ಅಭ್ಯಂಗಸ್ನಾನದ ಸೂಕ್ಷ್ಮದಲ್ಲಿನ ಪರಿಣಾಮ ಮತ್ತು ಲಾಭಗಳನ್ನು ತೋರಿಸುವ ಸೂಕ್ಷ್ಮ-ಚಿತ್ರ !

ಆಶ್ವಯುಜ ಕೃಷ್ಣ ಪಕ್ಷ ಚತುರ್ದಶಿ (ನರಕಚತುರ್ದಶಿ), ಆಶ್ವಯುಜ ಅಮಾವಾಸ್ಯೆ ಮತ್ತು ಕಾರ್ತಿಕ ಶುಕ್ಲಪಕ್ಷ ಪ್ರತಿಪದೆ (ಬಲಿಪ್ರತಿಪದೆ), ಹೀಗೆ ದೀಪಾವಳಿಯ ಮೂರು ದಿನ ಅಭ್ಯಂಗಸ್ನಾನವನ್ನು ಮಾಡುತ್ತಾರೆ. ಅಭ್ಯಂಗಸ್ನಾನವೆಂದರೆ ಮುಂಜಾನೆ ಎದ್ದು ತಲೆಗೆ ಮತ್ತು ಶರೀರಕ್ಕೆ ಎಣ್ಣೆ ಮತ್ತು ಉಟಣೆಯನ್ನು ಹಚ್ಚಿ ನಂತರ ಉಗುರುಬೆಚ್ಚಗಿನ ನೀರಿನಿಂದ ಸ್ನಾನವನ್ನು ಮಾಡಬೇಕು. ಅಭ್ಯಂಗಸ್ನಾನದಿಂದ ರಜ-ತಮ ಗುಣಗಳು ಒಂದು ಲಕ್ಷಾಂಶಗಳಷ್ಟು ಕಡಿಮೆಯಾಗಿ ಸತ್ತ್ವಗುಣವು ಅಷ್ಟೇ ಪ್ರಮಾಣದಲ್ಲಿ ಹೆಚ್ಚುತ್ತದೆ ಮತ್ತು ಅವುಗಳ ಪ್ರಭಾವವು ಇತರ ದಿನದ ಸ್ನಾನಕ್ಕಿಂತ ಹೆಚ್ಚಾಗಿರುತ್ತದೆ. ಇಲ್ಲಿ ಅಭ್ಯಂಗಸ್ನಾನವನ್ನು ಮಾಡುವುದರಿಂದ ಆಗುವ ಪರಿಣಾಮ ಮತ್ತು ಲಾಭ ಇವುಗಳ ವಿಶ್ಲೇಷಣೆ ಮತ್ತು ಆ ಕುರಿತು ಸೂಕ್ಷ್ಮ-ಚಿತ್ರವನ್ನು ಕೊಡಲಾಗಿದೆ.

ನರಕಚತುರ್ದಶಿಯ ದಿನದಂದು ಅಭ್ಯಂಗಸ್ನಾನ ಮಾಡುವುದು 

ಕೃತಿ : ವ್ಯಕ್ತಿಗೆ ಮೊದಲು ಕುಂಕುಮದ ನಾಮವನ್ನು ಹಚ್ಚಲಾಗುತ್ತದೆ. ಅವನ ಶರೀರದ ಮೇಲಿನ ಭಾಗದಿಂದ ಕೆಳಗಿನ ಭಾಗದವರೆಗೆ ಎಣ್ಣೆಯನ್ನು ಹಚ್ಚಲಾಗುತ್ತದೆ. ನಂತರ ಎಣ್ಣೆ ಮತ್ತು ಉಟಣೆ ಇವುಗಳ ಮಿಶ್ರಣವನ್ನು ಮಾಡಿ ಪೂರ್ಣ ಶರೀರಕ್ಕೆ ಹಚ್ಚಲಾಗುತ್ತದೆ. ನಂತರ ಅವನಿಗೆ ಆರತಿ ಮಾಡಲಾಗುತ್ತದೆ. ಅನಂತರ ಅವನು ಎರಡು ತಂಬಿಗೆ ಬಿಸಿ ನೀರು ಮೈಮೇಲೆ ಹಾಕಿದ ನಂತರ ಉತ್ತರಣಿ ಅಥವಾ ತಗಚೆ ಇವುಗಳ ಟೊಂಗೆಯನ್ನು ಹಿಡಿದು ಮಂತ್ರವನ್ನು ಪಠಿಸಿ ಮೂರು ಸಲ ಅವನ ಮೈ ಮೇಲಿಂದ ತಿರುಗಿಸುತ್ತಾರೆ.

೧. ಶರೀರಕ್ಕೆ ಉಟಣೆ ಹಚ್ಚುವುದರಿಂದಾಗುವ ಲಾಭ

೧ ಅ. ಭಾವ : ಇನ್ನೊಬ್ಬರು ಉಟಣೆಯನ್ನು ಭಾವಪೂರ್ಣವಾಗಿ ಹಚ್ಚಿದುದರಿಂದ ಉಟಣೆಯನ್ನು ಹಚ್ಚಿಕೊಂಡವರ ದೇಹದಲ್ಲಿ ಭಾವದ ವಲಯ ನಿರ್ಮಾಣವಾಗುತ್ತದೆ.

