ಸಾಧನೆಯಲ್ಲಿ ತಮ್ಮ ಮಕ್ಕಳಿಂದ ಅದ್ವಿತೀಯ ಪ್ರಗತಿಯನ್ನು ಮಾಡಿಸಿಕೊಂಡ ಏಕಮೇವಾದ್ವಿತೀಯ ಪೂ. ಬಾಳಾಜಿ (ದಾದಾ) ಆಠವಲೆ ! (ಪರಾತ್ಪರ ಗುರು ಡಾ. ಆಠವಲೆಯವರ ತಂದೆ)

ಓದುಗರಿಗೆ ತಮ್ಮ ಮಕ್ಕಳ ಮೇಲೆ ಸಂಸ್ಕಾರಗಳನ್ನು ಹೇಗೆ ಮಾಡಬೇಕು ? ಎಂಬುದನ್ನು ತಿಳಿದುಕೊಳ್ಳಲು ಉಪಯುಕ್ತ ಲೇಖನಮಾಲೆ !

(ಪರಾತ್ಪರ ಗುರು) ಡಾ. ಜಯಂತ ಬಾಳಾಜಿ ಆಠವಲೆ

‘ಸನಾತನ ಪ್ರಭಾತ’ದಲ್ಲಿ ಸಂತರ ಸಾಧನೆಯ ಪ್ರವಾಸ, ಅವರ ಬೋಧನೆ ಸಂದರ್ಭದಲ್ಲಿ ಲೇಖನಗಳನ್ನು ನಿಯಮಿತವಾಗಿ ಪ್ರಕಟಿಸಲಾಗುತ್ತದೆ. ಸಂಚಿಕೆ ೨೩/೦೪ ರಿಂದ ಪ್ರಾರಂಭವಾಗಿರುವ ಈ ಲೇಖನಮಾಲೆಯಿಂದ ‘ಸನಾತನ ಪ್ರಭಾತ’ದ ಸಂಸ್ಥಾಪಕ-ಸಂಪಾದಕರಾದ ಪರಾತ್ಪರ ಗುರು ಡಾ. ಆಠವಲೆಯವರ ತಂದೆ ಪ.ಪೂ. ಬಾಳಾಜಿ (ಪ.ಪೂ. ದಾದಾ) ಆಠವಲೆ ಇವರ ಸಂದರ್ಭದ ಲೇಖನವನ್ನು ಪ್ರಕಟಿಸುತ್ತಿದ್ದೇವೆ. ಈ ಲೇಖನಮಾಲೆಯಿಂದ ‘ಪ.ಪೂ. ದಾದಾರವರು ತಮ್ಮ ಕುಟುಂಬದವರ ಮೇಲೆ ಹೇಗೆ ಮತ್ತು ಯಾವ ರೀತಿಯಲ್ಲಿ ಸಂಸ್ಕಾರ ಮಾಡಿದರು ?’ಎನ್ನುವುದು ತಿಳಿಯುತ್ತದೆ. ಇದರಿಂದ ‘ಪರಾತ್ಪರ ಗುರು ಡಾ. ಆಠವಲೆಯವರ ಕೌಟುಂಬಿಕ ಮತ್ತು ಆಧ್ಯಾತ್ಮಿಕ ಹಿನ್ನೆಲೆ ಹೇಗೆ ಇತ್ತು ?’ ಎನ್ನುವುದೂ ಓದುಗರ ಗಮನಕ್ಕೆ ಬರಬಹುದು.

೨೩/೦೪ ನೇ ಸಂಚಿಕೆಯಲ್ಲಿ ನಾವು ಪ.ಪೂ.ಬಾಳಾಜಿ (ಪ.ಪೂ ದಾದಾ) ಆಠವಲೆಯವರ ಪರಿಚಯ ಮತ್ತು ಪ.ಪೂ. ದಾದಾರವರ ಗುಣವೈಶಿಷ್ಟ್ಯಗಳನ್ನು ತಿಳಿದುಕೊಂಡೆವು. ಇಂದು ಅದರ ಮುಂದಿನ ಭಾಗವನ್ನು ನೊಡೋಣ.

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/51097.html
ಪರಾತ್ಪರ ಗುರು ಡಾ. ಆಠವಲೆಯವರ ತಂದೆ ಪೂ. ಬಾಳಾಜಿ ಆಠವಲೆ ಮತ್ತು ತಾಯಿ ಪೂ. (ಸೌ.) ನಲಿನಿ ಆಠವಲೆ

೨. ಪ.ಪೂ. ಬಾಳಾಜಿ (ಪ.ಪೂ. ದಾದಾ) ಆಠವಲೆಯವರಿಗೆ ಜೀವನವಿಡೀ ಜೊತೆ ನೀಡಿದ ಪತ್ನಿ ಪೂ. ನಲಿನಿ (ಪೂ. ತಾಯಿ) ಆಠವಲೆಯವರ ವೈಶಿಷ್ಟ್ಯಗಳು

