9 ವರ್ಷಗಳ ನಂತರ ತೀರ್ಪು
ಪನವೆಲ್ – ಕೊಲ್ಹಾಪುರ ಜಿಲ್ಲೆಯ ಆಳತೆ (ತಾಲೂಕು ಹಾತಕಣಂಗಲೆ) ಇಲ್ಲಿನ ಸಹಾಯಕ ಪೊಲೀಸ್ ನಿರೀಕ್ಷಕಿ ಅಶ್ವಿನಿ-ಗೋರೆ ಕೊಲೆ ಪ್ರಕರಣದಲ್ಲಿ ವಜಾಗೊಂಡ ಹಿರಿಯ ಪೊಲೀಸ್ ನಿರೀಕ್ಷಕ ಅಭಯ ಕುರುಂದಕರ್ ಅವರ ಮೇಲಿನ ಆರೋಪಗಳು ಸಾಬೀತಾಗಿ ಅವರನ್ನು ದೋಷಿ ಎಂದು ತೀರ್ಮಾನಿಸಲಾಗಿದೆ. ಅವರೊಂದಿಗೆ ಅವರ ಸಹಚರರಾದ ಕುಂದನ್ ಭಂಡಾರಿ ಮತ್ತು ಮಹೇಶ್ ಪಾಟೀಲ್ ಅವರನ್ನೂ ದೋಷಿ ಎಂದು ತೀರ್ಮಾನಿಸಲಾಗಿದೆ. ಈ ಪ್ರಕರಣದ ಮತ್ತೊಬ್ಬ ಆರೋಪಿ ರಾಜೇಶ್ ಪಾಟೀಲ್ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯವು ನಿರ್ದೋಷಿ ಎಂದು ಬಿಡುಗಡೆ ಮಾಡಿದೆ. ಪನ್ವೇಲ್‌ನ ಸೆಷನ್ಸ್ ನ್ಯಾಯಾಲಯವು ಏಪ್ರಿಲ್ ೫ ರಂದು ಈ ತೀರ್ಪು ನೀಡಿದೆ. ಏಪ್ರಿಲ್ ೧೧ ರಂದು ಎಲ್ಲರಿಗೂ ಶಿಕ್ಷೆ ವಿಧಿಸಲಾಗುವುದು.
ಅಶ್ವಿನಿ ಬಿದ್ರೆ-ಗೋರೆ ಅವರನ್ನು ಏಪ್ರಿಲ್ ೧೧, ೨೦೧೬ ರಂದು ಕೊಲೆ ಮಾಡಿ ಅವರ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ವಸಾಯಿಯ ಖಾಡಿಯಲ್ಲಿ ಎಸೆಯಲಾಗಿತ್ತು. ಈ ಪ್ರಕರಣದಲ್ಲಿ ಡಿಸೆಂಬರ್ ೭, ೨೦೧೭ ರಂದು ಥಾಣೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂದಿನ ಪೊಲೀಸ್ ನಿರೀಕ್ಷಕ ಅಭಯ ಕುರುಂದಕರ್ ಅವರನ್ನು ಬಂಧಿಸಲಾಗಿತ್ತು. ೯ ವರ್ಷಗಳ ನಂತರ ಈ ಪ್ರಕರಣದ ತೀರ್ಪು ಹೊರಬಿದ್ದಿದೆ.
Ex-Police Inspector Abhay Kurundkar found guilty in the murder of Assistant Police Inspector Ashwini Bidre-Gore! ⚖️
When justice is delayed this long, is it wrong for people to feel it’s no justice at all?
Delayed justice is still injustice.
VC: @ians_india pic.twitter.com/RtetYIBXby
— Sanatan Prabhat (@SanatanPrabhat) April 5, 2025
ಸಂಪಾದಕೀಯ ನಿಲುವುತಡವಾದ ನ್ಯಾಯವು ಅನ್ಯಾಯವೆಂದು ಯಾರಾದರೂ ಭಾವಿಸಿದರೆ, ಅದು ತಪ್ಪೇ? |