ಪಟಾಕಿಯನ್ನು ಸಿಡಿಸುವುದರಿಂದ ಆಧ್ಯಾತ್ಮಿಕ ಸ್ತರದಲ್ಲಾಗುವ ದುಷ್ಪರಿಣಾಮಗಳನ್ನು ತಿಳಿಯಿರಿ !

‘ಭಜನೆ, ಆರತಿ ಅಥವಾ ಸಾತ್ತ್ವಿಕ ನಾದಗಳಿಂದ ಒಳ್ಳೆಯ ಶಕ್ತಿ ಅಥವಾ ದೇವತೆಗಳು ಬರುತ್ತಾರೆ, ಆದರೆ ಪಟಾಕಿ ಮತ್ತು ತಾಮಸಿಕ ಆಧುನಿಕ ಸಂಗೀತ ಇವುಗಳಿಂದ ಕೆಟ್ಟ ಶಕ್ತಿಗಳು ಆಕರ್ಷಿಸಲ್ಪಡುತ್ತವೆ. ಕೆಟ್ಟ ಶಕ್ತಿಗಳಲ್ಲಿನ ತಮೋಗುಣದ ಪರಿಣಾಮವು ಮನಸ್ಸಿನ ಮೇಲಾಗುತ್ತದೆ ಮತ್ತು ಅದರ ವೃತ್ತಿಯೂ ತಾಮಸಿಕವಾಗುತ್ತದೆ.

೧. ಪಟಾಕಿಗಳ ಧ್ವನಿಯಿಂದ ಕೆಟ್ಟ ಶಕ್ತಿಗಳು ಜಾಗೃತಗೊಳ್ಳುವುದು 

ಪಟಾಕಿಗಳನ್ನು ಸಿಡಿಸುವಾಗ ಆಗುವ ದೊಡ್ಡ ಮತ್ತು ಕರ್ಣಕರ್ಕಶ ನಾದದಿಂದಾಗಿ ವಾತಾವರಣದಲ್ಲಿನ ಕೆಟ್ಟ ಶಕ್ತಿಗಳು ಜಾಗೃತವಾಗುತ್ತವೆ ಮತ್ತು ಅದೇ ಮುಂದೆ ಮನುಷ್ಯನ ನಾಶಕ್ಕಾಗಿ ಕಾರಣವಾಗುತ್ತದೆ.

೨. ಕೆಟ್ಟ ಶಕ್ತಿಗಳು ಆಕ್ರಮಣ ಮಾಡುವುದು

ಪಟಾಕಿಗಳನ್ನು ಸಿಡಿಸುವವರ ಮೇಲೆಯೇ ಕೆಟ್ಟ ಶಕ್ತಿಗಳು ಮೊದಲು ಆಕ್ರಮಣ ಮಾಡುತ್ತವೆ, ಅಂದರೆ ಆ ವ್ಯಕ್ತಿಗೆ ಈ ಜಾಗೃತವಾಗಿರುವ ಕೆಟ್ಟ ಶಕ್ತಿಗಳಿಂದ ತೊಂದರೆಯಾಗಬಹುದು.

೩. ಪಟಾಕಿಗಳ ಹೊಗೆಯಲ್ಲಿನ ಕಪ್ಪು ಶಕ್ತಿಯನ್ನು ತೆಗೆದುಕೊಳ್ಳಲು ಅಲ್ಲಿ ಕೆಟ್ಟ ಶಕ್ತಿಗಳು ಮೊದಲೇ ಉಪಸ್ಥಿತವಿರುವುದು

ಪಟಾಕಿಗಳ ತೊಂದರೆದಾಯಕ ಹೊಗೆಯಿಂದ ಕಪ್ಪು ಶಕ್ತಿಯು ದೊಡ್ಡ ಪ್ರಮಾಣದಲ್ಲಿ ಎಲ್ಲೆಡೆ ಹರಡುತ್ತಿರುವುದರಿಂದ ಈ ಕಪ್ಪು ಶಕ್ತಿಯನ್ನು ತೆಗೆದುಕೊಳ್ಳಲು ಆ ಸ್ಥಳದಲ್ಲಿ ಕೆಟ್ಟ ಶಕ್ತಿಗಳು ಮೊದಲೇ ಸೂಕ್ಷ್ಮದಿಂದ ಉಪಸ್ಥಿತರಿರುತ್ತವೆ. ಇದರಿಂದ ಮನೆಯ ಪರಿಸರದಲ್ಲಿನ ಸ್ಪಂದನಗಳೂ ತೊಂದರೆದಾಯಕವಾಗುತ್ತವೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

೪. ವ್ಯಕ್ತಿಯು ತೀವ್ರ ಕಾಯಿಲೆಗೆ ತುತ್ತಾಗುವುದು

ಕಾಲಾಂತರದಿಂದ ಅನೇಕ ವರ್ಷಗಳ ವರೆಗೆ ಯಾವುದಾದರೊಂದು ಪರಿಸರದಲ್ಲಿ ಪಟಾಕಿಗಳನ್ನು ಸಿಡಿಸುತ್ತಿದ್ದರೆ, ಅಲ್ಲಿನ ವ್ಯಕ್ತಿಗಳು ಕೆಟ್ಟ ಶಕ್ತಿಗಳ ತೊಂದರೆಯಿಂದ ಬಳಲುತ್ತಾರೆ ಮತ್ತು ಕಾಲಾಂತರದಲ್ಲಿ ತೀವ್ರ ಕಾಯಿಲೆಗಳಿಗೆ ತುತ್ತಾಗುತ್ತಾರೆ.

