ಪೂ. ರಮಾನಂದ ಗೌಡ ಇವರ ಅಮೂಲ್ಯ ವಿಚಾರಸಂಪತ್ತು

‘ಯಾರು ಸತತವಾಗಿ ಗುರುಸೇವೆ ಮತ್ತು ಗುರುಕಾರ್ಯವನ್ನು ‘ಇದು ನನ್ನ ಕಾರ್ಯವಾಗಿದೆ’, ಎಂದು ತಿಳಿದು ಮತ್ತು ಜವಾಬ್ದಾರಿಯನ್ನು ತೆಗೆದುಕೊಂಡು ಮಾಡುವರೋ, ಅವರಿಗಾಗಿ ಶ್ರೀ ಗುರುಗಳ ಶಕ್ತಿಯು ಸತತವಾಗಿ ಕಾರ್ಯನಿರತವಾಗಿರುತ್ತದೆ.

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವ ಭಾವಪೂರ್ಣ ವಾತಾವರಣದಲ್ಲಿ ಆಚರಣೆ !

‘ಗುರು-ಶಿಷ್ಯ ಪರಂಪರೆಯು ಭಾರತ ಭೂಮಿಯ ವೈಶಿಷ್ಟ್ಯವಾಗಿದೆ. ಧರ್ಮಕ್ಕೆ ಗ್ಲಾನಿ ಬಂದಾಗ ‘ಗುರು-ಶಿಷ್ಯ ಪರಂಪರೆಯು ಧರ್ಮಸಂಸ್ಥಾಪನೆಯ ಕಾರ್ಯವನ್ನು ಮಾಡಿದೆ. ಈಗಿನ ಸಂಕಟಕಾಲದಲ್ಲಿ ಸಮಾಜಕ್ಕೆ ದಿಕ್ಕು ತೋರಲು ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಜಂಟಿ ಆಶ್ರಯದಲ್ಲಿ ‘ಆನ್‌ಲೈನ್ ಗುರು ಪೂರ್ಣಿಮಾ ಮಹೋತ್ಸವವನ್ನು ಆಚರಿಸಲಾಯಿತು

ರಾಮನಾಥಿ (ಗೋವಾ) ಇಲ್ಲಿನ ಸನಾತನದ ಆಶ್ರಮದಲ್ಲಿ ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಶುಭಹಸ್ತದಿಂದ ಗುರುಪ್ರಜೆ

ಪರಾತ್ಪರ ಗುರು ಡಾ. ಆಠವಟಲೆಯವರ ‘ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸನಾತನದ ರಾಮನಾಥಿ (ಗೋವಾ)ಯಲ್ಲಿನ ಆಶ್ರಮದಲ್ಲಿ ಅತ್ಯಂತ ಭಾವಪೂರ್ಣ ವಾತಾವರಣದಲ್ಲಿ ಸಪ್ತರ್ಷಿಗಳ ಆಜ್ಞೆಯಂತೆ ಪರಾತ್ಪರ ಗುರು ಡಾ. ಆಠವಲೆ ಪ್ರತಿಮೆಯ ಪೂಜೆ ಮಾಡಲಾಯಿತು.

ಪರಾತ್ಪರ ಗುರು ಡಾ. ಆಠವಲೆ ಇವರ ‘ಇವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಮಂಗಳೂರಿನಲ್ಲಿ ಗುರುಪೂರ್ಣಿಮೆಯಲ್ಲಿ ಉಪಸ್ಥಿತಿ

ಪರಾತ್ಪರ ಗುರು ಡಾ. ಆಠವಲೆ ಇವರ ‘ಇವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ದೈವೀ ಪ್ರವಾಸದ ಅಂತರ್ಗತ ಮಂಗಳೂರಿನಲ್ಲಿದ್ದರು. ಮಂಗಳೂರು ಸೇವಾಕೇಂದ್ರದ ಸಾಧಕರು ‘ಆಲ್‌ಲೈನ್ ಗುರುಪೂರ್ಣಿಮೆಯ ಲಾಭ ಪಡೆದರು.

