ದಸರಾ ಹಬ್ಬ, ಅದರ ಮಹತ್ವ ಮತ್ತು ಅಜ್ಞಾನಿ ಪರಿಸರವಾದಿಗಳು !

೧. ಹಬ್ಬ ಮತ್ತು ಉತ್ಸವ ಇವುಗಳ ‘ಇವೆಂಟ್’ (ಕಾರ್ಯಕ್ರಮ) ಮಾಡಬೇಡಿರಿ !

ಯದ್ಯದಾಚರತಿ ಶ್ರೇಷ್ಠಸ್ತತ್ತದೆವೆತರೋ ಜನಃ |

ಸ ಯತ್ಪ್ರಮಾಣಂ ಕುರುತೆ ಲೋಕಸ್ತದನುವರ್ತತೇ ||

– ಶ್ರೀಮದ್ಭಗವದ್ಗೀತೆ, ಅಧ್ಯಾಯ ೩, ಶ್ಲೋಕ ೨೧

ಅರ್ಥ : ಶ್ರೇಷ್ಠ ಮನುಷ್ಯನು ಯಾವ ಆಚರಣೆಗಳನ್ನು ಮಾಡುತ್ತಾನೆಯೋ, ಇತರ ಜನರೂ ಆ ಆಚರಣೆಗಳನ್ನೇ ಮಾಡುತ್ತಾರೆ; ಅವನು ಯಾವುದನ್ನು ಸಾಧಾರ (ಅಧಿಕೃತವಾಗಿ) ಹೇಳುತ್ತಾನೆಯೋ, ಅದರಂತೆಯೇ ಎಲ್ಲ ಮನುಷ್ಯರು ನಡೆದುಕೊಳ್ಳುತ್ತಾರೆ.

ಡಾ. ಸಚ್ಚಿದಾನಂದ ಶೇವಡೆ

ಸಾಮಾನ್ಯ ಜನರ ಈ ಮಾನಸಿಕತೆಯ ವಿಚಾರವನ್ನು ಮಾಡಿಯೇ ನಮ್ಮ ಹಬ್ಬಗಳ ರಚನೆಯನ್ನು ಮಾಡಲಾಗಿದೆ. ವಿಜಯದಶಮಿಯು ಅಸಾಧಾರಣ ಪುರುಷರ ಅಥವಾ ದೇವತೆಗಳ ವಿಜಯದ ಪರಾಕ್ರಮವನ್ನು ಸ್ಮರಿಸಿ ಅದರ ಅನುಕರಣೆಯನ್ನು ಮಾಡುವ ದಿನ ! ೯ ದಿನಗಳ ಭಯಂಕರ ಯುದ್ಧದ ನಂತರ ವಿಜಯದಶಮಿಯ ದಿನ ಶ್ರೀ ದುರ್ಗಾದೇವಿಯು ಮಹಿಷಾಸುರನ ಮೇಲೆ ವಿಜಯವನ್ನು ಸಾಧಿಸಿದಳು. ಪ್ರಭು ಶ್ರೀರಾಮಚಂದ್ರನು ರಾವಣನನ್ನು ಇದೇ ದಿನ ಸೋಲಿಸಿದನು. ಅಜ್ಞಾತವಾಸದ ನಂತರ ಈ ದಿನವೇ ಪಾಂಡವರು ಶಮಿ ವೃಕ್ಷದ ಮೇಲಿಟ್ಟ ತಮ್ಮ ಶಸ್ತ್ರಗಳನ್ನು ತೆಗೆದರು ! ಭಾರತೀಯ ಸಂಸ್ಕೃತಿಯು ಮಾನವೀಯತೆಯನ್ನು ನಾಶ ಮಾಡುವ ಆಸುರೀ ವೃತ್ತಿಯದ್ದಾಗಿಲ್ಲ, ಅದು ಮಾನವತೆಯ ಮತ್ತು ಶೌರ್ಯದ ಪೂಜಕವಾಗಿದೆ !