೨ ಅ.‘ಪೂ. ತಾಯಿ’ಯವರ ಜನನ ಮತ್ತು ದೇಹತ್ಯಾಗ : ಪೂ. ನಲಿನಿ ಬಾಳಾಜಿ ಆಠವಲೆ ಇವರು ನನ್ನ ತಾಯಿ (ಅಮ್ಮ). ಅವರು ೪ ಜುಲೈ ೧೯೧೬ ರಲ್ಲಿ ಜನಿಸಿದರು. ಅವರು ೩ ಡಿಸೆಂಬರ್ ೨೦೦೩ ರಂದು ತಮ್ಮ ೮೭ ನೇ ವಯಸ್ಸಿನಲ್ಲಿ ಮುಂಬಯಿಯ ಶೀವ ಎಂಬಲ್ಲಿನ ಮನೆಯಲ್ಲಿ ದೇಹತ್ಯಾಗ ಮಾಡಿದರು. ದೇಹತ್ಯಾಗದ ಸಮಯದಲ್ಲಿ ಅವರ ಆಧ್ಯಾತ್ಮಿಕ ಮಟ್ಟ ಶೇ. ೭೫ ರಷ್ಟು ಇತ್ತು.

೨ ಆ. ಸಾಧನೆ

೨ ಆ ೧. ಪೂ. ತಾಯಿಯವರು ಸಂಸಾರದಲ್ಲಿದ್ದು ಸಾಧನೆಯನ್ನು ಮಾಡಿದರು. ಮನೆಯ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಿ ಪೂ. ತಾಯಿಯವರು ಕೀರ್ತನೆ-ಪ್ರವಚನಗಳನ್ನು ಕೇಳಲು ಸಮಯವನ್ನು ಮೀಸಲಿಡುತ್ತಿದ್ದರು. ೬೦ ವರ್ಷ ವಯಸ್ಸಾದ  ಬಳಿಕ ಅವರು ನಿಯಮಿತವಾಗಿ ಬಹಳ ಹೊತ್ತು ನಾಮಜಪಿಸಲು ಪ್ರಾರಂಭಿಸಿದ್ದರು. ೭೦ ವರ್ಷ ವಯಸ್ಸಾದ ಬಳಿಕ ಅವರ ಅಖಂಡ ನಾಮಜಪ ಪ್ರಾರಂಭವಾಗಿತ್ತು. ಮರಣದ ಕೊನೆಯ ಕ್ಷಣದವರೆಗೂ ಅವರ ನಾಮಜಪ ಮುಂದುವರಿದಿತ್ತು.

೨ ಆ ೨. ‘ತೀ. (ತೀರ್ಥರೂಪ) ದಾದಾರವರು ದೇಹತ್ಯಾಗ ಮಾಡಿದ ಬಳಿಕ ಪೂ. ತಾಯಿಯವರು ನಾಮಜಪವನ್ನು ಹೆಚ್ಚಿಸಿದರು. ನಿಧಾನವಾಗಿ ಅವರಲ್ಲಿ ವೈರಾಗ್ಯ ಹೆಚ್ಚಾಯಿತು ಮತ್ತು ದೇಹಬುದ್ಧಿ ಕಡಿಮೆಯಾಯಿತು. – (ಸದ್ಗುರು) ಡಾ. ವಸಂತ ಆಠವಲೆ (ಹಿರಿಯ ಪುತ್ರ)

೨ ಇ. ‘ಸನಾತನ ಪ್ರಭಾತದ ಮಾಧ್ಯಮದಿಂದ ಸಮರ್ಪಣಾಭಾವದ ಮಕ್ಕಳು ಸಿದ್ಧರಾಗುವರು’ ಎಂದು ಪೂ. ತಾಯಿಯವರಿಗೆ ದೃಢ ವಿಶ್ವಾಸ ಮೂಡುವುದು :ಪೂ. ತಾಯಿಯವರು ಅಕ್ಟೋಬರ್ ೨೦೦೦ ರಲ್ಲಿ ಮುಂದಿನಂತೆ ಹೇಳಿದ್ದರು, ‘ದೇಶಕ್ಕಾಗಿ ಪ್ರತಿಯೊಂದು ಕುಟುಂಬದಿಂದ ಒಬ್ಬ ಮಗನನ್ನು ಅರ್ಪಿಸಬೇಕು ಎಂದು ಸ್ವಾತಂತ್ರ್ಯ ವೀರ ಸಾವರಕರರು ಹೇಳುತ್ತಿದ್ದರು. ಆದರೆ ನನ್ನ ಐವರೂ ಮಕ್ಕಳು ಕೃಶರಾಗಿರುವುದರಿಂದ ಅವರನ್ನು ದೇಶಕ್ಕೆ ಹೇಗೆ ಅರ್ಪಿಸುವುದು ?’ ಎನ್ನುವ ಪ್ರಶ್ನೆ ನನಗೆ ಕಾಡುತ್ತಿತ್ತು. ದೈನಿಕ ‘ಸನಾತನ ಪ್ರಭಾತ’ವನ್ನು ಓದಿದ ಮೇಲೆ ನನ್ನ ಆ ಚಿಂತೆಯೂ ದೂರವಾಗಿ ‘ಈಗ ಮನೆ ಮನೆಯಿಂದಲೂ ಸಮರ್ಪಿತಭಾವ ಮಕ್ಕಳು ಸಿದ್ಧರಾಗುತ್ತಾರೆ, ಎಂಬ ದೃಢವಿಶ್ವಾಸವಿದೆ’. ಆಗ ಪೂ. ತಾಯಿಯವರು ಮುಂದಿನ ವಾಕ್ಯ ಬರೆದರು ಮತ್ತು ‘ಇಬ್ಬರು ಮಕ್ಕಳನ್ನು ದೇಶಕ್ಕಾಗಿ ಹೇಗೆ ಅರ್ಪಿಸುವುದು ?’ ಎಂಬ ಬಗ್ಗೆ ಬರೆದರು,

