ಕೊರೋನಾದಿಂದ ಗುಣಮುಖರಾದ ವ್ಯಕ್ತಿಗಳಿಗೆ ಕೊರೊನಾ ತಡೆಗಟ್ಟುವ ಲಸಿಕೆಯ ಒಂದು ಡೋಸ್ ಸಾಕು ! – ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಶೋಧನೆ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮಾಹಿತಿ ನೀಡಲಾಗಿದೆ !

ಬನಾರಸ್ ಹಿಂದೂ ವಿಶ್ವವಿದ್ಯಾಲಯ

ವಾರಣಾಸಿ (ಉತ್ತರ ಪ್ರದೇಶ) – ಕೊರೊನಾದಿಂದ ಗುಣಮುಖರಾದ ವ್ಯಕ್ತಿಗಳು ಕೊರೊನಾ ಲಸಿಕೆಯ ಮೊದಲನೇ ಡೋಸ್ ನೀಡಿದ ನಂತರ ಅವರ ಶರೀರದಲ್ಲಿ ೧೦ ದಿನದಲ್ಲೇ ಬೇಕಾಗುವಷ್ಟು ಆಂಟಿಬಾಡಿ ತಯಾರಾಗುವುದರಿಂದ ಅವರಿಗೆ ಎರಡನೇಯ ಲಸಿಕೆ ನೀಡುವ ಅವಶ್ಯಕತೆ ಇಲ್ಲ, ಎಂಬ ಮಹತ್ವದ ಸಂಶೋಧನೆಯನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಜ್ಯುಲಾಜಿ ವಿಭಾಗದ ಸಂಶೋಧಕರು ಮಾಡಿದ್ದಾರೆ. ಅವರು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಇಂತಹ ವ್ಯಕ್ತಿಗಳಿಗೆ ಒಂದೇ ಡೋಸ್ ನೀಡುವಂತೆ ಸಲಹೆ ನೀಡಿದ್ದಾರೆ. ಈ ಸಂಶೋಧನೆಯನ್ನು ಅಮೇರಿಕಾದ ಜರ್ನಲ್ ಸೈನ್ಸ್ ಇಮ್ಯುನೊಲಾಜಿಯಲ್ಲಿ ಪ್ರಕಟಿಸಲು ಆಯ್ಕೆ ಮಾಡಲಾಗಿದೆ.

ಜ್ಯಲಾಜಿ ವಿಭಾಗದ ಪ್ರಾ. ಜ್ಞಾನೇಶ್ವರ ಚೌಬೆ, ನ್ಯೂರಾಲಜಿ ವಿಭಾಗದ ಪ್ರಾ. ವಿಜಯನಾಥ ಮಿಶ್ರಾ ಮತ್ತು ಡಾ. ಅಭಿಷೇಕ ಪಾಠಕ ಅವರ ತಂಡ ಈ ಸಂಶೋಧನೆಯನ್ನು ನಡೆಸಿದೆ. ಪ್ರಾ. ಚೌಬೆಯವರು, ೨೦ ಜನರ ಮೇಲೆ ಸಂಶೋಧನೆ ನಡೆಸಿದ ನಂತರ ಈ ಅಂಶವು ಗಮನಕ್ಕೆ ಬಂತು ಎಂದು ಹೇಳಿದರು. ಪ್ರಸ್ತುತ, ದೇಶದಲ್ಲಿ ೨ ಕೋಟಿ ಜನರು ಕೊರೊನಾದಿಂದ ಮುಕ್ತರಾಗಿದ್ದಾರೆ. ಅವರಿಗೆ ಒಂದು ಸಮಯದಲ್ಲಿ ಕೇವಲ ಒಂದು ಡೋಸ್ ನೀಡಿದರೆ, ಲಸಿಕೆ ಕೊರತೆಯನ್ನು ಸ್ವಲ್ಪ ಮಟ್ಟಿಗೆ ನಿವಾರಿಸಬಹುದು ಎಂದು ಹೇಳಿದರು.