ದೇವರ ಭಕ್ತರ ವಿಷಯದಲ್ಲಿ ಕಲಿಯುಗದಲ್ಲಿಯ ಬುದ್ಧಿಜೀವಿಗಳ ಸ್ಥಿತಿ !
‘ಯಾರು ದೇವರಿಗೆ ಇಷ್ಟವಾಗಿರುವನೋ ಅವನು ಬುದ್ಧಿಜೀವಿಗಳಿಗೆ ಇಷ್ಟ ವಾಗಿರುವುದಿಲ್ಲ.’
ಪಾಶ್ಚಾತ್ಯ ಸಂಸ್ಕೃತಿಯನ್ನು ಸ್ವೀಕರಿಸಿ ಸಮಾಜವು ವಿನಾಶದ ಕಡೆಗೆ ಹೋಗುತ್ತಿದೆ
ಹಿಂದಿನ ಪೀಳಿಗೆಯಲ್ಲಿ ವೈಚಾರಿಕ ಅಂತರ (ಜನರೇಶನ ಗ್ಯಾಪ್) ಇರಲಿಲ್ಲ. ಪ್ರತಿಯೊಂದು ಪೀಳಿಗೆಯು ಮೊದಲಿನ ಪೀಳಿಗೆಯೊಂದಿಗೆ ಸಾಮರಸ್ಯದಿಂದ ಇರುತ್ತಿತ್ತು. ಅಜ್ಜ, ಮುತ್ತಜ್ಜರಿಂದ ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಒಟ್ಟಿಗೆ ಇರುತ್ತಿದ್ದರು. ಹಿಂದೂಗಳು ಪಾಶ್ಚಾತ್ಯ ಸಂಸ್ಕೃತಿಯನ್ನು ಅಂಗೀಕರಿಸಿದ್ದರಿಂದ ೨ ಪೀಳಿಗೆಯ ಅಂದರೆ ತಂದೆ-ತಾಯಿ ಹಾಗೂ ಮಗ-ಸೊಸೆ ಒಬ್ಬರಿಗೊಬ್ಬರು ಸಾಮರಸ್ಯದಿಂದ ಇರಲು ಆಗುತ್ತಿಲ್ಲ. ಈಗ ಗಂಡ-ಹೆಂಡತಿಯ ನಡುವೆಯೂ ಪರಸ್ಪರ ಹೊಂದಾಣಿಕೆಯಾಗುವುದಿಲ್ಲ. ಮದುವೆಯ ನಂತರ ಸ್ವಲ್ಪ ಸಮಯದಲ್ಲಿಯೇ ವಿಚ್ಛೇದನೆ ಪಡೆಯುತ್ತಾರೆ.
ಈಗಲಾದರೂ ಬುದ್ಧಿಜೀವಿಗಳ ಕಣ್ಣು ತೆರೆಯಬಹುದೇ ?
ಕಾಗದದ ತಯಾರಿಸಿದ ಶ್ರೀಗಣೇಶಮೂರ್ತಿಯು ಎಷ್ಟು ಹಾನಿಕರವಾಗಿದೆ, ಇದನ್ನು ವಿಜ್ಞಾನವು ಸಿದ್ಧ ಪಡಿಸಿರುವುದರಿಂದ ಹಿಂದೂ ಧರ್ಮದಲ್ಲಿ ಹೇಳಿದ ಪ್ರತಿಯೊಂದು ವಿಷಯವು ಎಷ್ಟು ವೈಜ್ಞಾನಿಕವಾಗಿದೆ ಎಂದು ಸಿದ್ಧವಾಗಿದೆ. ಈಗಲಾದರೂ ಬುದ್ಧಿಜೀವಿಗಳು ಕಣ್ಣು ತೆರೆಯುವರೇ ?
ಸ್ವಾತಂತ್ರ್ಯದಿಂದ ಇದುವರೆಗೆ ಭಾರತದ ಒಂದೇ ಒಂದು ರಾಜಕೀಯ ಪಕ್ಷವು ಹಿಂದೂಗಳಿಗೆ ಹಿಂದೂ ಧರ್ಮ ಹಾಗೂ ಸಾಧನೆಯನ್ನು ಕಲಿಸದಿರುವುದರಿಂದ ದೇಶದಲ್ಲಿ ಭ್ರಷ್ಟಾಚಾರ ಹಾಗೂ ಎಲ್ಲ ರೀತಿಯ ಅಪರಾಧಗಳು ತುಂಬಾ ಹೆಚ್ಚಾಗಿವೆ, ಇದು ಯಾವುದೇ ಸರಕಾರಕ್ಕೆ ಏಕೆ ತಿಳಿಯಲಿಲ್ಲ ?
ಯುಗಾನುಯುಗಗಳಿಂದ ಸಂಸ್ಕೃತದ ವ್ಯಾಕರಣವು ಹಾಗೆಯೇ ಇದೆ. ಅದರಲ್ಲಿ ಯಾರೂ ಬದಲಾವಣೆಯನ್ನು ಮಾಡಿಲ್ಲ. ಇದರ ಕಾರಣವೆಂದರೆ ಅದು ಮೊದಲಿನಿಂದಲೂ ಪರಿಪೂರ್ಣವಾಗಿದೆ. ತದ್ವಿರುದ್ಧ ಜಗತ್ತಿನ ಬೇರೆಲ್ಲಾ ಭಾಷೆಗಳ ವ್ಯಾಕರಣವು ಬದಲಾಗುತ್ತಿರುತ್ತದೆ.
ಹೆಸರೇ ಆಂಗ್ಲ ಭಾಷೆಯಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ದೇಶಾಭಿಮಾನ ಎಷ್ಟಿರಬಹುದು? ದೇಶ ಸ್ವಾತಂತ್ರ್ಯವಾಗಿ ಇಂದಿಗೆ ೭೪ ವರ್ಷಗಳಾದರೂ ಈ ಪಕ್ಷವು ಮಾಡಿದ ಕಾರ್ಯದಿಂದ ಇದು ಸಿದ್ಧವಾಗುತ್ತದೆ.ದೇವಸ್ಥಾನದಲ್ಲಿಯ ಇರುವವರು ದರ್ಶನಾರ್ಥಿಗಳಿಗೆ ದರ್ಶನ ಮಾಡಿಸುವ ಹೊರತು ಬೇರೇನು ಮಾಡುತ್ತಾರೆ ? ಅವರು ದರ್ಶನಾರ್ಥಿಗಳಿಗೆ ಧರ್ಮಶಿಕ್ಷಣವನ್ನು ನೀಡಿದ್ದರೆ, ಸಾಧನೆಯನ್ನು ಕಲಿಸಿದ್ದರೆ, ಹಿಂದೂಗಳ ಹಾಗೂ ಭಾರತದ ಸ್ಥಿತಿಯು ಈ ರೀತಿ ದಯನೀಯವಾಗುತ್ತಿರಲಿಲ್ಲ.
– (ಪರಾತ್ಪರ ಗುರು) ಡಾ. ಆಠವಲೆ