ದೇವ-ದೇಶ ಧರ್ಮ ಜಾಗವೋತ ದೋಘೆ (ಟಿಪ್ಪಣಿ) |

ಇಚ್ಛಾ ಹಿ ಮಾನಸಿ ಅಸೋ ತ್ಯಾಂಚಾ ||

ಅರ್ಥ : ದೇವರು-ದೇಶ, ಧರ್ಮವನ್ನು ಜಾಗೃತಗೊಳಿಸಲಿ ಇಬ್ಬರು, ಈ ಇಚ್ಛೆ ಅವರ ಮನಸ್ಸಿನಲ್ಲಿ ಇರಲಿ ಸದಾ

ಟಿಪ್ಪಣಿ : ‘ಸನಾತನ ಪ್ರಭಾತ’ದ ಸಂಸ್ಥಾಪಕ-ಸಂಪಾದಕ (ಪರಾತ್ಪರ ಗುರು) ಡಾ. ಜಯಂತ ಆಠವಲೆ ಮತ್ತು ಒಬ್ಬ ಸಹೋದರ

೨ ಈ. ಕೆಟ್ಟ ಶಕ್ತಿಗಳ ಸಂದರ್ಭದಲ್ಲಿ ಪೂ. ತಾಯಿಯವರ ಅನುಭೂತಿ ಮತ್ತು ಅವರ ವಿಚಾರ

೨ ಈ ೧. ರಾಷ್ಟ್ರ ಮತ್ತು ಧರ್ಮಕ್ಕಾಗಿ ಕೆಟ್ಟ ಶಕ್ತಿಗಳಿಗೆ ನಾಮಜಪ ಮಾಡಲು ಹೇಳುವುದು : ‘ಒಂದು ದಿನ ಪೂ. ತಾಯಿಯವರು ಮಲಗಿರುವಾಗ ಅನೇಕ ಕೆಟ್ಟ ಶಕ್ತಿಗಳು ಅವರ ಕೋಣೆಯ ಹೊರಗಿನ ಗ್ಯಾಲರಿಯಲ್ಲಿ ಬಂದಿದ್ದವು. ಆಗ ಪೂ. ತಾಯಿಯವರು ಅವುಗಳಿಗೆ, ‘ನೀವು ರಾಷ್ಟ್ರ ಮತ್ತು ಧರ್ಮಕ್ಕಾಗಿ ಏನಾದರೂ ಮಾಡಿ. ನಿಮ್ಮನ್ನು ಧರ್ಮಕಾರ್ಯದಲ್ಲಿ ತೊಡಗಿಸಿಕೊಳ್ಳಿರಿ, ಎಂದರು. ಆಗ ಎಲ್ಲ ಕೆಟ್ಟ ಶಕ್ತಿಗಳು ‘ಶ್ರೀರಾಮ ಜಯ ರಾಮ ಜಯಜಯರಾಮ’ ಈ ನಾಮಜಪ ಮಾಡಲು ಪ್ರಾರಂಭಿಸಿದವು. – ಡಾ. ವಿಲಾಸ ಆಠವಲೆ (ಎಲ್ಲಕ್ಕಿಂತ ಕಿರಿಯ ಸಹೋದರ)

