ಸಮಾಜ, ರಾಷ್ಟ್ರ ಮತ್ತು ಧರ್ಮವನ್ನು ಎಲ್ಲ ರೀತಿಯಿಂದ ಅಭಿವೃದ್ಧಿಯ ಕಡೆಗೆ ಒಯ್ಯುವ ಸಂದೇಶವನ್ನು ಕೊಡುವ ದೀಪಾವಳಿ ಬೇಕು !

ಇಲ್ಲಿಯವರೆಗೆ ನಾವು ಸುಖಸಮೃದ್ಧಿಯ ಪ್ರತೀಕವಾಗಿರುವ ವ್ಯಷ್ಟಿ ದೀಪಾವಳಿಯನ್ನು ಉತ್ಸಾಹದಿಂದ ಆಚರಿಸುತ್ತ ಬಂದಿದ್ದೇವೆ. ಇಂದು ಭಯೋತ್ಪಾದನೆ, ಭ್ರಷ್ಟಾಚಾರ, ಅಪರಾಧ, ಬಲಾತ್ಕಾರ, ನಕ್ಸಲವಾದ, ಬಡತನ, ಹಿಂದೂಗಳ ಹತ್ಯೆ, ಗೋಹತ್ಯೆ ಇತ್ಯಾದಿ ದುಷ್ಪ್ರವೃತ್ತಿರೂಪಿ ರಜ-ತಮದ ಕತ್ತಲು ಎಲ್ಲ ಕಡೆಗೆ ಕಾಣಿಸುತ್ತಿದೆ. ನಮ್ಮ ಸಮಾಜ, ನಮ್ಮ ರಾಷ್ಟ್ರ ಮತ್ತು ನಮ್ಮ ಧರ್ಮ ಈ ಕತ್ತಲಿನಲ್ಲಿದೆ. ಆದುದರಿಂದಲೇ ಸಮಾಜವನ್ನು ಕತ್ತಲಿನಿಂದ ಬೆಳಕಿನೆಡೆಗೆ, ಅಂದರೆ ಎಲ್ಲ ರೀತಿಯ ಅಭಿವೃದ್ಧಿಯ ಕಡೆಗೆ ಒಯ್ಯುವುದು ಆವಶ್ಯಕವಾಗಿದೆ.

ಗೊವತ್ಸದ್ವಾದಶಿ ಗೋಮಾತೆಯ ಮಹತ್ವ ಸಾರುವ ಹಬ್ಬ ! …ಗೋಹತ್ಯೆಗಳು ಶಾಶ್ವತವಾಗಿ ನಿಲ್ಲಬೇಕು !

ಗೋವತ್ಸದ್ವಾದಶಿ ಎಂದರೆ ‘ಗೋವು ತನ್ನ ಕರುವಿಗೆ ಹಾಲು ಕುಡಿಸುತ್ತ ನಿಂತಿರುವ (ಸವತ್ಸಧೇನು)’, ಚಿತ್ರವು ಕಣ್ಣೆದುರಿಗೆ ಬರುತ್ತದೆ. ವಾತ್ಸಲ್ಯಪ್ರೇಮದ ಆ ಕ್ಷಣವು ಎಷ್ಟು ಹೃದಯಸ್ಪರ್ಶಿಯಾಗಿರುತ್ತದೆ ! ಆದರೆ ಈ ಭಾವ ಬಹಳ ಸಮಯ ಉಳಿಯುವುದಿಲ್ಲ. ಹಿಂದೂಗಳು ಗೋಹತ್ಯೆಯ ವಾರ್ತೆಗಳನ್ನು ಹಗಲೂ ರಾತ್ರಿ  ಕೇಳುತ್ತಿರುತ್ತಾರೆ. ಎಷ್ಟೋ ಕಿಲೋ ಟನ್ ಗೋಮಾಂಸ ಸಾಗಿಸುವ ಟ್ರಕ್ ಸಿಕ್ಕಿರುವ ವಾರ್ತೆಗಳು ಬರುತ್ತಿರುತ್ತವೆ. ಗೋರಕ್ಷಕರು ಪ್ರಾಣವನ್ನು ಪಣಕ್ಕಿಟ್ಟು ಎಷ್ಟೋ ವರ್ಷಗಳಿಂದ ಗೋರಕ್ಷಣೆಯನ್ನು ಮಾಡುತ್ತಿದ್ದಾರೆ; ಆದರೂ ಇಂದಿಗೂ ಮತಾಂಧರಿಗೆ ಅಪೇಕ್ಷಿತ ಕಠಿಣ ಶಿಕ್ಷೆಯಾಗುವುದು ಕಂಡುಬರುವುದಿಲ್ಲ. ೧೩ ರಾಜ್ಯಗಳಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಮತಾಂಧರ ಓಲೈಕೆ ಮತ್ತು ಭ್ರಷ್ಟಾಚಾರ ಇವುಗಳಿಂದಾಗಿ ಗೋಮಾತೆ ಮತ್ತು ಅದರ ಕರುವಿನ ವೇದನೆಗಳು ಇಂದಿಗೂ ಮುಗಿದಿಲ್ಲ… !