ರಾಕ್ಷಸಿ ವೃತ್ತಿಗಳಿಂದ ಮಾನವನ ಮತ್ತು ಮಾನವೀಯತೆಯನ್ನು ರಕ್ಷಿಸಬೇಕಾಗಿದ್ದರೆ, ವ್ಯಕ್ತಿ, ವ್ಯಕ್ತಿಯಲ್ಲಿರುವ ಶೌರ್ಯ, ಸಾಹಸ, ಪರಾಕ್ರಮವನ್ನು ಜಾಗೃತಗೊಳಿಸಬೇಕಾಗುತ್ತದೆ. ನವರಾತ್ರಿಯ ಜಾಗರಣೆಯು ಅದಕ್ಕಾಗಿಯೇ ಇದೆ. ಈ ಶೌರ್ಯದ ಮಿತಿಗತಿಯನ್ನು ಮೀರಬಾರದೆಂದು ಅದಕ್ಕೆ ದೇವಿಯ ಭಕ್ತಿ ಮತ್ತು ವಾತ್ಸಲ್ಯದ ಜೊತೆಯನ್ನು ನೀಡಲಾಗಿದೆ. ಆದರೆ ಇಂದು ಆ ಉದ್ದೇಶವನ್ನು ಮರೆತು ನಮ್ಮೆಲ್ಲ ಉತ್ಸವಗಳನ್ನು ನಾವು ಇವೆಂಟ್ಸಗಳನ್ನಾಗಿ (ಕಾರ್ಯಕ್ರಮಗಳನ್ನು) ಮಾಡತೊಡಗಿದ್ದೇವೆ. ಅದರಲ್ಲಿನ ಶೌರ್ಯ-ಧೈರ್ಯದ ಮೂಲ ಉದ್ದೇಶವನ್ನು ಕಳೆದುಕೊಳ್ಳುತ್ತಿದ್ದೇವೆ. ಸದ್ಯ ಕೇವಲ ಕುಣಿತ, ಹಾಡು ಮತ್ತು ಗರಬಾ ಇವುಗಳಲ್ಲಿಯೇ ನಾವು ಸುಖಪಡುತ್ತಿದ್ದೇವೆ ! ಭಗವಂತನ ಹಾಡುಗಳನ್ನು ಹಾಡುವುದು, ನೃತ್ಯ ಮಾಡುವುದು, ದೊಡ್ಡದಾಗಿ ಅವನ ಹೆಸರನ್ನು ಉಚ್ಚರಿಸುವುದು, ಇವೆಲ್ಲವೂ ಒಪ್ಪಬಹುದು; ಆದರೆ ಇವೆಲ್ಲ ದೇಹಬುದ್ಧಿಯನ್ನು ಮರೆತು ಭಕ್ತಿಯಲ್ಲಿ ತಲ್ಲೀನವಾದಾಗ ಮಾತ್ರ ! ಅಸಹ್ಯ ಕುಣಿತದಿಂದ, ದೊಡ್ಡ ಕರ್ಕಶ ಧ್ವನಿಯಲ್ಲಿ ಡಿಜೆ ಹಾಕಿ ಮತ್ತು ಸರಾಯಿಯನ್ನು ಕುಡಿದು ಅಲ್ಲ !

೨. ವ್ಯಕ್ತಿ ಮತ್ತು ಸಮಾಜದ ರಕ್ತದಲ್ಲಿ ವೀರತನವನ್ನು ಪ್ರಕಟಗೊಳಿಸುವ ಉತ್ಸವ !

ದಸರಾ ಹಬ್ಬವು ಮಳೆಗಾಲ ಮುಗಿದು ಸುಗ್ಗಿಯ ದಿನಗಳು ಆರಂಭವಾಗುವ ಕಾಲ ಬಂದಿದೆ ಎಂಬುದನ್ನು ಸೂಚಿಸುತ್ತದೆ. ಋತು ಬದಲಾಗುತ್ತದೆ. ಈ ಉತ್ಸವ ಭಕ್ತಿ ಮತ್ತು ಶಕ್ತಿ ಜಾಗೃತವಾಗಬೇಕು ಮತ್ತು ವ್ಯಕ್ತಿ ಮತ್ತು ಸಮಾಜದ ರಕ್ತದಲ್ಲಿ ವೀರತನಪ್ರಕಟವಾಗಬೇಕೆಂದು ಇದೆ. ಶತ್ರು ಸತತವಾಗಿ ಕಾಲು ಕೆದರಿ ಜಗಳಕ್ಕೆ ಇಳಿಯುತ್ತಿದ್ದರೆ ಮತ್ತು ಯುದ್ಧಕ್ಕೆ ಪರ್ಯಾಯ ವಿಲ್ಲದಿದ್ದರೆ, ಶತ್ರುಗಳ ಆಕ್ರಮಣದ ದಾರಿಯನ್ನು ಕಾಯದೇ ನಾವೇ ಶತ್ರುಗಳ ಮೇಲೆ ಆಕ್ರಮಣ ಮಾಡುವುದು ಕುಶಲ ರಾಜನೀತಿಯಾಗಿದೆ. ಅದಕ್ಕಾಗಿ ಶಸ್ತ್ರಗಳನ್ನು ಪೂಜಿಸಿ, ಅವುಗಳನ್ನು ಹರಿತಗೊಳಿಸಿ ಸೀಮೆಯ ಉಲ್ಲಂಘಿಸುತ್ತ ವಿಜಯವನ್ನು ಪಡೆಯುವ ನಿಶ್ಚಯದಿಂದ ಶತ್ರುಗಳ ಮೇಲೆ ದಾಳಿಯನ್ನು ಮಾಡುವುದೆಂದರೆ ವಿಜಯದಶಮಿ ! ರೋಗ ಮತ್ತು ಶತ್ರುಗಳನ್ನು ಉತ್ಪನ್ನವಾದ ಕೂಡಲೇ ನಾಶ ಮಾಡಬೇಕು. ಒಂದು ಸಲ ಅವು ಹರಡಿದರೆ, ಬಹಳ ಹಾನಿ ಮಾಡುತ್ತವೆ ಮತ್ತು ಅವುಗಳನ್ನು ನಿಯಂತ್ರಿಸುವುದು ಕಠಿಣವಾಗುತ್ತದೆ. ಇದಕ್ಕಾಗಿ ಸಾವಧಾನ ಮತ್ತು ದಕ್ಷತೆ ಈ ಎರಡು ಗುಣಗಳು ಆವಶ್ಯಕವಾಗಿವೆ. ಸಾವಧಾನ ಇಲ್ಲದ ಕಾಡುಪ್ರಾಣಿ ಸಹಜವಾಗಿ ಬೇಟೆಗಾರನ ಬೇಟೆಯಾಗಬಹುದು. ಶತ್ರುಗಳ ಆಕ್ರಮಣವಾದ ಬಳಿಕ ಶಸ್ತ್ರಗಳನ್ನು ಹುಡುಕುತ್ತಾ ಕುಳಿತರೆ, ಸೋಲು ನಿಶ್ಚಿತ.

