ದೀಪಾವಳಿಯ ಸಮಯದಲ್ಲಿ ಬಿಡಿಸುವಂತಹ ಸಾತ್ತ್ವಿಕ ರಂಗೋಲಿಗಳು

ಮಧ್ಯಬಿಂದುವಿನಿಂದ ೧೬ ಸಾಲುಗಳಲ್ಲಿ ಪ್ರತಿ ಸಾಲಿನಲ್ಲಿ ೧೨ ಚುಕ್ಕೆಗಳು
೨೯ ರಿಂದ ೧೫ ಚುಕ್ಕೆಗಳು
೧೧ ಚುಕ್ಕೆಗಳ ೧೧ ಸಾಲುಗಳು
ಲಕ್ಷ್ಮಿತತ್ತ್ವವನ್ನು ಆಕರ್ಷಿಸುವಂತಹ ರಂಗೋಲಿ ೧೧ ರಿಂದ ೧೬ ಚುಕ್ಕೆಗಳು

(ಆಧಾರ : ಸನಾತನದ ಗ್ರಂಥ : ‘ಸಾತ್ತ್ವಿಕ ರಂಗೋಲಿಗಳು’)

ಎಣ್ಣೆ-ಬತ್ತಿಯ ಹಣತೆಯ ಸ್ಥಾನ ಇಂದಿಗೂ ಅಚಲ !

ದೀಪಾವಳಿ ಹಾಗೂ ಇತರ ಧಾರ್ಮಿಕ ಹಬ್ಬ ಮತ್ತು ಸಮಾರಂಭದಲ್ಲಿ ನೀಲಾಂಜನ ಹಾಗೂ ಕಾಲುದೀಪ ಇವುಗಳ ಸ್ಥಾನಕ್ಕೆ ಅಸಾಧಾರಣ ಮಹತ್ವವಿದೆ. ಸಹೋದರಬಿದಿಗೆ ಅಥವಾ ಇತರ ಸಮಯದಲ್ಲಿ ನೀಲಾಂಜನದಿಂದ ಬೆಳಗುವುದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ದೇವರ ಪೂಜೆಯಲ್ಲಿ ನೀಲಾಂಜನ ಇದ್ದೇ ಇರುತ್ತದೆ. ಇತ್ತೀಚೆಗೆ ಎಷ್ಟೇ ಅತ್ಯಾಧುನಿಕ ದೀಪಗಳನ್ನು ಉಪಯೋಗಿಸುತ್ತಿದ್ದರೂ ಎಣ್ಣೆ ಬತ್ತಿಯನ್ನು ಇಡುವ ಮಣ್ಣಿನ ಹಣತೆಗೆ ಇಂದಿಗೂ ಅಚಲವಾದ ಸ್ಥಾನ ಇದೆ. ವಿದ್ಯುತ್ ವ್ಯತ್ಯಯವಾದಾಗ ವಿದ್ಯುತ್ ದೀಪ ನಿರುಪಯುಕ್ತವಾಗುತ್ತದೆ. ಆಗ ಮನೆಮನೆಗಳಲ್ಲಿ ಚಿಮಣಿದೀಪ, ಆಕಾಶದೀಪ, ಮೇಣದ ಬತ್ತಿ ಇವುಗಳನ್ನೇ ಆದ್ಯತೆಯಿಂದ ಉಪಯೋಗಿಸಲಾಗುತ್ತದೆ. ಮೀಸಲು ಪ್ರಕಾಶಕ್ಕಾಗಿ ಬೆಳಕಿನ ಸಾಧನ ಎಂದು ಇದ್ದೇ ಇರುತ್ತದೆ.

 

ದೀಪಾವಳಿಯಂದು ಸಾಯಂಕಾಲ ಮನೆಯೊಳಗೆ ಮತ್ತು ಹೊರಗೆ ಸಾಲಾಗಿ ದೀಪಗಳನ್ನು ಹಚ್ಚಿಡಬೇಕು. ಇದರಿಂದ ಮನೆಗೆ ಅಪ್ರತಿಮ ಶೋಭೆಯುಂಟಾಗಿ ಉತ್ಸಾಹವು ಬರುತ್ತದೆ ಮತ್ತು ಆನಂದವಾಗುತ್ತದೆ.