ಆಪತ್ಕಾಲದಲ್ಲಿ ದಿಕ್ಕುತೋರುವ ಸಂತರ ಅಮೃತವಾಣಿ

ಆಪತ್ತುಗಳು ಆಂತರಿಕ ಮತ್ತು ಬಾಹ್ಯ ಕಾರಣಗಳಿಂದ ನಿರ್ಮಾಣವಾಗುತ್ತವೆ. ಆಪತ್ತುಗಳು ನೈಸರ್ಗಿಕ ಅಥವಾ ಮಾನವ ನಿರ್ಮಿತ ಕಾರಣಗಳ ಪರಿಣಾಮವಾಗಿವೆ, ಆಪತ್ತು ಪ್ರಾಣ ಹಾಗೂ ಆಸ್ತಿಪಾಸ್ತಿಗಳ ಹಾನಿಯಾಗಿ ಸಾಮಾನ್ಯ ಜೀವನವು ಎಷ್ಟರ ಮಟ್ಟಿಗೆ ಅಸ್ತವ್ಯಸ್ತವಾಗುತ್ತದೆ ಅಂದರೆ ಅದನ್ನು ಎದುರಿಸಲು ಇರುವ ಎಲ್ಲ ಸಾಮಾಜಿಕ ಹಾಗೂ ಆರ್ಥಿಕ ಸಂರಕ್ಷಣೆಯ ಕಾರ್ಯವಿಧಾನಗಳೂ ಸಾಕಾಗುವುದಿಲ್ಲ.

ಕೊರೋನಾ ರೋಗದಿಂದ ನಿರ್ಮಾಣವಾದ ಆಪತ್ಕಾಲದಲ್ಲಿ ಜಗತ್ತು ಹಿಂದೂ ಧರ್ಮದ ಆಚರಣೆ ಮಾಡದೇ ಪರ್ಯಾಯವಿಲ್ಲ, ಇದರಿಂದ ಹಿಂದೂ ಧರ್ಮ ಶ್ರೇಷ್ಟತೆ ಸಿದ್ಧವಾಗಲಿದೆ

ಪರಸ್ಪರ ಭೇಟಿಯಾಗುವಾಗ ಹಸ್ತಲಾಘವ ಮಾಡುವುದು, ಆಲಂಗಿಸುವುದು, ಚುಂಬಿಸುವುದು ಇತ್ಯಾದಿಗಳನ್ನು ನಿಲ್ಲಿಸಿ ಮನುಷ್ಯ ತನ್ನಿಂತಾನೆ ಹಿಂದೂ ಧರ್ಮಕ್ಕನುಸಾರ ‘ನಮಸ್ಕಾರ ಮಾಡಲು ಆರಂಭಿಸಿದ್ದಾನೆ. ಇದರಿಂದ ಕೊರೋನಾದಂತಹ ಸಾಂಕ್ರಾಮಿಕ ರೋಗಗಳಿಂದ ರಕ್ಷಣೆಯಂತೂ ಆಗುತ್ತದೆ ಅದರೊಂದಿಗೆ ಕೆಟ್ಟ ಶಕ್ತಿಗಳ ತೊಂದರೆಯಿರುವ ಜನರಿಂದಲೂ ರಕ್ಷಣೆಯಾಗುವುದು ಮತ್ತು ಯೋಗ್ಯವಾದ ಧರ್ಮಾಚರಣೆಯ ಲಾಭವೂ ಆಗುತ್ತದೆ.