೩. ದಸರಾ ಎಂದರೆ ೧೦ ಮಾನಸಿಕ ವೈರಿಗಳ ಮೇಲೆ ವಿಜಯ ಸಾಧಿಸುವ ಅವಕಾಶ !

ಸಾಮಾನ್ಯ ಮನುಷ್ಯನಿಗೆ ದಸರಾ ಎಂದರೆ ತನ್ನ ೧೦ ಮಾನಸಿಕ ವೈರಿಗಳ ಮೇಲೆ ವಿಜಯ ಸಾಧಿಸುವ ಅವಕಾಶ. ಕಾಮ, ಕ್ರೋಧ, ಮದ, ಲೋಭ, ಮೋಹ ಮತ್ಸರ, ಸ್ವಾರ್ಥ, ಅನ್ಯಾಯ, ಕ್ರೌರ್ಯ ಮತ್ತು ಅಹಂಕಾರ ಇವು ಆ ಹತ್ತು ವೈರಿಗಳಾಗಿವೆ. ಕುಟುಂಬ ಮತ್ತು ಸಮಾಜದ ಒಳಿತಿಗಾಗಿ ಇವುಗಳನ್ನು ನಾಶ ಮಾಡುವುದು ಉಪಯುಕ್ತವೇ ಆಗಿದೆ; ಆದರೆ ಚಾರಿತ್ರ್ಯ, ಪ್ರತಿಷ್ಠೆ, ಮಾನಸಿಕ ಮತ್ತು ಶಾರೀರಿಕ ಆರೋಗ್ಯದ ರೂಪದಲ್ಲಿ ಈ ವಿಜಯದ ಎಲ್ಲಕ್ಕಿಂತ ಹೆಚ್ಚು ಲಾಭ ಆ ವ್ಯಕ್ತಿಗೇ ಆಗುತ್ತದೆ ! ನಮ್ಮ ದುರ್ಗುಣಗಳ ಗಡಿಗಳನ್ನು ಉಲ್ಲಂಘಿಸಿ ದೈವೀ ಗುಣಗಳನ್ನು ಪ್ರಾಪ್ತಮಾಡಿಕೊಳ್ಳಲು ಕಟಿಬದ್ಧರಾಗಲು ವಿಜಯದಶಮಿಯಷ್ಟು ಉತ್ತಮ ಮುಹೂರ್ತ ಬೇರೆ ಇಲ್ಲ.

೪. ದಾನದ ಮಹತ್ವವನ್ನು ಕಲಿಸುವ ದಸರಾ !