೨ ಈ ೨. ಸನಾತನಕ್ಕೆ ತೊಂದರೆ ಕೊಡುವ ಕೆಟ್ಟ ಶಕ್ತಿಗಳಿಗೂ ಕೂಡ ಒಳ್ಳೆಯ ಕೆಲಸಕ್ಕಾಗಿ ಉಪಯೋಗಿಸಿಕೊಳ್ಳಿರಿ ! : ‘ನಾನು ಪೂ. ತಾಯಿಯವರನ್ನು ಭೇಟಿಯಾಗಲು ಹೋಗಿದ್ದಾಗ ಪೂ. ತಾಯಿಯವರು, ‘ಸನಾತನಕ್ಕೆ ತೊಂದರೆ ಕೊಡಲು ಬರುವ ಭೂತಗಳನ್ನು ದೂರ ಮಾಡಬೇಡಿ. ಅವುಗಳನ್ನು ಉಪಯೋಗಿಸಿಕೊಳ್ಳಿರಿ. ಅವರನ್ನು ಸೂಕ್ಷ್ಮದಿಂದ ಹೋರಾಡಲು ಕಳುಹಿಸಿ. ಅವರನ್ನು ಕೂಡ ಒಳ್ಳೆಯ ಕೆಲಸಕ್ಕೆ ಉಪಯೋಗಿಸಿಕೊಳ್ಳಲು ಸಾಧ್ಯವಾಗಬೇಕು, ಎಂದರು. – ಸೌ. ಬೋರಕರ, ಮುಂಬಯಿ (ಸಾಧನೆ ಮಾಡಲು ಇಚ್ಛಿಸುವ ಶಕ್ತಿಗಳು ಸಾತ್ತ್ವಿಕ ಸ್ಥಳಕ್ಕೆ ಬರುತ್ತವೆ. ಅವುಗಳಿಗೆ ಜಪ ಮಾಡಲು ಹೇಳಿದರೆ, ಅವು ಜಪವನ್ನು ಮಾಡುತ್ತವೆ. ಕೆಲವೊಮ್ಮೆ ಮಾಯಾವೀ ಕೆಟ್ಟ ಶಕ್ತಿಗಳು ಕೂಡ ಜಪ ಮಾಡುತ್ತಿರುವ ನಾಟಕ ಮಾಡುತ್ತವೆ. – ಸಂಕಲನಕಾರರು)

೨ ಉ. ೮೭ ನೇ ವಯಸ್ಸಿನಲ್ಲಿಯೂ ಸಮಾಜದ ಮತ್ತು ಇನ್ನೊಬ್ಬರ ವಿಚಾರ ಮಾಡುವ ಪೂ. ತಾಯಿ !

೮೭ ವರ್ಷ ವಯಸ್ಸಾಗಿದ್ದಾಗ ಮತ್ತು ಸ್ವತಃ ಅವರು ಅನಾರೋಗ್ಯದಿಂದ ಬಳಲುತ್ತಿರುವಾಗ ಪೂ. ತಾಯಿಯವರು ಮುಂದೆ ತಿಳಿಸಿರುವ ವಿಷಯಗಳನ್ನು ಮಾಡುತ್ತಿದ್ದರು. ಅವರು  ದೇಹ ತ್ಯಜಿಸುವವರೆಗೂ ಸಮಾಜದ ಮತ್ತು ಇನ್ನೊಬ್ಬರ ವಿಚಾರವನ್ನು ಮಾಡುತ್ತಿದ್ದರು. ಮುಂಬೈಯಲ್ಲಿರುವ ಶೀವ ಸೇವಾಕೇಂದ್ರದಲ್ಲಿರುವ ಸಾಧಕರಿಗೆ ತಮ್ಮ ಗುಣಗಳ ಲಾಭ ಸಿಗಬೇಕೆಂದು ಪ್ರಯತ್ನಿಸುತ್ತಿದ್ದರು.

೧. ‘ಪೂ. ತಾಯಿಯವರು ನಿಯಮಿತವಾಗಿ ದಿನಪತ್ರಿಕೆಗಳನ್ನು ಓದಿ ಸಮಾಜದ ಸದ್ಯದ ಸ್ಥಿತಿಯ ಮಾಹಿತಿಯನ್ನು ತಿಳಿದುಕೊಳ್ಳುತ್ತಿದ್ದರು. ಅದೇ ರೀತಿ ಅವರು ಸಮಾಜದ ದುಃಸ್ಥಿತಿಯ ಕುರಿತು ಸಾಧಕರೊಂದಿಗೆ ಚರ್ಚಿಸುತ್ತಿದ್ದರು. – ಡಾ. ದುರ್ಗೇಶ ಸಾಮಂತ, ಮಾಜಿ ಸಮೂಹ ಸಂಪಾದಕ, ‘ಸನಾತನ ಪ್ರಭಾತ ನಿಯತಕಾಲಿಕೆ ಸಮೂಹ’

೨. ‘ಯಾವುದೇ ವಸ್ತುವನ್ನು ಜೋಪಾನವಾಗಿ ಉಪಯೋಗಿಸುವುದರ ಕಡೆಗೆ ಯಾವಾಗಲೂ ಅವರ ಸೂಕ್ಷ್ಮ ಗಮನವಿರುತ್ತಿತ್ತು. ಸೇವಾಕೇಂದ್ರದ ದೈನಂದಿನ ಚಟುವಟಿಕೆಗಳ ಕಡೆಗೆ ಹಾಗೂ ವಿದ್ಯುತ್ ಮತ್ತು ನೀರನ್ನು ಅನಾವಶ್ಯಕವಾಗಿ ಉಪಯೋಗಿಸುವುದರ ಕಡೆಗೆ ಯಾವಾಗಲೂ ಅವರ ಗಮನವಿರುತ್ತಿತ್ತು. – ಸದ್ಗುರು ಸತ್ಯವಾನ ಕದಮ

೩. ಸನಾತನದ ಸಾಧಕರಲ್ಲಿ ಶೌರ್ಯವೃತ್ತಿಯನ್ನು ಮೂಡಿಸಲು ಅವರು ಸತತವಾಗಿ ಪ್ರಯತ್ನಿಸುತ್ತಿದ್ದರು.

