Mazar outside the DC office: ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಮಜಾರ್

  • ಪುಣೆಯ ಜಿಲ್ಲಾಧಿಕಾರಿ ಕಚೇರಿಯ ಹೊರಗಿರುವ ಮಜಾರ್ ಮೇಲೆ ಕ್ರಮ ಕೈಗೊಳ್ಳಲು ಆಗ್ರಹ !

  • ‘ಸುದರ್ಶನ ಮರಾಠಿ’ ಸುದ್ದಿವಾಹಿನಿಯ ಆಗ್ರಹ

(ಸೌಜನ್ಯ – Sudarshan Marathi)

ಪುಣೆ – ನೀವು ಇಲ್ಲಿಯವರೆಗೆ ಅನೇಕ ಸ್ಥಳಗಳಲ್ಲಿ ಅಕ್ರಮ ಮಜಾರಗಳನ್ನು ನೋಡಿರಬೇಕು. ಭೂಮಿ ಜಿಹಾದ್‌ನ ಬಹುತೇಕ ಎಲ್ಲಾ ಉದಾಹರಣೆಗಳನ್ನು ನೋಡಲಾಗಿದೆ; ಆದರೆ ಈಗ ಪುಣೆಯ ಜಿಲ್ಲಾಧಿಕಾರಿ ಕಛೇರಿಯ ಹೊರಗೆ ಈ ಮಜಾರ್  ನಿರ್ಮಿಸಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ ! ಆಡಳಿತದ ಹೊಸ್ತಿಲಲ್ಲೇ ಇಂತಹ ಅಕ್ರಮ ನಿರ್ಮಾಣಗಳು ನಡೆಯುತ್ತಿದ್ದರೆ ಜನತೆ ಯಾರಿಗೆ ಪ್ರಶ್ನೆ ಕೇಳಬೇಕು? ಈ ಮಜಾರ್ ಅಕ್ರಮವಾಗಿದ್ದರೆ ಕೂಡಲೇ ಆಡಳಿತ ಮಂಡಳಿ ಕ್ರಮಕೈಗೊಳ್ಳಬೇಕು ಎಂದು ಸುರೇಶ ಚವಾಣಕೆ ಅವರ ‘ಸುದರ್ಶನ ಮರಾಠಿ’ ಸುದ್ದಿವಾಹಿನಿಯು ‘ಎಕ್ಸ್’ ಖಾತೆಯಲ್ಲಿ ಆಗ್ರಹಿಸಿದೆ. ಈ ನಿಟ್ಟಿನಲ್ಲಿ ಆಡಳಿತ ಯಾವ ಪಾತ್ರ ವಹಿಸುತ್ತದೆ ಎಂಬುದನ್ನು ನಾಗರಿಕರ ನಿಗಾ ಇದೆ.

ಸಂಪಾದಕೀಯ ನಿಲುವು

ಮತಾಂಧರಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಮಜಾರ್ ಕಟ್ಟಲು ಎಷ್ಟು ಧೈರ್ಯ? ಈ ಅಕ್ರಮ ಮಜಾರ ನಿರ್ಮಾಣವಾಗುವವರೆಗೂ ಆಡಳಿತ ನಿದ್ದೆ ಮಾಡುತ್ತಿತ್ತೆ ? ಮಜಾರ್ ನಿರ್ಮಾಣದ ಜೊತೆಗೆ ಅದಕ್ಕೆ ಜವಾಬ್ದಾರರಾಗಿರುವ ಆಡಳಿತ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ! ಹಿಂದೂಗಳು ಈಗಲಾದರೂ ಜಾಗೃತರಾಗಿ ಸಂಘಟಿತರಾಗಬೇಕು ಮತ್ತು ಮತಾಂಧರ ಈ ‘ಲ್ಯಾಂಡ್ ಜಿಹಾದ್’ ಷಡ್ಯಂತ್ರವನ್ನು ಮುರಿಯಬೇಕು !