ಬಲಿಪಾಡ್ಯದಂದು ಗೋವರ್ಧನ ಪೂಜೆ ಮಾಡುವ ಪದ್ಧತಿಯಿದೆ. ಭಗವಾನ್ ಶ್ರೀ ಕೃಷ್ಣನಿಂದ ಈ ದಿನ ಇಂದ್ರ ಪೂಜೆಯ ಬದಲು ಗೋವರ್ಧನ ಪೂಜೆಯನ್ನು ಆರಂಭಿಸಲಾಯಿತು. ಅದರ ನೆನಪಿಗಾಗಿ ಈ ದಿನದಂದು ಗೋವರ್ಧನ ಪೂಜೆ ಮಾಡುತ್ತಾರೆ. ಪ್ರಾತಃಕಾಲದಲ್ಲಿ ಮನೆಯ ಪ್ರವೇಶದ್ವಾರದ ಎದುರು ಗೋಮಯದಿಂದ (ಹಸುವಿನ ಸಗಣಿ) ಗೋವರ್ಧನ ಪರ್ವತ ಮಾಡಿ ಗರಿಕೆ ಮತ್ತು ಹೂವುಗಳನ್ನು ಅರ್ಪಿಸುತ್ತಾರೆ.
ಧರ್ಮಶಾಸ್ತ್ರದಲ್ಲಿ ಮುಂದಿನಂತೆ ಹೇಳಲಾಗಿದೆ – ಈ ಗೋವರ್ಧನ ಪರ್ವತದ ಶಿಖರ ತಯಾರಿಸಬೇಕು. ವೃಕ್ಷಗಳು ರೆಂಬೆಗಳು ಮತ್ತು ಹೂವುಗಳಿಂದ ಅಲಂಕರಿಸಬೇಕು. ಅದರ ಪಕ್ಕದಲ್ಲಿ ಕೃಷ್ಣ, ಇಂದ್ರ, ಗೋವುಗಳು, ಕರುಗಳು ಇವುಗಳ ಚಿತ್ರಗಳನ್ನು ಅಲಂಕರಿಸಿ ಅವುಗಳ ಪೂಜೆ ಮಾಡುತ್ತಾರೆ ಮತ್ತು ಚಿತ್ರರಥ ಬರೆಯುತ್ತಾರೆ; ಆದರೆ ಅನೇಕ ಸ್ಥಳಗಳಲ್ಲಿ ಇದು ಮನುಷ್ಯನ ರೂಪದಲ್ಲಿ ತಯಾರಿಸುತ್ತಾರೆ ಮತ್ತು ಹೂವುಗಳಿಂದ ಅಲಂಕರಿಸುತ್ತಾರೆ. ಗಂಧ ಹೂವುಗಳಿಂದ ಅದರ ಪೂಜೆ ಮಾಡಿ ಪ್ರಾರ್ಥನೆ ಮಾಡುತ್ತಾರೆ.