ಕೃತಕ ದೀಪಾಲಂಕಾರದಿಂದ ಸೂಕ್ಷ್ಮದಲ್ಲಾಗುವ ಅನಿಷ್ಟ ಪರಿಣಾಮಗಳನ್ನು ಗಮನದಲ್ಲಿಡಿ !

ದೀಪಾವಳಿಯ ದಿನದಂದು ಕೃತಕ, ಮಿನುಗುವ ಮತ್ತು ವಿಚಿತ್ರ ಆಕಾರದ ದೀಪಾಲಂಕಾರದಿಂದ ಬೆಳಕಿನ ಸ್ವರೂಪದಲ್ಲಿ ತಮ ಊರ್ಜಾತ್ಮಕ ಶಕ್ತಿಯು ಪ್ರಕ್ಷೇಪಿಸುವುದು

ಇತ್ತೀಚೆಗೆ ಪೇಟೆಯಲ್ಲಿ ಕೃತಕ ಮಿನುಗುವ ಇಲೆಕ್ಟ್ರಿಕ್ ದೀಪಗಳ ಮಾಲೆಗಳು ಸಿಗುತ್ತವೆ. ಕೆಲವು ದೀಪಗಳು ಶಾಂತವಾಗಿರುತ್ತವೆ, ಕೆಲವು ದೀಪಗಳು ಹೆಚ್ಚು ಪ್ರಮಾಣದಲ್ಲಿ ಬಂದಾಗುವುದು ಚಾಲು ಆಗುವುದು ಆಗುತ್ತವೆ. ಕೆಲವು ದೀಪಗಳ ಬಣ್ಣವೂ ತುಂಬಾ ತೀವ್ರ ಮತ್ತು ಕಣ್ಣುಗಳಿಗೆ ತೊಂದರೆಯನ್ನುಂಟು ಮಾಡುತ್ತವೆ. ‘ಕೃತಕ ದೀಪಾಲಂಕಾರಗಳಿಂದ ಸೂಕ್ಷ್ಮದಲ್ಲಿ ಏನು ಪರಿಣಾಮವಾಗುತ್ತದೆ’, ಎಂಬುದನ್ನು ಗಮನದಲ್ಲಿಡೋಣ ಮತ್ತು ಅವುಗಳನ್ನು ಮಾಡುವುದನ್ನು ತಡೆಯೋಣ !

೧. ಕೃತಕ ದೀಪಾಲಂಕಾರವನ್ನು ಮಾಡುವುದರಿಂದ ಆಗುವ ಪರಿಣಾಮ

‘ದೀಪಾವಳಿಯ ದಿನ ಮಾಡಲಾಗುವ ಕೃತಕ ದೀಪಾಲಂಕಾರದಿಂದ ವಾತಾವರಣದಲ್ಲಿ ಪ್ರವಹಿಸುವ ಈಶ್ವರನ ತಾರಕ ಲಹರಿಗಳು ಕೃತಕ ದೀಪಾಲಂಕಾರದಿಂದ ಪ್ರಕ್ಷೇಪಿಸುವ ತೇಜೋಮಯವು ತಮಾತ್ಮಕ ಊರ್ಜೆಯಿಂದಾಗಿ ವೇಗದ ಕೊರತೆಯಿಂದ ಸಂಚಾರಾತ್ಮಕ ಸ್ಥಿತಿಯಿಂದ ಸ್ಥಿರ ಸ್ವರೂಪದಲ್ಲಿ ಬದ್ಧವಾಗುತ್ತವೆ. ವಾತಾವರಣದಲ್ಲಿರುವ ಕನಿಷ್ಠ ಕೆಟ್ಟ ಶಕ್ತಿಗಳು ವಾಯುಮಂಡಲದಲ್ಲಿ ಗತಿಮಾನವಾಗಿ ಸಂಪೂರ್ಣ ವಾತಾವರಣದಲ್ಲಿನ ನೈಸರ್ಗಿಕ ಕ್ಷಮತೆಯನ್ನು ಹೀರಿಕೊಳ್ಳುತ್ತವೆ. ವಾತಾವರಣದಲ್ಲಿ ರಜ-ತಮದಿಂದ ತುಂಬಿ ಮತ್ತು ಸ್ಮಶಾನದಂತೆ ತೊಂದರೆದಾಯಕವಾಗುತ್ತದೆ.

