ಬಲಿಪಾಡ್ಯ (ನವೆಂಬರ್ ೨)

ಬಲಿಪಾಡ್ಯದಂದು ೫ ಬಣ್ಣಗಳ ರಂಗೋಲಿಯಿಂದ ಬಲಿ ಮತ್ತು ಅವನ ಪತ್ನಿ ವಿಂಧ್ಯಾವಲಿಯ ಚಿತ್ರಗಳನ್ನು ಬಿಡಿಸಿ ಅವರ ಪೂಜೆಯನ್ನು ಮಾಡುತ್ತಾರೆ. ನಂತರ ಬಲಿ ಪ್ರೀತ್ಯರ್ಥ ದೀಪ ಮತ್ತು ವಸ್ತ್ರಗಳ ದಾನವನ್ನು ಮಾಡುತ್ತಾರೆ. ಈ ದಿನ ಪ್ರಾತಃಕಾಲ ಅಭ್ಯಂಗಸ್ನಾನ ಮಾಡಿದ ನಂತರ ಸ್ತ್ರೀಯರು ತಮ್ಮ ಪತಿಗೆ ಆರತಿಯನ್ನು ಬೆಳಗುತ್ತಾರೆ. ಮಧ್ಯಾಹ್ನ ಬ್ರಾಹ್ಮಣರಿಗೆ ಭೋಜನವನ್ನು ನೀಡುತ್ತಾರೆ. ಈ ದಿನ ಪಕ್ವಾನ್ನದ ಭೋಜನ ಮಾಡುತ್ತಾರೆ. ಈ ದಿನ ಜನರು ಹೊಸ ಬಟ್ಟೆಬರೆಗಳನ್ನು ಧರಿಸಿ ಇಡೀ ದಿನವನ್ನು ಆನಂದದಲ್ಲಿ ಕಳೆಯುತ್ತಾರೆ. ಈ ದಿನ ಗೋವರ್ಧನ ಪೂಜೆಯನ್ನು ಮಾಡುವ ಪದ್ಧತಿಯಿದೆ. ಇದಕ್ಕಾಗಿ ಸೆಗಣಿಯ ಪರ್ವತವನ್ನು ಮಾಡಿ ಅದರ ಮೇಲೆ ಗರಿಕೆ ಮತ್ತು ಹೂವುಗಳನ್ನು ಚುಚ್ಚುತ್ತಾರೆ. ಕೃಷ್ಣ, ಇಂದ್ರ, ಹಸು ಮತ್ತು ಕರುಗಳ ಚಿತ್ರ ಅಥವಾ ಮೂರ್ತಿಗಳನ್ನು ಜೊತೆಗಿಟ್ಟು, ಅವುಗಳನ್ನು ಪೂಜಿಸಿ ಮೆರವಣಿಗೆ ಮಾಡುತ್ತಾರೆ.