ಎಲ್ಲ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ಸವಿನಯ ವಿನಂತಿ !

ಕೆಲವು ಹಿತಚಿಂತಕರು ಈ ಯೋಜನೆಗೆ ಸಹಾಯ ಮಾಡುವ ಇಚ್ಛೆಯನ್ನು ಈ ಮೊದಲು ಸಹ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಎಲ್ಲೆಡೆಗಳಲ್ಲಿರುವ ಆಶ್ರಮಗಳು ಹಾಗೂ ಸೇವಾಕೇಂದ್ರಗಳ ಚಿಕ್ಕ-ದೊಡ್ಡ ಪ್ರಸ್ತಾಪಿತ ಯೋಜನೆಗಳ ವ್ಯಾಪ್ತಿಯ ವಿಚಾರ ಮಾಡಿದಾಗ ದೊಡ್ಡ ಪ್ರಮಾಣದಲ್ಲಿ ನಿಧಿಯ ಆವಶ್ಯಕತೆಯಿದೆ.

ಸಾಧಕರಿಗೆ ಸೂಚನೆ

ಸಾಧಕರಿಗೆ ಪ್ರಕಾಶ ಕಿರಣಗಳ ಈ ಪರಿಣಾಮವು ರಾಮನಾಥಿ ಆಶ್ರಮದ ಹೊರತಾಗಿ ಇತರ ಸನಾತನದ ಆಶ್ರಮಗಳಲ್ಲಿ, ಸಾಧಕರ ಮನೆಗಳಲ್ಲಿ ಹಾಗೂ ಇತರ ಸ್ಥಳಗಳಲ್ಲಿಯೂ ಕಂಡು ಬಂದಲ್ಲಿ ಸಾಧಕರು ಅದನ್ನು ಮುಂದಿನಂತೆ ಅಧ್ಯಯನ ಮಾಡಬೇಕು.

ಸಾಧಕರಿಗಾಗಿ ಮಹತ್ವದ ಸೂಚನೆ

ಅತ್ಯಾವಶ್ಯಕವಾಗಿದ್ದರೆ ಮಾತ್ರ ಮನೆಯಿಂದ ಹೊರಗೆ ಹೋಗಬೇಕು, ಸೇವೆಗಾಗಿ ಹೊರಗೆ ಹೋಗಲು ಹೇಳಿದ್ದರೆ, ಆ ಸಾಧಕರನ್ನು ಬಿಟ್ಟು ಬೇರೆ ಯಾರೂ ಸೇವೆಗಾಗಿ ಹೊರಗೆ ಹೋಗಬಾರದು, ೧೦ ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮತ್ತು ೬೫ ವರ್ಷಗಳಿಗಿಂತ ಹೆಚ್ಚು ವಯಸ್ಸಿನ ವ್ಯಕ್ತಿಗಳು ಮನೆಯ ಹೊರಗೆ ಹೋಗಬಾರದು.

ಹಿಂದೂಗಳ ದೇವತೆಗಳ ವಿಡಂಬನೆಯನ್ನು ಮಾಡುವ ವಿದೇಶಿ ಕಂಪನಿಗಳನ್ನು ಭಾರತ ಸರಕಾರ ವಿರೋಧಿಸಬೇಕು !

ಅಮೇರಿಕದ ‘ಕಾಫಿ ಶಾಪ್ ಆಫ್ ಹಾರರ್ಸ್ ಎಂಬ ಕಂಪನಿಯು ತಯಾರಿಸಿದ ಕಪ್ಪು ಚಹಾದ ಉತ್ಪಾದನೆಗೆ ‘ಬ್ಲಡ್ ಆಫ್ ಕಾಲಿ’ (ಕಾಳಿಯ ರಕ್ತ) ಎಂದು ಹೆಸರಿಟ್ಟು ಮಹಾಕಾಳಿ ದೇವಿಯ ಅವಮಾನ ಮಾಡಿದೆ. ‘ಈ ಉತ್ಪಾದನೆಯನ್ನು ಹಿಂಪಡೆದು ಕ್ಷಮೆ ಯಾಚಿಸಬೇಕು’, ಎಂದು ಹಿಂದೂಗಳು ಆಗ್ರಹಿಸಿದ್ದಾರೆ.

