ಮನೆಮನೆಗಳಲ್ಲಿ ಆನಂದದ ತೋರಣವನ್ನು ಕಟ್ಟುವ ಭಾರತೀಯ ದೀಪಾವಳಿ ಈಗ ವಿದೇಶಗಳಲ್ಲಿಯೂ ಚೈತನ್ಯವನ್ನು ಹಬ್ಬಿಸುತ್ತಿದೆ. ದೀಪಾವಳಿಯು ನೇರವಾಗಿ ಅಮೇರಿಕಾದ ರಾಷ್ಟ್ರಾಧ್ಯಕ್ಷರ ಮನೆಯವರೆಗೆ ತಲುಪಿದೆ, ಇಂಗ್ಲೆಂಡ್‌ನ ರಸ್ತೆಗಳಲ್ಲಿಯೂ ಅದರ ಮೆರುಗು ಕಾಣಿಸುತ್ತಿದೆ.
ಇತ್ತೀಚೆಗೆ ಇಡೀ ಜಗತ್ತು ಒಂದು ಗ್ಲೋಬಲ ವಿಲೇಜ ಆಗಿರುವುದರಿಂದ ಪ್ರತಿಯೊಂದು ದೇಶಗಳಲ್ಲಿಯೂ ವಿವಿಧ ದೇಶಗಳ ಜನರು ನೌಕರಿ, ವ್ಯಾಪಾರ ಮತ್ತು ಶಿಕ್ಷಣಗಳ ನಿಮಿತ್ತದಿಂದ ಹೋಗುತ್ತಾರೆ. ಕಾಲಾಂತರದಲ್ಲಿ ಅಲ್ಲಿಯೇ ನೆಲೆಸುತ್ತಾರೆ. ಭಾರತೀಯ ಜನರು ಅದಕ್ಕೆ ಅಪವಾದವಲ್ಲ. ಜನರೊಂದಿಗೆ ಅವರ ಸಂಸ್ಕೃತಿ, ಭಾಷೆ, ಮತ್ತು ಹಬ್ಬಗಳು ಎಲ್ಲವು ಬರುತ್ತವೆ.
ಇದರಿಂದ ಈಗ ಜಗತ್ತಿನಾದ್ಯಂತ ಹೆಚ್ಚಿರುವ ಭಾರತೀಯರು ದೀಪಾವಾಳಿ ಅಥವಾ ದೀಪಾವಳಿ ಈ ಹಬ್ಬವೂ ಜಗತ್ತಿನಾದ್ಯಂತ ರಾರಾಜಿಸುತ್ತಿದೆ. ಇದರಲ್ಲಿ ವಿವಿಧ ಉಡುಗೆ ತೊಡುಗೆಗಳು, ಭಾರತೀಯ ಪಕ್ವಾನ್ನಗಳು, ಸಿಹಿ ತಿನಿಸುಗಳು, ಸಾಂಸ್ಕೃತಿಕ ಕಾರ್ಯಕ್ರಮ, ರಂಗೋಲಿ, ಮೆಹಂದಿ, ದೀಪಗಳು, ಇತರ ಕಾರ್ಯಕ್ರಮಗಳು ಹಾಗೂ ಚಿತ್ತಾರಗಳ ಪಟಾಕಿಗಳೂ ಇರುತ್ತವೆ. ಭಾರತದ ಅಕ್ಕಪಕ್ಕದಲ್ಲಿರುವ ಹಾಗೆಯೇ ಮುಂದುವರಿದ ಕೆಲವು ದೇಶಗಳಲ್ಲಿ ಅದನ್ನು ಆಚರಿಸುವಾಗ ಭಾರತಕ್ಕಿಂತ ವಿಭಿನ್ನವಾಗಿ ಯಾವ ವಿಷಯಗಳು ಇರುತ್ತವೆ ಎನ್ನುವುದರ ಕೆಲವು ಛಾಯಾಚಿತ್ರಗಳನ್ನು ನೋಡೋಣ.