ನಮ್ಮೆಲ್ಲ ಹಬ್ಬಹರಿದಿನಗಳಂದು ನಮಗೆ ಕಲಿಸಲಾಗುವ ಇನ್ನೊಂದು ದೊಡ್ಡ ಪಾಠವೆಂದರೆ ದಾನ ! ಕಲಿಯುಗದಲ್ಲಿನ ಅಪರಾಧಗಳಿಂದ ಮಾಲಿನ್ಯದವರೆಗಿನ ಎಲ್ಲ ಸಮಸ್ಯೆಗಳಿಗೆ ಮನುಷ್ಯನ ಲೋಭಿ ಮತ್ತು ಸಂಗ್ರಹಿಸಿಡುವ ವೃತ್ತಿಯೇ ಕಾರಣವಾಗಿದೆ. ‘ದಾನ’ವು ಅದಕ್ಕೆ ಉತ್ತಮ ಉಪಾಯವಾಗಿದೆ. ರಘು ರಾಜನ ಹೇಳಿಕೆಯಂತೆ ಕುಬೇರನು ಮಂದಾರದ ಗಿಡದ ಮೇಲೆ ಚಿನ್ನದ ನಾಣ್ಯಗಳ ಮಳೆಯನ್ನು ಸುರಿದರೂ ಕೌತ್ಸನು ಅವುಗಳಲ್ಲಿನ ಆವಶ್ಯತೆ ಇದ್ದಷ್ಟೇ, ಅಂದರೆ ಕೇವಲ ೧೪ ಕೋಟಿ ಚಿನ್ನದ ನಾಣ್ಯಗಳನ್ನಷ್ಟೇ ತೆಗೆದುಕೊಂಡನು. ಅವುಗಳನ್ನು ತನ್ನ ಗುರುಗಳಾದ ವರತಂತು ಋಷಿಗಳಿಗೆ ಗುರುದಕ್ಷಿಣೆಯೆಂದು ನೀಡಿ ದನು. ಬಡವನಾಗಿದ್ದರೂ ಅವನು ತನಗಾಗಿ ಒಂದೂ ಚಿನ್ನದ ನಾಣ್ಯವನ್ನು ತೆಗೆದುಕೊಳ್ಳಲಿಲ್ಲ. ಅವನು ‘ಉಳಿದ ನಾಣ್ಯಗಳನ್ನು ಜನರು ತೆಗೆದುಕೊಂಡು ಹೋಗಬಹುದು’ ಎಂದು ಹೇಳಿದನು. ಅಂದಿನಿಂದ ನಾವು ದಸರಾದಂದು ಮಂದಾರದ ಎಲೆಗಳನ್ನು ಪರಸ್ಪರ ರಿಗೆ ಬಂಗಾರವೆಂದು ಕೊಡುತ್ತೇವೆ. ‘ಬಂಗಾರವನ್ನು ದೋಚುವುದು’ ಇದರಲ್ಲಿ ಅಡಗಿದ ನಿಜವಾದ ಅರ್ಥವೆಂದರೆ ನಮ್ಮ ಆವಶ್ಯಕತೆಗಿಂತ ನಮ್ಮ ಬಳಿ ಇರುವ ಹೆಚ್ಚಿನ ಧನವನ್ನು, ಆವಶ್ಯಕ ಇರುವವರಿಗೆ ಮತ್ತು ಬಡಜನರಿಗೆ ದಾನ ಮಾಡಬೇಕು’ ಎಂದಾಗಿದೆ.

ಯುಧ್ಯನ್ತೆ ಪಶವಃ ಸರ್ವೇ ಪಠನ್ತಿ ಶುಕಸಾರಿಕಾಃ |

ದಾತುಂ ಜಾನಾತಿ ಯೋ ವಿತ್ತಂ ಸ ಶೂರಃ ಸ ಚ ಪಣ್ಡಿತಃ ||

ಅರ್ಥ : ಎಲ್ಲ ಪ್ರಾಣಿಗಳು ಯುದ್ಧವನ್ನು ಮಾಡುತ್ತವೆ (ಇದಕ್ಕೆ ಶೌರ್ಯವೆಂದು ಹೇಳುವುದಿಲ್ಲ.) ಗಿಳಿ ಮತ್ತು ಮೈನಾ ಹಕ್ಕಿ ಪಠಣ ಮಾಡುತ್ತವೆ (ಇದರಲ್ಲಿ ಪಾಂಡಿತ್ಯವಿಲ್ಲ) ಯಾವನು ಸಂಪತ್ತು ದಾನ ಮಾಡುವುದನ್ನು ತಿಳಿದುಕೊಂಡಿದ್ದಾನೆಯೋ, ಅವನೇ ಶೂರ ಮತ್ತು ಪಂಡಿತ.

೫. ಪ್ರತಿಯೊಂದು ಹಬ್ಬದ ಹಿಂದಿನ ಆಧ್ಯಾತ್ಮಿಕ ಉದ್ದೇಶವನ್ನು ತಿಳಿದುಕೊಳ್ಳಿರಿ !

ದೀಪಾವಳಿಯ ಕೆಲವು ದಿನಗಳ ಮೊದಲು ವಿಜಯದಶಮಿ ಬರುತ್ತದೆ. ನಮ್ಮ ಪ್ರತಿಯೊಂದು ಹಬ್ಬದ ಹಿಂದೆ ಯಾವುದಾದರೊಂದು ಉದ್ದೇಶ ಮತ್ತು ಅದರಲ್ಲಿ ಸಂದೇಶವಿರುತ್ತದೆ. ನಾವು ಅದನ್ನು ಮರೆಯುತ್ತಿದ್ದೇವೆ. ಅದರಿಂದ ನಮಗೇ ಹಾನಿಯಾಗುತ್ತದೆ ಎಂಬುದನ್ನು ಗಮನದಲ್ಲಿಡುವುದು ಬೇಡವೇ ? ಪರಬ್ರಹ್ಮ ಅಥವಾ ಪರಮಾತ್ಮನು ಸಗುಣ ಸಾಕಾರದಲ್ಲಿ ಕಾಣಿಸುವುದಿಲ್ಲ. ಅದು ತಿಳಿಯಲು ಆತ್ಮಸಾಕ್ಷಾತ್ಕಾರದ ದಿವ್ಯಾನುಭವವೇ ಬೇಕು. ಯಾವುದಾದರೊಂದು ಅತ್ಯುತ್ತಮ ರಾಗವನ್ನು ಕೇಳುವಾಗ ಹೇಗೆ ನಾವು ತಲ್ಲೀನವಾಗುತ್ತೇವೆಯೋ, ಅಂತಹದ್ದೇ ಏನೋ ಆತ್ಮಸಾಕ್ಷಾತ್ಕಾರದಲ್ಲಿ ಆಗುತ್ತದೆ.