೪. ‘ಕೊನೆಯ ನಾಲ್ಕು ವರ್ಷ ಪೂ. ತಾಯಿಯವರಿಗೆ ಹೃದ್ರೋಗದಿಂದ ಬಹಳ ತೊಂದರೆಯಾಗುತ್ತಿತ್ತು; ಆದರೆ ಅವರು ಅದರ ಕಡೆಗೆ ನಿರ್ಲಕ್ಷಿಸಿ ತಮ್ಮ ಬಗ್ಗೆ ಏನನ್ನೂ ಮಾತನಾಡದೇ ಇನ್ನೊಬ್ಬರ ಕುರಿತು ವಿಚಾರಿಸುತ್ತಿದ್ದರು. ‘ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸಗಳನ್ನು ಮಾಡಬೇಕು. ನನಗಾಗಿ ಸಮಯವನ್ನು ವ್ಯಯಿಸಬಾರದು, ಎಂದು ಅವರು ಯಾವಾಗಲೂ ಹೇಳುತ್ತಿದ್ದರು. ಅವರು ತಮಗೆ ಕಡಿಮೆ ಆಗಿದೆ; ಎಂದು ಯಾವತ್ತೂ ದೂರಲಿಲ್ಲ. ಅವರ ಸಹನಶಕ್ತಿ ಅಪಾರವಾಗಿತ್ತು. ಇನ್ನೊಬ್ಬರ ವಿಷಯದಲ್ಲಿ ಕೆಟ್ಟದಾಗಿ ಮಾತನಾಡುವುದು ಅಥವಾ ಅವರ ದುರ್ಗುಣಗಳನ್ನು ಎತ್ತಿ ತೋರಿಸುವುದು, ಯಾವತ್ತೂ ಮಾಡಲಿಲ್ಲ. ಬದಲಾಗಿ ಅವರು ಪ್ರತಿಯೊಬ್ಬರ ವಿಷಯದಲ್ಲಿಯೂ ಒಳ್ಳೆಯದನ್ನೇ ಹೇಳುತ್ತಿದ್ದರು. ಎಲ್ಲರೊಂದಿಗೆ ಅವರು ಬಹಳ ಪ್ರೀತಿಯಿಂದ ವರ್ತಿಸುತ್ತಿದ್ದರು. – ಸದ್ಗುರು ಡಾ. ವಸಂತ ಆಠವಲೆ

೨ ಊ. ಮರಣದ ಸಮಯದಲ್ಲಿಯೂ ನಾಮಜಪ ಆಗುತ್ತಿತ್ತು

ನಾನು : ಜಪ ಆಗುತ್ತಿದೆಯೇ ?

ಪೂ. ತಾಯಿ : ಹೌದು

ಡಾ. ವಿಲಾಸ ಆಠವಲೆ

೩.೧೨.೨೦೦೩ ರಂದು ಬೆಳಿಗ್ಗೆ ೪ ಗಂಟೆ ೧೫ ನಿಮಿಷಕ್ಕೆ ಹೃದಯ ಕ್ರಿಯೆ ಸ್ಥಗಿತಗೊಂಡು ತಾಯಿಯವರು ದೇಹತ್ಯಾಗ ಮಾಡಿದರು. ಮರಣದ ಸಮಯದಲ್ಲಿ ಅವರ ವಯಸ್ಸು ೮೭ ವರ್ಷಗಳಾಗಿತ್ತು. (ಖಂಡ ೨)

ಹಿಂಬದಿ ನಿಂತವರಲ್ಲಿ (ಎಡದಿಂದ) ಪರಾತ್ಪರ ಗುರು ಡಾ. ಆಠವಲೆಯವರ ಕಿರಿಯ ತಮ್ಮ ೧. ಡಾ. ವಿಲಾಸ ೨. ಡಾ. ಸುಹಾಸ ಕುಳಿತವರಲ್ಲಿ (ಎಡದಿಂದ) ೩. ಸ್ವತಃ ಪರಾತ್ಪರ ಗುರು ಡಾ. ಆಠವಲೆ ೪. ಹಿರಿಯ ಅಣ್ಣ ಸದ್ಗುರು ಡಾ ವಸಂತ ೫. ಶ್ರೀ. ಅನಂತ. (೨೦೦೨ ವರ್ಷ)

೩. ಐವರೂ ಮಕ್ಕಳೂ ಸಾಧನೆಯಲ್ಲಿ ಪ್ರಗತಿ ಹೊಂದಲು ಅವರು ಬಾಲ್ಯದಿಂದಲೇ ಸಂಸ್ಕಾರಗಳನ್ನು ಮೂಡಿಸಿದ ಪ.ಪೂ. ದಾದಾ ಮತ್ತು ಪೂ. ತಾಯಿ !