೧ ಆ. ಶಕ್ತಿ : ಎಣ್ಣೆಮಿಶ್ರಿತ ಉಟಣೆಯನ್ನು ಹಚ್ಚುವುದರಿಂದ ತೇಜತತ್ತ್ವ ಸ್ವರೂಪ ಶಕ್ತಿಯ ಪ್ರವಾಹವು ವ್ಯಕ್ತಿಯ ಕಡೆಗೆ ಆಕರ್ಷಿತಗೊಳ್ಳುತ್ತದೆ.

೧ ಇ. ತೊಂದರೆದಾಯಕ ಶಕ್ತಿ : ದೊಡ್ಡ ಕೆಟ್ಟ ಶಕ್ತಿಗಳು ದೇಹದಲ್ಲಿ ನಿರ್ಮಾಣ ಮಾಡಿದ ತೊಂದರೆದಾಯಕ ಶಕ್ತಿಯ ವಿಘಟನೆಯಾಗುತ್ತದೆ ಮತ್ತು ತೊಂದರೆದಾಯಕ ಆವರಣವು ದೂರವಾಗುತ್ತದೆ.

೨. ಉಟಣೆಯನ್ನು ಹಚ್ಚಿ ಸ್ನಾನ ಮಾಡುವುದು

ಅ. ಉಟಣೆಯನ್ನು ಹಚ್ಚಿದ ನಂತರ ೨ ಚೆಂಬು ಬಿಸಿ ನೀರು ಮೈಮೇಲೆ ಹಾಕಿ ನಂತರ ಉತ್ತರಣಿ ಅಥವಾ ತಗಚೆಯ ಟೊಂಗೆಯನ್ನು ದೇಹದ ಸುತ್ತಲೂ ತಿರುಗಿಸುವುದರಿಂದ ದೇಹದ ಸುತ್ತಲೂ ಸಂರಕ್ಷಕಕವಚವು ತಯಾರಾಗುತ್ತದೆ.

ಆ. ಸ್ನಾನವನ್ನು ಮಾಡುವಾಗ ದೇಹದಲ್ಲಿ ಈಶ್ವರೀ ತತ್ತ್ವ ಮತ್ತು ಆನಂದ ಇವುಗಳ ಪ್ರವಾಹವು ಆಕರ್ಷಿತಗೊಳ್ಳುತ್ತವೆ ಮತ್ತು ದೇಹದಲ್ಲಿ ವಲಯಗಳು ನಿರ್ಮಾಣವಾಗುತ್ತವೆ.

ಇ. ಈಶ್ವರನಿಂದ ಬಂದ ಚೈತನ್ಯದ ಪ್ರವಾಹವು ಸ್ನಾನದ ನೀರಿನಲ್ಲಿ ಆಕರ್ಷಿತಗೊಳ್ಳುತ್ತದೆ.

– ಕು. ಪ್ರಿಯಾಂಕಾ ಲೊಟಲೀಕರ ((ಈಗಿನ ಸೌ. ಪ್ರಿಯಾಂಕಾ ಸುಯಶ ಗಾಡಗೀಳ)

ಇತರ ಅಂಶಗಳು

‘ಮೊದಲು ಶರೀರಕ್ಕೆ ಎಣ್ಣೆ ಹಚ್ಚುವುದರಿಂದ ತ್ವಚೆಯ ರಂಧ್ರಗಳಿಂದ ಶಕ್ತಿಯ ಕಣಗಳು ದೇಹದಲ್ಲಿ ಹರಡುತ್ತವೆ. ದೇಹಕ್ಕೆ ಎಣ್ಣೆಮಿಶ್ರಿತ ಲೇಪನವನ್ನು ಹಚ್ಚುವುದರಿಂದ ದೇಹದಲ್ಲಿ ಶಕ್ತಿಯ ಸ್ಪಂದನಗಳು ಹೆಚ್ಚು ಪ್ರಮಾಣದಲ್ಲಿ ನಿರ್ಮಾಣವಾಗುತ್ತವೆ. ಅಭ್ಯಂಗಸ್ನಾನವನ್ನು ಮಾಡುವಾಗ ಚೈತನ್ಯದ ಸ್ಪಂದನಗಳು ಹೆಚ್ಚು ಪ್ರಮಾಣದಲ್ಲಿ ನಿರ್ಮಾಣವಾಗುತ್ತವೆ ಮತ್ತು ಚೈತನ್ಯದ ಸ್ಪಂದನಗಳು ವಾತಾವರಣದಲ್ಲಿ ಪ್ರಕ್ಷೇಪಿತವಾಗುತ್ತವೆ. ದಿನನಿತ್ಯದ ಸ್ನಾನಕ್ಕಿಂತ ನರಕಚತುರ್ದಶಿಯ ದಿನದಂದು ಅಭ್ಯಂಗಸ್ನಾನವನ್ನು ಮಾಡುವುದರಿಂದ ಶೇ. ೫ ರಷ್ಟಕ್ಕಿಂತಲೂ ಹೆಚ್ಚು ಲಾಭವಾಗುತ್ತದೆ ಮತ್ತು ಮೇಲಿನ ಸ್ಪಂದನಗಳು ಹೆಚ್ಚು ಕಾಲ ದೇಹದಲ್ಲಿ ಉಳಿಯುತ್ತವೆ.’