೫. ಪಟಾಕಿಗಳ ವಿಷಕಾರಿ ಹೊಗೆಯಿಂದ ಯಾವುದಾದರೊಂದು ಸ್ಥಾನದಲ್ಲಿ ದೇವ-ದೇವತೆಗಳಿಗೆ ಅಥವಾ ತಪಸ್ಸು ಮಾಡುವ ಪುಣ್ಯಾತ್ಮಗಳಿಗೆ ಅಲ್ಲಿಂದ ಹೊರಟು ಹೋಗಬೇಕಾಗುವುದು ಮತ್ತು ಅದರಿಂದ ಪಟಾಕಿಗಳನ್ನು ಸಿಡಿಸುವ ವ್ಯಕ್ತಿಗೆ ಅದರ ಪಾಪವು ತಟ್ಟುವುದು.

ಪಟಾಕಿಗಳ ಧ್ವನಿಯಿಂದ, ಹಾಗೆಯೇ ಅದರಿಂದ ಹೊರಡುವ ವಿಷಕಾರಿ ಹೊಗೆಯಿಂದ ಯಾವುದಾರೊಂದು ಸ್ಥಾನದಲ್ಲಿ ದೇವ-ದೇವತೆಗಳ ವಾಸ್ತವ್ಯವಿದ್ದರೆ, ಅವರಿಗೆ ಅಲ್ಲಿಂದ ಹೊರಟು ಹೋಗಬೇಕಾಗುತ್ತದೆ. ಆದುದರಿಂದ ಈ ದೇವ-ದೇವತೆಗಳ ಶಾಪವೂ ಪಟಾಕಿಗಳನ್ನು ಹಾರಿಸುವವರಿಗೆ ತಟ್ಟುತ್ತದೆ. ಕೆಲವೊಮ್ಮೆ ಅನೇಕ ಪುಣ್ಯಾತ್ಮಗಳು ಯಾವುದಾದರೊಂದು ಕ್ಷೇತ್ರದಲ್ಲಿ ಸೂಕ್ಷ್ಮದಿಂದ ತಪಸ್ಸು ಮಾಡುತ್ತಿರುತ್ತಾರೆ. ಪಟಾಕಿಗಳನ್ನು ಸಿಡಿಸುವುದರಿಂದ ವಾತಾವರಣದಲ್ಲಿನ ಚೈತನ್ಯವು ಕಡಿಮೆಯಾಗಿ ಅವರ ತಪಃಸಾಧನೆಗೆ ಅಡ್ಡಿಯಾಗುತ್ತದೆ ಅವರೂ ಆ ವ್ಯಕ್ತಿಗೆ ಶಾಪವನ್ನು ಕೊಟ್ಟು ಬೇರೆ ಸ್ಥಾನವನ್ನು ಹುಡುಕಲು ಅಲ್ಲಿಂದ ಹೊರಟು ಹೋಗುತ್ತಾರೆ. ದೀಪಾವಳಿಯಂತಹ ಮಹತ್ವದ ಹಬ್ಬಗಳಲ್ಲಿ ಅಥವಾ ಯಾವುದೇ ಸಭೆ-ಸಮಾರಂಭಗಳಲ್ಲಿ ಪಟಾಕಿಗಳನ್ನು ಸಿಡಿಸದಿರುವುದೇ ಹೆಚ್ಚು ಒಳ್ಳೆಯದು.’

– ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (ವರ್ಷ ೨೦೧೧)

ಹಬ್ಬ-ಹರಿದಿನಗಳಲ್ಲಿ ಅಶಾಸ್ತ್ರೀಯ ಪಟಾಕಿಗಳನ್ನು ಸಿಡಿಸುವುದು ರಾಷ್ಟ್ರ ಮತ್ತು ಧರ್ಮ ದ್ರೋಹ !

ದೀಪಾವಳಿ ಹಬ್ಬವನ್ನು ಆಚರಿಸುವಾಗ ದೊಡ್ಡ ಪ್ರಮಾಣದಲ್ಲಿ ಪಟಾಕಿಗಳನ್ನು ಸಿಡಿಸಲಾಗುತ್ತದೆ. ದೇಶವು ಆರ್ಥಿಕ ಸಂಕಟದಲ್ಲಿರುವಾಗ ಮತ್ತು ಭಯೋತ್ಪಾದನೆಯ ಕರಿನೆರಳಿನಲ್ಲಿ ಗಂಭೀರ ಸ್ಥಿತಿಯಲ್ಲಿರುವಾಗ ದೀಪಾವಳಿ ಹಬ್ಬವನ್ನು ಆಚರಿಸಲು ಅಶಾಸ್ತ್ರೀಯ ಪಟಾಕಿಗಳನ್ನು ಸಿಡಿಸುವುದು, ಎಂದರೆ ರಾಷ್ಟ್ರ ಮತ್ತು ಧರ್ಮದ್ರೋಹವಾಗಿದೆ !

 

ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ-ಪುರಾಣಗಳಲ್ಲಿ ಇವೆ.