ಹಿರಿಯರು ತಮ್ಮ ಜೀವನವನ್ನು ಜೀವಿಸಿಯಾಗಿದೆ, ಆದ್ದರಿಂದ ಅವರ ಬದಲಾಗಿ ಯುವಕರಿಗೆ ಲಸಿಕೆ ನೀಡಿ !

ಹಿರಿಯ ನಾಗರಿಕರು ದೇಶವನ್ನು ನಡೆಸಲು ಸಾಧ್ಯವಿಲ್ಲ, ನೀವು ಹಿರಿಯ ನಾಗರಿಕರಿಗೆ ಆದ್ಯತೆ ನೀಡಬಾರದು, ಎಂದು ನಾವು ಹೇಳುತ್ತಿಲ್ಲ; ಆದರೆ ಲಸಿಕೆಯ ಕೊರತೆ ಇದ್ದರೆ, ಆದ್ಯತೆಯನ್ನು ನಿಗದಿಪಡಿಸಿ. ಯುವಕರಿಗೆ ಆದ್ಯತೆಯನ್ನು ನೀಡಿ, ಅವರಲ್ಲಿ ದೇಶದ ಭವಿಷ್ಯವಿದೆ, ಎಂದು ದೆಹಲಿ ಉಚ್ಚ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಸಲಹೆಯನ್ನು ನೀಡಿದೆ.

ಕೊರೋನಾದಿಂದ ಗುಣಮುಖರಾದ ವ್ಯಕ್ತಿಗಳಿಗೆ ಕೊರೊನಾ ತಡೆಗಟ್ಟುವ ಲಸಿಕೆಯ ಒಂದು ಡೋಸ್ ಸಾಕು ! – ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಶೋಧನೆ

ಕೊರೊನಾದಿಂದ ಗುಣಮುಖರಾದ ವ್ಯಕ್ತಿಗಳು ಕೊರೊನಾ ಲಸಿಕೆಯ ಮೊದಲನೇ ಡೋಸ್ ನೀಡಿದ ನಂತರ ಅವರ ಶರೀರದಲ್ಲಿ ೧೦ ದಿನದಲ್ಲೇ ಬೇಕಾಗುವಷ್ಟು ಆಂಟಿಬಾಡಿ ತಯಾರಾಗುವುದರಿಂದ ಅವರಿಗೆ ಎರಡನೇಯ ಲಸಿಕೆ ನೀಡುವ ಅವಶ್ಯಕತೆ ಇಲ್ಲ, ಎಂಬ ಮಹತ್ವದ ಸಂಶೋಧನೆಯನ್ನು ಬನಾರಸ ಹಿಂದೂ ವಿಶ್ವವಿದ್ಯಾಲಯದ ಜ್ಯುಲಾಜಿ ವಿಭಾಗದ ಸಂಶೋಧಕರು ಮಾಡಿದ್ದಾರೆ.

ನನ್ನ ಹೋರಾಟ ಅಲೋಪತಿಯಲ್ಲಿನ ಮಾಫಿಯಾಗಳ ವಿರುದ್ಧ ! – ಯೋಗಋಷಿ ರಾಮದೇವ ಬಾಬಾ

ನಾನು ಅಲೋಪತಿ ಮತ್ತು ವೈದ್ಯರ ವಿರೋಧಿಯಲ್ಲ. ಇಂಡಿಯನ್ ಮೆಡಿಕಲ ಅಸೋಸಿಯೇಶನ್ ವಿರುದ್ಧ ಹೋಗುವ ಪ್ರಶ್ನೆಯೇ ಇಲ್ಲ; ಆದರೆ ನಾವು ಈ ಕ್ಷೇತ್ರದ ಮಾಫಿಯಾಗಳನ್ನು ವಿರೋಧಿಸುತ್ತೇವೆ. ಅವರು ೨ ರೂಪಾಯಿ ಮೌಲ್ಯದ ಔಷಧಿಗಳನ್ನು ೨೦೦೦ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದಾರೆ.

ಚೀನಾದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು

ಕೊರೊನಾ ಆರಂಭವಾದ ಚೀನಾದಲ್ಲಿ ಕೊರೋನಾ ಸೋಂಕು ಮತ್ತೆ ಹರಡುತ್ತಿದೆ. ಕೊರೋನಾ ರೋಗಿಗಳು ಮತ್ತೆ ಕಾಣಿಸಿಕೊಂಡಿದ್ದರಿಂದ ಚೀನಾದ ಗ್ವಾಂಗದೊಂಗ ಪ್ರದೇಶದಲ್ಲಿ ಹಲವಾರು ನಿರ್ಬಂಧಗಳನ್ನು ಹೇರಲಾಗಿದೆ.

ಕೊರೋನಾ ಲಸಿಕೆ ತುಂಬಿದ್ದ ಸಿರಿಂಜ್ ಅನ್ನು ಎಸೆದು ಬಿಡುತ್ತಿದ್ದ ಆರೋಗ್ಯ ಸಿಬ್ಬಂದಿ ನೇಹಾ ಖಾನ ಇವರ ಮೇಲೆ ಅಪರಾಧ ದಾಖಲು

ಜಮಾಲಪುರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಸದ ತೊಟ್ಟಿಯಲ್ಲಿ ಕೊರೊನಾ ಲಸಿಕೆ ತುಂಬಿದ ೨೯ ಸಿರಿಂಜ್‍ಗಳು ಪತ್ತೆಯಾಗಿವೆ. ಪೊಲೀಸರು ಇಲ್ಲಿಯ ವ್ಯಾಕ್ಸಿನೇಷನ್ ವಿಭಾಗದ ಮುಖ್ಯಸ್ಥೆ ನೇಹಾ ಖಾನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸೈಫೈ (ಉತ್ತರ ಪ್ರದೇಶ) ದ ಮದ್ಯದಂಗಡಿಗಳ ಹೊರಗೆ ‘ಲಸಿಕೆ ತೆಗೆದುಕೊಂಡವರಿಗೆ ಮಾತ್ರ ಮದ್ಯ ಸಿಗುವುದು’ ಎಂಬ ಸೂಚನೆ !

ಮದ್ಯದ ಅಂಗಡಿಯ ಮುಂದೆ ‘ವ್ಯಾಕ್ಸಿನೇಷನ್ ತೆಗೆದುಕೊಂಡಿರುವ ಪ್ರಮಾಣಪತ್ರವಿಲ್ಲದಿದ್ದರೆ, ನಿಮಗೆ ಮದ್ಯ ಸಿಗುವುದಿಲ್ಲ’, ಎಂಬ ಸೂಚನೆಯನ್ನು ಹಾಕಲಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಹೆಮಕುಮಾರ ಸಿಂಗ ಅವರ ಆದೇಶನುಸಾರ ಅಂಗಡಿಗಳ ಹೊರಗೆ ಸೂಚನೆ ಹಾಕಲಾಗಿದೆ.

ಜಗತ್ತಿನಾದ್ಯಂತ ೧೧೦ ಕೋಟಿ ಜನರು ಧೂಮಪಾನ ಮಾಡುತ್ತಾರೆ !

ಜಗತ್ತಿನಾದ್ಯಂತ ೧೧೦ ಕೋಟಿ ಜನರು ಧೂಮಪಾನ ಮಾಡುತ್ತಾರೆ. ೧೯೯೦ ರ ನಂತರ, ಜಗತ್ತಿನಾದ್ಯಂತ ಧೂಮಪಾನ ಮಾಡುವವರ ಸಂಖ್ಯೆ ೧೫ ಕೋಟಿಯಷ್ಟು ಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಈ ಸಂಖ್ಯೆ ೧೩೦ ಕೋಟಿಗಿಂತ ಹೆಚ್ಚು ಇದೆ. ಪ್ರತಿ ಐದು ಪುರುಷರಲ್ಲಿ ಒಬ್ಬರು ಧೂಮಪಾನ ಸಂಬಂಧಿತ ಕಾಯಿಲೆಗಳಿಂದ ಸಾಯುತ್ತಾರೆ.