ಧನ್ವಂತರಿ ಜಯಂತಿ (ಅಕ್ಟೋಬರ್ ೨೩)

ಧನತ್ರಯೋದಶಿಯ ದಿನ ವ್ಯಾಪಾರಿಗಳು ಕೊಪ್ಪರಿಗೆಯನ್ನು ಪೂಜಿಸುತ್ತಾರೆ. ವ್ಯಾಪಾರಿ ವರ್ಷವು ಒಂದು ದೀಪಾವಳಿಯಿಂದ ಇನ್ನೊಂದು ದೀಪಾವಳಿಯ ವರೆಗೆ ಇರುತ್ತದೆ. ಹೊಸ ವರ್ಷದ ಲೆಕ್ಕದ ಖಾತೆ-ಕಿರ್ದಿಗಳನ್ನು (ಪುಸ್ತಕಗಳನ್ನು) ಈ ದಿನವೇ ತರುತ್ತಾರೆ.

ದೀಪಾವಳಿಯ ಸಮಯದಲ್ಲಿ ಬಿಡಿಸುವಂತಹ ಸಾತ್ತ್ವಿಕ ರಂಗೋಲಿಗಳು

ದೀಪಾವಳಿ ಹಾಗೂ ಇತರ ಧಾರ್ಮಿಕ ಹಬ್ಬ ಮತ್ತು ಸಮಾರಂಭದಲ್ಲಿ ನೀಲಾಂಜನ ಹಾಗೂ ಕಾಲುದೀಪ ಇವುಗಳ ಸ್ಥಾನಕ್ಕೆ ಅಸಾಧಾರಣ ಮಹತ್ವವಿದೆ. ಸಹೋದರಬಿದಿಗೆ ಅಥವಾ ಇತರ ಸಮಯದಲ್ಲಿ ನೀಲಾಂಜನದಿಂದ ಬೆಳಗುವುದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.

ಆಧ್ಯಾತ್ಮಿಕ ಲಾಭ ಮತ್ತು ಚೈತನ್ಯ ನೀಡುವ ಮಂಗಲಕರ ದೀಪಾವಳಿ !

ಈ ದಿನ ಮುತ್ತೈದೆಯರು ಒಪ್ಪೊತ್ತು ಊಟ ಮಾಡಿ ಬೆಳಗ್ಗೆ ಅಥವಾ ಸಾಯಂಕಾಲ ಕರು ಸಮೇತವಿರುವ ಆಕಳ ಪೂಜೆಯನ್ನು ಮಾಡುತ್ತಾರೆ.

ಸಮಾಜ, ರಾಷ್ಟ್ರ ಮತ್ತು ಧರ್ಮವನ್ನು ಎಲ್ಲ ರೀತಿಯಿಂದ ಅಭಿವೃದ್ಧಿಯ ಕಡೆಗೆ ಒಯ್ಯುವ ಸಂದೇಶವನ್ನು ಕೊಡುವ ದೀಪಾವಳಿ ಬೇಕು !

ಪ್ರತಿದಿನ ಚೀನಾ ಭಾರತದ ಗಡಿಯಲ್ಲಿ ಜಗಳಗಳನ್ನು ಮಾಡುತ್ತ ಆಕ್ರಮಣ ಮಾಡುವ ಸ್ಥಿತಿಯಲ್ಲಿರುವಾಗ ನಮ್ಮ ಹಬ್ಬಕ್ಕೆ ಚೀನೀ ವಸ್ತುಗಳನ್ನು ತೆಗೆದುಕೊಳ್ಳುವುದು ಎಂದರೆ ನಮ್ಮ ನಾಶಕ್ಕೆ ನಾವೇ ಶತ್ರುಗಳಿಗೆ ಹಣ ಕಳುಹಿಸಿದ ಹಾಗಿದೆ ! ಆದುದರಿಂದ ಚೀನೀ ವಸ್ತುಗಳನ್ನು ಬಹಿಷ್ಕರಿಸಿ.

ಕೃತಕ ದೀಪಾಲಂಕಾರದಿಂದ ಸೂಕ್ಷ್ಮದಿಂದಾಗುವ ಅನಿಷ್ಟ ಪರಿಣಾಮಗಳನ್ನು ಗಮನದಲ್ಲಿಡಿ !

ವಾತಾವರಣದಲ್ಲಿರುವ ಕನಿಷ್ಠ ಕೆಟ್ಟ ಶಕ್ತಿಗಳು ವಾಯುಮಂಡಲದಲ್ಲಿ ಗತಿಮಾನವಾಗಿ ಪೂರ್ಣ ವಾತಾವರಣದಲ್ಲಿ ನೈಸರ್ಗಿಕ ಕ್ಷಮತೆಯನ್ನು ಹೀರಿಕೊಳ್ಳುತ್ತವೆ. ವಾತಾವರಣದಲ್ಲಿ ರಜ-ತಮದಿಂದ ತುಂಬಿ ಮತ್ತು ಸ್ಮಶಾನದಂತೆ ತೊಂದರೆದಾಯಕವಾಗುತ್ತದೆ.

ಸಹೋದರಬಿದಿಗೆ ನಿಮಿತ್ತ ಎಲ್ಲೆಡೆಯ ಹಿಂದೂ ಬಾಂಧವರಿಗೆ ಕರೆ !