‘ಪ.ಪೂ. ದಾದಾ (ಆಧ್ಯಾತ್ಮಿಕ ಮಟ್ಟ ಶೇ. ೮೩) ಮತ್ತು ಪೂ. ತಾಯಿ (ಅಮ್ಮ) (ಆಧ್ಯಾತ್ಮಿಕ ಮಟ್ಟ ಶೇ. ೭೫) ಇವರು ಬಾಲ್ಯದಿಂದಲೇ ಸಹೋದರರಾದ ನಮ್ಮಲ್ಲಿ ವ್ಯಾವಹಾರಿಕ ಶಿಕ್ಷಣದೊಂದಿಗೆ ಸಾತ್ತ್ವಿಕತೆ ಮತ್ತು ಸಾಧನೆ ಇವುಗಳ ಸಂಸ್ಕಾರವನ್ನು ಮಾಡಿದ್ದರಿಂದ ನಾವು ಸಾಧನೆಯನ್ನು ಮಾಡತೊಡಗಿದೆವು. ಅವರು ಮೊಮ್ಮಕ್ಕಳಲ್ಲಿಯೂ ಇದೇ ಸಂಸ್ಕಾರವನ್ನು ಮಾಡಿದರು. ಪ.ಪೂ. ಭಕ್ತರಾಜ ಮಹಾರಾಜರು ಅನಂತ (ಸಹೋದರ) ಹೊರತುಪಡಿಸಿ ಕುಟುಂಬದ ಎಲ್ಲರಿಗೂ ಗುರುಮಂತ್ರವನ್ನು ನೀಡಿದರು. ಅನಂತನು ಮುಂಬಯಿಯಲ್ಲಿ ಇಲ್ಲದ ಕಾರಣ ಅವನಿಗೆ ಗುರುಮಂತ್ರವು ಸಿಗಲಿಲ್ಲ.

೧. ಮೊದಲನೆಯ ಪುತ್ರ ಸದ್ಗುರು ಅಪ್ಪಾ (ಸದ್ಗುರು ಡಾ. ವಸಂತ) : ಇವರು ವರ್ಷ ೨೦೧೨ ರಲ್ಲಿ ಸಂತಪದವಿಯನ್ನು ತಲುಪಿದರು ಮತ್ತು ವರ್ಷ ೨೦೧೭ ರಲ್ಲಿ ಸದ್ಗುರು ಪದವಿಯನ್ನು ತಲುಪಿದರು. ಅವರು ಪಾಲಕರಿಗೆ ಉಪಯುಕ್ತವಾಗಿರುವ ೧೦ ಗ್ರಂಥಗಳು, ಆಯುರ್ವೇದದ ವಿಷಯದ ೨೧ ಮತ್ತು ನನ್ನ ಸಂದರ್ಭದಲ್ಲಿ ೧ ಹೀಗೆ ಒಟ್ಟು ೩೨ ಗ್ರಂಥಗಳನ್ನು ಬರೆದರು.

೨. ಎರಡನೇಯ ಪುತ್ರ ಅನಂತ (ಸಹೋದರ) : ಇವರು ೨೦೧೯ ರಲ್ಲಿ ಸಂತ ಪದವಿಯನ್ನು ತಲುಪಿದರು. ಅವರು ‘ಗೀತಾಜ್ಞಾನದರ್ಶನ’ ಈ ಗ್ರಂಥವನ್ನು ೨೦೧೪ ರಲ್ಲಿ ಬರೆದರು. ೨೦೨೧ ರಲ್ಲಿ ಅವರು ‘ಅಧ್ಯಾತ್ಮಶಾಸ್ತ್ರದ ವಿವಿಧ ಹಂತಗಳ ಮಾರ್ಗದರ್ಶನ’ ಈ  ಗ್ರಂಥವನ್ನು ಬರೆದಿದ್ದಾರೆ.  (ಪೂ. ಅನಂತ ಅವರ ಚರಿತ್ರೆಯನ್ನು ಅಕ್ಟೋಬರ್ ೫ ರಂದು ಪ್ರಕಾಶಿಸಲಾಯಿತು)

೩. ಮೂರನೇಯ ಪುತ್ರ ಜಯಂತ : ನಾನು ಸನಾತನ ಸಂಸ್ಥೆಯನ್ನು ಸ್ಥಾಪಿಸಿದೆನು ಮತ್ತು ಸೆಪ್ಟೆಂಬರ್ ೨೦೨೧ ವರೆಗೆ ೨೬೯ ಗ್ರಂಥಗಳ ಸಂಕಲನ ಮಾಡಿದ್ದೇನೆ. ಹಾಗೆಯೇ ಸಂಸ್ಥೆಯು ಸೆಪ್ಟೆಂಬರ ೨೦೨೧ ವರೆಗೆ ೩೪೭ ಗ್ರಂಥಗಳನ್ನು ೧೭ ಭಾಷೆಗಳಲ್ಲಿ ೮೨ ಲಕ್ಷ ೪೮ ಸಾವಿರ ಪ್ರತಿಗಳನ್ನು ಮುದ್ರಿಸಿದೆ.