ನರಕಚತುರ್ದಶಿ ಮತ್ತು ಸಹೋದರ ಬಿದಿಗೆ ಇವು ಸ್ತ್ರೀಯರ ಸನ್ಮಾನದ ಹಬ್ಬಗಳು ! … ಸ್ತ್ರೀಯರಿಗೆ ಸುರಕ್ಷಿತವೆನಿಸುವಂತಹ ವಾತಾವರಣ ಸಂಪೂರ್ಣ ದೇಶದಲ್ಲಿ ಬೇಕು !

ನರಕಚತುರ್ದಶಿಯ ತಿಥಿಗೆ ಭಗವಾನ ಶ್ರೀಕೃಷ್ಣನು ನರಕಾಸುರನ ಬಂದಿವಾಸದಲ್ಲಿನ ಹದಿನಾರು ಸಾವಿರ ಸ್ತ್ರೀಯರನ್ನು ಮುಕ್ತ ಮಾಡಿ ನರಕಾಸುರನನ್ನು ವಧಿಸಿದನು. ಸಹೋದರ ಬಿದಿಗೆಯ ದಿನ ಸಹೋದರನು ಸಹೋದರಿಯ ರಕ್ಷಣೆಯ ಭರವಸೆಯ ಉಡುಗೊರೆಯನ್ನು ಸಹೋದರಿಗೆ ಕೊಡುತ್ತಾನೆ. ಪ್ರಸ್ತುತ ಯುವತಿಯರು ಮತ್ತು ಮಹಿಳೆಯರ ಮೇಲಾಗುವ ಅತ್ಯಾಚಾರಗಳು ಸೀಮಾತೀತವಾಗಿವೆ. ಅವರ ಸ್ಥಿತಿಯನ್ನು ನೋಡಿದರೆ ಅವರ ರಕ್ಷಣೆಗಾಗಿ ಯಾವ ಸಮಯದಲ್ಲಿಯೂ ಎಲ್ಲಿಯೂ ಧಾವಿಸಿ ಹೋಗುವುದು ಆವಶ್ಯಕವಾಗಿರುತ್ತದೆ. ಸ್ತ್ರೀಯರಿಗೆ ಸಂಪೂರ್ಣ ಸುರಕ್ಷಿತವೆನಿಸುವಂತಹ ವಾತಾವರಣ ಸೃಷ್ಟಿಸಲು ಪ್ರಜೆಗಳು ಧರ್ಮಾಚರಣಿಗಳಾಗುವುದು ಆವಶ್ಯಕವಾಗಿದೆ. ರಾಮ ರಾಜ್ಯದಲ್ಲಿ ಸ್ತ್ರೀಯರು ಸುರಕ್ಷಿತವಾಗಿದ್ದರು. ಅಂತಹ ರಾಮರಾಜ್ಯವನ್ನು, ಅಂದರೆ ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯದ ಹಾಗೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಮುಂದಾಳತ್ವವನ್ನು ವಹಿಸುವುದು, ಈಗಿನ ಕಾಲದ ಅವಶ್ಯಕತೆಯಾಗಿದೆ.

ಧನತ್ರಯೋದಶಿ ಮತ್ತು ಲಕ್ಷ್ಮಿ ಪೂಜೆ ಇವು ಸನ್ಮಾರ್ಗದಿಂದ ಧನಪ್ರಾಪ್ತಿ ಮಾಡುವುದನ್ನು ಕಲಿಸುವ ಹಬ್ಬಗಳು ! … ಭ್ರಷ್ಟಾಚಾರದ ಅಸುರನನ್ನು ಮುಗಿಸುವ ಇಚ್ಛೆಬೇಕು !