ಸಾಧಕರೇ, ಸನಾತನದ ಮತ್ತು ಎಸ್.ಎಸ್.ಆರ್.ಎಫ್.ನ ಸಂತರು ಕೇವಲ ಸಂತರಾಗಿಲ್ಲ, ಅವರು ಗುರುಗಳೇ ಇರುವುದರಿಂದ ಅವರಿಂದ ಕಲಿಯಿರಿ ಮತ್ತು ಅದನ್ನು ಕೃತಿಯಲ್ಲಿ ತಂದು ಅವರ ನಿಜವಾದ ಅರ್ಥದಲ್ಲಿನ ಲಾಭವನ್ನು ಪಡೆಯಿರಿ ಮತ್ತು ಸಾಧನೆಯಲ್ಲಿ ಶೀಘ್ರ ಗತಿಯಲ್ಲಿ ಮುಂದೆ ಹೋಗಿರಿ !

ಇಲ್ಲಿಯವರೆಗೆ ಸನಾತನದ ಮತ್ತು ಸನಾತನದ ಬೋಧನೆಗನುಸಾರಗನುಸಾರ ಸಾಧನೆಯನ್ನು ಮಾಡಿದ ಎಸ್.ಎಸ್.ಆರ್.ಎಫ್.ನ ಸಂತರನ್ನು ಸೇರಿಸಿ ಒಟ್ಟು ೧೦೮ ಮಂದಿ ಸಾಧಕರು ಸಂತರಾಗಿದ್ದಾರೆ. ಇವರಲ್ಲಿ ಕೆಲವರು ಎಲ್ಲ ಕಡೆಗೆ ಹೋಗಿ ಸಾಧಕರಿಗೆ ಸಾಧನೆಯ ಸಂದರ್ಭದಲ್ಲಿ ದೇಹತ್ಯಾಗವಾಗುವವರೆಗೆ ಮಾರ್ಗದರ್ಶನ ಮಾಡಿದ್ದಾರೆ.

ನಮ್ರತೆ, ತತ್ತ್ವನಿಷ್ಠತೆ ಮತ್ತು ಆಜ್ಞಾಪಾಲನೆ ಮುಂತಾದ ಗುಣಗಳಿರುವ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ (ಅಣ್ಣ) ಗೌಡ !

ನಮ್ಮ ಯೋಗ್ಯತೆ ಇಲ್ಲದಿರುವಾಗಲೂ ಗುರುದೇವರು ನಮಗೆ ಸೇವೆಯನ್ನು ನೀಡಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಆರ್ತತೆಯಿಂದ ಪ್ರಾರ್ಥನೆ ಮಾಡಬೇಕು, ‘ನನ್ನ ಯೋಗ್ಯತೆ ಇಲ್ಲದಿರುವಾಗಲೂ ನೀವು ನನಗೆ ಈ ಸೇವೆಯನ್ನು ನೀಡಿದ್ದೀರಿ. ನಿಮಗೆ ಅಪೇಕ್ಷಿತ ಇರುವಂತಹ ಸೇವೆಯನ್ನು ನೀವೇ ನನ್ನಿಂದ ಮಾಡಿಸಿಕೊಳ್ಳಿ ಸೇವೆಯು ಮುಗಿದ ನಂತರ ‘ನೀವೇ ಸೇವೆಯನ್ನು ಮಾಡಿಸಿಕೊಂಡಿದ್ದೀರಿ, ಎಂದು ಗುರುಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.

ಗುರುಸೇವೆಯ ತೀವ್ರ ತಳಮಳ ಹಾಗೂ ಪರಾತ್ಪರ ಗುರು ಡಾಕ್ಟರರ ಬಗ್ಗೆ ಅಪಾರ ಭಾವವಿರುವ ಶಿರಗುಪ್ಪದ ಸೌ. ಲಕ್ಷ್ಮೀದೇವಿ ಗವಿಸಿದ್ಧಪ್ಪಾ (೭೩ ವರ್ಷ) ಇವರ ಗುಣವೈಶಿಷ್ಟ್ಯಗಳು

ಪ್ರತಿದಿನ ರಾತ್ರಿ ಮಲಗುವಾಗ ಅಕ್ಕನವರು ಪರಾತ್ಪರ ಗುರುದೇವರಿಗೆ, ‘ನನಗೆ ಬೇಗನೆ ದರ್ಶನ ನೀಡಿರಿ. ನನ್ನನ್ನು ನಿಮ್ಮ ಚರಣಗಳಲ್ಲಿ ಸಮರ್ಪಿಸಿಕೊಳ್ಳಿ. ನಿಮ್ಮ ಚರಣವೇ ನನ್ನ ಸರ್ವಸ್ವವಾಗಿದೆ’, ಎಂದು ಆತ್ಮನಿವೇದನೆ ಮಾಡುತ್ತಾರೆ.

