ಮಹಾರಾಷ್ಟ್ರದಲ್ಲಿ ಶೇ. 85 ರಷ್ಟು ಭಿಕ್ಷುಕರು ‘ಉದ್ಯೋಗ’ವೆಂದು ಭಿಕ್ಷೆ ಬೇಡುತ್ತಾರೆ !

  • ಮಹಾರಾಷ್ಟ್ರವು ‘ಭಿಕ್ಷುಕ ಮುಕ್ತ’ವಾಗದ ಹಿಂದಿನ ಅಪರಾಧ ಹಿನ್ನೆಲೆ !

  • 3 ವರ್ಷಗಳಲ್ಲಿ 15 ಸಾವಿರದ 243 ಭಿಕ್ಷುಕರನ್ನು ವಶಕ್ಕೆ ಪಡೆದರೂ ಭಿಕ್ಷುಕರ ಸಂಖ್ಯೆ ಕಡಿಮೆ ಆಗುತ್ತಿಲ್ಲ !

ಮುಂಬಯಿ, ಏಪ್ರಿಲ್ 26 (ಸುದ್ದಿ.) – ಮಹಾರಾಷ್ಟ್ರವನ್ನು ಭಿಕ್ಷುಕರಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಭಿಕ್ಷುಕರನ್ನು ಹಿಡಿಯುವ ಅಭಿಯಾನವನ್ನು ನಡೆಸುತ್ತಿದೆ. ಇದಕ್ಕಾಗಿ ‘ಮಹಾರಾಷ್ಟ್ರ ಭಿಕ್ಷಾಟನೆ ತಡೆ ಕಾಯಿದೆ’ ಮಾಡಲಾಗಿದ್ದು, ಭಿಕ್ಷುಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಶ್ರೀ. ಪ್ರೀತಮ ನಾಚಣಕರ

ಕಳೆದ 3 ವರ್ಷಗಳಲ್ಲಿ ಭಿಕ್ಷುಕರನ್ನು ಹಿಡಿಯಲು 4 ಸಾವಿರದ 205 ‘ಹಿಡಿಯುವ’ ಅಭಿಯಾನವನ್ನು ನಡೆಸಲಾಯಿತು ಮತ್ತು ಅದರಲ್ಲಿ ಸಾವಿರಾರು ಭಿಕ್ಷುಕರನ್ನು ಹಿಡಿಯಲಾಯಿತು; ಆದರೆ ರಾಜ್ಯ ಭಿಕ್ಷುಕ ಮುಕ್ತದಿಂದ ದೂರವಿದ್ದು, ಇದಕ್ಕೆ ವ್ಯತಿರಿಕ್ತವಾಗಿ ಭಿಕ್ಷುಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಕ್ಕೆ ಕಾರಣ ರಾಜ್ಯದಲ್ಲಿ ಶೇ.85 ಭಿಕ್ಷುಕರು ಭಿಕ್ಷೆ ಬೇಡುತ್ತಿರುವುದು ದುರ್ಬಲರೆಂದು ಅಲ್ಲದೇ ‘ಉದ್ಯಮ’ವೆಂದು ಭಿಕ್ಷೆ ಬೇಡುತ್ತಿದ್ದಾರೆ, ಹಾಗೂ ರಾಜ್ಯ ಭಿಕ್ಷುಕ ಮುಕ್ತವಾಗದಿರುವ ಹಿಂದೆ ಅಪರಾಧ ಹಿನ್ನೆಲೆಯೂ ಇದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಆಯುಕ್ತರ ಓರ್ವ ಅಧಿಕಾರಿಯು ದೈನಿಕ ‘ಸನಾತನ ಪ್ರಭಾತ’ಗೆ ಮಾಹಿತಿ ನೀಡಿದರು.

2021-22 ರಿಂದ 2023-24ರ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಭಿಕ್ಷುಕರನ್ನು ಹಿಡಿಯಲು ನಡೆಸಿದ ಬಂಧನದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಸಾವಿರಾರು ಭಿಕ್ಷುಕರಲ್ಲಿ 15 ಸಾವಿರದ 246 ಭಿಕ್ಷುಕರನ್ನು ಸರ್ಕಾರಿ ಭಿಕ್ಷುಕಾಲಯಗಳಲ್ಲಿ ಇರಿಸಲಾಗಿದೆ ಅವರಲ್ಲಿ, 14 ಸಾವಿರದ 630 ಭಿಕ್ಷುಕರು ನಡವಳಿಕೆ ಮತ್ತು ಆರೋಗ್ಯದಲ್ಲಿ ಸುಧಾರಿಸಿದ್ದಾರೆ. 3 ಸಾವಿರದ 849 ಭಿಕ್ಷುಕರನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.