ರಸ್ತೆಗಳಲ್ಲಿ ನಮಾಜ ಮಾಡಿದ ವಿರುದ್ಧ ಅಪರಾಧವನ್ನು ದಾಖಲಿಸಿದ ಪೊಲೀಸ್ ಇನ್ಸ್‌ಪೆಕ್ಟರ್‌ ಗೆ ಕಡ್ಡಾಯ ರಜೆ

ಮಂಗಳೂರು – ಕೆಲವು ಮತಾಂಧರು ಕಂಕನಾಡಿ ಮಸೀದಿ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ನಮಾಜ್ ಮಾಡಿದ್ದರಿಂದ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದ ಸ್ವಯಂ ಪ್ರೇರಣೆಯಿಂದ ಅಪರಾಧವನ್ನುmta ದಾಖಲಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ಸೋಮಶೇಖರ್ ಅವರನ್ನು ತಕ್ಷಣವೇ ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ. ಮತಾಂಧರ ಒತ್ತಡವಿದ್ದ ಕಾರಣ ಅವರನ್ನು ರಜೆಯ ಮೇಲೆ ಕಳುಹಿಸಲಾಗಿದೆಯೆಂದು ಹೇಳಲಾಗುತ್ತಿದೆ. (ಹಿಂದೂಗಳ ಮೇಲೆ ಪೌರುಶ ತೋರಿಸುವ ಪೊಲೀಸರು ಮತಾಂಧರ ಎದುರಿಗೆ ತಲೆಬಾಗುತ್ತಾರೆ ಎನ್ನುವುದನ್ನು ಗಮನಿಸಬೇಕಾಗಿದೆ ! – ಸಂಪಾದಕರು) ಈ ಘಟನೆಯ ನಂತರ ಪೊಲೀಸರನ್ನು ಟೀಕಿಸಲಾಗುತ್ತಿದೆ. ಈ ಪ್ರಕರಣದಲ್ಲಿ ಮಂಗಳೂರು ನಗರ ಪೊಲೀಸ ಆಯುಕ್ತ ಅನುಪಮ ಅಗ್ರವಾಲ ಇವರು ಮಾತನಾಡಿ, ಈ ಪ್ರಕರಣದ ಸಂದರ್ಭದಲ್ಲಿ ಸೋಮಶೇಖರ್ ಅವರು ಹಿರಿಯ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ ಸ್ವತಃ ಅಪರಾಧ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ. (ನಿಯಮಗಳ ಪ್ರಕಾರ ಯಾವುದೇ ಕೆಲಸ ಮಾಡಲು ಹಿರಿಯ ಅಧಿಕಾರಿಯ ಅನುಮತಿ ಪಡೆಯಬೇಕಾಗುತ್ತದೆಯೇ ? ಇದರಿಂದ ಕರ್ನಾಟಕದ ಪೊಲೀಸ್ ಪಡೆ ಮತಾಂಧರ ಮತ್ತು ಅಧಿಕಾರದಲ್ಲಿರುವವರ ಕೈಗೊಂಬೆ ಆಗಿರುವುದು ಗಮನಿಸಬೇಕಾಗಿದೆ ! – ಸಂಪಾದಕರು)

ವಿಶ್ವ ಹಿಂದೂ ಪರಿಷತ್ ಮುಖ್ಯಸ್ಥ ಶರಣ ಪಂಪ್‌ವೆಲ ವಿರುದ್ಧ ಅಪರಾಧ ದಾಖಲು!

‘ರಸ್ತೆಯಲ್ಲಿ ಪುನಃ ನಮಾಜ್ ಮಾಡಿದರೆ, ಬಜರಂಗ ದಳ ಕ್ರಮ ಕೈಗೊಳ್ಳಲಿದೆ’ ಎಂದು ಸಾಮಾಜಿಕ ಮಾಧ್ಯಮಗಳಿಂದ ಎಚ್ಚರಿಕೆ ನೀಡಿದ ವಿಶ್ವಹಿಂದೂ ಪರಿಷತ್ ಮುಖ್ಯಸ್ಥ ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಇದಾದ ನಂತರ ಪಂಪ್‌ವೆಲ್ ‘ಇಡೀ ರಾಜ್ಯದಲ್ಲಿ ಆಂದೋಲನ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಪೊಲೀಸರಿಂದ ನ್ಯಾಯಾಲಯದಲ್ಲಿ ಹೊಸ ವರದಿ ಸಲ್ಲಿಕೆ; ನಮಾಜ್ ಮಾಡಿದವರನ್ನು ನಿರಪರಾಧಿಗಳು

ಕಂಕನಾಡಿ ಮಸೀದಿಯ ಎದುರಿನ ರಸ್ತೆಯಲ್ಲಿ ಕೆಲವು ಮತಾಂಧರು ಸಾರ್ವಜನಿಕ ಓಡಾಟವನ್ನು ತಡೆದು ರಸ್ತೆಯಲ್ಲಿ ನಮಾ ಮಾಡುತ್ತಿದ್ದರು. ಪ್ರಾರ್ಥನೆ ಮಾಡುತ್ತಿದ್ದ ಕಾರಣ ಸಾಮಾನ್ಯ ಜನರು ಸಹ ಅವರಿಗೆ ತೊಂದರೆ ನೀಡದೆ ಶಾಂತವಾಗಿದ್ದರು. ಪ್ರಾರ್ಥನೆ ಮಾಡುತ್ತಿರುವಾಗ ಈ ರಸ್ತೆಯಲ್ಲಿ ಹೋಗುವ ವಾಹನಗಳು ಕೂಡ ತಮ್ಮ ವಾಹನವನ್ನು ತಿರುಗಿಸಿಕೊಂಡು ಬೇರೆ ರಸ್ತೆಗೆ ಹೋಗುತ್ತಿದ್ದರು ಎಂದು ಪೊಲೀಸರು ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸುತ್ತಾ, ಆರೋಪಿಗಳು ನಿರಪರಾಧಿ ಎಂದು ಹೇಳಿದೆ.

ರಸ್ತೆಗಳಲ್ಲಿ ನಮಾಜ್ ಮಾಡುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 341, 283, 143 ಮತ್ತು 149 ರ ಅಡಿಯಲ್ಲಿ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣಗಳನ್ನು ದಾಖಲಿಸಿದ್ದಾರೆ; ಆದರೆ ಇದಕ್ಕೆ ಮುಸ್ಲಿಂ ಸಮುದಾಯ ಮತ್ತು ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಮುಖ್ಯಸ್ಥರು ವಿರೋಧ ವ್ಯಕ್ತಪಡಿಸಿದ್ದರಿಂದ ಪೊಲೀಸರು ಮೇಲಿನ ಹೊಸ ವರದಿಯನ್ನು ಸಲ್ಲಿಸಿದ್ದಾರೆ.

ಸಂಪಾದಕೀಯ ನಿಲುವು

ಕಾನೂನುಬಾಹಿರ ಕೃತ್ಯ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಪೋಲೀಸ್ ಅಧಿಕಾರಿಗಳ ಮೇಲೆಯೇ ಈ ರೀತಿ ಅವರ ಕೈಗಳನ್ನು ಕಟ್ಟುತ್ತಿದ್ದರೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮೂರಾಬಟ್ಟೆ ಆಗುವುದು ಖಂಡಿತ