೨. ಮಿನುಗುವ ದೀಪಾಲಂಕಾರಗಳಿಂದಾಗುವ ಪರಿಣಾಮ

ಶ್ರೀ. ನಿಷಾದ ದೇಶಮುಖ

ಮಿನುಗುವ ದೀಪಾಲಂಕಾರದ ಆಕರ್ಷಣೆಯ ಕ್ಷಮತೆಯಿಂದ ಪ್ರಕ್ಷೇಪಿಸುವ ರಜೋಗುಣದ ಹೊದಿಕೆಯೊಂದಿಗೆ ಕೆಟ್ಟ ಶಕ್ತಿಗಳು ಆ ಬೆಳಕಿನ ಉಪಯೋಗವನ್ನು ಮಾಡಿಕೊಂಡು ದೀಪಾಲಂಕಾರವನ್ನು ನೋಡುವ ಜೀವಗಳ ಮೇಲೆ ತೊಂದರೆದಾಯಕ ಶಕ್ತಿಯನ್ನು ಪ್ರಕ್ಷೇಪಿಸುತ್ತವೆ. ಆದುದರಿಂದ ಜೀವದ ಸುತ್ತಲೂ ೫-೬ ಅಡಿಯಷ್ಟು ದೊಡ್ಡ ಆವರಣವನ್ನು ನಿರ್ಮಾಣ ಮಾಡುವುದು ಅವರಿಗೆ ಸಹಜವಾಗಿ ಸಾಧ್ಯವಾಗುತ್ತದೆ.

೩. ವಿಚಿತ್ರ ಆಕಾರದಲ್ಲಿ ದೀಪಾಲಂಕಾರವನ್ನು ಮಾಡುವುದರಿಂದ ಆಗುವ ಪರಿಣಾಮ

ಒಂದು ಸಾಲಿನಲ್ಲಿ ದೀಪಾಲಂಕಾರವನ್ನು ಮಾಡದಿರುವುದರಿಂದ ದೀಪಾಲಂಕಾರದ ವಿಚಿತ್ರ ಆಕಾರಗಳ ಮಾಧ್ಯಮದಿಂದ ದೊಡ್ಡ ಶಕ್ತಿಗಳಿಗೆ ವಿವಿಧ ರೀತಿಯ ತೊಂದರೆದಾಯಕ ಶಕ್ತಿಗಳ ಸಮೂಹದಿಂದ ಒಂದೇ ಸಮಯಕ್ಕೆ ಸಂಪೂರ್ಣ ವಾಯುಮಂಡಲದಲ್ಲಿ ಪ್ರಕ್ಷೇಪಿಸಲು ಸಾಧ್ಯವಾಗುತ್ತದೆ.’

– ಶ್ರೀ. ನಿಷಾದ ದೇಶಮುಖ, ರಾಮನಾಥಿ, ಗೋವಾ. (೮.೧೦.೨೦೦೬)

ದೀಪಾವಳಿಯ ದಿನದಂದು ಆಡುವ ಜೂಜಾಟದ ಸೂಕ್ಷ್ಮದ ದುಷ್ಪರಿಣಾಮ !