೪. ನಾಲ್ಕನೇಯ ಪುತ್ರ ಕೈ. ಸುಹಾಸ : ಇವರ ಮಟ್ಟ ಶೇ. ೬೪  ರಷ್ಟು ಇತ್ತು. ಇವರದ್ದು ವ್ಯಷ್ಟಿ ಸಾಧನೆಯಿತ್ತು. ಸುಹಾಸ ಸಜ್ಜನತೆಯ  ಸಗುಣ ಸಾಕಾರ ಮೂರ್ತಿಯಾಗಿದ್ದರು.

೫. ಐದನೇಯ ಪುತ್ರ ವಿಲಾಸ : ಇವರದ್ದು ಆಧ್ಯಾತ್ಮಿಕ ಪ್ರಗತಿಯಾಗುತ್ತಿದೆ. ಅವರು ಹರಿದ್ವಾರದಲ್ಲಿ ಪ.ಪೂ. ದೇವಾನಂದ ಸ್ವಾಮಿಯವರ ಕಾರ್ಯದಲ್ಲಿ ಭಾಗವಹಿಸುತ್ತಿರುತ್ತಾರೆ.

ಕಲಿಯುಗದಲ್ಲಿ ನಮಗೆ ಇಂತಹ ಸಾತ್ತ್ವಿಕ ಕುಟುಂಬ ಸಿಕ್ಕಿದೆ, ಈಶ್ವರನು ಇದೇ ನಮ್ಮೆಲ್ಲರ ಮೇಲೆ ಮಾಡಿರುವ ಬಹುದೊಡ್ಡ ಕೃಪೆಯಾಗಿದೆ. ಈ ಕಾರಣದಿಂದಲೇ ೧೨.೬.೧೯೭೫ ರಂದು ನಾನು ಮಾಮಾನಿಗೆ ಇಂಗ್ಲೆಂಡನಿಂದ ಬರೆದ ಪತ್ರದಲ್ಲಿ ತಿಳಿಸಿದ್ದೆನು, ‘ನನಗೆ ನಮ್ಮ ಎಲ್ಲ ಸಂಬಂಧಿಕರೊಂದಿಗೆ (ವಿಶೇಷವಾಗಿ ತೀ. ದಾದಾ, ತೀ. ಸೌ. ತಾಯಿ ಮತ್ತು ತೀ. ಅಪ್ಪಾ ಇವರೆಲ್ಲರ ಜೊತೆ (ಸಾಂಗತ್ಯ)) ಮತ್ತು ಪರಿಚಯದ ಜನರೊಂದಿಗೆ ಇದೊಂದೇ ಜನ್ಮವಲ್ಲ, ಇನ್ನೂ ಎಷ್ಟೇ ಜನ್ಮಗಳು ಲಭಿಸಿದರೂ ಆನಂದವೇ ಅನಿಸುವುದು. ಹಾಗೆಯೇ ಪ್ರತಿಯೊಂದು ಜನ್ಮದಲ್ಲಿ ಆಗಿರುವ ತಪ್ಪುಗಳನ್ನು ತಿದ್ದಿಕೊಳ್ಳುವ ಅವಕಾಶ ಪುನರ್ಜನ್ಮದಲ್ಲಿ ಸಿಗುತ್ತದೆ. ಅದರ ಲಾಭವನ್ನು ಪಡೆದುಕೊಂಡು ಮುಕ್ತಿಯ ಮಾರ್ಗದಲ್ಲಿ ಪ್ರಯತ್ನಿಸಲು ಸಾಧ್ಯವಾಗುತ್ತದೆ.

ನನ್ನಲ್ಲಿ ಯಾವ ಗುಣಗಳಿವೆಯೋ, ಅದನ್ನು ನಾನು ಪ್ರಯತ್ನಪೂರ್ವಕ ಬೆಳೆಸಿ ಕೊಂಡಿದ್ದಲ್ಲ. ಬಹಳಷ್ಟು ಗುಣಗಳು ದಾದಾ ಮತ್ತು ತಾಯಿಯವರಿಂದ ಅನುವಂಶಿಕವಾಗಿ ಮತ್ತು ಅವರು ನನ್ನ ಮೇಲೆ ಮಾಡಿರುವ ಸಂಸ್ಕಾರದಿಂದ ನನ್ನಲ್ಲಿ ಬಂದಿದೆ. ಇನ್ನಿತರ ಗುಣಗಳು ಬಹಳಷ್ಟು ಪ್ರಮಾಣದಲ್ಲಿ ನಾಲ್ವರೂ ಸಹೋದರರಿಂದ ಮತ್ತು ಇನ್ನುಳಿದ ಗುಣಗಳು ಆದರ್ಶ ವ್ಯಕ್ತಿಗಳಿಂದ ನನ್ನಲ್ಲಿ ಬಂದಿವೆ.