ಸಾಧಕರಲ್ಲಿ ಸಾಧಕತ್ವ ನಿರ್ಮಾಣವಾಗಬೇಕೆಂದು ತಮ್ಮ ಪ್ರತಿಯೊಂದು ಕೃತಿ, ಮಾತು ಮತ್ತು ಅಮೂಲ್ಯ ಬೋಧನೆಯಿಂದ ಸಾಧಕರನ್ನು ಕ್ಷಣಕ್ಷಣಕ್ಕೂ ರೂಪಿಸುವ ಸರ್ವೋತ್ತಮ ಗುರು ಪರಾತ್ಪರ ಗುರು ಡಾ. ಆಠವಲೆ !

ಈ ಗ್ರಂಥವನ್ನು ಓದುವಾಗ ಪ್ರತಿಯೊಂದು ಸಲ, ‘ಇವೆಲ್ಲ ಘಟನೆಗಳು ನಮ್ಮ ಕಣ್ಣೆದುರು ಘಟಿಸುತ್ತಿವೆ’, ಎಂದೆನಿಸುತ್ತದೆ. ಅವರು ಸಂತ ಭಕ್ತರಾಜ ಮಹಾರಾಜರು ಎಲ್ಲ ಸಾಧಕರಿಗೆ ಪ್ರತ್ಯಕ್ಷ ದೃಶ್ಯ ಸ್ವರೂಪದಲ್ಲಿ ಕಾಣಿಸಬೇಕು, ಎಂಬ ಪದ್ಧತಿಯಲ್ಲಿ ಎಲ್ಲವನ್ನೂ ಬರೆದಿದ್ದಾರೆ. ನಾವು ಈ ಗ್ರಂಥವನ್ನು ಎಷ್ಟು ಸಲ ಓದಿದರೂ ಪ್ರತಿ ಸಲ ‘ಬಾಬಾರವರ ಜೀವನಚಿತ್ರವನ್ನು ನೋಡುತ್ತಿದ್ದೇವೆ’, ಎಂದೆನಿಸುತ್ತದೆ.

ಆಯುರ್ವೇದದ ಮಹತ್ವವನ್ನು ತಿಳಿದುಕೊಳ್ಳಿರಿ ಮತ್ತು ಹಿಂದೂ ಧರ್ಮದ ಅಭಿಮಾನವನ್ನು ಇಟ್ಟುಕೊಳ್ಳಿರಿ !

‘ಆಯುರ್ವೇದಿಕ ಔಷಧಿಗಳ ಪರಿಣಾಮವಾಗಲು ಬಹಳ ಸಮಯ ತಗಲುತ್ತದೆ’, ಎಂಬ ತಪ್ಪು ತಿಳುವಳಿಕೆ ತುಂಬಾ ಜನರಲ್ಲಿದೆ. ತದ್ವಿರುದ್ಧ ಸರಿಯಾಗಿ ಪರೀಕ್ಷಿಸಿ ನೀಡಿದ ಆಯುರ್ವೇದಿಕ ಔಷಧಿಗಳು ರೋಗದ ಮೂಲದವರೆಗೆ ಹೋಗಿ ಕಾರ್ಯವನ್ನು ಮಾಡುತ್ತವೆ. ಆದುದರಿಂದ ಅವುಗಳ ಪರಿಣಾಮವು ಒಳಗಿನಿಂದ ಮತ್ತು ಬೇಗನೆ ಆಗುತ್ತದೆ

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಮೂಲ್ಯ ವಿಚಾರಗಳು !

ದೈವೀ ಪ್ರಾರಬ್ಧದಿಂದ ಘಟನೆಗಳು ಘಟಿಸಲು ಗುರುಕೃಪೆಯೇಬೇಕಾಗುತ್ತದೆ. ಆದುದರಿಂದ ಸಾಧನೆಯಲ್ಲಿ ಎಷ್ಟೇ ಅಡಚಣೆಗಳು ಬಂದರೂ ಅಥವಾ ತೊಂದರೆಗಳಾದರೂ, ಗುರುಗಳ ಆಶ್ರಯವನ್ನು ಬಿಡಬಾರದು. ಅವರ ಚರಣಗಳನ್ನು ಅಖಂಡವಾಗಿ ಹಿಡಿದುಕೊಂಡಿರಬೇಕು.