ತೊರೆದು ಕತಾರ್‌ಗೆ ಪಲಾಯನ ಮಾಡಬೇಕಾಯಿತು ಮತ್ತು ಅಲ್ಲಿಯೇ ಅವರು ಮರಣ ಹೊಂದಿದರು, ಇದು ಕೂಡಾ ಇತಿಹಾಸ! – ಸಂಪಾದಕರು) ಇದು ಸನಾತನ ಧರ್ಮದೊಂದಿಗೆ ವ್ಯವಹರಿಸುವ ಮಾರ್ಗವಲ್ಲ. (ಸನಾತನ ಧರ್ಮದ ಪೂಜ್ಯ ಭಾವನೆಗಳನ್ನು ಅವಮಾನಿಸುವ ಮಾರ್ಗ ಸರಿಯಾಗಿದೆ ಎಂದು ದೆಹಲಿ ಆರ್ಟ್ ಗ್ಯಾಲರಿ ಭಾವಿಸುತ್ತದೆಯೇ? – ಸಂಪಾದಕರು) ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶ ದಾಸ್, ಆರ್ಟ್ ಗ್ಯಾಲರಿಯ ಮಿತಿಗಳಲ್ಲಿ ಯಾವುದೇ ರೀತಿಯ ಸೆನ್ಸಾರ್‌ಶಿಪ್ ಅನ್ವಯಿಸುತ್ತದೆಯೇ? ಎಂದು ಪ್ರಶ್ನಿಸಿದರು.
೩. ವಕೀಲ ಅಡ್ಕರ್, ಕಾನೂನು ಸ್ವಯಂ-ಸೆನ್ಸಾರ್‌ಶಿಪ್ ಅನ್ನು ವಿಧಿಸುತ್ತದೆ ಎಂದು ಉತ್ತರಿಸಿದರು. ಯಾವುದೇ ಅಶ್ಲೀಲ ಚಿತ್ರವನ್ನು ರಚಿಸಿ ಬ್ಯಾಗ್‌ನಲ್ಲಿ ಇರಿಸಬಹುದು; ಆದರೆ ಅದು ಬ್ಯಾಗ್‌ನಿಂದ ಹೊರಬಿದ್ದ ಕ್ಷಣದಲ್ಲಿ ಸಾರ್ವಜನಿಕವಾಗುತ್ತದೆ, ಅಲ್ಲಿಯೇ ಸಮಸ್ಯೆ ಇರುತ್ತದೆ. ನನ್ನ ದೇವರುಗಳನ್ನು (ಹಿಂದೂ ದೇವತೆಗಳನ್ನು) ಬಿಡಿ ಎಂದು ನಾನು ಹೇಳುತ್ತಿದ್ದೇನೆ. ಗೋಡೆಯ ಮೇಲೆ ಚಿತ್ರ ಹಾಕಿದ ವ್ಯಕ್ತಿಗೆ ಅದರ ಪರಿಣಾಮಗಳು ತಿಳಿದಿರಲಿಲ್ಲ ಎಂದು ನಾವು ಭಾವಿಸಬಹುದೇ?
ನಂತರ ನ್ಯಾಯಾಧೀಶ ದಾಸ ವಿಚಾರಣೆಯನ್ನು ಏಪ್ರಿಲ್ ೨೧ಕ್ಕೆ ಮುಂದೂಡಿದರು.
ಏನು ಪ್ರಕರಣ?
ಡಿಸೆಂಬರ್ ೪, ೨೦೨೪ ರಂದು, ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ದೆಹಲಿ ಆರ್ಟ್ ಗ್ಯಾಲರಿಯಲ್ಲಿ ಎಂ.ಎಫ್. ಹುಸೇನ್ ಅವರ ಚಿತ್ರಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಅದರಲ್ಲಿ ಆಕ್ಷೇಪಾರ್ಹ ಚಿತ್ರಗಳು ಕೂಡಾ ಇದ್ದವು. ಈ ಬಗ್ಗೆ ವಕೀಲೆ ಅಮಿತಾ ಸಚದೇವ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಮಾಹಿತಿ ತಿಳಿದ ಕೂಡಲೇ ಆರ್ಟ್ ಗ್ಯಾಲರಿ ಆಕ್ಷೇಪಾರ್ಹ ಚಿತ್ರಗಳನ್ನು ಪ್ರದರ್ಶನದಿಂದ ತೆಗೆದುಹಾಕಿತು ಮತ್ತು ಅವುಗಳನ್ನು ಪ್ರದರ್ಶಿಸಲಾಗಿಲ್ಲ ಎಂದು ಹೇಳಿಕೊಂಡಿತು. ನಂತರ ಸಚದೇವ ಪಟಿಯಾಲಾ ಹೌಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ಅವರು ಪ್ರಕರಣ ದಾಖಲಿಸಲು ನಿರಾಕರಿಸಿದರು; ಆದರೆ ಆಕ್ಷೇಪಾರ್ಹ ಚಿತ್ರಗಳನ್ನು ವಶಪಡಿಸಿಕೊಳ್ಳಲು ಆದೇಶಿಸಿದರು. ದೆಹಲಿ ಹೈಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಿ ಪ್ರಕರಣ ದಾಖಲಿಸುವಂತೆ ಕೋರಲಾಗಿದೆ.
Delhi Art Gallery(DAG)'s , shocking justification for displaying M.F. Husain’s controversial art:
"An individual Hindu’s concern is not the collective concern of Hindu society."
DAG, which is showcasing paintings by Hindu-hater M.F. Husain — known for his derogatory depictions… https://t.co/jWzmiwFb3s pic.twitter.com/MtvEGDQDj1
— Sanatan Prabhat (@SanatanPrabhat) April 5, 2025
ಸಂಪಾದಕೀಯ ನಿಲುವು
|