[ಪ.ಪೂ. ಬಾಳಾಜಿ (ಪ.ಪೂ. ದಾದಾ) ಆಠವಲೆ, ಇವರ ಪತ್ನಿ ಪೂ. ನಲಿನಿ (ಪೂ. ತಾಯಿ) ಆಠವಲೆ ಮತ್ತು ಕುಟುಂಬದವರ ಸವಿಸ್ತಾರವಾದ ಮಾಹಿತಿಯು ಸನಾತನದ ‘ಪ.ಪೂ. ಡಾಕ್ಟರರ ಸರ್ವತೋಮುಖ ಆದರ್ಶ ತಾಯಿ-ತಂದೆ ಮತ್ತು ಸಹೋದರರು’ ಈ ವಿಷಯದ ಗ್ರಂಥ ಮಾಲಿಕೆಯಲ್ಲಿದೆ.]

(ಮುಂದುವರಿಯುವುದು)

– ಡಾ. ಆಠವಲೆ (೧೨.೯.೨೦೧೪) (ಖಂಡ ೨)

ಈ ಲೇಖನಮಾಲೆಯ ಎಲ್ಲ ಲೇಖನಗಳು ಸನಾತನದ ‘ಸುಗಮ ಅಧ್ಯಾತ್ಮಶಾಸ್ತ್ರ’ ಈ ಮರಾಠಿ ಗ್ರಂಥಮಾಲಿಕೆಯಿಂದ ಸಂಕ್ಷಿಪ್ತ ಸ್ವರೂಪದಲ್ಲಿ ತೆಗೆದುಕೊಳ್ಳಲಾಗಿದೆ. ಲೇಖನದಲ್ಲಿ ಯಾವುದಾದರೂ ವಿಷಯವನ್ನು ಸವಿಸ್ತಾರವಾಗಿ ಓದಬೇಕೆಂದು ಓದುಗರಿಗೆ ಅನಿಸಿದರೆ ‘ಅದನ್ನು ಯಾವ ಗ್ರಂಥದಿಂದ ತೆಗೆದುಕೊಳ್ಳಲಾಗಿದೆ ?’ ಎಂದು ತಿಳಿಯಲು ಪ್ರತಿಯೊಂದು ವಿಷಯದ ಕೊನೆಯಲ್ಲಿ ಕಂಸದಲ್ಲಿ ಅದರ ಖಂಡದ ಕ್ರಮಾಂಕವನ್ನು ನೀಡಲಾಗಿದೆ.

‘ಸುಗಮ ಅಧ್ಯಾತ್ಮಶಾಸ್ತ್ರ’ ಈ ಗ್ರಂಥ ಮಾಲಿಕೆಯ ಗ್ರಂಥದಲ್ಲಿ ‘ದೈವಿ ಗುಣಸಂಪನ್ನತೆ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತವಾಗಿರುವ ಕುಟುಂಬಕ್ಕೆ ಜನ್ಮ ನೀಡುವ ಹಿರಿಯರು ಯಾವ ಬೋಧನೆಯನ್ನು ನೀಡಿರಬಹುದು ?’ ಎನ್ನುವ ಮಾಹಿತಿ ದೊರಕುತ್ತದೆ. ಇದರಿಂದ ಓದುಗರಿಗೆ ‘ಆದರ್ಶ ತಾಯಿ-ತಂದೆ ಹೇಗೆ ಆಗಬೇಕು ? ತಾಯಿ-ತಂದೆಯಾಗಿ ಸಾಧನೆಯ ವಿವಿಧ ಅಂಗಗಳು ಯಾವುದು ?’ ಎಂದೂ ತಿಳಿಯುವುದು. ಇಂತಹ ಅಮೂಲ್ಯ ಜ್ಞಾನವಿರುವ ಗ್ರಂಥಗಳನ್ನು ಕೇವಲ ಓದುವುದಷ್ಟೇ ಅಲ್ಲ, ಅದರಲ್ಲಿರುವ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅದರಂತೆ ಕೃತಿಯನ್ನು ಮಾಡಿದರೆ ಅದರಿಂದ ಕುಟುಂಬವೂ ಸಾತ್ತ್ವಿಕವಾಗುವುದು.

– (ಪರಾತ್ಪರ ಗುರು) ಡಾ. ಆಠವಲೆ (೧೧.೯.೨೦೨೧)