ಕಾರ್ತಿಕ ಶುಕ್ಲ ಬಿದಿಗೆ ಅಂದರೆ ಸಹೋದರ ಬಿದಿಗೆ ಅಥವಾ ಯಮದ್ವಿತೀಯಾ ! ಈ ವರ್ಷ ೨೬.೧೦.೨೦೨೨ ರಂದು ಸಹೋದರಬಿದಿಗೆ ಇದೆ. ಹಿಂದೂ ಸಂಸ್ಕೃತಿಗನುಸಾರ ಈ ದಿನಕ್ಕೆ ಮಹತ್ವವಿದೆ. ಈ ದಿನ ಸಹೋದರನು ಸಹೋದರಿಯ ಬಳಿ ಭೋಜನಕ್ಕಾಗಿ ಹೋಗುತ್ತಾನೆ.

ದಸರಾ ಹಬ್ಬ, ಅದರ ಮಹತ್ವ ಮತ್ತು ಅಜ್ಞಾನಿ ಪರಿಸರವಾದಿಗಳು !

ಸಾಮಾನ್ಯ ಮನುಷ್ಯನಿಗೆ ದಸರಾ ಎಂದರೆ ತನ್ನ ೧೦ ಮಾನಸಿಕ ವೈರಿಗಳ ಮೇಲೆ ವಿಜಯ ಸಾಧಿಸುವ ಅವಕಾಶ. ಕಾಮ, ಕ್ರೋಧ, ಮದ, ಲೋಭ, ಮೋಹ ಮತ್ಸರ, ಸ್ವಾರ್ಥ, ಅನ್ಯಾಯ, ಕ್ರೌರ್ಯ ಮತ್ತು ಅಹಂಕಾರ ಇವು ಆ ಹತ್ತು ವೈರಿಗಳಾಗಿವೆ. ಕುಟುಂಬ ಮತ್ತು ಸಮಾಜದ ಒಳಿತಿಗಾಗಿ ಇವುಗಳನ್ನು ನಾಶ ಮಾಡುವುದು ಉಪಯುಕ್ತವೇ ಆಗಿದೆ.

ಅನಂತ ಚತುರ್ದಶಿ ವ್ರತ (ಸೆಪ್ಟೆಂಬರ್ 28)

ಭಾದ್ರಪದ ಶುಕ್ಲ ಪಕ್ಷ ಚತುರ್ದಶಿಯಂದು ಅನಂತ ಚತುರ್ದಶಿ ವ್ರತವನ್ನು ಆಚರಿಸಲಾಗುತ್ತದೆ. ಇದರ ಅವಧಿ ಹದಿನಾಲ್ಕು ವರ್ಷಗಳು. ನಂತರ ವ್ರತದ ಉದ್ಯಾಪನೆ ಮಾಡಲಾಗುತ್ತದೆ. ಈ ವ್ರತವನ್ನು ಯಾರಾದಾರೂ ಮಾಡಲು ಸೂಚಿಸಿದರೆ ಅಥವಾ ಅನಂತ ವ್ರತದ ದಾರ ದೊರೆತರೆ ಮಾಡುತ್ತಾರೆ.

ನವರಾತ್ರಿಯಲ್ಲಿನ ಕುಮಾರಿ ಪೂಜೆ

ನವರಾತ್ರಿಯಲ್ಲಿ ಒಂಭತ್ತು ದಿನ ಪ್ರತಿಯೊಂದು ದಿನ ಒಬ್ಬಳಿಗೆ ಅಥವಾ ಮೊದಲ ದಿನ ಒಬ್ಬಳಿಗೆ, ಎರಡನೇ ದಿನ ಇಬ್ಬರಿಗೆ, ಒಂಭತ್ತನೇ ದಿನ ಒಂಭತ್ತು ಕುಮಾರಿಯರಿಗೆ, ಹೀಗೆ ಏರಿಕೆ ಕ್ರಮದಲ್ಲಿ ಭೋಜನವನ್ನು ನೀಡಬೇಕೆಂಬ ವಿಧಾನವಿದೆ.

ಕೆಲವು ದೇವಿಯರ ಉಪಾಸನೆಯ ವೈಶಿಷ್ಟ್ಯಗಳು

‘ಸಂಧಿಪೂಜೆ’ ಎಂಬ ಹೆಸರಿನ ಒಂದು ವಿಶೇಷ ಪೂಜೆಯನ್ನು ಅಷ್ಟಮಿ ಮತ್ತು ನವಮಿ ಈ ತಿಥಿಗಳ ಸಂಧಿಕಾಲದಲ್ಲಿ ಮಾಡುತ್ತಾರೆ. ಈ ಪೂಜೆಯು ದುರ್ಗೆಯ ಚಾಮುಂಡಾ ಎಂಬ ರೂಪದ್ದಾಗಿರುತ್ತದೆ. ಈ ರಾತ್ರಿಯಲ್ಲಿ ಸಂಕೀರ್ತನೆ, ಆಟ ಇವುಗಳ ಮೂಲಕ ಜಾಗರಣೆ ಮಾಡುತ್ತಾರೆ.