ಮುಂಬರುವ ಭೀಕರ ಆಪತ್ಕಾಲದಲ್ಲಿ ಸುರಕ್ಷಿತವಾಗಿರಲು ಸಹೋದರ ಬಿದಿಗೆಯಂದು ಸಹೋದರ ಸಹೋದರಿಯರು ಮಾಡಬೇಕಾದ ಪ್ರಾರ್ಥನೆ !

ಶ್ರೀ. ಸಿದ್ಧೇಶ ಕರಂದಿಕರ

‘ಸಹೋದರಬಿದಿಗೆಯ ದಿನದಂದು ಸಹೋದರಿಯು ಸಹೋದರನಿಗೆ ಆರತಿಯನ್ನು ಬೆಳಗುತ್ತಾಳೆ. ಅನಂತರ ಸಹೋದರನು ಸಹೋದರಿಗೆ ಅವಳ ನಿತ್ಯ ಉಪಯೋಗದ ವಸ್ತು, ಗ್ರಂಥ ಇಂತಹ ಉಡುಗೊರೆಯನ್ನು ನೀಡುತ್ತಾನೆ. ಪ್ರತಿವರ್ಷದಂತೆ ಈ ವರ್ಷವೂ ಸಹೋದರನು ಸಹೋದರಿಗೆ ಉಡುಗೊರೆಯನ್ನು ಕೊಡಬಹುದು. ಆ ಸಮಯದಲ್ಲಿ ಸಹೋದರಿ- ಸಹೋದರರು ಅವರ ಉಪಾಸ್ಯದೇವತೆ ಅಥವಾ ಗುರುದೇವರಲ್ಲಿ ‘ಮುಂಬರುವ ಭೀಕರ ಕಾಲದಲ್ಲಿ ನಮ್ಮ ರಕ್ಷಣೆಯಾಗಲಿ. ಈ ಭೀಕರ ಕಾಲವನ್ನು ಎದುರಿಸಲು ಆತ್ಮಬಲ ಮತ್ತು ಮನೋಬಲ ಸಿಗಲಿ. ನಮ್ಮಿಂದ ನಿರಂತರ ಭಗವಂತನ ನಾಮಸ್ಮರಣೆಯಾಗಲಿ’, ಹೀಗೆ ಪ್ರಾರ್ಥನೆಯನ್ನು ಮಾಡಬೇಕು.

ಅನೇಕ ದಾರ್ಶನಿಕ ಸಂತರು ಹೇಳಿದಂತೆ ಮುಂಬರುವ ಕಾಲವು ಅತ್ಯಂತ ಭೀಕರವಾಗಿದೆ. ಆ ಕಾಲದಲ್ಲಿ ಯಾವ ಸಹೋದರನು ಅವನ ಸಹೋದರಿಯ ಅಥವಾ ಯಾವುದೇ ಸಹೋದರಿಯು ಅವಳ ಸಹೋದರನ ರಕ್ಷಣೆಯನ್ನು ಮಾಡಲು ಸಾಧ್ಯವಿಲ್ಲ. ಈ ಕಾಲದಲ್ಲಿ ಕೇವಲ ಭಗವಂತನೇ ನಮ್ಮ ರಕ್ಷಣೆಯನ್ನು ಮಾಡಲು ಸಾಧ್ಯ. ಆದುದರಿಂದ ಸಹೋದರಬಿದಿಗೆಯ ಶುಭದಿನದಂದು ಸಹೋದರ-ಸಹೋದರಿಯರು ಪರಸ್ಪರರ ರಕ್ಷಣೆಗಾಗಿ ಭಗವಂತನಿಗೆ ಈ ಲೇಖನದಲ್ಲಿರುವ ಪ್ರಾರ್ಥನೆಯ ಮಾಧ್ಯಮದಿಂದ ಹರಕೆಯನ್ನು ಹೇಳಬೇಕು.’

– ಶ್ರೀ. ಸಿದ್ಧೇಶ ಕರಂದಿಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೮.೧೧.೨೦೨೦)

ಕಾರ್ಯಕ್ರಮವನ್ನು ದೀಪಪ್ರಜ್ವಲನೆಯಿಂದ ಪ್ರಾರಂಭಿಸಬೇಕು. ದೀಪಪ್ರಜ್ವಲನೆಯನ್ನು ತಮೋಗುಣಿ ಮೇಣದಬತ್ತಿಯಿಂದ ಮಾಡದೇ ಎಣ್ಣೆಯ ದೀಪದಿಂದ ಮತ್ತು ಸಾತ್ತ್ವ್ವಿಕ ವ್ಯಕ್ತಿಗಳಿಂದ ಮಾಡಿಸಬೇಕು. ಆಯಾಯ ಕಾರ್ಯಕ್ರಮಗಳಿಗೆ ಹೊಂದುವಂತಹ ಸ್ತೋತ್ರಗಳನ್ನು ಕಾರ್ಯಕ್ರಮದ ಪ್ರಾರಂಭದಲ್ಲಿ, ಮಧ್ಯದಲ್ಲಿ ಮತ್ತು ಕೊನೆಯಲ್ಲಿ ಹೇಳಬೇಕು. (ಆಧಾರ : ಸನಾತನ ನಿರ್ಮಿತ ಗ್ರಂಥ ‘ಕೌಟುಂಬಿಕ ಮತ್ತು ಸಾಮಾಜಿಕ ಧಾರ್ಮಿಕ ಕೃತಿಗಳ ಹಿನ್ನೆಲೆಯ ಶಾಸ್ತ್ರ’)