ಕೋಲಕಾತಾ: ಪ್ರಸಿದ್ಧ ಜಾದವಪುರ ವಿಶ್ವವಿದ್ಯಾಲಯದಲ್ಲಿ ಶ್ರೀರಾಮನವಮಿ ಆಚರಿಸಲು ನಿರಾಕರಣೆ!

  • ವಿಶ್ವವಿದ್ಯಾಲಯದಲ್ಲಿ ಈದ್ ಮತ್ತು ಇಫ್ತಾರ್ ಔತಣಕೂಟಗಳನ್ನು ಆಯೋಜಿಸಬಹುದಾದರೆ, ಶ್ರೀರಾಮನವಮಿಯನ್ನು ಏಕೆ ಆಚರಿಸಬಾರದು? – ವಿದ್ಯಾರ್ಥಿಗಳ ಪ್ರಶ್ನೆ

  • ಕಳೆದ ವರ್ಷವೂ ಅನುಮತಿ ನಿರಾಕರಿಸಲಾಗಿತ್ತು!

ಕೋಲಕಾತಾ (ಪಶ್ಚಿಮ ಬಂಗಾಳ) – ಜಾದವಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಶ್ರೀರಾಮನವಮಿ ಆಚರಿಸುವ ಯೋಜನೆಯನ್ನು ಘೋಷಿಸಿದ್ದರು; ಆದರೆ ವಿಶ್ವವಿದ್ಯಾಲಯವು ಶ್ರೀರಾಮನವಮಿ ಉತ್ಸವವನ್ನು ಆಚರಿಸಲು ಅನುಮತಿ ನೀಡಲಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ವಿಶ್ವವಿದ್ಯಾಲಯದಲ್ಲಿ ಈದ್ ಆಚರಿಸಬಹುದು, ಇಫ್ತಾರ್ ಔತಣಕೂಟವನ್ನು ಆಯೋಜಿಸಬಹುದು, ಆದರೆ ಶ್ರೀರಾಮನವಮಿ ಉತ್ಸವವನ್ನು ಏಕೆ ಆಚರಿಸಬಾರದು ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.

1. ಏಪ್ರಿಲ್ 3 ರಂದು ಜಾದವಪುರ ವಿಶ್ವವಿದ್ಯಾಲಯದ ಕುಲಪತಿಗಳ ಕಚೇರಿಯಲ್ಲಿ ನಡೆದ ಸಭೆಯ ನಂತರ, ಶ್ರೀರಾಮನವಮಿ ಆಚರಿಸಲು ಅನುಮತಿ ನಿರಾಕರಿಸಲಾಯಿತು. ಇದಕ್ಕಾಗಿ 2 ಕಾರಣಗಳನ್ನು ನೀಡಲಾಗಿದೆ. ಒಂದು: ಕಳೆದ ವರ್ಷ ಇದಕ್ಕೆ ಅನುಮತಿಯನ್ನು ನೀಡಲಾಗಿರಲಿಲ್ಲ. ಎರಡನೆಯದಾಗಿ: ಪ್ರಸ್ತುತ ಕುಲಪತಿಗಳು ಇಲ್ಲದಿರುವುದರಿಂದ ಹೊಸ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಿದೆ.

2. ಶ್ರೀರಾಮನವಮಿ ಉತ್ಸವದ ಆಯೋಜಕರಾದ ವಿದ್ಯಾರ್ಥಿ ಸೋಮಸೂರ್ಯ ಬ್ಯಾನರ್ಜಿ ಈ ಬಗ್ಗೆ ಮಾತನಾಡಿ, ಈ ವರ್ಷ ನಾವು ರಾಮನವಮಿ ಆಚರಿಸಲು ನಿರ್ಧರಿಸಿದ್ದೇವೆ. ಈ ಬಾರಿ ನಾವು ಹಿಂದೆ ಸರಿಯುವುದಿಲ್ಲ. ಜಾದವಪುರ ವಿಶ್ವವಿದ್ಯಾಲಯದಲ್ಲಿ ಜನರು ಇಫ್ತಾರ್ ಔತಣಕೂಟವನ್ನು ಆಯೋಜಿಸಬಹುದಾದರೆ, ನಾವು ಶ್ರೀರಾಮನವಮಿಯನ್ನು ಏಕೆ ಆಚರಿಸಬಾರದು? ನಮ್ಮನ್ನು ತಡೆಯಲು ಪ್ರಯತ್ನಿಸುವವರ ವಿರುದ್ಧ ನಾವು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಖಡಕ್ ಆಗಿ ಹೇಳಿದರು.

ಜಿಹಾದಿ ವಿದ್ಯಾರ್ಥಿ ಸಂಘಟನೆಯ ವಿರೋಧ

‘ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ’ ಎಂಬ ಕಟ್ಟಾ ಇಸ್ಲಾಮಿ ವಿಚಾರಧಾರೆಯ ವಿದ್ಯಾರ್ಥಿ ಸಂಘಟನೆಯ ಸದಸ್ಯರೊಬ್ಬರು ಈ ಕುರಿತು ಮಾತನಾಡಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ; ಆದರೆ ವಿಶ್ವವಿದ್ಯಾಲಯದ ಆವರಣದಲ್ಲಿ ಶ್ರೀರಾಮನವಮಿ ಆಚರಿಸಲು ನಾವು ಅವರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಪಶ್ಚಿಮ ಬಂಗಾಳ ಭಾರತದಲ್ಲಿಲ್ಲ, ಬದಲಾಗಿ ಬಾಂಗ್ಲಾದೇಶದಲ್ಲಿದೆ ಎಂಬಂತಹ ಪರಿಸ್ಥಿತಿ ಅಲ್ಲಿನ ಪ್ರತೀ ಘಟನೆಯಿಂದ ಗಮನಕ್ಕೆ ಬರುತ್ತದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೊಂದೇ ಪರಿಹಾರ!