ನಾವು ಉಪಾಸನೆಗಾಗಿ ಮೂರ್ತಿಪೂಜೆಯನ್ನು ಸ್ವೀಕರಿಸಿ ದ್ದೇವೆ. ಯಾವ ಸಮಾಜದಲ್ಲಿ ಮೂರ್ತಿಪೂಜೆ ಇಲ್ಲವೋ ಅವರು ಯಾವಾಗಲೂ ಅಸ್ವಸ್ಥರಾಗಿರುವುದು ಕಂಡು ಬರುತ್ತದೆ. ಮೂರ್ತಿಯಿಂದ ನಾವು ನಿರ್ಗುಣ ನಿರಾಕಾರವನ್ನು ಸಗುಣ ಸಾಕಾರದಲ್ಲಿ ನೋಡುತ್ತೇವೆ. ಹಿಂದೂ ಧರ್ಮದ ವೈಶಿಷ್ಟ್ಯವೆಂದರೆ, ನಾವು ಮೂರ್ತಿಪೂಜೆಯಲ್ಲಿ ಸಿಲುಕುವುದಿಲ್ಲ; ಏಕೆಂದರೆ ಈ ಪೂಜೆಯು ಪರಬ್ರಹ್ಮನದ್ದಾಗಿದೆ ಎಂಬುದನ್ನು ನಮಗೆ ಕಲಿಸಿರುತ್ತಾರೆ. ಮೂರ್ತಿಗಳು ಎಷ್ಟೇ ಇದ್ದರೂ, ‘ಸರ್ವ ದೇವನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ |’ ಅಂದರೆ ‘ಯಾವುದೇ ದೇವರಿಗೆ ನಮಸ್ಕಾರ ಮಾಡಿದರೂ ಕೊನೆಗೆ ಅದು ಭಗವಾನ ಶ್ರೀಕೃಷ್ಣನಿಗೇ ತಲುಪುತ್ತದೆ. ಇದು ನಮಗೆ ತಿಳಿದಿರಬೇಕು. ಅವನಿಗೆ ಯಾವುದನ್ನು ಅರ್ಪಿಸುತ್ತೇವೆಯೋ, ಅದು ಅವನದ್ದೇ ಆಗಿರುತ್ತದೆ. ನಾನು ಇದನ್ನು ನೀಡಿದೆನು, ಅದನ್ನು ನೀಡಿದೆನು, ಇಷ್ಟು ದ್ರವ್ಯವನ್ನು ಕೊಟ್ಟೆನು, ಎಂಬ ಅಹಂಕಾರವೇಕೆ ? ಅದನ್ನು ಈಶ್ವರನಿಗೆ ಅರ್ಪಿಸಿದರೆ ಆಯಿತು ! ಇದನ್ನು ತಿಳಿದುಕೊಳ್ಳಬೇಕು. ನನ್ನತನವನ್ನು (ಅಹಂ) ಬಿಟ್ಟು ಈಶ್ವರನಿಗೆ ಶರಣಾಗುವುದೇ ನಿಜವಾದ ಪೂಜೆಯಾಗಿದೆ.

೬. ಇತರ ಧರ್ಮದವರ ಮುಂದೆ ಬಾಲವನ್ನು ಮುದುಡುವ ಪರಿಸರವಾದಿಗಳು !