ಧನತ್ರಯೋದಶಿಯ ದಿನವು ಸನ್ಮಾರ್ಗದಿಂದ ಧನಪ್ರಾಪ್ತಿ ಮಾಡುವುದನ್ನು ಕಲಿಸುತ್ತದೆ. ‘ಒಳ್ಳೆಯ ನೀತಿಯ ಆಧಾರದಲ್ಲಿ ಧನಪ್ರಾಪ್ತಿ ಮಾಡಿಕೊಂಡು ಅದನ್ನು ಸತ್ಕಾರ್ಯಕ್ಕಾಗಿ ಉಪಯೋಗಿಸಬೇಕು’, ಎಂದು ಹಿಂದೂ ಧರ್ಮವು ಕಲಿಸುತ್ತದೆ. ಸದ್ಯ ನಮ್ಮ ದೇಶದಲ್ಲಿ ಇದರ ವಿರುದ್ಧ ನಡೆಯುತ್ತಿದ್ದು, ಭಾರತ ದೇಶವು ‘ಏಷ್ಯಾ ಖಂಡದಲ್ಲಿನ ಪ್ರಥಮ ಕ್ರಮಾಂಕದ ಭ್ರಷ್ಟ ದೇಶ’, ಎಂದು ಕುಪ್ರಸಿದ್ಧವಾಗಿದೆ. ಆಡಳಿತ ಸ್ತರದಲ್ಲಿ ಭ್ರಷ್ಟಾಚಾರ ಮತ್ತು ಹಗರಣಗಳು ಬೆಳಕಿಗೆ ಬಂದಿವೆ. ಸರಕಾರದ ಪದಾಧಿಕಾರಿಗಳೇ ಹೀಗೆ ಮಾಡಲು ಪ್ರಾರಂಭಿಸಿದರೆ ಜನರ ಮುಂದೆ ಎಂತಹ ಆದರ್ಶವಿರುವುದು ? ಜನರಲ್ಲಿನ ಕೆಲವು ಕುಜನರು ವಿಪರೀತ ಮಾರ್ಗವನ್ನು (ವಾಮಮಾರ್ಗವನ್ನು)  ಹಿಡಿದರು ಮತ್ತು ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಯಿತು. ಇವೆಲ್ಲ ಸ್ಥಿತಿಯ ಬದಲಾವಣೆಯನ್ನು ಮಾಡಲು ಹಿಂದೂಗಳು ಸಂಘಟಿತರಾಗಿ ಆದರ್ಶ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ಆವಶ್ಯಕವಾಗಿದೆ.

ಎಲ್ಲಕ್ಕಿಂತ ದೊಡ್ಡ ದೀಪೋತ್ಸವದ ಹಬ್ಬ ! … ಆದರೆ ಚೀನೀ ದೀಪಗಳ ಆಮದು ಬೇಡ !

ಚೀನೀ ಹಣತೆ, ದೀಪಾಲಂಕಾರದ ದೀಪ, ಇಂತಹ ಚೀನೀ ವಸ್ತುಗಳನ್ನು ಬಹಿಷ್ಕರಿಸದಿದ್ದರೆ, ನಾಳೆ ಚೀನಾದ ದೇವತೆಗಳು ಮತ್ತು ಸಾಮ್ಯವಾದವೂ ನಮ್ಮ ಮನೆಗೆ ಬರಲು ಸಮಯ ತಾಗಲಾರದು. ಮೊದಲು ಚೀನಾದ ನಗುವ ಗೊಂಬೆ (ಅಜ್ಜ) ಮನೆಮನೆಗೆ ತಲುಪಿತು. ನಮ್ಮ ಮಾಂಗಲ್ಯಮಯ ದೀಪಾವಳಿ ಹಬ್ಬದ ಮಹತ್ವದ ಆಕಾಶದೀಪಗಳೂ ಚೀನಾದಿಂದ ಬರಲು ಆರಂಭವಾದವು, ಆದರೂ ಯಾರೂ ಅದಕ್ಕೆ ವಿರೋಧದ ಒಂದು ಶಬ್ದವನ್ನೂ ಮಾತನಾಡಲಿಲ್ಲ. ಪ್ರತಿದಿನ ಚೀನಾ ಭಾರತದ ಗಡಿಯಲ್ಲಿ ಜಗಳಗಳನ್ನು ಮಾಡುತ್ತ ಆಕ್ರಮಣ ಮಾಡುವ ಸ್ಥಿತಿಯಲ್ಲಿರುವಾಗ ನಮ್ಮ ಹಬ್ಬಕ್ಕೆ ಚೀನೀ ವಸ್ತುಗಳನ್ನು ತೆಗೆದುಕೊಳ್ಳುವುದು ಎಂದರೆ ನಮ್ಮ ನಾಶಕ್ಕೆ ನಾವೇ ಶತ್ರುಗಳಿಗೆ ಹಣ ಕಳುಹಿಸಿದ ಹಾಗಿದೆ ! ಆದುದರಿಂದ ಚೀನೀ ವಸ್ತುಗಳನ್ನು ಬಹಿಷ್ಕರಿಸಿ.