ದೀಪಾವಳಿಯ ದಿನ ಜೂಜಾಡುವುದರಿಂದ ಸಮಾಜದ ಮೇಲೆ ಪ್ರಕ್ಷೇಪಿತವಾಗುವ ಶ್ರೀ ಲಕ್ಷ್ಮಿತತ್ತ್ವಕ್ಕೆ ನಿರ್ಬಂಧವಾಗುವುದು ಮತ್ತು ದೊಡ್ಡ ಕೆಟ್ಟ ಶಕ್ತಿಗಳು ಆ ಮಾಧ್ಯಮದಿಂದ ಸಂಪೂರ್ಣ ಸಮಾಜದ ಮೇಲೆ ಅಲಕ್ಷ್ಮಿಯ ತತ್ತ್ವದ ಸುರಿಮಳೆಯನ್ನು ಸುರಿಸುವುದು

ದೀಪಾವಳಿಯ ದಿನದಂದು ಮಾಡಲಾಗುವ ಸಮಷ್ಟಿಯ ಇಚ್ಛಾಶಕ್ತಿಯ ನಿರ್ಗುಣ ಶಕ್ತಿಯ ಮೇಲೆ ಸಗುಣ ಪೂಜೆಯಿಂದ ಕಾರ್ಯನಿರತವಾಗುವ ಸೂಕ್ಷ್ಮ ಕ್ರಿಯಾಕ್ಷೇತ್ರದಿಂದ ಧನದ ದೇವಿಯಾಗಿರುವ ಶ್ರೀ ಮಹಾಲಕ್ಷ್ಮಿಯು ಆಕೃಷ್ಟವಾಗಿ ಸಾಧನೆಯನ್ನು ಮಾಡುವ ಜೀವಗಳ ಸೂಕ್ಷ್ಮದೇಹದ ಮೇಲೆ ಈಶ್ವರಪ್ರಾಪ್ತಿಯನ್ನು ಮಾಡಿಕೊಡುವ ಧನದ, ಅಂದರೆ ಗುಣಗಳ ಸಂಸ್ಕಾರವನ್ನು ಮಾಡುತ್ತಾಳೆ. ಸಮಷ್ಟಿ ಸ್ತರದಲ್ಲಿ ಜೂಜು ಆಡುವುದರಿಂದ ಪೂಜೆ ಮಾಡಿದ ನಂತರ ನಿರ್ಮಾಣವಾಗುವ ಸೂಕ್ಷ್ಮ ಕ್ರಿಯಾಕ್ಷೇತ್ರದ ಧನತ್ವವು ಆಕುಂಚನವಾಗಿ ಸಮಾಜದ ಮೇಲೆ ಪ್ರಕ್ಷೇಪಿಸುವ ಲಕ್ಷ್ಮಿತತ್ತ್ವವನ್ನು ನಿರ್ಬಂಧಿಸುತ್ತದೆ. ಜೂಜುಗಳಂತಹ ತಮವರ್ಧಕ ಆಟಗಳನ್ನು ದೀಪಾವಳಿ ಹಬ್ಬದಲ್ಲಿ ಆಡುವುದರಿಂದ ದೊಡ್ಡ ಕೆಟ್ಟ ಶಕ್ತಿಗಳು ಅಲ್ಲಿಗೆ ಬಂದು ಜೀವಗಳನ್ನು ತಮ್ಮ ಮಾಯಾಜಾಲದಲ್ಲಿ ಸಿಲುಕಿಸಿ ಅವರ ಮೇಲೆ ಮತ್ತು ಅವರ ಮಾಧ್ಯಮದಿಂದ ಸಮಾಜದ ಮೇಲೆ ಅಲಕ್ಷ್ಮಿತತ್ತ್ವವನ್ನು ಸುರಿಸಿ ಸಮಾಜದ ಸಮೃದ್ಧಿಯನ್ನು ನಷ್ಟಗೊಳಿಸುತ್ತವೆ. ಸ್ಥೂಲ ಸ್ತರದಲ್ಲಿ ಆಡಲಾಗುವ ಈ ಆಟವು ಸೂಕ್ಷ್ಮ ಸ್ತರದಲ್ಲಿ ಮಹಾಭಯಂಕರ ಪರಿಣಾಮ ಬೀರುತ್ತದೆ.’

– ಶ್ರೀ. ನಿಷಾದ ದೇಶಮುಖ, ರಾಮನಾಥಿ, ಗೋವಾ (೮.೧೦.೨೦೦೬)