ದಸರಾ ಬಂದರೆ, ಮಂದಾರದ ಎಲೆಗಳನ್ನು ಕೀಳುವುದರಿಂದ ನಿಸರ್ಗದ ಅಧೋಗತಿ ಹೇಗೆ ಆಗುತ್ತದೆ, ಎಂದು ಬುದ್ಧಿ ಕಲಿಸಲು ಅನೇಕ ಸ್ವಯಂಘೋಷಿತ ಪಂಡಿತರು ಮುಂದೆ ಬರುತ್ತಾರೆ. ಇವರಿಗೆ ಕೇವಲ ಹಿಂದೂಗಳನ್ನು ಟೀಕಿಸಲು ಇಂತಹ ವಿಷಯಗಳು ಕಾಣಿಸುತ್ತವೆ ಮತ್ತು ಅವರು ಕೂಡಲೇ ಟೀಕಿಸಲು ಆರಂಭಿಸುತ್ತಾರೆ. ಇವರು ಇತರ ಧರ್ಮಿಯರ ಸಮಯದಲ್ಲಿ ಮಾತ್ರ ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳುತ್ತಾರೆ ಅಂದರೆ ಅವರಲ್ಲಿ ಅನುಕೂಲಕರ ‘ಸಾಮ್ಯವಾದ’ ಇರುತ್ತದೆ. ಕೆಲವೊಮ್ಮೆ ಇವರೇ ನಿಜವಾದ (?) ಹಿಂದುತ್ವನಿಷ್ಠರಾಗಿದ್ದಾರೆ ಎಂದು ಅನಿಸುತ್ತದೆ; ಏಕೆಂದರೆ ಇವರಿಗೆ ಹಿಂದೂಗಳನ್ನಷ್ಟೇ ಸುಧಾರಿಸಲಿಕ್ಕಿಕಾಗಿರುತ್ತದೆ. ಇತರ ಧರ್ಮದ ನಮ್ಮ ಬಾಂಧವರು ಅಜ್ಞಾನದಲ್ಲಿದ್ದರೂ ಅವರಿಗೆ ಏನೂ ಅನಿಸುವುದೇ ಇಲ್ಲ ! ಅರ್ಥಾತ್ ಅಲ್ಲಿ ಹೊಡೆತಗಳನ್ನು ತಿನ್ನುವ ಅಥವಾ ಜೀವವನ್ನು ಕಳೆದುಕೊಳ್ಳುವ ಭಯ ಸಹ ಇರುತ್ತದೆ, ಇದೊಂದು ಬಹಿರಂಗ ರಹಸ್ಯವಾಗಿದೆ. ‘ಕಟ್ಟಡಗಳು, ಪೀಠೋಪಕರಣಗಳು, ಕಾಗದ ಮುಂತಾದ ಅನೇಕ ಕೆಲಸಗಳಿಗಾಗಿ ಮಿತಿಮೀರಿ ಅರಣ್ಯವನ್ನು ಕಡಿಯಲಾಗುತ್ತದೆ, ಅದರದ್ದೇನು ಪ್ರಶ್ನೆಯನ್ನು ಅವರಿಗೆ ಕೇಳಿ ಉಪಯೋಗವಿಲ್ಲ; ಅರ್ಥಾತ್ ಅಲ್ಲಿ ಹೊಡೆತಗಳನ್ನು ತಿನ್ನುವ ಅಥವಾ ಜೀವವನ್ನು ಕಳೆದುಕೊಳ್ಳುವ ಭಯ ಸಹ ಇರುತ್ತದೆ, ಇದೊಂದು ಬಹಿರಂಗ ರಹಸ್ಯವಾಗಿದೆ. ‘ಕಟ್ಟಡಗಳು, ಪೀಠೋಪಕರಣಗಳು, ಕಾಗದ ಮುಂತಾದ ಅನೇಕ ಕೆಲಸಗಳಿಗಾಗಿ ಮಿತಿಮೀರಿ ಅರಣ್ಯವನ್ನು ಕಡಿಯಲಾಗುತ್ತದೆ, ಅದರದ್ದೇನು ಪ್ರಶ್ನೆಯನ್ನು ಅವರಿಗೆ ಕೇಳಿ ಉಪಯೋಗವಿಲ್ಲ; ಏಕೆಂದರೆ ಅಲ್ಲಿ ಇವರ ನಾಲ್ಕು ಬುದ್ಧಿವಂತಿಕೆಯ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿ ಯಾರೂ ಇರುವುದಿಲ್ಲ.

ಪ್ರತಿವರ್ಷ ಮಂದಾರದ ಎಲೆಗಳನ್ನು ಕೀಳುವುದರಿಂದ ಅದರ ಗಿಡಗಳು ಕಡಿಮೆಯಾಗಿವೆ, ಆದುದರಿಂದ ಈ ವರ್ಷ ಮಂದಾರದ ಎಲೆಗಳು ಸಿಗುವುದಿಲ್ಲ ಎಂದು ಯಾರಾದರೂ ಕೇಳಿದ್ದೀರಾ ? ‘ನಾನು ಮಂದಾರ ಗಿಡವನ್ನು ನೆಡುವೆನು’ ಎಂಬ ಸಂಕಲ್ಪವನ್ನು ಮಾಡಿದರೆ ಹೇರಳವಾಗಿ ಎಲೆಗಳು ಸಿಗುವವು; ಆದರೆ ಹೀಗೆ ಸೂಚಿಸುವುದಕ್ಕಿಂತ ‘ನಾನು ಎಲೆಗಳನ್ನೇ ಕೊಡುವುದಿಲ್ಲ’ ಎಂದು ಹೇಳುವುದು ಹುಚ್ಚುತನ ಎಂದು ನಿಮಗೆ ಅನಿಸುವುದಿಲ್ಲವೇ ?

೭. ಧಾರ್ಮಿಕ ಮಹತ್ವದಿಂದ ಉಳಿದುಕೊಂಡಿರುವ ಮರಗಳು ಮತ್ತು ಪರಿಸರ !