ಹೊಸ್ಟನ್‌ನಲ್ಲಿರುವ ಚೀನಾದ ವಾಣಿಜ್ಯ ರಾಯಭಾರಿ ಕಛೇರಿ ಬೇಹುಗರಿಕೆಯ ಮುಖ್ಯಕೇಂದ್ರವಾಗಿತ್ತು ! – ಅಮೇರಿಕಾ

ಹೊಸ್ಟನ್‌ನಲ್ಲಿಯ ಚೀನಾದ ವಾಣಿಜ್ಯ ರಾಯಭಾರಿ ಕಛೇರಿಯು ಬೇಹುಗರಿಕೆಯ ಮುಖ್ಯಕೇಂದ್ರವಾಗಿತ್ತು. ಈ ರಾಯಭಾರಿ ಕಛೇರಿಯಿಂದ ಬೆಹುಗರಿಕೆಯೊಂದಿಗೆ ಬೌದ್ಧಿಕ ಸಂಪತ್ತಿನ ಕಳ್ಳತನವನ್ನೂ ಮಾಡಲಾಗುತ್ತಿತ್ತು. ಆದ್ದರಿಂದ ನಾವು ಅದನ್ನು ಮುಚ್ಚುವ ನಿರ್ಧಾರಕ್ಕೆ ಬಂದೆವು, ಎಂದು ಅಮೇರಿಕಾದ ವಿದೇಶಾಂಗ ಸಚಿವ ಮೈಕ್ ಪಾಂಪಿಒ ಮಾಹಿತಿ ನೀಡಿದರು.

ಕೊರೋನಾದ ರೋಗಿ ಪತ್ತೆಯಾಗಿದ್ದರಿಂದ ವಸತಿಗೃಹವನ್ನು ಸೀಲ್ ಮಾಡುವಾಗ ಕೆಲವು ನಾಗರಿಕರು ಒಳಗೆ ಸಿಲುಕಿದ್ದರು !

ಇಲ್ಲಿ ಒಂದು ಕಟ್ಟಡದಲ್ಲಿ ಕೊರೋನಾದ ರೋಗಿ ಪತ್ತೆಯಾಗಿದ್ದರಿಂದ ಮಹಾನಗರಪಾಲಿಕೆಯ ಸಿಬ್ಬಂದಿಗಳು ೨ ವಸತಿಗೃಹಗಳ ಬಾಗಿಲನ್ನು ಸೀಲ್ ಮಾಡಿದರು; ಆದರೆ ಈ ಮನೆಗಳಲ್ಲಿ ೧ ಮಹಿಳೆ, ೨ ಮಕ್ಕಳು ಹಾಗೂ ೧ ಹಿರಿಯ ನಾಗರಿಕರು ಇದ್ದರು. ಈ ಘಟನೆಯಿಂದಾಗಿ ಜನರಲ್ಲಿ ಆಕ್ರೋಶ ವ್ಯಕ್ತವಾದಾಗ ಮಹಾನಗರಪಾಲಿಕೆಯ ಆಯುಕ್ತರು ಸೀಲನ್ನು ತೆಗೆಯುವಂತೆ ಆದೇಶ ನೀಡುತ್ತ ಕ್ಷಮೆ ಯಾಚಿಸಬೇಕಾಯಿತು.

ಹಿಂದೂಗಳ ವಿರೋಧದ ನಂತರ ‘ಪೇಟಾ’ದಿಂದ ಕ್ಷಮಾಯಾಚನೆ

ರಾಖಿಯನ್ನು ಹಸುವಿನ ಚರ್ಮದೊಂದಿಗೆ ಸಂಬಂಧ ಜೋಡಿಸಲು ಪ್ರಯತ್ನಿಸುತ್ತ ‘ಚರ್ಮಮುಕ್ತ ರಕ್ಷಾಬಂಧನವನ್ನು ಆಚರಿಸಿರಿ’ ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದ ‘ಪೇಟಾ’(ಪಿಪಲ್ ಆಫ್ ದ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಆನಿಮಲ್) ಈ ತಥಾಕಥಿತ ಪ್ರಾಣಿಸ್ನೇಹಿ ಸಂಘಟನೆಯು ಹಿಂದೂಗಳ ವಿರೋಧದ ನಂತರ ಈ ಸಂದರ್ಭದಲ್ಲಿನ ಲೇಖನವನ್ನು ತನ್ನ ಜಾಲತಾಣದಿಂದ ತೆಗೆದುಹಾಕಿದೆ.

