Congress Spokes Person Demand : ‘ಹಿಂದೂಗಳಿಗಾಗಿ ಗ್ರಾಮವನ್ನು ನಿರ್ಮಿಸುತ್ತಿದ್ದರೆ, ಮುಸಲ್ಮಾನ, ಕ್ರಿಶ್ಚಿಯನ್ನ ಮತ್ತು ಸಿಖ್ಖ ಇವರಿಗಾಗಿ ಕೂಡ ಗ್ರಾಮವನ್ನು ನಿರ್ಮಿಸಬೇಕು!’

ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಇವರ ಹಿಂದೂ ಗ್ರಾಮದ ಬೇಡಿಕೆಯ ನಂತರ ಕಾಂಗ್ರೆಸ್ ವಕ್ತಾರ ಅಬ್ಬಾಸ್ ಹಫೀಜ್ ಆಗ್ರಹ !

ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಮತ್ತು ಕಾಂಗ್ರೆಸ್ ವಕ್ತಾರ ಅಬ್ಬಾಸ್ ಹಫೀಜ್

ಛತ್ತರಪುರ (ಮಧ್ಯಪ್ರದೇಶ) – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ಇಲ್ಲಿ ಹಿಂದೂ ಗ್ರಾಮದ ಅಡಿಪಾಯ ಹಾಕಿದ ನಂತರ, ಕಾಂಗ್ರೆಸ್ ವಕ್ತಾರ ಅಬ್ಬಾಸ್ ಹಫೀಜ್ ಇದರ ಬಗ್ಗೆ ಟೀಕಿಸಿದ್ದಾರೆ. ದೇಶದ ಸಂವಿಧಾನವು ಧರ್ಮದ ಆಧಾರದ ಮೇಲೆ ಗ್ರಾಮಗಳನ್ನು ಸ್ಥಾಪಿಸಲು ಮತ್ತು ನಿರ್ಮಿಸಲು ಅನುಮತಿಸಿದರೆ, ತನಗೆ ಮುಸ್ಲಿಂ ಗ್ರಾಮ, ಕ್ರಿಶ್ಚಿಯನ್ ಗ್ರಾಮ ಮತ್ತು ಸಿಖ್ ಗ್ರಾಮವನ್ನು ನಿರ್ಮಿಸಲು ಅನುಮತಿ ನೀಡಬೇಕು ಎಂದು ಅಬ್ಬಾಸ್ ಹಫೀಜ್ ರಾಜ್ಯದ ಮುಖ್ಯಮಂತ್ರಿ ಮೋಹನ ಯಾದವ ಇವರಿಗೆ ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ ಮುಂತಾದ ಇಸ್ಲಾಮಿಕ್ ದೇಶಗಳಲ್ಲಿ ಇತರ ಧರ್ಮಗಳಿಗೆ ಒಂದು ಗ್ರಾಮವನ್ನಾದರೂ ನಿರ್ಮಿಸಲಾಗಿದೆಯೇ? ಇದಕ್ಕೆ ಅಬ್ಬಾಸ್ ಉತ್ತರಿಸುತ್ತಾರೆಯೇ? ಬದಲಾಗಿ, ಅವರ ನರಸಂಹಾರ ಮಾಡಲಾಗಿದೆ ಮತ್ತು ಆಗುತ್ತಿದೆ !