ಪರಿಸರದ ಕಾಳಜಿಯಿಂದಾಗಿ ಮಾತನಾಡುವವರು ನಿತ್ಯದಂತೆ ನಮ್ಮ ಹಬ್ಬ ಮತ್ತು ಸಂಸ್ಕೃತಿಯ ಮೇಲೆ ಪರೋಕ್ಷವಾಗಿ ದಾಳಿ ಮಾಡುತ್ತಿರುವುದು ಸ್ಪಷ್ಟವಾಗಿ ಅರಿವಾಗುತ್ತದೆ. ಈ ಗಿಡಗಳ ಎಲೆಗಳನ್ನು ಕೀಳುವುದರಿಂದ ಗಿಡಗಳು ನಾಶವಾಗುವವು ಎಂದು ಹೇಳುತ್ತಾರೆ. ಸಾವಿರಾರು ವರ್ಷಗಳಿಂದ ಮಂದಾರದ ಎಲೆಗಳನ್ನು ಹಂಚಲಾಗುತ್ತದೆ, ಹೀಗಿರುವಾಗ ಈ ಗಿಡಗಳು ಇಲ್ಲಿಯವರೆಗೆ ಏಕೆ ನಾಶವಾಗಿಲ್ಲ ? ಇದರ ಬಗ್ಗೆ ಸ್ವಲ್ಪ ವಿಚಾರ ಮಾಡಿರಿ. ಈ ಗಿಡದಲ್ಲಿ ಬಿಡುವ ಹೂವುಗಳು ಮತ್ತು ಹಣ್ಣುಗಳ ಯಾವುದಕ್ಕೂ ಉಪಯೋಗವಿಲ್ಲ. ಈ ಲೆಕ್ಕದಿಂದ ಈ ಗಿಡಗಳು ಸಾವಿರಾರು ವರ್ಷಗಳ ಹಿಂದೆಯೇ ನಾಶವಾಗಬೇಕಾಗಿದ್ದವು; ಆದರೆ ಅವು ದಸರಾ ಹಬ್ಬದಿಂದಾಗಿಯೇ ಇಲ್ಲಿಯವರೆಗೆ ಉಳಿದುಕೊಂಡಿವೆ. ಈ ಗಿಡದ ಪರಿಸರದಲ್ಲಿ ಪ್ರಾಮುಖ್ಯತೆ, ಹಾಗೆಯೇ ಆಯುರ್ವೇದಕ್ಕನುಸಾರ ಔಷಧಿ ಗುಣಗಳನ್ನು ಅರಿತುಕೊಂಡು ಈ ಗಿಡಗಳು ಉಳಿಯಬೇಕೆಂದೇ ನಮ್ಮ ಪೂರ್ವಜರು ಇವುಗಳನ್ನು ಹಬ್ಬಕ್ಕೆ ಜೋಡಿಸಿದ್ದಾರೆ. ಯಾವ ಮರಗಳು ನಮ್ಮ ಯಾವುದೇ ಹಬ್ಬ ಅಥವಾ ದೇವತೆಗಳಿಗೆ ಸಂಬಂಧಿಸಿಲ್ಲವೋ, ಅಂತಹ ಭಾರತದಲ್ಲಿನ ಸಾವಿರಾರು ಮರಗಳು ನಾಶವಾಗಿವೆ. ಇಂದು ಆಲದ ಮರ, ಅಶ್ವತ್ಥದ ಮರ, ಅತ್ತಿಮರ ಈ ಗಿಡಗಳು ಕೇವಲ ದೇವರ ಜೊತೆಗೆ ಸಂಬಂಧ ಜೋಡಿಸಲಾಗಿದೆ ಎಂದು ಉಳಿದುಕೊಂಡಿದೆ, ಇಲ್ಲದಿದ್ದರೆ ಅವು ಯಾವಾಗಲೋ ನಾಶವಾಗುತ್ತಿದ್ದವು. ಇಂತಹ ಗಿಡಗಳ ಕೃಷಿಯನ್ನು ಉದ್ದೇಶಪೂರ್ವಕವಾಗಿ ಯಾರೂ ಮಾಡುವುದಿಲ್ಲ; ಏಕೆಂದರೆ ಅವುಗಳಿಂದ ಯಾವುದೇ ಆರ್ಥಿಕ ಲಾಭವಿಲ್ಲ; ಆದರೆ ಅವುಗಳನ್ನು ದೇವರು ಧರ್ಮದೊಂದಿಗೆ ಜೋಡಿಸಿದ್ದರಿಂದ ತಾನಾಗಿಯೇ ಬೆಳೆದ ಗಿಡಗಳನ್ನು ಮಾತ್ರ ಯಾರೂ ಕಡಿಯುವುದಿಲ್ಲ. ಇಂದಿಗೂ ಪ್ರತಿಯೊಬ್ಬರ ಮನೆಯಲ್ಲಿ, ತೀರಾ ಫ್ಲ್ಯಾಟ್‌ಗಳಲ್ಲಿಯೂ ಎಲ್ಲಿ ಗಿಡಗಳನ್ನು ನೆಡಲು ಜಾಗವಿರುವುದಿಲ್ಲವೋ ಅಲ್ಲಿಯೂ ಜನರು ಕುಂಡಗಳಲ್ಲಿ ತುಳಸಿ ಗಿಡಗಳನ್ನು ನೆಡುತ್ತಾರೆ. ಹಾಗಾದರೆ ಇಂತಹ ಒಳ್ಳೆಯ, ಯಾರಿಗೂ ತೊಂದರೆಯಾಗದಿರುವ ಮತ್ತು ಉಪಯೋಗವಾಗುವ ಶ್ರದ್ಧೆಯನ್ನು ಕಾಪಾಡಲು ಯಾವ ಅಡಚಣೆಗಳಿವೆ ? ನಮ್ಮ ಹಿಂದೂ ಧರ್ಮ, ಹಿಂದೂ ಸಂಸ್ಕೃತಿ, ಪರಂಪರೆ ಇವು ಯಾವಾಗಲೂ ಪರಿಸರಕ್ಕೆ ಅನುಕೂಲಕರವಾಗಿಯೇ ಇವೆ.