ಧನಬಾದ (ಝಾರಖಂಡ)ನ ಶಿವಮಂದಿರಕ್ಕೆ ಹೋಗುತ್ತಿದ್ದ ಹಿಂದೂ ಮಹಿಳೆಗೆ ಮತಾಂಧರಿಂದ ಕಿರುಕುಳ ನೀಡಿ ಹಲ್ಲೆ

ಇಲ್ಲಿಯ ಜಿಯಲಗೊರಾ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಶಿವಮಂದಿರಕ್ಕೆ ಹೋಗುತ್ತಿದ್ದ ಹಿಂದೂ ಮಹಿಳೆಗೆ ಕಿರುಕುಳ ನೀಡಲಾಗುತ್ತಿತ್ತು. ಈ ಮಹಿಳೆಯು ಅದಕ್ಕೆ ವಿರೋಧಿಸಿದಾಗ ಆಕೆಯ ಮೇಲೆ ಹಲ್ಲೆಯನ್ನು ಮಾಡಿದರು. ಇದರಲ್ಲಿ ಆಕೆ ಗಾಯಗೊಂಡು ಆಸ್ಪತ್ರೆಗೆ ಸೇರಿಸಲಾಗಿದೆ.

‘ಕೊರೋನಾ ವಿಷಾಣುಗಳ ಹಾವಳಿಯಿಂದ ನಿರ್ಮಾಣವಾಗಿರುವ ಆಪತ್ಕಾಲದ ಸ್ಥಿತಿಯಲ್ಲಿ ‘ನಾಗಪಂಚಮಿ ಪೂಜೆಯನ್ನು ಹೇಗೆ ಮಾಡಬೇಕು ?

‘ನಮ್ಮ ಕುಟುಂಬವು ಸದಾಸರ್ವಕಾಲ ನಾಗಭಯದಿಂದ ಮುಕ್ತವಾಗಬೇಕು, ಹಾಗೆಯೇ ನಾಗದೇವತೆಯ ಕೃಪಾಶೀರ್ವಾದವು ಪ್ರಾಪ್ತವಾಗಬೇಕು’, ಎಂದು ಪ್ರತಿವರ್ಷ ಶ್ರಾವಣ ಶುಕ್ಲ ಪಕ್ಷ ಪಂಚಮಿಗೆ ನಾಗಪಂಚಮಿಗೆ ನಾಗಪೂಜೆಯನ್ನು ಮಾಡಲಾಗುತ್ತದೆ.

ತ್ರಾವಣಕೋರ ದೇವಸ್ವಮ್ ಮಂಡಳಿಗೆ ಸಂಬಂಧಿಸಿದ ಶಾಲೆಗಳಲ್ಲಿ ಅರಬಿ ಭಾಷೆ ಕಲಿಸಲು ಶಿಕ್ಷಕರ ನೇಮಕ

ತ್ರಾವಣಕೊರ ದೇವಸ್ವಮ್ ಮಂಡಳಿಯ ವ್ಯಾಪ್ತಿಗೆ ಬರುವ ಶಾಲೆಗಳಲ್ಲಿ ಅರಬಿ ಭಾಷೆ ಕಲಿಸಲು ಮುಸಲ್ಮಾನ ಶಿಕ್ಷಕರ ನೇಮಕ ಮಾಡಲಾಗುತ್ತಿದೆ. ಇಂತಹ ೪ ಶಿಕ್ಷಕರ ಪಟ್ಟಿ ಪ್ರಕಟಿಸಲಾಗಿದೆ. ಇದರಲ್ಲಿ ಶಮಿರಾ, ಬುಶರಾ ಬೇಗಮ್, ಮುಬಾಶ ಹಾಗೂ ಸುಮಯ್ಯಾ ಮಹಮ್ಮದ ಇವರ ಸಮಾವೇಶ ಇದೆ.