೮. ಪ್ರತಿವರ್ಷ ದಸರಾದಂದು ಮಂದಾರದ ಒಂದು ಗಿಡವನ್ನು ನೆಡಿ !

ಎಲೆಗಳನ್ನು ಕಿತ್ತರೂ ಒಂದೆರಡು ತಿಂಗಳಲ್ಲಿ ಅದಕ್ಕೆ ಪುನಃ ಎಲೆಗಳು ಬರುವವು; ಆದರೆ ದಸರಾದ ದಿನದಂದು ಎಲೆಗಳನ್ನು ಹಂಚುವ ಪದ್ಧತಿಯನ್ನು ತಡೆದರೆ ಮಾತ್ರ ಈ ಗಿಡಗಳು ೧೦- ೧೨ ವರ್ಷಗಳಲ್ಲಿ ಖಂಡಿತವಾಗಿಯೂ ನಾಶವಾಗುವವು. ಯಾವುದಾದರೊಂದು ಗಿಡದ ಎಲೆಗಳನ್ನು ಕಿತ್ತರೆ ಗಿಡ ನಾಶವಾಗುವುದು ಎಂದು ಯಾರಿಗೆ ಅನಿಸುತ್ತದೆಯೋ, ಅವರಿಗೆ ನಮ್ಮ ವನಸ್ಪತಿ ಶಾಸ್ತ್ರದ ಬಗ್ಗೆಯಿರುವ ಅಜ್ಞಾನ ತೋರ್ಪಡುತ್ತದೆ. ಗಿಡಗಳನ್ನು ಜೋಪಾನಮಾಡುವಾಗ ಬಹಳಷ್ಟು ಸಲ ಗಿಡಗಳ ಕೆಲವು ಎಲೆಗಳನ್ನು ಅಥವಾ ಕೊಂಬೆಗಳನ್ನು ಕತ್ತರಿಸಬೇಕಾಗುತ್ತದೆ. ಅದರಿಂದ ಆ ಮರವು ಹೊಸ ಚೈತನ್ಯದಿಂದ ಬೆಳೆಯುತ್ತದೆ; ಆದರೆ ಈ ಜನರಿಗೆ ಯಾವುದೇ ವಿಷಯದ ಅಧ್ಯಯನ ಇಲ್ಲದಿರುವುದರಿಂದ ಮತ್ತು ಕೇವಲ ಹಿಂದೂ ಹಬ್ಬ ಮತ್ತು ಧರ್ಮವನ್ನು ವಿರೋಧಿಸಬೇಕಾದುದರಿಂದ ಇಂತಹ ಸಂದೇಶವನ್ನು ಹರಡುತ್ತಾರೆ. ಪರಿಸರದ ಇಷ್ಟು ಕಾಳಜಿಯಿದ್ದರೆ, ಅವರು ಸ್ವತಃ ಗಿಡಗಳನ್ನು ನೆಡಬೇಕು. ಅವರನ್ನು ಯಾರೂ ತಡೆಯುವುದಿಲ್ಲ; ಆದರೆ ಇಂತಹ ಪರಂಪರೆಯನ್ನು ನಾಶ ಮಾಡಬೇಡಿರಿ. ಯಾರಿಗೆ ನಿಜವಾಗಿಯೂ ಪರಿಸರದ ಮತ್ತು ಮಂದಾರದ ಗಿಡಗಳ ಕಾಳಜಿ ಇದೆಯೋ ಅವರು ಈ ವರ್ಷದಿಂದ ಹೊಸ ಉಪಕ್ರಮವನ್ನು ಹಮ್ಮಿಕೊಳ್ಳಬೇಕು ಮತ್ತು ಪ್ರತಿವರ್ಷ ದಸರಾದಂದು ಒಂದು ಮಂದಾರದ (bauhinia racemosa) ಗಿಡವನ್ನು ಸ್ವತಃ ನೆಡಬೇಕು. ಹೀಗೆ ಎಲ್ಲರೂ ಸಕಾರಾತ್ಮಕ ವಿಚಾರವನ್ನು ಮಾಡಿ ನಮ್ಮ ಹಬ್ಬಉತ್ಸವಗಳನ್ನು ಆಚರಿಸಿದರೆ ನಿಜವಾಗಿಯೂ ನಮ್ಮ ಹಬ್ಬಗಳ ಆನಂದಕ್ಕೆ ಪಾರವೇ ಇರಲಾರದು.

– ಡಾ. ಸಚ್ಚಿದಾನಂದ ಶೇವಡೆ, ಹಿಂದುತ್ವನಿಷ್ಠ ಉಪನ್ಯಾಸಕರು, ಡೊಂಬಿವಲಿ, ಮಹಾರಾಷ್ಟ್ರ. (ಆಧಾರ : ದೈನಿಕ ‘ತರುಣ ಭಾರತ’, ೨೫.೧೦.೨೦೨೦)